Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಮನೆಯಲ್ಲಿದ್ದ ತುಳಸಿ ಗಿಡ ಒಣಗಿದರೆ ಏನಾಗುತ್ತೆ ಗೊತ್ತಾ?
ಹಿಂದೂ ಧರ್ಮದಲ್ಲಿ ತುಳಸಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಹೀಗಾಗಿ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟಾಗ ಅದನ್ನು ಪೂಜ್ಯ ಭಾವದಿಂದ ಕಾಣಬೇಕು. ಪ್ರತಿನಿತ್ಯ ಅದಕ್ಕೆ ನೀರೆರೆದು ಭಕ್ತಿಯಿಂದ ಅದಕ್ಕೆ ಪೂಜೆಯನ್ನು ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ತುಳಸಿ ಗಿಡ ಒಣಗೋದಕ್ಕೆ ಅವಕಾಶ ನೀಡಬಾರದು. ಇದರಿಂದ ಮನೆಗೆ ದಾರಿದ್ರ್ಯ ಸುತ್ತಿಕೊಳ್ಳುತ್ತೆ ಅಂತ ಹೇಳಲಾಗುತ್ತದೆ.

ಹೌದು, ಮನೆಯಲ್ಲಿದ್ದ ತುಳಸಿ ಗಿಡ ಒಣಗಿದರೆ ಅದು ಅಶುಭ ಅಂತ ಹೇಳಲಾಗುತ್ತದೆ. ಕೆಲವೊಂದು ಸಲ ನಾವು ತುಳಸಿಯನ್ನು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಕೂಡ ಅದು ಪದೇ ಪದೇ ಒಣಗುತ್ತದೆ. ಇದಕ್ಕೆ ಕಾರಣ ಏನು ಅನ್ನೋದೇ ನಮಗೆ ಗೊತ್ತಾಗೋದಿಲ್ಲ. ಹೌದು, ಮನೆಗೆ ಏನಾದರೂ ಗಂಡಾಂತರ ಎದುರಾಗುತ್ತೆ ಅನ್ನೋವಾಗ ಈ ರೀತಿ ತುಳಸಿ ಗಿಡ ಒಣಗುತ್ತಂತೆ. ಅಷ್ಟಕ್ಕೂ ಮನೆಯಲ್ಲಿರುವ ತುಳಸಿ ಗಿಡವು ಇದ್ದಕ್ಕಿದ್ದ ಹಾಗೆ ಒಣಗೋದಕ್ಕೆ ಕಾರಣ ಏನು ಅನ್ನೋದನ್ನು ತಿಳಿಯೋಣ.
ಕೌಟುಂಬಿಕ ಸಮಸ್ಯೆ ಎದುರಾಗೋ ಸೂಚನೆ!
ತುಳಸಿ ಗಿಡ ಒಣಗಿದರೆ ಮನೆಯಲ್ಲಿ ಯಾವುದಾದರೂ ಸಮಸ್ಯೆ ಎದುರಾಗುತ್ತೆ ಅನ್ನೋದನ್ನು ಸೂಚಿಸುತ್ತದೆ. ಮನೆಯ ಸದಸ್ಯರಿಗೆ ತೊಂದರೆ ಉಂಟಾಗಲಿದೆ ಅನ್ನೋದನ್ನು ಮೊದಲು ಸೂಚಿಸುವುವುದೇ ಈ ತುಳಸಿ ಗಿಡ. ತುಳಸಿ ಗಿಡ ಒಣಗುತ್ತಾ ಬಂದರೆ ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದಿದೆ ಎಂದು ನಾವು ಊಹಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ನಾವು ಆದಷ್ಟು ಬೇಗ ಪರಿಹಾರ ಕೈಗೊಂಡರೆ ಉತ್ತಮ. ಇಲ್ಲದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿದೆ.
ಬುಧ ದುರ್ಬಲನಾಗುತ್ತಾನೆ!
ಬುಧ ಗ್ರಹವು ಜಾತಕದಲ್ಲಿ ದುರ್ಬಲವಾಗಿದ್ದಾಗ ನಿಮ್ಮ ಮನೆಯಲ್ಲಿ ಬಡತನ ಕಾಣಿಸಿಕೊಳ್ಳುತ್ತದೆ. ಮತ್ತು ತಾಯಿ ಲಕ್ಷ್ಮಿ ಅಂತಹ ಮನೆಯಲ್ಲಿ ನೆಲೆಸುವುದಿಲ್ಲ. ಬುಧನು ದುರ್ಬಲವಾಗಿರೋ ಮನೆಯನ್ನು ಆದಷ್ಟು ಬೇಗ ಲಕ್ಷ್ಮೀ ತೊರೆಯುತ್ತಾಳೆ. ಅಂತಹ ಮನೆಗಳಲ್ಲಿ ಹಸಿರು ಸಸ್ಯಗಳು ಒಣಗಲು ಪ್ರಾರಂಭಿಸುತ್ತವೆ. ಏಕೆಂದರೆ ನೈಸರ್ಗಿಕವಾಗಿ ಹಸಿರು ವಸ್ತುಗಳು ಸಹ ಬುಧ ಗ್ರಹಕ್ಕೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ. ಬುಧ ದುರ್ಬಲವಾದಾಗ ಮರಗಳು ಮತ್ತು ಸಸ್ಯಗಳು ಒಣಗಲು ಪ್ರಾರಂಭಿಸುತ್ತವೆ. ಇದಕ್ಕೆ ಸುಲಭ ಪರಿಹಾರ ಕಂಡುಕೊಳ್ಳೋದಕ್ಕಾಗಿ ಈ ರೀತಿ ಮಾಡಿ.
ಮಕ್ಕಳ ಹಠ ನಿವಾರಣೆ!
ಕೆಲವೊಂದು ಸಲ ಮಕ್ಕಳು ಎಷ್ಟು ಹೇಳಿದ್ರೂ ಕೂಡ ನಮ್ಮ ಮಾತು ಕೇಳೋದಕ್ಕೆ ಸಿದ್ಧರಾಗಿ ಇರೋದಿಲ್ಲ. ಕೆಲವೊಂದು ಸಲ ಸಿಕ್ಕಾಪಟ್ಟೆ ಹಠ ಮಾಡುತ್ತಾರೆ. ನಮ್ಮ ನಿಯಂತ್ರಣಕ್ಕೆ ಸಿಗೋದಿಲ್ಲ. ಇಂತಹ ಸಂದರ್ಭದಲ್ಲಿ ಪೂರ್ವದಲ್ಲಿ ನೆಟ್ಟ ತುಳಸಿ ಗಿಡದ ಎಲೆಯನ್ನು ಮಕ್ಕಳಿಗೆ ಯಾವುದಾದರೂ ರೂಪದಲ್ಲಿ ತಿನ್ಜಿಸಿ. ನಿಯಮಿತವಾಗಿ ಈ ರೀತಿ ಮಾಡುತ್ತಿದ್ದರೆ ಕೆಲವೇ ದಿನಗಳಲ್ಲಿ ಮಕ್ಕಳು ನಿಮ್ಮ ಮಾತನ್ನು ಕೇಳೋದಕ್ಕೆ ಶುರು ಮಾಡ್ತಾರೆ.
ವ್ಯಾಪಾರದಲ್ಲಿ ಯಶಸ್ಸು!
ವ್ಯಾಪಾರದಲ್ಲಿ ಲಾಭ ಗಳಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕಾಗಿ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ನಮ್ಮಲ್ಲಿ ಉದಾಸೀನ ಹೆಚ್ಚಾಗಿದ್ದಾಗ ನಾವು ಯಾವುದೇ ಕೆಲಸ ಮಾಡೋದಕ್ಕೆ ಮನಸ್ಸು ಮಾಡೋದಿಲ್ಲ. ಆದರೆ ವ್ಯಾಪಾರದಲ್ಲಿ ಯಶಸ್ಸನ್ನು ಸಾಧಿಸಲು ನಾವು ತುಳಸಿಯ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಪ್ರತಿ ಶುಕ್ರವಾರ ನೈಋತ್ಯ ದಿಕ್ಕಿನಲ್ಲಿ ತುಳಸಿಯ ಮೇಲೆ ಹಸಿ ಹಾಲು ಮತ್ತು ಸಿಹಿತಿಂಡಿಗಳನ್ನು ನೈವೇದ್ಯ ಮಾಡಿ. ಇದಾದ ಬಳಿಕ ವಿವಾಹಿತ ಮಹಿಳೆಯರಿಗೆ ದಾನ ಮಾಡಿ. ಇದು ವ್ಯವಹಾರದಲ್ಲಿ ಯಶಸ್ಸನ್ನು ತರಲು ಸಹಾಯ ಮಾಡುತ್ತದೆ.
ಉದ್ಯೋಗಸ್ಥರ ಸಮಸ್ಯೆಗೆ ಪರಿಹಾರ!
ಪ್ರತಿಯೊಬ್ಬರಿಗೂ ಕೆಲಸದ ಸ್ಥಳದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ. ಕಚೇರಿಯಲ್ಲಿ ನೀವು ನಿಮ್ಮ ಬಾಸ್ ಅಥವಾ ಸಹೋದ್ಯೋಗಿಯಿಂದ ತೊಂದರೆಯನ್ನು ಎದುರಿಸುತ್ತಿದ್ದರೆ ತುಳಸಿ ಎಲೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಹದಿನಾರು ತುಳಸಿ ಕಾಳುಗಳನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಸೋಮವಾರ ಕಚೇರಿಯ ಹೊರಗಡೆ ಮಣ್ಣಿನ ಒಳಗಡೆ ಹೂತು ಹಾಕಿ. ಇದರಿಂದ ಕಚೇರಿಯಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.
ಯಾವುದೇ ಕಾರಣಕ್ಕೂ ಮನೆಯಲ್ಲಿ ತುಳಸಿ ಗಿಡವಿದ್ದರೆ ಅದು ಒಣಗೋದಕ್ಕೆ ಅವಕಾಶ ನೀಡಬೇಡಿ. ಆದಷ್ಟು ಬೇಗ ಅದಕ್ಕೆ ಪರಿಹಾರ ಕಂಡುಕೊಳ್ಳಿ.



Click it and Unblock the Notifications
