Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಿದ ಶ್ರೀಕೃಷ್ಣನಿಗೇ ತಪ್ಪಿಲ್ಲ ಕಂಟಕ!
ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಲೇಬಾರದು, ಒಂದು ವೇಳೆ ನೋಡಿದರೆ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಅನೇಕ ಆರೋಪಗಳನ್ನು ಎದುರಿಸಬೇಕಾಗುತ್ತದೆ, ಈ ಆರೋಪಗಳು ಕೃಷ್ಣ ಪರಮಾತ್ಮನನ್ನೇ ಬಿಡಲಿಲ್ಲ ಗೊತ್ತಾ?
ಒಮ್ಮೆ ನಾರದಮುನಿಗಳು ಲೋಕ ಪರ್ಯಾಟನೆ ಮಾಡುತ್ತಾ ದ್ವಾರಕಕ್ಕೆ ಬರುತ್ತಾರೆ, ಬಂದವರು ಶ್ರೀ ಕೃಷ್ಣನಿಗೆ ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡುವುದು ಒಳ್ಳೆಯದಲ್ಲ, ನೋಡಿದರೆ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ನಂತರ ನಾರದಮುನಿಗಳು ವೈಕುಂಠಕ್ಕೆ ಮರಳುತ್ತಾರೆ. ಆದರೆ ಶ್ರೀ ಕೃಷ್ಣ ಮಾತೆಯ ಹಾಲನ್ನು ಕರೆದು ಕುಡಿಯುವಾಗ ಹಾಲಿನಲ್ಲಿ ಚಂದ್ರನ ಪ್ರತಿಬಿಂಬ ಕಾಣುತ್ತಾನೆ, ಇದರ ಕೆಟ್ಟ ಪ್ರಭಾವ ಶ್ರೀಕೃಷ್ಣನ ಮೇಲೂ ಬೀಳುತ್ತದೆ.

ಕೆಲವು ದಿನಗಳು ಕಳೆದ ಬಳಿಕ ಸತ್ರಜಿತ್ ಸೂರ್ಯನನ್ನಯ ಪ್ರಾರ್ಥಿಸಿ ಸೂರ್ಯನಿಂದ ಶಮಂತಕ ಮಣಿಯನ್ನು ವರವನ್ನಾಗಿ ಪಡೆಯುತ್ತಾನೆ. ನಂತರ ದ್ವಾರಕಕ್ಕೆ ಹೋಗುತ್ತಾನೆ. ಆದರೆ ಕೃಷ್ಣ ಈ ಅಮೂಲ್ಯವಾದ ಮಣಿಯನ್ನು ಯದುವಂಶದ ರಾಜನಿಗೆ ನೀಡುವಂತೆ ಸೂಚಿಸುತ್ತಾನೆ, ಆದರೆ ಅದನ್ನು ಸತ್ರಜಿತ್ ಒಪ್ಪುವುದಿಲ್ಲ. ಶಮಂತಕ ಮಣಿಯನ್ನು ಧರಿಸಿದ ಸತ್ರಜಿತ್ ಸೂರ್ಯನಂತೆ ಹೊಳೆಯುತ್ತಿರುತ್ತಾನೆ. ಕೆಲವು ದಿನಗಳ ಬಳಿಕ ಆತ ಆ ಮಣಿಯನ್ನು ತನ್ನ ಸಹೋದರ ಪ್ರೆಸೇನ್ನನಿಗೆ ಕೊಡುತ್ತಾನೆ. ಅದನ್ನು ಧರಿಸಿ ಪ್ರೆಸೇನ್ನ ಕಾಡಿಗೆ ಬೇಟೆಗೆ ಹೋದಾಗ ಸಿಂಹ ಆತನನ್ನು ಕೊಂದು ಶಮಂತಕ ಮಣಿಯನ್ನು ಕಚ್ಚಿಕೊಂಡು ಹೋಗುತ್ತದೆ. ಆದರೆ ಸತ್ರಜಿತ್ ಆ ಶಮಂತಕ ಮಣಿಗಾಗಿ ಕೃಷ್ಣ ನನ್ನ ಸಹೋದರನ ಕೊಂದ ಎಂದು ಆರೋಪಿಸು ಕೃಷ್ಣನನ್ನು ಅಪರಾಧಿಯನ್ನಾಗಿ ಮಾಡಲು ಪ್ರಯತ್ನಿಸುತ್ತಾನೆ.
ಕೃಷ್ಣ ತನ್ನ ಸತ್ಯವನ್ನು ಸಾಬೀತು ಮಾಡಲು ಆ ಶಮಂತಕ ಮಣಿಯನ್ನು ಹುಡುಕಿಕೊಂಡು ಹೋದಾಗ ಶಮಂತಕ ಮಣಿಯನ್ನು ಕೊಂಡು ಹೋದ ಸಿಂಹವೂ ಸತ್ತು ಬಿದ್ದಿರುತ್ತದೆ. ಆ ಮಣಿ ಜಾಂಬವಂತನ ಬಳಿ ಇರುತ್ತದೆ. ಶ್ರೀಕೃಷ್ಣ ಜಾಂಬವಂತನ ಬಳಿ ಶಮಂತಕ ಮಣಿ ಮರಳಿ ಕೊಡುವಂತೆ ಕೇಳಿದಾಗ ಜಾಂಬವಂತ ಶ್ರೀಕೃಷ್ಣನನ್ನು ಸಾಮಾನ್ಯನೆಂದು ತಿಳಿದು ಯುದ್ಧಕ್ಕೆ ಬರುತ್ತಾನೆ, ಆದರೆ ಶ್ರೀಕೃಷ್ಣನ ಬಳಿ ಸೋತ ಬಳಿಕ ಜಾಂಬವಂತನಿಗೆ ಶ್ರೀ ಕೃಷ್ಣ ಶ್ರೀರಾಮ ಅವತಾರ ಎಂದು ತಿಳಿದು ಆ ಅಮೂಲ್ಯ ಮಣಿಯನ್ನು ಸಂತೋಷದಿಂದ ಶ್ರೀ ಕೃಷ್ಣನಿಗೆ ಅರ್ಪಿಸುತ್ತಾನೆ. ಜೊತೆಗೆ ತನ್ನ ಮಗಳನ್ನೂ ಕೊಟ್ಟು ಮದುವೆ ಮಾಡುತ್ತಾನೆ.
ನಂತರ ದ್ವಾರಕಕ್ಕೆ ಬರುವ ಶ್ರೀಕೃಷ್ಣ ಸತ್ರಜಿತ್‌ನನ್ನೂ ಕರೆಸಿ ನಡೆದ ಕತೆಯೆಲ್ಲಾ ವಿವರಿಸಿ ಶಮಂತಕ ಮಣಿಯನ್ನು ಆತನಿಗೆ ಒಪ್ಪಿಸುತ್ತಾನೆ, ಸತ್ರಜಿತ್‌ಗೆ ಸುಮ್ಮನೆ ಶ್ರೀಕೃಷ್ಣ ಮೇಲೆ ಅಪವಾದ ಹೊರೆಸಿದೆಯೆಲ್ಲಾ ಎಂದು ಪಶ್ಚಾತಾಪ ಪಡುತ್ತಾನೆ. ಆ ಶಮಂತಕ ಮಣಿ ಹಾಗೂ ಮಗಳು ಸತ್ಯಾಂಬವನ್ನು ಶ್ರೀಕೃಷ್ಣನಿಗೆ ಒಪ್ಪಿಸುತ್ತಾನೆ. ಆದರೆ ಶ್ರೀಕೃಷ್ಣ ಸತ್ಯಾಂಬವನ್ನು ಮದುವೆಯಾಗಿ ಶಮಂತಕ ಮಣಿಯನ್ನು ಸತ್ರಜಿತ್‌ಗೆ ಮರಳಿ ನೀಡುತ್ತಾನೆ.
ಹೀಗೆ ಚೌತಿಯಂದು ಚಂದ್ರನನ್ನು ನೋಡಿದ್ದಕ್ಕೆ ಆ ಶ್ರೀ ಕೃಷ್ಣನಿಗೆ ಅಪವಾದ ತಪ್ಪಿಲ್ಲ, ಇನ್ನು ಸಾಮಾನ್ಯ ಮನುಷ್ಯರು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಆದ್ದರಿಮದ ಚೌತಿಯಂದು ಚಂದ್ರನನ್ನು ನೋಡಬಾರದು ಎಂದು ಹೇಳಲಾಗುವುದು.



Click it and Unblock the Notifications
