Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸೀತಾ ದೇವಿ ಜಯಂತಿ ಯಾವಾಗ..? ಏನಿದರ ಮಹತ್ವ? ಮಹಿಳೆಯರು ಏಕೆ ಆಚರಿಸಬೇಕು ಗೊತ್ತೆ?
ಈ ವರ್ಷದ ಮಾರ್ಚ್ ತಿಂಗಳು ಆರಂಭಗೊಂಡಿದೆ. ಈ ವರ್ಷದ ಮಾರ್ಚ್ ಹಿಂದೂಗಳ ಪಾಲಿಗೆ ಪವಿತ್ರ ತಿಂಗಳಾಗಲಿದೆ. ಏಕೆಂದರೆ ಕೆಲವು ಪ್ರಮುಖ ಹಬ್ಬಗಳು ಇದೇ ತಿಂಗಳಲ್ಲಿ ಬರುತ್ತವೆ. ಅಲ್ಲದೆ ಈ ತಿಂಗಳಿಂದ ಹಿಂದೂಗಳ ಹಬ್ಬಗಳು ಆರಂಭಗೊಂಡು ಸಾಲು ಸಾಲು ಹಬ್ಬ ಮುಂದೆ ಬರಲಿವೆ.
ಈ ಮಾರ್ಚ್ ತಿಂಗಳು ಕೆಲವು ಕಾರಣಗಳಿಂದ ತುಂಬಾನೇ ಸ್ಪೆಷಲ್ ಅನಿಸುವುದು. ಶಿವರಾತ್ರಿ, ಹೋಳಿ ಹೀಗೆ ಹಲವು ಹಬ್ಬಗಳು, ವ್ರತಗಳು ಈ ತಿಂಗಳಿನಲ್ಲಿ ಇರುವುದರಿಂದ ಈ ತಿಂಗಳ ಬಹುತೇಕ ದಿನಗಳು ವಿಶೇಷ ದಿನಗಳಾಗಿವೆ. ಇನ್ನು ರಾಮನ ಮಡದಿ ಸೀತಾ ಮಾತೆಯ ಜಯಂತಿ ಸಹ ಇದೇ ತಿಂಗಳಲ್ಲಿ ಬರುತ್ತದೆ.

ರಾಮಾಯಣ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ದೇವತೆಗಳು ಮತ್ತು ಪಾತ್ರಗಳು ಹಿಂದೂ ಧರ್ಮದಲ್ಲಿ ಬಹಳ ವಿಶೇಷವಾದ ಸ್ಥಾನ ಪಡೆದಿವೆ. ತಾಯಿ ಸೀತಾ ಆದರ್ಶ ಪತ್ನಿ ಮತ್ತು ಅತ್ಯುತ್ತಮ ತಾಯಿಯ ಪ್ರತಿಬಿಂಬವಾಗಿದ್ದಾರೆ. ಹೀಗಾಗಿ ರಾಮನ ಜೊತೆ ಸೀತೆಗೂ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಸ್ಥಾನವಿದೆ.
ಇದೀಗ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಸೀತಾ ಜಯಂತಿ ಆಚರಿಸಲಾಗುತ್ತದೆ, ಇದನ್ನು ಜಾನಕಿ ಜಯಂತಿ ಎಂದೂ ಕರೆಯುತ್ತಾರೆ. ನಂಬಿಕೆಗಳ ಪ್ರಕಾರ, ಈ ದಿನ ರಾಜ ಜನಕನು ತಾಯಿ ಸೀತೆಯನ್ನು ಮಗುವಿನ ರೂಪದಲ್ಲಿ ಆಶೀರ್ವದಿಸಿದನು. ಈ ದಿನ, ಮಾತಾ ಜಾನಕಿಯನ್ನು ಧಾರ್ಮಿಕ ವಿಧಿಗಳೊಂದಿಗೆ ಪೂಜಿಸಲಾಗುತ್ತದೆ ಮತ್ತು ಉತ್ತಮ ದಾಂಪತ್ಯ ಜೀವನಕ್ಕಾಗಿ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ.
ಈ ವರ್ಷದ ಫಾಲ್ಗುಣ ಮಾಸದ ಅಷ್ಟಮಿ ತಿಥಿಯಂದು ಜಾನಕಿ ಜಯಂತಿ ಆಚರಿಸಲಾಗುತ್ತದೆ. ಅದು ಮಾರ್ಚ್ 4ರಂದು ಬಂದಿದೆ, ಅದರಲ್ಲೂ ಬೆಳಿಗ್ಗೆ 08:44 ರಿಂದ ಪ್ರಾರಂಭವಾಗಿ ಮಾರ್ಚ್ 4 ರಂದು ಬೆಳಿಗ್ಗೆ 08:49ಕ್ಕೆ ಅಷ್ಟಮಿ ತಿಥಿ ಅಂತ್ಯವಾಗುತ್ತದೆ. ಮಾರ್ಚ್ 4 ರಂದು ಉದಯ ತಿಥಿಯನ್ನು ಪರಿಗಣಿಸಿ ಜಾನಕಿ ಜಯಂತಿ ಆಚರಿಸಲಾಗುವುದು. ಈ ದಿನದಂದು ಪೂಜೆಗೆ ಶುಭ ಸಮಯವು ಬೆಳಿಗ್ಗೆ 09:38 ರಿಂದ 11:05 ರವರೆಗೆ ಇರುತ್ತದೆ.
ಜಾನಕಿ ಜಯಂತಿಯ ಧಾರ್ಮಿಕ ಮಹತ್ವ
ಹಿಂದೂ ಧರ್ಮದಲ್ಲಿ ಜಾನಕಿ ಜಯಂತಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ರಾಮಾಯಣದ ಪ್ರಕಾರ, ರಾಜ ಜನಕನ ರಾಜ್ಯದಲ್ಲಿ ತೀವ್ರ ಕ್ಷಾಮ ಉಂಟಾದಾಗ, ಅವರು ಕ್ಷಾಮ ಪರಿಹಾರಕ್ಕಾಗಿ ಋಷಿ ಮುನಿಗಳ ಸಲಹೆಯ ಮೇರೆಗೆ ಚಿನ್ನದ ನೇಗಿಲನ್ನು ಪಡೆದರು ಮತ್ತು ಪೂಜೆಯ ನಂತರ ಅವರು ಆ ನೇಗಿಲಿನಿಂದ ಭೂಮಿಯನ್ನು ಉಳುಮೆ ಮಾಡಲು ಪ್ರಾರಂಭಿಸಿದರು.
ಅವನು ಭೂಮಿಯನ್ನು ಉಳುಮೆ ಮಾಡಿದ ತಕ್ಷಣ, ಅವನಿಗೆ ಮಣ್ಣಿನ ಮಡಕೆಯಲ್ಲಿ ಸುಂದರವಾದ ಪುಟ್ಟ ಹುಡುಗಿ ಸಿಕ್ಕಳು. ನೇಗಿಲಿನ ತುದಿಯನ್ನು ಸೀತೆ ಎಂದು ಕರೆಯಲಾಗುತ್ತದೆ, ಆದ್ದರಿಂದ ಹುಡುಗಿಗೆ ಸೀತಾ ಎಂದು ಹೆಸರಿಸಲಾಯಿತು ಎಂದು ಕಥೆಯೊಂದು ಹೇಳುತ್ತದೆ. ಜಾನಕಿ ಜಯಂತಿಯ ದಿನದಂದು ಸೀತೆಯನ್ನು ಪೂಜಿಸಲಾಗುತ್ತದೆ. ವಿವಾಹಿತ ಮಹಿಳೆಯರು ತಮ್ಮ ದಾಂಪತ್ಯ ಜೀವನದ ಸಂತೋಷಕ್ಕಾಗಿ ಮತ್ತು ತಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಸೀತಾದೇವಿಯ ಪೂಜಿಸುತ್ತಾರೆ.
ಜಾನಕಿಯ ಪೂಜಾ ವಿಧಾನ
ಜಾನಕಿ ಜಯಂತಿಯ ದಿನ ಬೆಳಗ್ಗೆ ಸ್ನಾನ ಮುಗಿಸಿ ಪೂಜಾ ಕೋಣೆಯಲ್ಲಿ ಸೀತಾ ಮಾತೆಯ ಮುಂದೆ ದೀಪ ಹಚ್ಚಿ. ರಾಮ ಮತ್ತು ಸೀತೆಯನ್ನು ಧ್ಯಾನಿಸಿ ಮತ್ತು ಉಪವಾಸ ಮಾಡುವ ವ್ರತ ತೆಗೆದುಕೊಳ್ಳಿ. ಸಂಜೆ, ರಾಮ ಮತ್ತು ಸೀತಾ ದಂಪತಿಯ ಪೂಜಿಸಿ ಮತ್ತು ಆರತಿಯನ್ನು ಮಾಡಿ. ಇದರ ನಂತರ, ತಾಯಿ ಸೀತೆಗೆ ಅನ್ನ ನೈವೇದ್ಯ ಅರ್ಪಿಸಿ ಮತ್ತು ಪ್ರಸಾದವನ್ನು ವಿತರಿಸುವ ಮೂಲಕ ನಿಮ್ಮ ಉಪವಾಸವನ್ನು ಮುರಿಯಿರಿ.



Click it and Unblock the Notifications
