Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ ವರ್ಷ ಆಷಾಢ ಅಮವಾಸ್ಯೆ ಆಗಸ್ಟ್ 4 ಅಥವಾ ಆಗಸ್ಟ್ ಐದಾಕ್ಕಾ? ಏಕೆ ಈ ಗೊಂದಲ
ಆಷಾಢ ಅಮವಾಸ್ಯೆ ಹಿಂದೂಗಳಿಗೆ ತುಂಬಾನೇ ಪ್ರಮುಖವಾದ ದಿನವಾಗಿದೆ. ಏಕೆಂದರೆ ಈ ದಿನ ಪಿತೃ ತರ್ಪಣಕ್ಕೆ ಅತ್ಯಂತ ಶ್ರೇಷ್ಠವಾದ ದಿನವಾಗಿದೆ. ಈ ವರ್ಷ ಆಷಾಢ ಅಮವಾಸ್ಯೆ ಆಗಸ್ಟ್ 4 ಅಥವಾ ಆಗಸ್ಟ್ ಐದಾ ಎಂಬ ಗೊಂದಲ ಕೆಲವರಲ್ಲಿದೆ, ಯಾವ ದಿನ ಆಷಾಢ ಅಮವಾಸ್ಯೆ ಅಚರಿಸಲಾಗುತ್ತಿದೆ, ಈ ದಿನ ಏನು ಮಾಡಿದರೆ ಒಳ್ಳೆಯದು, ಪಿತೃ ತರ್ಪಣ ಮಾಡುವುದರಿಂದ ಧಾರ್ಮಿಕ ನಂಬಿಕೆ ಪ್ರಕಾರ ನಮ್ಮ ಬದುಕಿನಲ್ಲಿ ಆಗುವ ಬದಲಾವಣೆಯೇನು ಎಂದು ನೋಡೋಣ ಬನ್ನಿ:

ಆಷಾಢ ಅಮವಾಸ್ಯೆ ಯಾವಾಗ?
ಆಷಾಢ ಅಮವಾಸ್ಯೆಯನ್ನು ಆಗಸ್ಟ್ 5ರಂದು ಆಚರಿಸಲಾಗುವುದು, ಆಷಾಢ ಅಮವಾಸ್ಯೆ ತಿಥಿ ಆಗಸ್ಟ್ 3ಕ್ಕೆ ಪ್ರಾರಂಭವಾಗಿ ಆಗಸ್ಟ್ 4 ಮಧ್ಯಾಹ್ನ 03:51ಕ್ಕೆ ಮುಕ್ತಾಯವಾಗಲಿದೆ, ಹಾಗಾಗಿ ಆಷಾಢ ಅಮವಾಸ್ಯೆ ಆಗಸ್ಟ್ 4ರಂದು, ಉತ್ತರ ಭಾರತದ ಕಡೆ ಆಗಸ್ಟ್ 4ಕ್ಕೆ ಇರುವುದು ಶ್ರಾವಣ ಅಮವಾಸ್ಯೆ ಅವರು ಜುಲೈ 5ಕ್ಕೆ ಆಷಾಢ ಅಮವಾಸ್ಯೆ ಆಚರಿಸಿದರು, ಆದರೆ ನಮ್ಮಲ್ಲಿ ಈಗ ನಡೆಯುತ್ತಿರುವುದು ಆಷಾಢ, ಶ್ರಾವಣ ಪ್ರಾರಂಭವಾಗಿಲ್ಲ, ಆದ್ದರಿಂದ ಗೊಂದಲ ಬೇಡ, ಈ ಬಾರಿ ಆಷಾಢ ಅಮವಾಸ್ಯೆಯನ್ನು ಆಗಸ್ಟ್ 4ರಂದು ಆಚರಿಸಲಾಗುವುದು.
ಆಷಾಢ ಅಮವಾಸ್ಯೆಗೆ ಏಕಿಷ್ಟು ಪ್ರಾಮುಖ್ಯತೆ
ಈ ದಿನ ತೀರಿ ಹೋದವರಿಗೆ ತರ್ಪಣ ನೀಡಿದರೆ ಪಿತೃದೋಷ ನಿವಾರಣೆಯಾಗುವುದು ಅಲ್ಲದೆ ಅವರಿಗೆ ಕೂಡ ಮೋಕ್ಷ ಸಿಗುವುದು ಎಂಬ ನಂಬಿಕೆ ಇದೆ. ಈ ಪಿತೃ ತರ್ಪಣ ಕೆಲವೊಂದು ವಿಶೇಷ ಸಂದರ್ಭದಲ್ಲಿ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗಾಗಿ ಆಷಾಢ ಅಮವಾಸ್ಯೆಗೆ, ಪಿತೃ ಪಕ್ಷದಲ್ಲಿ ಹಾಗೂ ಕೆಲವರು ಮಹಾಲಯ ಅಮವಾಸ್ಯೆಗೆ ಪಿತೃ ತರ್ಪಣ ನೀಡುತ್ತಾರೆ.
ಈ ದಿನ ಉಪವಾಸವಿದ್ದು ತರ್ಪಣ ನೀಡಲಾಗುವುದು
ಈ ದಿನ ವ್ರತ ನಿಯಮಗಳನ್ನು ಕೈಗೊಂಡು ಉಪವಾಸವಿದ್ದು ನದಿ ದಂಡೆಯಲ್ಲಿ ತರ್ಪಣ ನೀಡಲಾಗುವುದು, ನಂತರ ಮನೆಗೆ ಬಂದು ಕೆಲವೊಂದು ವಿಶೇಷ ಅಡುಗೆ ಮಾಡಿ ಎಲೆ ಹಾಕಿ ಬಡಿಸುವ ಪದ್ಧತಿಯನ್ನು ಕೆಲವರು ಅನುಸರಿಸಿದರೆ ಇನ್ನು ಕೆಲವರು ಪಿಂಡದಾನಷ್ಟೇ ಮಾಡುತ್ತಾರೆ. ಒಟ್ಟಿನಲ್ಲಿ ಹೀಗೆಲ್ಲಾ ಮಾಡುವುದು ಮೋಕ್ಷ ಪಡೆಯಲು.
ಪಿತೃದೋಷ ನಿರ್ಲಕ್ಷ್ಯ ಮಾಡುವಂತಿಲ್ಲ
ಪಿತೃದೋಷಕ್ಕೆ ಒಳಗಾದರೆ ಆ ವ್ಯಕ್ತಿ ತುಂಬಾನೇ ಕಷ್ಟ ಅನುಭವಿಸುತ್ತಾನೆ, ಅವನಿಗೆ ಜೀವನದಲ್ಲಿ ಹೊಡೆತ ಮೇಲೆ ಹೊಡೆತ ಬೀಳುವುದು. ಮನೆಯಲ್ಲಿ ನೆಮ್ಮದಿ ಇರಲ್ಲ, ಕೆಲಸ-ಕಾರ್ಯಗಳಲ್ಲಿ ಯಶಸ್ಸು ಸಿಗಲ್ಲ, ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾನೆ, ಪಿತೃತರ್ಪಣ ನಿರ್ಲಕ್ಷ್ಯ ಮಾಡುವುದರಿಂದ ಅವನ ಸಂಕಷ್ಟಗಳು ಹೆಚ್ಚಾಗುವುದು, ಹಾಗಾಗಿ ಪಿತೃದೋಷ ನಿರ್ಲಕ್ಷ್ಯ ಮಾಡಬಾರದು, ಪಿತೃದೋಷದಿಂದ ಮುಕ್ತರಾಗಲು ಇರುವ ಮಾರ್ಗವೆಂದರೆ ಪಿತೃ ತರ್ಪಣ.
ಹೀಗೆ ಮಾಡುವುದರಿಂದ ತೀರಿ ಹೋದವರ ಆತ್ಮ ಅಲೆದಾಡುವ ಪರಿಸ್ಥಿತಿ ಬರಲ್ಲ, ಇದರಿಂದ ಅವರು ಖುಷಿಯಾಗಿ ನಮಗೆ ಆಶೀರ್ವದಿಸುತ್ತಾರೆ, ಕುಟುಂಬದಲ್ಲಿ ಅವರ ಆಶೀರ್ವಾದದಿಮದ ಎಲ್ಲವೂ ಒಳಿತಾಗಲಿದೆ ಎಂಬುವುದೇ ಬಲವಾದ ನಂಬಿಕೆ.



Click it and Unblock the Notifications
