Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ದೇವರ ಮುಂದೆ ತೆಂಗಿನಕಾಯಿ ಒಡೆಯೋದಕ್ಕೂ ಭಗವಾನ್ ವಿಷ್ಣುವಿಗೂ ಇರೋ ಸಂಬಂಧವೇನು?
ತೆಂಗಿನ ಕಾಯಿ ಒಡೆಯುವುದು ಹಿಂದೂ ಸಂಸ್ಕೃತಿಯಲ್ಲಿ ಇರುವ ಒಂದು ಸಂಪ್ರದಾಯ. ಯಾವುದೇ ಶುಭ ಕಾರ್ಯಗಳು ಆಗುವಾಗ ತೆಂಗಿನ ಕಾಯಿ ಒಡೆಯುವುದು ಒಂದು ವಾಡಿಕೆ. ಹೊಸ ವ್ಯಾಪಾರ ಶುರು ಮಾಡುವಾಗ ಅಥವಾ ಹೊಸ ವಾಹನ ಖರೀದಿ ಮಾಡುವ ಸಂದರ್ಭದಲ್ಲಿ ತೆಂಗಿನ ಕಾಯಿ ಒಡೆಯೋದು ವಾಡಿಕೆ. ಇನ್ನೂ ದೇವಾಸ್ಥಾನಗಳಲ್ಲಿಯೂ ಕೂಡ ದೇವರನ್ನು ಸ್ತುತಿಸಿ ತೆಂಗಿನ ಕಾಯಿಯನ್ನು ಒಡೆಯಲಾಗುತ್ತದೆ.
ಈ ರೀತಿ ಮಾಡೋದ್ರಿಂದ ನಮ್ಮ ಬಾಳನಲ್ಲಿ ಸುಖ-ಸಮೃದ್ಧಿ ಹೆಚ್ಚಾಗುತ್ತದೆ. ಜೊತೆಗೆ ಹಣಕಾಸಿಗೆ ಸಂಬಂಧಿಸಿದಂತಹ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತಂತೆ. ಈ ರೀತಿ ಶುಭ ಕಾರ್ಯಗಳಲ್ಲಿ ತೆಂಗಿನ ಕಾಯಿ ಒಡೆಯೋದಕ್ಕೆ ಒಂದು ಕಾರಣ ಕೂಡ ಇದೆ. ಅಷ್ಟಕ್ಕು ಶುಭಕಾರ್ಯಗಳಲ್ಲಿ ತೆಂಗಿನ ಕಾಯಿ ಒಡೆಯೋದು ಯಾಕೆ ಅನ್ನೋದನ್ನು ತಿಳಿಯೋಣ.

ದೇವರ ಮುಂದೆ ತೆಂಗಿನ ಕಾಯಿ ಒಡೆಯೋದು ಯಾಕೆ?
ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ದೇವರಿಗೆ ತೆಂಗಿನಕಾಯಿ ಅರ್ಪಿಸುವ ಸಾಂಕೇತಿಕ ಕ್ರಿಯೆಯಾಗಿದೆ. ಹಬ್ಬ-ಹರಿದಿನಗಳಲ್ಲಿ, ಶುಭ ಸಮಾರಂಭಗಳಲ್ಲಿ ತೆಂಗಿನಕಾಯಿ ಒಡೆಯುವುದು, ಹೊಸ ಕಾರು, ಜಮೀನು ಖರೀದಿಸುವುದು ಅಥವಾ ಹೊಸ ವ್ಯಾಪಾರ ಆರಂಭಿಸುವಾಗ ತೆಂಗಿನ ಕಾಯಿ ಒಡೆಯೋದು ವಾಡಿಕೆ.
ದಕ್ಷಿಣ ಭಾರತದಲ್ಲಿ ಕಲ್ಪವೃಕ್ಷ ಎಂದು ಕರೆಯುವ ತೆಂಗಿನಕಾಯಿ ವೃಕ್ಷಕ್ಕೆ ಮಹತ್ವದ ಸ್ಥಾನವನ್ನು ನೀಡಲಾಗುತ್ತದೆ. ಹಾಗೂ ಇದನ್ನು ಮಂಗಳಕರ ಅಂತಾನೂ ಪರಿಗಣಿಸಲಾಗಿದೆ. ಇಲ್ಲಿ ತೆಂಗಿನ ಕಾಯಿ ಮರವನ್ನು ಪೂಜ್ಯ ಭಾವನೆಯಿಂದ ಕಾಣೋದ್ರಿಂದ ತೆಂಗಿನ ಕಾಯಿ ಮರವನ್ನು ನಾಶ ಮಾಡಿದರೆ ವ್ಯಕ್ತಿಯೂ ತನ್ನನ್ನು ತಾನು ನಾಶ ಮಾಡಿಕೊಂಡಂತೆ ಅಂತ ಹೇಳಲಾಗುತ್ತದೆ.
ಐತಿಹಾಸಿಕ ಹಿನ್ನೆಲೆಯೇನು?
ತೆಂಗಿನ ಕಾಯಿಗೆ ಪುರಾಣಗಳಲ್ಲಿ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಏಕೆಂದರೆ ವಿಷ್ಣುವು ಭೂಮಿಯ ಮೇಲೆ ಅವತರಿಸಿದ ಸಂದರ್ಭದಲ್ಲಿ ಮನುಕುಲದ ಕಲ್ಯಾಣಕ್ಕಾಗಿ ಲಕ್ಷ್ಮಿ, ತೆಂಗಿನ ಮರ ಮತ್ತು ಕಾಮಧೇನು ಹಸುವನ್ನು ತರುತ್ತಾರೆ. ತೆಂಗಿನಕಾಯಿಯನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಎಂಬ ಮೂರು ದೇವರುಗಳ ಸಂಕೇತವೆಂದು ಪರಿಗಣಿಸಲು ಇದು ಒಂದು ಕಾರಣವಾಗಿದೆ.
ತೆಂಗಿನಕಾಯಿಯನ್ನು ಒಡೆದು ದೇವರಿಗೆ ಅರ್ಪಿಸೋದು ಯಾಕೆ?
ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸುವ ಸಂಪ್ರದಾಯ ಬಹಳ ಹಿಂದಿನ ಕಾಲದಿಂದ ಇದ್ದರೂ ಕೂಡ ಈ ರೀತಿ ಮಾಡೋದ್ರ ಹಿಂದಿನ ನಿಜವಾದ ಕಾರಣ ಏನು ಅನ್ನೋದು ಹೆಚ್ಚಿನವರಿಗೆ ಇನ್ನೂ ಗೊತ್ತಿಲ್ಲ. ಆ ವಿಚಾರಗಳನ್ನು ನಾವು ತಿಳಿದುಕೊಳ್ಳೋಣ.
* ಸಾಮಾನ್ಯವಾಗಿ ತೆಂಗಿನ ಕಾಯಿಯ ಹೊರಗಿನ ಸಿಪ್ಪೆಯನ್ನು ತೆಗೆದು ದೇವರಿಗೆ ಅರ್ಪಣೆ ಮಾಡಲಾಗುತ್ತದೆ. ಇದರ ಅರ್ಥ ಇದು ನಮ್ಮ ಆಂತರಿಕ ಹಾಗೂ ಭೌತಿಕ ಆಸೆಗಳಲ್ಲಿ ಸಂಕೇತಿಸುತ್ತದೆ.
* ತೆಂಗಿನಕಾಯಿಯನ್ನು ನೆಲಕ್ಕೆ ಒಡೆಯುವುದರ ಅರ್ಥ ನಮ್ಮ ಅಹಂಕಾರಗಳನ್ನು ಕೂಡ ನಾವು ನಾಶ ಮಾಡಬೇಕೆಂದು ಸೂಚಿಸುತ್ತದೆ.
* ತೆಂಗಿನಕಾಯಿ ಒಡೆದ ನಂತರ ತೆಂಗಿನ ನೀರು ಅದರಿಂದ ಹೊರಗೆ ಹರಿಯುತ್ತದೆ. ಇದು ನಮ್ಮೊಳಗಿನ ಎಲ್ಲಾ ನಕಾರಾತ್ಮಕತೆಯನ್ನು ಸಂಕೇತಿಸುತ್ತದೆ. ಮತ್ತು ಅದು ಮನಸ್ಸು ಮತ್ತು ದೇಹದಿಂದ ಹೊರಬರುತ್ತದೆ ಎಂದರ್ಥ.
* ತೆಂಗಿನಕಾಯಿಯ ಮೃದುವಾದ ಒಳಭಾಗವು ಶಾಂತಿಯನ್ನು ಸಂಕೇತಿಸುತ್ತದೆ. ಮತ್ತು ಅದನ್ನು ಜನರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ.
ತೆಂಗಿನಕಾಯಿಯಿಂದಾಗುವ ಪ್ರಯೋಜನಗಳೇನು?
ತೆಂಗಿನಕಾಯಿಯು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ. ಮತ್ತು ಫೈಬರ್‌ನಿಂದ ತುಂಬಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮತ್ತು ಮಲಗುವ ಮುನ್ನ ತೆಂಗಿನಕಾಯಿಯನ್ನು ತಿನ್ನುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.
ತೆಂಗಿನಕಾಯಿ ಮಾತ್ರವಲ್ಲ ತೆಂಗಿನ ಕಾಯಿಯ ನೀರು ಕೂಡ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿದೆ. ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸುತ್ತದೆ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತೆಂಗಿನ ನೀರು ಬೇಸಿಗೆಯಲ್ಲಿ ಕಡಿಮೆ ಕ್ಯಾಲೋರಿ ಪಾನೀಯವಾಗಿ ಉತ್ತಮವಾದ ಆಯ್ಕೆಯಾಗಿದೆ. ತೆಂಗಿನ ನೀರು ಮೂತ್ರಪಿಂಡದ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯುತ್ತದೆ, ಕೀಲು ನೋವನ್ನು ಕಡಿಮೆ ಮಾಡುತ್ತದೆ, ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕೂಡ ಪರಿಶೀಲಿಸುತ್ತದೆ.
ತೆಂಗಿನಕಾಯಿ ಒಂದು ಪವಿತ್ರವಾದ ವೃಕ್ಷ. ಪುರಾಣಗಳಲ್ಲೂ ಈ ಬಗ್ಗೆ ಉಲ್ಲೇಖವಾಗಿದ್ದು, ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಇದು ತುಂಬಾನೇ ಒಳ್ಳೆಯದು.



Click it and Unblock the Notifications
