Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಬೆಳಗ್ಗೆ ಎದ್ದಾಗ ಈ ವಸ್ತುಗಳು ಕಣ್ಣಿಗೆ ಬಿದ್ರೆ ಶುಭ ಸಂಕೇತ
ನಾವು ಇಂದಿಗೂ ಶಕುನಗಳನ್ನು ನಂಬುತ್ತೇವೆ. ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ವಸ್ತುಗಳನ್ನು ನೋಡಿದ್ರೆ ನಮಗೆ ಶುಭ ಶಕುನ. ಇನ್ನೂ ಕೆಲವೊಂದು ವಸ್ತುಗಳನ್ನು ನೋಡಿದ್ರೆ ಅಪಶಕುನ ಅನ್ನೋ ನಂಬಿಕೆಗಳಿದೆ.
ಹೌದು, ಬೆಳಗ್ಗೆ ನಾವು ಹೇಗೆ ಎದ್ದೇಳುತ್ತೇವೆ ಅನ್ನೋದು ತುಂಬಾನೇ ಸೂಕ್ಷ್ಮ ವಿಚಾರ. ಅದ್ರಲ್ಲೂ ನಾವು ಎದ್ದ ತಕ್ಷಣ ಯಾವ ಶುಭ ವಸ್ತುವನ್ನು ನೋಡುತ್ತೇವೆ ಅದರ ಮೇಲೆ ನಮ್ಮ ಅಂದಿನ ಯಶಸ್ಸು ನಿರ್ಧಾರವಾಗಿರುತ್ತದೆ. ಹಾಗಾದ್ರೆ ಬೆಳಗ್ಗೆ ಎದ್ದ ತಕ್ಷಣ ನಾವು ಏನನ್ನು ನೋಡಬೇಕು? ಯಾವ ವಸ್ತುವನ್ನು ನೋಡಿದ್ರೆ ನಮಗೆ ತುಂಬಾ ಒಳ್ಳೆಯದಾಗುತ್ತದೆ ಅನ್ನೋದನ್ನ ತಿಳಿದುಕೊಳ್ಳೋಣ.

1. ಪ್ರಾರ್ಥನೆ
ಬೆಳಗ್ಗೆ ಎದ್ದು ಸ್ನಾನ ಮಾಡಿ ಮೊದಲು ದೇವರಿಗೆ ಭಕ್ತಿಯಿಂದ ಪ್ರಾರ್ಥನೆಯನ್ನು ಸಲ್ಲಿಸಬೇಕು. ನಾವು ಮಲಗುವ ಸಮಯ ಹಾಗೂ ಬೆಳಗ್ಗೆ ಎದ್ದೇಳುವ ಸಮಯವನ್ನು ಸಂಧಿ ಸಮಯವೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ನಾವು ಧನಾತ್ಮಕ ಅಂಶಗಳನ್ನು ಸ್ವೀಕರಿಸಬೇಕು. ಹಾಗಾದಾಗ ಮಾತ್ರ ನಮ್ಮ ಜೀವನದಲ್ಲಿ ಎಲ್ಲಾ ಧನಾತ್ಮಕ ಘಟನೆಗಳೇ ನಡೆಯುತ್ತದೆ. ಯಾರು ಇಂತಹ ಸಮಯದಲ್ಲಿ ಋಣಾತ್ಮಕ ವಿಚಾರಗಳನ್ನು ನೆನೆದುಕೊಳ್ಳುತ್ತಾರೋ ಅವರ ಜೀವನದಲ್ಲಿ ಋಣಾತ್ಮಕ ಘಟನೆಗಳೇ ನಡೆಯುತ್ತದೆ.
2. ಮೊದಲು ಪ್ರಾಥಮಿಕ ಕೆಲಸದ ಕಡೆಗೆ ಗಮನಕೊಡಿ
ಬೆಳಗ್ಗೆ ಎದ್ದ ತಕ್ಷಣ ನೀವು ನಿಮ್ಮ ಪ್ರಾಥಮಿಕ ಕೆಲಸದ ಕಡೆ ಗಮನ ಕೇಂದ್ರೀಕರಿಸಿ. ಇದರಿಂದ ನೀವು ಅಗತ್ಯ ಕೆಲಸಗಳನ್ನು ಚೆನ್ನಾಗಿ ನಿಭಾಯಿಸುತ್ತೀರಿ. ನಿಮ್ಮ ಜೀವನದಲ್ಲಿ ನೀವು ನಿಮಗಾಗಿ ಉತ್ತಮ ಕೆಲಸಗಳನ್ನು ಮಾಡಿದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ.
3. ಧ್ಯಾನ ಅಭ್ಯಾಸ ಮಾಡಿ
ಯಾವ ವ್ಯಕ್ತಿ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ತಡವಾಗಿ ಏಳುತ್ತಾರೋ ಅಥವಾ ಯಾವ ವ್ಯಕ್ತಿ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಬೇಗನೆ ಏಳುತ್ತಾರೋ ಅಂತವರ ಆರೋಗ್ಯ ಖಂಡಿತ ಹಾಳಾಗುತ್ತದೆ. ಸರಿಯಾದ ಜೀವನ ಕ್ರಮ ಪಾಲಿಸಿದಾಗ ಮಾತ್ರ ಆರೋಗ್ಯ ಚೆನ್ನಾಗಿರಲು ಸಾಧ್ಯ. ಹೀಗಾಗಿ ಎದ್ದ ತಕ್ಷಣ ಹತ್ತು ನಿಮಿಷವಾದರೂ ಧ್ಯಾನ ಅಭ್ಯಾಸ ಮಾಡಲೇಬೇಕು. ಇದು ನಿಮ್ಮ ಮನಸ್ಸನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ.
4. ಕರ್ಮದ ಆಲೋಚನೆ ಇರಲಿ
ಬೆಳಗ್ಗೆ ಎದ್ದ ತಕ್ಷಣ ನಮ್ಮ ದಿನಚರಿ ಆರಂಭವಾಗುತ್ತದೆ. ಹೀಗಂತ ಎದ್ದು ಮನೆಯವರ ಜೊತೆಗೆ ಕಿರುಚಾಡುತ್ತಾ, ಜಗಳ ಮಾಡುತ್ತಾ ಮಾತನಾಡುವುದು ಸರಿಯಲ್ಲ. ನಾವು ಬೆಳಗ್ಗೆ ಎದ್ದ ಸುಮಾರು ಒಂದು ಗಂಟೆಗಳ ಕಾಲ ಯಾರ ಜೊತೆಗೂ ಮಾತನಾಡಬಾರದು. ಕೆಲಸ ಮಾಡುತ್ತಲೇ ನಾನು ಇವತ್ತು ಏನು ಒಳ್ಳೆಯದು ಮಾಡಬಹುದು ಅನ್ನೋದನ್ನ ನೆನಪು ಮಾಡಿಕೊಳ್ಳಿ. ನಿಮ್ಮ ಕರ್ಮಗಳ ಬಗ್ಗೆ ಆಲೋಚಿಸಿ.
5. ಅಂಗೈ ನೋಡಿದರೆ ಉತ್ತಮ
ಬೆಳಗ್ಗೆ ಎದ್ದ ತಕ್ಷಣ ಕಣ್ಣು ಬಿಡುವ ಮೊದಲು ಅಂಗೈ ಎರಡನ್ನು ಉಜ್ಜಿಕೊಂಡು ನಂತರ ಕಣ್ಣು ತೆರೆದು ಮೊದಲಿಗೆ ನಮ್ಮ ಅಂಗೈಯನ್ನು ನೋಡಬೇಕು. ಹಾಗೂ ಆ ಕ್ಷಣವೇ ದೇವರನ್ನು ಭಕ್ತಿಯಿಂದ ಬೇಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ನಮ್ಮ ಅಂಗೈನಲ್ಲಿ ದೈವೀಕ ಶಕ್ತಿ ಇದೆ ಎಂದು ಋಷಿಗಳು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ನಿಮ್ಮ ಅಂಗೈಯನ್ನು ಜಾಗರೂಕತೆಯಿಂದ ನೋಡಿಕೊಳ್ಳಿ.
6. ಶುಭಕರ ಫೋಟೋವನ್ನು ನೋಡಿ
ಬೆಳಗ್ಗೆ ಗಡಿಬಿಡಿಯಲ್ಲಿ ಎದ್ದು ನಮ್ಮ ಕೆಲಸ ಕಾರ್ಯಗಳಿಗೆ ತಯಾರಾಗೋದು ಖಂಡಿತ ಒಳ್ಳೆಯದಲ್ಲ. ಪ್ರತಿನಿತ್ಯ ನಾವು ಏಳುವ ಸಮಯಕ್ಕಿಂತ ಹತ್ತು ನಿಮಿಷ ಮುಂಚಿತವಾಗಿಯೇ ಏಳಬೇಕು. ಎದ್ದ ತಕ್ಷಣ ನಮ್ಮ ಕಣ್ಣನ್ನು ನಿಧಾನವಾಗಿ ತೆರೆದು ಮೊದಲು ಶುಭಕರ ಫೋಟೋವನ್ನು ನೋಡಬೇಕು. ಸಾಮಾನ್ಯವಾಗಿ ಜನ ತಾವು ನಂಬುವ ದೇವರ ಫೋಟೋವನ್ನು ಕೋಣೆಯಲ್ಲಿ ಹಾಕಿಕೊಂಡಿರುತ್ತಾರೆ. ಮತ್ತು ಎದ್ದ ತಕ್ಷಣ ಅದನ್ನು ನೋಡುತ್ತಾರೆ. ಇದರಿಂದ ನಮ್ಮ ಅಂದಿನ ದಿನ ಚೆನ್ನಾಗಿರುತ್ತಂತೆ. ಹೀಗಾಗಿ ನಾವು ಮಲಗುವ ಕೋಣೆಯಲ್ಲಿ ಶುಭಕರ ಪೋಟೋವೊಂದಿದ್ದರೆ ತುಂಬಾನೇ ಒಳ್ಳೆಯದು.
ಈ ಆಧುನಿಕ ಯುಗದಲ್ಲಿ ಜನ ಅಳವಡಿಸಿಕೊಂಡಿರೋ ಜೀವನ ಶೈಲಿಯೇ ಸರಿಯಿಲ್ಲ. ನಾವು ಯಾವಾಗ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುತ್ತೇವೆಯೋ ಅಲ್ಲಿಯವರೆಗೂ ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತದೆ.



Click it and Unblock the Notifications


