Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ಕಲ್ಕಿ ಅವತಾರದ ಕುರಿತು ನಿಮಗೆಷ್ಟು ಗೊತ್ತು? ಅಧರ್ಮ ನಾಶಕ್ಕೆ ವಿಷ್ಣು ಅವತಾರದ ಹಿನ್ನಲೆ ಏನು?
ನೀವು ಹಿಂದೂ ಧಾರ್ಮಿಕತೆ ಹಾಗೂ ಅಲ್ಲಿನ ಪುರಾಣಗಳ ಹಿನ್ನಲೆಯನ್ನು ತಿಳಿದಿದ್ದರೆ ನಿಮಗೆ ಅಲ್ಲಿ ಸಾವಿರಾರು ಪಾತ್ರಗಳು ನೆನಪಾಗಬಹುದು. ಅದರಲ್ಲಿ ಎಲ್ಲರ ಗಮನ ಸೆಳೆಯುವುದು ಮತ್ತು ಇಂದಿಗೂ ನಿಗೂಢ ಎನಿಸುವುದು ಕಲ್ಕಿ ಎಂಬ ಅವತಾರ. ಕಲ್ಕಿ ಭಗವಾನ್ ವಿಷ್ಣವಿನ ಒಂದು ಅವತಾರ ಎಂದು ನಂಬಲಾಗಿದ್ದು, ಈ ಅವತಾರದ ಹಿಂದೆ ಹಲವಾರು ಕಥೆಗಳಿವೆ.
ಹೌದು ಕಲ್ಕಿ ಅವತಾರವು ವಿಷ್ಣುವಿನ 10ನೇಯ ಹಾಗೂ ಕೊನೆಯ ಅವತಾರ ಎಂದು ನಂಬಲಾಗಿದೆ. ಕೃತ ಕಾಲದಲ್ಲಿ ಕೊನೆಯ ಯುವವಾಗಿರುವ ಕಲಿಯುಗವು ಕಲ್ಕಿಯ ಆಗಮನದಿಂದ ಅಂತ್ಯವಾಗಲಿದೆ ಎಂದು ನಂಬಲಾಗಿದೆ. ಆದರೆ ಈ ಕಲ್ಕಿ ಯಾರು.? ವಿಷ್ಣು ಯಾವಾಗ ಈ ಅವತಾರ ತಾಳುತ್ತಾನೆ ಎಂಬ ಕುರಿತ ಪುರಾತನ ಕಥೆ ಏನು ಎಂಬುದನ್ನು ನಾವಿಂದು ತಿಳಿಯೋಣ.

ಪುರಾಣಗಳ ಪ್ರಕಾರ, ಕಲ್ಕಿಯು ಬಿಳಿ ಕುದುರೆಯ ಮೇಲೆ ಸವಾರಿ ಮಾಡುವಾಗ ಮತ್ತು ಜ್ವಲಂತ ಕತ್ತಿಯನ್ನು ಝಳಪಿಸುತ್ತಾ, ಅಧರ್ಮವನ್ನು ನಿರ್ಮೂಲನೆ ಮಾಡಲು ಮತ್ತು ಸತ್ಯ ಯುಗವನ್ನು ಪ್ರಾರಂಭಿಸಲು ಜನ್ಮ ತಾಳುತ್ತಾನೆ. ಕರಾಳ ದಿನಗಳ ನಾಶ ಪಡಿಸಲೆಂದು ವಿಷ್ಣು ಈ ಕುದುರೆಯ ಏರಿ ಭೂಲೋಕಕ್ಕೆ ಬರುತ್ತಾನೆ ಎಂಬ ಉಲ್ಲೇಖವಿದೆ.
'ಕಲ್ಕಿ' ಎಂದರೆ ಏನು?
ಕಲ್ಕಿ ಎಂಬುದು ನಿಗೂಢ ಪದವಾಗಿದ್ದು ಅದು ಹಲವರಿಗೆ ವಿಭಿನ್ನವಾಗಿ ಅರ್ಥೈಸಲಿದೆ. ಬಹುಶಃ, ಕಲ್ಕಿ ಎಂಬ ಹೆಸರು ಕಾಲ ಎಂಬ ಪದದಿಂದ ಹುಟ್ಟಿಕೊಂಡಿದೆ, ಅಂದರೆ ಸಮಯ. ಆದ್ದರಿಂದ ಕಲ್ಕಿಯು ಸಮಯದ ಅಂತ್ಯ, ಕರಾಳ ದಿನಗಳ ಅಂತ್ಯ ಮಾಡುವವನು ಎಂಬ ಅರ್ಥ ನೀಡಲಿದೆ. ಸಂಸ್ಕೃತದಲ್ಲಿ ಕಲ್ಕಾ ಎಂಬ ಪದವು ಕೊಳಕು, ಕೊಳೆ ಎಂಬ ಅರ್ಥ ನೀಡುತ್ತದೆ. ಇಲ್ಲಿ ಕೊಳೆ ಅಂದರೆ ಅಧರ್ಮ, ಕೆಟ್ಟತನ ಎಂಬುದಾಗಿ ಅರ್ಥೈಸಬಹುದು. ಕಲ್ಕಿಯು ಕೆಟ್ಟತನವನ್ನು ಅಂತ್ಯಗೊಳಿಸುವ ಅವತಾರವಾಗಿರಬಹುದು ಎಂಬ ವಾದವಿದೆ.
ವಿಷ್ಣುವಿನ ಕಲ್ಕಿ ಅವತಾರದ ಮಹತ್ವವೇನು?
ನಾವು ಕಲಿಯುಗದಲ್ಲಿರುವುದರಿಂದ ಪಾಪ ಕಾರ್ಯಗಳು ನಿಧಾನವಾಗಿ ಪುಣ್ಯವನ್ನು ನಾಶ ಮಾಡಲಿದೆ ಎಂದು ನಂಬಲಾಗಿದೆ. ಪ್ರಪಂಚವು ಅತ್ಯಂತ ಕಠೋರ ಘಟನೆಗಳಿಗೆ, ಅಮಾನವೀಯ ಕೃತ್ಯಗಳಿಗೆ ಒಳಗಾಗುತ್ತದೆ ಎಂಬುದು ಪುರಾತನ ಗ್ರಂಥಗಳಲ್ಲಿನ ವಾದವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿಷ್ಣು ಕಲ್ಕಿಯ ಅವತಾರ ಎತ್ತುತ್ತಾನೆ ಎಂಬ ನಂಬಿಕೆ ಇದೆ. ಈ ಕಲಿಯುಗದ ಅಂತ್ಯದ ಬಳಿಕ ಸತ್ಯ ಯುಗ ಬರುತ್ತದೆ ಎಂಬುದು ಇದರ ಮಹತ್ವವಾಗಿದೆ.
ಹಿಂದೂ ಗ್ರಂಥಗಳಲ್ಲಿ ಭಗವಾನ್ ಕಲ್ಕಿಯ ಉಲ್ಲೇಖ
ಹಲವಾರು ಪುರಾತನ ಗ್ರಂಥಗಳು ಪುರಾತನ ಕಲ್ಕಿಯ ಆಗಮನ ಮತ್ತು ಅವನ ಸಾಕಾರ ಅವಧಿಯನ್ನು ಉಲ್ಲೇಖಿಸಿವೆ. ವಿಷ್ಣು ಪುರಾಣವು ಕಲ್ಕಿಯ ಮೊದಲ ಉಲ್ಲೇಖವನ್ನು ಮಾಡಿದೆ ಎಂದು ನಂಬಲಾಗಿದೆ. ಬೌದ್ಧರ ಪವಿತ್ರ ಗ್ರಂಥ ಭಗವಾನ್ ಕಲ್ಕಿಯ ಕುರಿತಾದ ಭವಿಷ್ಯವಾಣಿಗಳನ್ನು ಒಳಗೊಂಡಿವೆ.
ಕಲ್ಕಿ 2025ರಲ್ಲಿ ಭೂಲೋಕಕ್ಕೆ ಬರುತ್ತಾನಾ?
ಎರಡು ಪುರಾತನ ಗ್ರಂಥಗಳು ಕಲ್ಕಿಯ ಆಗಮನಕ್ಕೆ ವಿಭಿನ್ನ ದಿನಾಂಕಗಳನ್ನು ನೀಡಿದ್ದರೂ - "ಕೃಷ್ಣನ ಜನ್ಮದಿಂದ 21 ಹದಿನೈದು ದಿನಗಳು" ಮತ್ತು "ಮಾರ್ಗಷಿರ ಮಾಸ, ಕೃಷ್ಣ ಅಷ್ಟಮಿ, ಹುಣ್ಣಿಮೆಯ ನಂತರ 8ನೇ ದಿನ" ಕಲ್ಕಿಯು ಜನ್ಮ ತಾಳುತ್ತಾನೆ ಎಂಬ ಉಲ್ಲೇಖಗಳಿವೆ. ಈ ಕಲಿಯುವ ಕ್ರಿ. ಪೂ 3102ರಲ್ಲಿ ಆರಂಭವಾಯಿತು ಎಂದು ನಂಬಲಾಗಿದ್ದು, ಇದು 4,32,000 ವರ್ಷಗಳ ವರೆಗೂ ಮುಂದುವರೆಯುತ್ತದೆ ಎಂದು ನಂಬಲಾಗಿದೆ. ಈ ದಿನಾಂಕಗಳ ತೆಗೆದುಕೊಂಡರೆ ಕಲಿಯುವ ಅಂತ್ಯವೂ ಇನ್ನೂ ದೂರವಿದೆ ಎಂದು ತಿಳಿಯುತ್ತದೆ.
ಕಲಿಯುಗದಲ್ಲಿ ಪಾಪ, ಕರ್ಮ, ಅಧರ್ಮ, ಅಮಾನವೀಯತೆ, ಕ್ರೌರ್ಯ ಉತ್ತುಂಗಕ್ಕೆ ಏರಿದಾಗ ವಿಷ್ಣು ಕಲ್ಕಿ ಅವತಾರವೆತ್ತುತ್ತಾನೆ ಎಂದು ನಂಬಲಾಗಿದೆ. ಅವನು ಶ್ರಾವಣ ಮಾಸದ ಶುಕ್ಲಪಕ್ಷದ ಐದನೇ ದಿನದಂದು ಸಂಭಾಲ್ ಎಂಬ ಸ್ಥಳದಲ್ಲಿ ಜನ್ಮ ಪಡೆದು ಕುದುರೆಯ ಮೇಲೆ ಅವಾರಿ ಮಾಡುತ್ತಾ ಈ ಅಧರ್ಮವನ್ನು ಮೆಟ್ಟಿ ಧರ್ಮ ಸ್ಥಾಪನೆ ಮಾಡುತ್ತಾನೆ. ಇಲ್ಲಿಂದು ಮತ್ತೊಂದು ಕಲಿಯುವ, ನ್ಯಾಯಯುವ ಆರಂಭವಾಗುತ್ತದೆ ಎಂದು ನಂಬಲಾಗಿದೆ.



Click it and Unblock the Notifications