Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಸ್ವರ್ಣ ಗೌರಿ ಹಬ್ಬ ಯಾವಾಗ? ಇದನ್ನು ಆಚರಿಸುವುದೇಕೆ? ಮುಹೂರ್ತ ಇಲ್ಲಿದೆ!
ಶ್ರಾವಣ ಮಾಸದಲ್ಲಿನ ಬರುವ ಪ್ರಮುಖ ಹಬ್ಬಗಳಲ್ಲಿ ಗಣೇಶ ಚತುರ್ಥಿ ಕೂಡ ಒಂದು ಹಾಗೆ ಗಣೇಶನ ಹಬ್ಬಕ್ಕೂ ಮುನ್ನ ದಿನ ಹಿಂದೂ ಸಮುದಾಯದ ಮಂದಿ ಆಚರಿಸುವಂತಹ ಗೌರಿ ಹಬ್ಬ ಕೂಡ ಬಹಳ ಮುಖ್ಯ ಹಬ್ಬ ಎನಿಸಿಕೊಂಡಿದೆ. ಸ್ವರ್ಣ ಗೌರಿ ಹಬ್ಬವನ್ನು ಕೂಡ ಬಹಳ ವಿಜೃಂಭಣೆಯಿಂದ ಆಚರಿಸುವುದು ನೋಡಬಹುದು. ಹಾಗೆ ಈ ದಿನವನ್ನು ಆಚರಿಸುವುದು ಏಕೆ ಅನ್ನೋದನ್ನು ಕೂಡ ನಾವು ತಿಳಿದುಕೊಳ್ಳೋಣ.
ಸ್ವರ್ಣ ಗೌರಿ ವೃತವನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ. ಹೆಚ್ಚಾಗಿ ಇದನ್ನು ಸುಮಂಗಲಿಯರು ಆಚರಿಸುವ ಹಬ್ಬ ಎಂದು ಪರಿಗಣಿಸಲಾಗುತ್ತದೆ. ಹಾಗೆ ಈ ಹಬ್ಬವನ್ನು ಗಣೇಶನ ಹಬ್ಬಕ್ಕೂ ಮುನ್ನಾ ದಿನ ಆಚರಿಸಲಾಗುತ್ತದೆ. ಹಾಗಾದ್ರೆ 2025ರಲ್ಲಿ ಈ ಸ್ವರ್ಣ ಗೌರಿ ಹಬ್ಬ ಯಾವಾಗ ಆಚರಿಸಲಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಸ್ವರ್ಣ ಗೌರಿ ಹಬ್ಬವೂ ಮಳೆಯರ ಪಾಲಿನ ಬಹುಮುಖ್ಯ ಹಬ್ಬ. ಕಟ್ಟುನಿಟ್ಟಿನ ವ್ರತಾಚರಣೆ ಮೂಲಕ ಇದನ್ನು ಆಚರಿಸಲಾಗುತ್ತದೆ. 2025 ರ ಆಗಸ್ಟ್ 26, ಮಂಗಳವಾರ ಈ ವ್ರತಾಚರಣೆ ಮಾಡಲಾಗುತ್ತದೆ. ಈ ದಿನ ಸುಮಂಗಲಿಯರು ಬಳೆ ಬದಲಾಯಿಸುವುದು ಸಂಪ್ರದಾಯಗಳಲ್ಲಿ ಒಂದಾಗಿ ನಡೆದುಕೊಂಡು ಬಂದಿದೆ. ಹಾಗೆ ಈ ದಿನ ಸ್ವರ್ಣ ಗೌರಿಯ ಮಂತ್ರ ಪಠಿಸುವುದರಿಂದ ಜೀವನದಲ್ಲಿ ಸಿರಿ ಸಂಪತ್ತು, ಸಂತೋಷ ಪಡೆಯಬಹುದು ಎಂದು ಹೇಳಲಾಗಿದೆ.
ಸ್ವರ್ಣ ಗೌರಿ ವ್ರತ ಆಚರಿಸುವುದು ಹೇಗೆ?
ಈ ಹಬ್ಬವು ಆಗಸ್ಟ್ 26ರಂದು ಆಚರಿಸಲಾಗುತ್ತಿದೆ. ಬೆಳಗ್ಗೆ ಪೂಜಾ ಮುಹೂರ್ತ 6:06 ರಿಂದ ಬೆಳಗೆ 8:36ರ ವರೆಗೆ ಇರಲಿದೆ. ತದಿಗೆ ತಿಥಿ ಆಗಸ್ಟ್ 25, ಮಧ್ಯಾಹ್ನ 2:04ರಿಂದ ಆರಂಭಗೊಳ್ಳಲಿದೆ. ಹಾಗರ ತದಿಗೆ ತಿಥಿ ಆಗಸ್ಟ್ 26 ಮಧ್ಯಾಹ್ನ 3:24ರಂದು ಕೊನೆಯಾಗುತ್ತದೆ. ಈ ಸಮಯದಲ್ಲಿನ ಪೂಜೆಯಿಂದ ಗೌರಿ ಸಂಪನ್ನಳಾಗುತ್ತಾಳೆ ಎಂದು ಹೇಳಲಾಗಿದೆ.
ಗೌರಿ ಹಬ್ಬವು ಪಾರ್ವತಿಯ ರೂಪವಾದ ಗೌರಿ ದೇವಿಗೆ ಸಮರ್ಪಿಸಲಾಗಿದೆ. ವಿವಾಹಿತ ಮಹಿಳೆ ಉಪವಾಸ ಮಾಡುವುದು, ವಿಶೇಷ ಪೂಜೆ ಮಾಡುವುದು ನೋಡಬಹುದು. ಇದರಿಂದ ಅವರ ಕುಟುಂಬದಲ್ಲಿ ನೆಮ್ಮದಿ, ಸಂತೋಷ, ಪತಿಯ ಆಯಸ್ಸು ವೃದ್ಧಿ, ಮಕ್ಕಳ ಯೋಗಕ್ಷೇಮದಲ್ಲಿ ಪ್ರಗತಿಯಾಗುತ್ತದೆ ಎಂದು ನಂಬಲಾಗಿದೆ.
ಗೌರಿ ಹಬ್ಬದ ಹಿನ್ನೆಲೆ ಏನು?
ಈ ಹಬ್ಬವನ್ನು ಯಾವಾಗಲು ಗಣೇಶನ ಹಬ್ಬಕ್ಕೂ ಮುನ್ನ ದಿನವೇ ಆಚರಿಸಲಾಗುತ್ತದೆ. ಹಬ್ಬಗಳ ಸಮಯದಲ್ಲಿ ಹೆಣ್ಣುಮಕ್ಕಳು ಮಾಡುವಂತೆಯೇ ಗೌರಿ ತನ್ನ ತಾಯಿಯ ಮನೆಗೆ ಭೇಟಿ ನೀಡುತ್ತಾಳೆ ಎಂದು ನಂಬಲಾಗಿದೆ. ಮರುದಿನ ಮಗ ಗಣೇಶ ಅವಳನ್ನು ಕೈಲಾಸ ಪರ್ವತಕ್ಕೆ ಕರೆದೊಯ್ಯಲು ಬರುತ್ತಾನೆ ಎಂಬ ನಂಬಕೆಯಿಂದ ಹೀಗಾಗಿ ಗೌರಿ ಹಬ್ಬದ ಮಾರನೆ ದಿನ ಗಣೇಶನಿಗೂ ವಿಶೇಷ ಪೂಜೆ ಸಲ್ಲಿಕೆಯಾಗುತ್ತದೆ.
ಈ ದಿನ ಮಹಿಳೆಯರು ಬೆಳಗ್ಗೆ ಸ್ನಾನ ಮುಗಿಸಿ ಹಸಿರು ಅಥವಾ ಹಳದಿ ಬಣ್ಣದ ಸೀರೆ ಉಡುತ್ತಾರೆ. ಹಾಗೆ ಈ ಸಮಯದಲ್ಲಿ ಹಳೆಯ ಬಳೆಗಳನ್ನು ತೆಗೆದು ಹೊಸ ಬಳೆಯನ್ನು ಹಾಕಿಕೊಳ್ಳುವ ಸಂಪ್ರದಾಯವಿದೆ. ಈ ಸಮಯದಲ್ಲಿ ಮಾವಿನ ಎಲೆಗಳು, ಅರಿಶಿನ, ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸಲ್ಪಟ್ಟ ಸಣ್ಣ ಮಂಟಪದಲ್ಲಿ ಗೌರಿ ದೇವಿಯ ವಿಗ್ರಹ ಇಟ್ಟು ಪೂಜಿಸಲಾಗುತ್ತದೆ. ಹಾಗೆ ದೇವಿಯ 108 ಹೆಸರುಗಳನ್ನು ತೆಂಗಿನಕಾಯಿ ಮೇಲೆ ಬರೆಯುವುದು, ವಿಶೇಷ ತಿಂಡಿ, ಹೂವುಗಳನ್ನು ದೇವಿಯ ಪೂಜೆಗೆ ಅರ್ಪಿಸುವುದು ನೋಡಬಹುದು.
ಹಾಗೆ ಪೂಜೆಯ ಕೊನೆಯಲ್ಲಿ ಸುಮಂಗಲಿಯರಿಗೆ ಬಾಗಿನ ನೀಡುವುದು ಕೂಡ ಗೌರಿ ಹಬ್ಬದ ವಿಶೇಷವಾಗಿದೆ. ಬಹುತೇಕರು ಮನೆಗೆ ಕರೆದು ಅವರಿಗೆ ಅರಶಿಣ ಕುಂಕುಮ, ಬಾಗಿನ ನೀಡುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ.



Click it and Unblock the Notifications