Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ತಿರುಪತಿಯಲ್ಲಿ ಲಡ್ಡು ಪ್ರಸಾದ ಆರಂಭವಾಗಿದ್ದು ಯಾವಾಗ? ಯಾರು ಈ ಕಲ್ಯಾಣಂ ಅಯ್ಯಂಗಾರ್?
ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಕಲಬೆರೆಕೆಯಾಗಿರುವ ಸುದ್ದಿ ಈಗ ವಿವಾದ ಹುಟ್ಟುಹಾಕಿದೆ. ಹಾಗೆ ತನಿಖೆಗೂ ಆಗ್ರಹ ಕೇಳಿಬಂದಿದ್ದು, ದೇವಾಲಯದಲ್ಲಿ ಹೋಮ ಹವನಕ್ಕೆ ಸಿದ್ದತೆಯೂ ನಡೆದಿದೆ. ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದ್ದ ತಿರುಪತಿ ಲಡ್ಡು ಈಗ ವಿವಾದದ ಕೇಂದ್ರಬಿಂದುವಾಗಿದೆ.
ಸದ್ಯ ದೇವಾಲಯ ಆಡಳಿತ ಮಂಡಳಿ ಹಾಗೂ ಸರ್ಕಾರದ ನಡುವೆ ಈಗ ತಿಕ್ಕಾಟ ಆರಂಭಗೊಂಡಿದೆ. ಘಟನೆ ಸಂಬಂಧ ಹತ್ತಾರು ಊಹಾ ಪೋಹಗಳು, ಅನುಮಾನಗಳು ಸಹ ವಿವಾದಕ್ಕೆ ಮತ್ತಷ್ಟು ಕಿಡಿ ಹೊತ್ತಿಸುತ್ತಿದೆ. ದೇಶದಾದ್ಯಂತ ಲಕ್ಷಾಂತರ ಮಂದಿಯ ನಂಬಿಕೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.

ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಸಾದವಾಗಿ ನೀಡಲಾದ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಬುಧವಾರ ಹೇಳಿದಾಗ ವಿವಾದ ಹುಟ್ಟುಕೊಂಡಿತ್ತು. ಲ್ಯಾಬ್ ವರದಿಯೂ ಸಹ ಇದಕ್ಕೆ ಪೂರಕವಾಗಿ ಬಂದಿತ್ತು. ತಿರುಪತಿ ಲಡ್ಡುವಿನಲ್ಲಿ ಬಳಸುವ ತುಪ್ಪದ ಮಾದರಿಯಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಮತ್ತು ಹಂದಿ ಕೊಬ್ಬು (ಹಂದಿ ಕೊಬ್ಬು) ಭಾಗಗಳಿವೆ ಎಂದು ಹೇಳಲಾಗಿದೆ.
ತಿರುಪತಿ ದೇವಸ್ಥಾನವು ನೂರಾರು ವರ್ಷಗಳ ಇತಿಹಾಸ ತನ್ನಲ್ಲಿಟ್ಟುಕೊಂಡಿದೆ. ವಿಷ್ಣುವಿನ ಅವತಾರದಲ್ಲಿ ವೆಂಕಟೇಶ್ವರನಾಗಿ ಭೂಲೋಕಕ್ಕೆ ವಿಷ್ಣು ಬಂದಿದ್ದಾನೆ, ಆತ ಕಲಿಯುಗದ ನೋವು, ಮಾನವರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ.
300 ವರ್ಷದ ಹಿಂದೆ ಮೊದಲ ಲಡ್ಡು ವಿತರಣೆ
ವೆಂಕಟೇಶ್ವರ ದೇವರ ಪ್ರಸಾದವಾಗಿ ನೀಡುವ ತಿರುಪತಿ ಲಡ್ಡು ತನ್ನ ವಿಶಿಷ್ಟ ರುಚಿ ಮತ್ತು ವಿನ್ಯಾಸಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಇದು 300 ವರ್ಷಗಳ ಹಿಂದೆ ಪ್ರಾರಂಭವಾಯಿತು. 1715 ಆಗಸ್ಟ್ 2 ರಂದು ಮೊಟ್ಟ ಮೊದಲ ಬಾರಿಗೆ ಈ ಲಡ್ಡು ಪ್ರಸಾದವಾಗಿ ತಿರುಪತಿಯಲ್ಲಿ ವಿತರಿಸಲಾಗಿತ್ತು ಎಂದು ಹೇಳಲಾಗಿದೆ. ಇಂದು ನಾವು ನೋಡುತ್ತಿರುವ ಲಡ್ಡು ಸುಮಾರು ಆರು ಬಾರಿ ವಿವಿಧ ವಿನ್ಯಾಸಗಳನ್ನು ಮಾಡಿದ ನಂತರ 1940 ರ ಸುಮಾರಿಗೆ ಮದ್ರಾಸ್ ಸರ್ಕಾರದ ಅಡಿಯಲ್ಲಿ ಅದರ ಪ್ರಸ್ತುತ ಆಕಾರವನ್ನು ಪಡೆದುಕೊಂಡಿದೆ.
ತಿರುಪತಿ 'ಲಡ್ಡು ರಾಜ' ಕಲ್ಯಾಣಂ ಅಯ್ಯಂಗಾರ್
ಲಡ್ಡು ಪ್ರಸಾದ ಆರಂಭಿಸಲು ಕಾರಣವಾಗಿದ್ದು ಕಲ್ಯಾಣಂ ಅಯ್ಯಂಗಾರ್ ಎಂಬ ವ್ಯಕ್ತಿಯಂತೆ. ಈತನನ್ನು ಲಡ್ಡು ರಾಜ ಎಂದು ಕರೆಯಲಾಗಿದೆ. ಈ ಲಡ್ಡು ಇಷ್ಟೊಂದು ರುಚಿಕರವಾಗಿರಲು ಇವರೇ ಕಾರಣೀಕರ್ತರು ಎಂದು ಹೇಳಲಾಗಿದೆ. ಇದನ್ನು ಮಿರಾಸಿದಾರಿ ವಿಧಾನದಲ್ಲಿ ತಯಾರಿಸಲಾಗಿತ್ತಂತೆ.
ಮಿರಾಸಿದಾರಿ ವಿಧಾನ ಎಂದರೇನು?
ಕಲ್ಯಾಣಂ ಅಯ್ಯಂಗಾರ್ ಜನಪ್ರಿಯ ಮಿರಾಸಿದಾರಿ ಪದ್ಧತಿಯನ್ನು ಪರಿಚಯಿಸಿದರು. ಇದು ವಂಶಪಾರಂಪರ್ಯ ವ್ಯವಸ್ಥೆಯಾಗಿದ್ದು, ಸಿಹಿತಿಂಡಿಗಳನ್ನು ತಯಾರಿಸುವುದು ಇದರ ಉದ್ದೇಶವಾಗಿತ್ತು. ಅಡುಗೆಮನೆಯಲ್ಲಿ ಲಡ್ಡುಗಳನ್ನು ತಯಾರಿಸುವ ಜವಾಬ್ದಾರಿಯನ್ನು ಗೇಮಕರ್ ಮಿರಸಿದಾರರು ಎಂದು ಕರೆಯಲಾಗುತ್ತಿತ್ತು. 2001 ರ ಮೊದಲು ಮತ್ತು ನಂತರವೂ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನೌಕರರು ಸ್ವತಃ ಲಡ್ಡುಗಳನ್ನು ತಯಾರಿಸುತ್ತಿದ್ದರು. ಆದರೆ, ಸಮಯ ಕಳೆದಂತೆ ಭಕ್ತರ ಹರಿವು ಹೆಚ್ಚಾದಂತೆ ಪ್ರತಿದಿನ ತಯಾರಿಸುವ ಲಡ್ಡುಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಯಿತು.
ಆದರೆ ಬರು ಬರುತ್ತಾ ಲಡ್ಡು ಪ್ರಸಿದ್ಧಿ ಪಡೆಯಿತು. ಬೇಡಿಕೆ ಹೆಚ್ಚಾಯಿತು. ಹೀಗಾಗಿ ದೇವಾಲಯದಲ್ಲಿ ದೊಡ್ಡ ಅಡುಗೆ ಮನೆ ನಿರ್ಮಿಸಲು ನಿರ್ಧರಿಸಲಾಗಿತ್ತು. ಕಟ್ಟಿಗೆ ಒಲೆಗಳ ಮೂಲಕ ಒಲೆ ಹತ್ತಿಸಿ ಈ ಲಡ್ಡು ತಯಾರಿಕೆ ಮಾಡುತ್ತಿದ್ದರು. ಈ ವೇಳೆಗಾಗಲೆ ದಿನಕ್ಕೆ 70 ಸಾವಿರ ಲಡ್ಡುಗಳ ಬೇಡಿಕೆ ಇತ್ತು. ಬರು ಬರುತ್ತಾ ಈ ಸಂಖ್ಯೆ ಏರುತ್ತಲೇ ಸಾಗಿತ್ತು.
ಈಗ ತಿರುಪತಿ ಲಡ್ಡು ದಿನವೊಂದಕ್ಕೆ ಲಕ್ಷ ಲಕ್ಷ ಬೇಡಿಕೆ ಇದೆ. ದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ಲಡ್ಡು ಸ್ವೀಕಾರ ಮಾಡುತ್ತಾರೆ, ಹಾಗೆ ಮನೆಗೆ, ಸ್ನೇಹಿತರಿಗೂ ಇಲ್ಲಿಂದಲೇ ತೆಗೆದುಕೊಂಡು ಹೋಗುತ್ತಾರೆ.



Click it and Unblock the Notifications

