Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಕೃಷ್ಣ ಜನ್ಮಾಷ್ಟಮಿಯಂದು ಶ್ರೀ ಕೃಷ್ಣನನ್ನು ಮಧ್ಯರಾತ್ರಿ ಯಾವ ಸಮಯದಲ್ಲಿ ಪೂಜಿಸಬೇಕು?
ಭಗವಾನ್ ಕೃಷ್ಣನನ್ನು ವಿಷ್ಣುವಿನ ಅವತಾರ ಎಂದು ಕರೆಯಲಾಗುವುದು. ಶ್ರೀಕೃಷ್ಣು ಅಧರ್ಮವನ್ನು ಕೊನೆಯಾಗಿಸಲು ಭೂಮಿಗೆ ಬಂದ ಎಂದು ಹೇಳಲಾಗುವುದು. ಶ್ರೀ ಕಷ್ಣನು ಅಷ್ಟಮಿ ತಿಥಿಯಂದು ಜನಿಸಿದನು, ಈ ದಿನವನ್ನು ಕೃಷ್ಣ ಜನ್ಮಾಷ್ಟಮಿಯೆಂದು ಆಚರಿಸಲಾಗುವುದು.
ಕೃಷ್ಣ ಜನ್ಮಾಷ್ಟಮಿಯಂದು ಶ್ರೀ ವಿಷ್ಣುವಿಗೆ ಪೂಜೆ ಸಲ್ಲಿಸಿ ತುಂಬಾ ಸಡಗರ-ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಈ ವರ್ಷ ಕೃಷ್ಣ ಜನ್ಮಾಷ್ಟಮಿ ಯಾವಾಗ? ಪೂಜೆಗೆ ಶುಭ ಸಮಯ ಮತ್ತಿತರ ಮಾಹಿತಿಯನ್ನು ತಿಳಿಯೋಣ:

ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 26ರಂದು ಆಚರಿಸಲಾಗುವುದು. ಈ ದಿನ ಜಯಂತಿ ಯೋಗದಲ್ಲಿ ಶ್ರೀ ಕೃಷ್ಣ ಪೂಜೆ ಮಾಡಿದರೆ ಎಲ್ಲಾ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು.
ಈ ವರ್ಷ ಆಗಸ್ಟ್ 26 ರ ಸೋಮವಾರದಂದು ಕೃಷ್ಣ ಪಕ್ಷದ ಅಷ್ಟಮಿ ತಿಥಿ ಬರುತ್ತಿದ್ದು, ಅದೇ ದಿನ ಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಆಚರಿಸಲಾಗುವುದು.
ಪೂಜಾ ಸಮಯ
ನಿಶಿತ್ ಪೂಜೆ ಮುಹೂರ್ತ: 24:00:30 ರಿಂದ 24:45:02( ರಾತ್ರಿ 12 ಗಂಟೆ 30 ಸೆಕೆಂಡ್‌ನಿಂದ 12 ಗಂಟೆ, 45 ನಿಮಿಷ 2 ಸೆಕೆಂಡ್‌ವರೆಗೆ ಪೂಜಾ ಮುಹೂರ್ತವಿದೆ.
ಪೂಜೆಗೆ ಶುಭ ಸಮಯ: 0 ಗಂಟೆ 44 ನಿಮಿಷಗಳು
ಆಗಸ್ಟ್ 27 ರಂದು ಜನ್ಮಾಷ್ಟಮಿ ಪಾರಣ ಮುಹೂರ್ತ: ಬೆಳಗ್ಗೆ 5 ಗಂಟೆ 56 ನಿಮಿಷ 15 ಸೆಕೆಂಡ್‌ಗೆ ಇದೆ. ಈ ಸಮಯದಲ್ಲಿ ಉಪವಾಸ ಮುರಿಯಬೇಕು.
ಅಷ್ಟಮಿ ಮೊದಲ ದಿನದ ಮಧ್ಯರಾತ್ರಿಯವರೆಗೆ ಇದ್ದರೆ ಜನ್ಮಾಷ್ಟಮಿ ಉಪವಾಸವನ್ನು ಮೊದಲ ದಿನ ಆಚರಿಸಲಾಗುತ್ತದೆ.
ಅದೇ ಎರಡನೇ ದಿನದಂದು ಮಧ್ಯರಾತ್ರಿ ಅಷ್ಟಮಿ ಪ್ರಚಲಿತದಲ್ಲಿದ್ದರೆ, ಎರಡನೇ ದಿನ ಜನ್ಮಾಷ್ಟಮಿ ಉಪವಾಸವನ್ನು ಮಾಡಲಾಗುವುದು
ಅಷ್ಟಮಿಯಂದು ರೋಹಿಣಿ ನಕ್ಷತ್ರದ ಸಂಯೋಗವಿದ್ದರೆ ರೋಹಿಣಿ ನಕ್ಷತ್ರ ಸಂಯೋಗವಾದಾಗ ಕರಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು.
ಜನ್ಮಾಷ್ಟಮಿಯ ಸರಿಯಾದ ಪೂಜಾ ವಿಧಾನ
ಬೆಳಗ್ಗ ಎದ್ದು ಸ್ನಾನ ಮಾಡಿ ಶ್ರೀ ಕೃಷ್ಣನ ವಿಗ್ರಹವನ್ನು ಹೂವುಗಳಿಂದ ಅಲಂಕರಿಸಿ. ಈ ದಿನ ಕೆಲವರು ಸಂಪೂರ್ಣ ಉಪವಾಸ(ನೀರು ಕೂಡ ಸೇವಿಸದೆ) ಇದ್ದರೆ ಇನ್ನು ಕೆಲವರು ಸಾತ್ವಿಕ ಆಹಾರ ಮಾತ್ರ ಸೇವಿಸುತ್ತಾರೆ.
ಪೂಜೆಗೆ ಮೊದಲು ಶ್ರೀ ಕೃಷ್ಣನನ್ನು ಮನಸ್ಸಿನಲ್ಲಿ ಪ್ರಾರ್ಥಿಸಿ ಸಂಲ್ಪ ತೆಗೆದುಕೊಂಡು ನಂತರ ಎಲ್ಲಾ ದೇವರುಗಳಿಗೆ ನಮಸ್ಕರಿಸಿ ಶ್ರೀ ವಿಷ್ಣುವಿನ ಮಂತ್ರಗಳನ್ನು ಪಠಿಸುತ್ತಾ ಆಚರಿಸಬೇಕು.
ಈ ಮಂತ್ರಗಳನ್ನು ಪಠಿಸಿ
ಹರೇ ಕೃಷ್ಣ ಮಹಾ ಮಂತ್ರ
ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ
ಈ ಮಂತ್ರವನ್ನು ಮಹಾಮಂತ್ರ ಎಂದು ಕರೆಯಲಾಗುವುದು. ಈ ಮಂತ್ರವನ್ನು ಪ್ರತಿದಿನ ಪಠಿಸಿ.
ಕೃಷ್ಣ ಗಾಯತ್ರಿ ಮಂತ್ರ
|| ಓಂ ದೇವಕಿ ನಂದನಾಯ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ಕೃಷ್ಣಃ ಪ್ರಚೋದಯಾತ್ ||
|| ಓಂ ದೇವಕಿನಂದನಾಯ ವಿದ್ಮಿಹೇ ವಾಸುದೇವಾಯ ಧೀಮಹಿ |
ತನ್ನೋ: ಕೃಷ್ಣಃ ಪ್ರಚೋದಯಾತ್ ||
ಈ ಮಂತ್ರವನ್ನು ಪಠಿಸುವುದರಿಂದ ಮನಸ್ಸಿನಲ್ಲಿ ಧೈರ್ಯ ಹೆಚ್ಚಾಗುವುದು. ಅಲ್ಲದ ಎಬದುಕಿನಲ್ಲಿರುವ ಕಷ್ಟಗಳು ದೂರಾಗುವುದು ಎಂದು ನಂಬಲಾಗುವುದು.
ಯಶಸ್ವಿಗೆ ಶ್ರೀ ಕೃಷ್ಣ ಮಂತ್ರ
ಓಂ ಶ್ರೀ ಕೃಷ್ಣ ಶರಣಂ ನಮಃ
ಈ ಮಂತ್ರವನ್ನು ಪಠಿಸುವುದರಿಂದ ಯಶಸ್ಸು ಸಿಗಲಿದೆ.
ಹಣದ ಸ್ಥಿತಿಗತಿ ಉತ್ತಮವಾಗಲು
ಕ್ಲೀಂ ಗ್ಲೈಂ ಕ್ಲೀಂ ಶ್ಯಾಮಲಾಂಗಾಯ ನಮಃ
ಪ್ರೇಮ ವಿವಾಹವಾಗಲು ಬಯಸಿದರೆ
ಓಂ ನಮೋ ಭಾಗ್ವತೇ ಶ್ರೀ ಗೋವಿಂದಾಯೇ
ಓಂ
ಕ್ಲೀಂ ಕೃಷ್ಣಾಯ ಗೋಪಿಜಾನ್ ವಲ್ಲಾಬಾಯ್ ಸ್ವಾಹಾ
ಕೃಷ್ಣ ಭಕ್ತಿ ಮಂತ್ರ
ಜೈ ಶ್ರೀ ಕೃಷ್ಣ ಚೈತನ್ಯ ಪ್ರಭು ನಿತ್ಯಾನಂದ ಶ್ರೀ ಅದ್ವೈತ ಗದಾಧರ ಶ್ರೀವಾಸದಿ ಗೌರ ಭಕ್ತ ವೃಂದ
ಕೃಷ್ಣ ಕ್ಲೀಂ ಮಂತ್ರ
ಓಂ ಕ್ಲೀಂ ಕೃಷ್ಣಾಯ ನಮಃ



Click it and Unblock the Notifications