Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಜೂನ್ ತಿಂಗಳ ಏಕಾದಶಿ ಯಾವಾಗ.? ದಿನಾಂಕ, ಸಮಯ ಇಲ್ಲಿದೆ ನೋಡಿ..!
ಜೂನ್ ತಿಂಗಳು ಆರಂಭವಾಗುತ್ತಿವೆ. ಜೂನ್‌ನಲ್ಲಿ ಹತ್ತು ಹಲವು ಹಬ್ಬಗಳು ಆರಂಭವಾಗುತ್ತದೆ. ಮತ್ತೆ ಜೂನ್‌ನಲ್ಲಿ ವಿಶೇಷವಾಗಿ ಏಕಾದಶಿಗಳು ಬರಲಿವೆ. ಭಗವಾನ್ ವಿಷ್ಣುವನ್ನು ಪೂಜಿಸಲು ಏಕಾದಶಿ ಆಚರಿಸಲಾಗುತ್ತದೆ. ಉಪವಾಸ, ವಿಶೇಷ ಪೂಜೆಗೆ ಏಕಾದಶಿ ಹೆಸರಾಗಿದೆ. ಪ್ರತಿ ತಿಂಗಳು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದಲ್ಲಿ ಎರಡು ಏಕಾದಶಿಗಳು ಬಂದೇ ಬರುತ್ತವೆ.
ಹಾಗೆಯೇ ಈ ವರ್ಷದ ಜೂನ್‌ನಲ್ಲಿಯೂ ಎರಡು ಪ್ರಮುಖ ಏಕಾದಶಿಗಳು ಬರಲಿವೆ, ಏಕಾದಶಿಯಂದು ಉಪವಾಸವನ್ನು ಆಚರಿಸಲು ಹಾಗೂ ಭಗವಾನ್ ವಿಷ್ಣುವಿನ ಪೂಜೆಗೆ ನೀವು ಆಲೋಚಿಸಿದ್ದರೆ ಈ ದಿನಾಂಕಗಳು, ಮುಹೂರ್ತ ತಿಳಿದಿದ್ದರೆ ಉತ್ತಮ.

ಜೂನ್ 2024 ರಲ್ಲಿ ಏಕಾದಶಿ ದಿನಾಂಕ ಮತ್ತು ಸಮಯ
ಅಪಾರ ಏಕಾದಶಿ: ಅಪರ ಏಕಾದಶಿಯನ್ನು ಜ್ಯೇಷ್ಠ ಮಾಸದಲ್ಲಿ ಕೃಷ್ಣ ಪಕ್ಷದಲ್ಲಿ 11 ನೇ ದಿನದಂದು ಆಚರಿಸಲಾಗುತ್ತದೆ. ಜೂನ್‌ನಲ್ಲಿ ಈ ಅಪರ ಏಕಾದಶಿಯನ್ನು ಜೂನ್ 02ರಂದು ಆಚರಿಸಲಾಗುತ್ತದೆ. ಬೆಳಗ್ಗೆ 5:04ರಿಂದ ಏಕಾದಶಿಗೆ ಮುಹೂರ್ತವಿದೆ. ಜೊತೆಗೆ ಜೂನ್ 3 ಮಧ್ಯಾಹ್ನ 2:41ಕ್ಕೆ ಈ ಮುಹೂರ್ತ ಕೊನೆಯಾಗಲಿದೆ.
ಅಪರಾ ಏಕಾದಶಿಯ ಮಹತ್ವದ ಬಗ್ಗೆ ಹೇಳುವುದಾದರೆ ಈ ಏಕಾದಶಿಯನ್ನು ಆಚರಿಸುವುದರಿಂದ ಪಿತೃದೋಷದಿಂದ ಮುಕ್ತಿ ಸಿಗಲಿದೆ. ಈ ದಿನ ತರ್ಪಣ ನೀಡಿದರೆ ಮರಣವೊಂದಿದ ಪಿತೃಗಳಿಗೆ ಮೋಕ್ಷ ಸಿಗಲಿದೆ. ಈ ದಿನ ಹೋಮ, ಪೂಜಾ ಕಾರ್ಯಗಳಿಗೆ ತುಂಬಾ ಒಳ್ಳೆಯದಿದೆ.
ಅಪರಾ ಏಕಾದಶಿಯನ್ನು ಆಚರಿಸುವುದರಿಂದ ಪ್ರೇತ ದೋಷವಿರಲ್ಲ, ಶ್ರೀ ವಿಷ್ಣುವಿನ ಸಹಾಯದಿಂದ ಎಲ್ಲಾ ಕಷ್ಟಗಳು ದೂರಾಗುವುದು, ಭೂತ-ಪ್ರೇತ ಅಂತ ದುಷ್ಟ ಶಕ್ತಿಗಳ ಕಾಟವಿರಲ್ಲ. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.
ನಿರ್ಜಲ ಏಕಾದಶಿ : ಜ್ಯೇಷ್ಠ ಮಾಸದ ಶುಕ್ಲ ಪಕ್ಷದಲ್ಲಿ ನಿರ್ಜಲ ಏಕಾದಶಿ ಬರುತ್ತದೆ. ಈ ಏಕಾದಶಿಯು ಜೂನ್ 17 ಬೆಳಗ್ಗೆ 4:43ಕ್ಕೆ ಆರಂಭಗೊಂಡು ಜೂನ್ 18, 2024 06:24 ಬೆಳಗ್ಗೆ ಕೊನೆಯಾಗಲಿದೆ. ಈ ಎರಡು ಏಕಾದಶಿಗಳು ಜೂನ್‌ನಲ್ಲಿ ಆಚರಿಸಲಾಗುತ್ತದೆ. ಈ ಎರಡೂ ಏಕಾದಶಿಯಲ್ಲಿ ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ.
ಈ ಎರಡು ಏಕಾದಶಿ ಮಹತ್ವ
ಏಕಾದಶಿಗಳು ಹಿಂದೂ ಕ್ಯಾಲೆಂಡರ್ ಪ್ರಕಾರ ವರ್ಷದಲ್ಲಿ ಅತ್ಯಂತ ಪವಿತ್ರವಾದ ದಿನಗಳಾಗಿವೆ. ಭಗವಾನ್ ವಿಷ್ಣುವಿನ ಆರ್ಶೀವಾದ ಪಡೆಯಲು ಈ ದಿನಗಳು ಬಹಳ ಅನುಕೂಲಕರವಾಗಿದೆ. ಇದೇ ದಿನ ಭಕ್ತರು ವಿಷ್ಣುವಿಗೆ ವಿಶೇಷ ಪೂಜೆ ಮಾಡುತ್ತಾರೆ ದಿನವಿಡಿ ಉಪವಾಸ ಇರುತ್ತಾರೆ. ಭಕ್ತರು ನೀರು ಮತ್ತು ಆಹಾರವನ್ನು ಸೇವಿಸದೆ ಕಠಿಣ ಉಪವಾಸವನ್ನು ಆಚರಿಸಿದಾಗ ನಾವು ಅಪರ ಏಕಾದಶಿ ಮತ್ತು ನಿರ್ಜಲ ಏಕಾದಶಿಯನ್ನು ಆಚರಿಸುತ್ತೇವೆ.
ಬೆಳಗ್ಗೆ ಬೇಗನೆ ಎದ್ದು, ಭಗವಾನ್ ವಿಷ್ಣು, ಶ್ರೀ ಕೃಷ್ಣರ ವಿಗ್ರಹಗಳನ್ನು ಮರದ ಹಲಗೆಯ ಮೇಲೆ ಇರಿಸಿ. ಈ ಮೂರ್ತಿಗಳ ಮುಂದೆ ತುಪ್ಪದ ದೀಪ ಹಚ್ಚಲಾಗುತ್ತದೆ. ಜೊತೆಗೆ ತುಳಸಿ ಎಲೆ, ಹಣ್ಣು, ಪಂಚಾಮೃತ ಅರ್ಪಿಸಲಾಗುತ್ತದೆ. ಈ ವೇಳೆ ಕೃಷ್ಣಾ ಮಹಾ ಮಂತ್ರವನ್ನು 108 ಬಾರಿ ಜಪಿಸಲಾಗುತ್ತದೆ. ಸಂಜೆ ವಿಷ್ಣು ಪುರಾಣ, ವಿಷ್ಣು ಕಥೆ ಓದಲಾಗುತ್ತದೆ.
ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರು ಏಕಾದಶಿಯ ದಿನದಂದು ತುಳಸಿ ಎಲೆಗಳನ್ನು ಪೂಜೆಗೆ ಬಳಸಬೇಕು. ತುಳಸಿ ಎಲೆಗಳನ್ನು ಅರ್ಪಿಸುವಾಗ, ಸಂಪತ್ತು ಮತ್ತು ಸಮೃದ್ಧಿಗಾಗಿ ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿ ಎಂಬುದನ್ನು ನೆನಪಿನಲ್ಲಿಡಿ.
ವಿಷ್ಣು ಮಂತ್ರಗಳು:
1. ವಿಷ್ಣು ಮೂಲ ಮಂತ್ರ:
2. ಓಂ ನಮೋ ಭಗವತೇ ವಾಸುದೇವಾಯ
3. ವಿಷ್ಣು ಗಾಯತ್ರಿ ಮಂತ್ರ: ಓಂ ನಾರಾಯಣಯೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್



Click it and Unblock the Notifications











