Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಜನವರಿ 22ಕ್ಕೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಮಾಡಲ್ಲ ಏಕೆ?
ಅಯೋಧ್ಯೆ ರಾಮ ಮಂದಿರ ಹಿಂದೂಗಳ ಪವಿತ್ರ ತೀರ್ಥಸ್ಥಳ, ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ, ಅಲ್ಲಿರುವ ಶ್ರೀರಾಮ ನೋಡಿ ಜನ್ಮ ಪಾವನವಾಯ್ತು ಎಂದು ಭಕ್ತಿಯಿಂದ ಶ್ರೀರಾಮನಿಗೆ ನಮಿಸುತ್ತಿದ್ದಾರೆ.
ಅಯೋಧ್ಯೆಯ ರಾಮ ಮಂದಿರ ಎಂಬುವುದು ಕೋಟ್ಯಾಂತರ ಹಿಂದೂಗಳ ಬಹುದೊಡ್ಡ ಕನಸಾಗಿತ್ತು, 500 ವರ್ಷಗಳಿಂದ ಕಾಣುತ್ತಿದ್ದ ಕನಸು 2024ರ ಜನವರಿಯಲ್ಲಿ ಸಾಕಾರವಾಗಿದೆ, ನಮ್ಮೆಲ್ಲರ ನೆಚ್ಚಿನ ಶ್ರೀರಾಮನ ವಿಗ್ರಹವನ್ನು 2024 ಜನವರಿ 22ಕ್ಕೆ ಪ್ರಾಣ ಪ್ರತಿಷ್ಟಾಪನೆ ಮಾಡಿ ಭಕ್ತರು ದರ್ಶನ ಪಡೆಯಲು ಅನುವು ಮಾಡಲಾಯ್ತು. 2025 ಜನವರಿ 22ರಂದು ಪ್ರಾಣ ಪ್ರತಿಷ್ಟಾಪನೆ ಮಾಡಿ ಒಂದು ವರ್ಷವಾಗುತ್ತೆ ಆದರೆ ಈ ದಿನದಂದು ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಟಾಪನೆಯ ವಾರ್ಷಿಕೋತ್ಸವ ಆಚರಣೆ ಮಾಡುತ್ತಿಲ್ಲ, ಇದರ ಬಗ್ಗೆ ದೇವಾಯದ ಆಡಳಿತ ಮಂದಿ ಏನು ಹೇಳಿದೆ ಎಂದು ನೋಡೋಣ ಬನ್ನಿ:

ಜನವರಿ 22ಕ್ಕೆ ಅಯೋಧ್ಯೆಯ ದೇವಾಲಯದ ವಾರ್ಷಿಕೋತ್ಸವ ಅಲ್ಲ
ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯ ವಾರ್ಷಿಕೋತ್ಸವ ಆಚರಣೆಯನ್ನು ಜನವರಿ 22ರಂದು ಮಾಡಲಾಗುತ್ತಿಲ್ಲ ಎಂದು ಹೇಳಿದೆ, ಏಕೆಂದರೆ ಹಿಂದೂ ಹಬ್ಬಗಳು, ಪೂಜೆಗಳು ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಡಲಾಗುವುದು. ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ಪುಷ್ಯಾ ಶುಕ್ಲ ದ್ವಾದಶಿಯಂದು ಮಾಡಲಾಯ್ತು, ಇದನ್ನು ಕೂಮರ್ಮಾ ದ್ವಾದಶಿ ಎಂದೂ ಕರೆಯಲಾಗುವುದು. 2025ರಲ್ಲಿ ಅದು ಜನವರಿ 11ಕ್ಕೆ ಬರಲಿದೆ, ಹಾಗಾಗಿ ಜನವರಿ 11ರಂದ ಅಯೋಧ್ಯೆಯ ವಾರ್ಷಕೋತ್ಸವ ವಿಶೇಷ ಪೂಜೆ ಮಾಡಲಾಗುವುದು.
ಈ ದಿನ ದೆಹಲಿಯ ಅಪೋಲೋ ಆಸ್ಪತ್ರೆ ಯಾತ್ರಿ ಸೇವಾ ಕೇಂದ್ರ ಕಾಂಪ್ಲೆಕ್ಸ್‌ನಿಂದ 3000 ಚದರ ಅಡಿ ದೂರದಲ್ಲಿ ವೈದ್ಯಕೀಯ ಸೌಲಭ್ಯ ನೀಡಲಿದೆ
ಈಗ ಭಕ್ತರಿಗೆ ಬಿಸಿಲು, ಮಳೆಯಿಂದ ರಕ್ಷಣೆ ನೀಡಲು ಜರ್ಮನ್ ಹ್ಯಾಂಗರ್ಸ್ ಬಳಸಲಾಗಿತ್ತು, ಅದನ್ನು ಬದಲಾಯಿಸಿ ಶಾಶ್ವತ ಶೆಡ್‌ಗಳ ನಿರ್ಮಾಣ ಮಾಡಲಾಗುವುದು
ಸಪ್ತ ಮಂಡಲ ಮಂದಿರ 2025ರ ಮಾರ್ಚ್‌ನಲ್ಲಿ ಸಂಪೂರ್ಣವಾಗಲಿದೆ, ಶೇಷಾವತಾರ ಮಂದಿರ ಆಗಸ್ಟ್‌ನಲ್ಲಿ, ದೇವಾಸ್ಥಾನದ ಹೊರ ಭಾಗದ ಕೆಲಸ ಕಾರ್ಯವು ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳಲಿದೆ.
ಅಯೋಧ್ಯಗೆ ಶ್ರೀರಾಮನ ದರ್ಶನ ಪಡೆಯಬೇಕು ಎಂಬುವುದು ಪ್ರತಿಯೊಬ್ಬ ಹಿಂದೂವಿನ ಬಹುದೊಡ್ಡ ಕನಸು
ಅಯೋಧ್ಯೆಗೆ ಹೋಗಿ ಅಲ್ಲಿರುವ ಬಾಲರಾಮನ ದರ್ಶನ ಪಡೆಯಬೇಕು ಎಂಬುವುದು ಪ್ರತಿಯೊಬ್ಬ ಹಿಂದೂವಿನ ಕನಸಾಗಿದೆ, ಹಾಗಾಗಿ ಉತ್ತರ ಭಾರತದ ಕಡೆ ಟ್ರಿಪ್ ಮಾಡಬೇಕು ಎಂದು ಯೋಚಿಸದೆ ಇರುವವರು ಕೂಡ ಈಗ ಅಯೋಧ್ಯೆಗೆ ಹೋಗಿ ಬರಬೇಕು ಎಂದು ಬಯಸುತ್ತಿದ್ದಾರೆ.
{video1}ಢ
ಅಯೋಧ್ಯೆಯಲ್ಲಿರುವ ಬಾಲರಾಮನ ಮುಖದಲ್ಲಿದೆ ಅಂಥ ತೇಜಸ್ಸು
ಅಯೋಧ್ಯೆ ಶ್ರೀರಾಮ ಮೂರ್ತಿಯನ್ನು ನೋಡಿದಾಗ ನಿಜವಾಗಲು ಶ್ರೀರಾಮನೇ ಪ್ರತ್ಯಕ್ಷವಾದಂತಿದೆ, ಅಷ್ಟೊಂದು ಅದ್ಭುತವಾಗಿ ಆ ವಿಗ್ರಹವನ್ನು ಕೆತ್ತಲಾಗಿದೆ. ಸರ್ವಾಲಂಕಾರ ಭೂಷಿತ ಶ್ರೀರಾಮನ ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ, ನೋಡಿದಷ್ಟು ಮತ್ತೆ ಮತ್ತೆ ನೋಡಬೇಕು ಎನ್ನುವ ತೇಜಸ್ಸು ಆ ಮುಖದಲ್ಲಿ.
2025ರ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಬೇಕೆಂದು ಬಯಸುವವರು ಜನವರಿ 22ರ ಬದಲಿಗೆ ಜನವರಿ 11ಕ್ಕೆ ಪ್ಲ್ಯಾನ್ ಮಾಡಿದರೆ ಒಳ್ಳೆಯದು.



Click it and Unblock the Notifications











