Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆ ರಾತ್ರಿ ಸೈಫ್ ಮನೆಯಲ್ಲಿ ಆಗಿದ್ದೇನು? ಕುಟುಂಬ ಉಳಿಸಲು ಹೀರೋ ಮಾಡಿದ್ದೇನು? ಸೈಫ್ ಉತ್ತರ!
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ದರೋಡೆಕೋರ ಹಲ್ಲೆ ಮಾಡಿದ್ದ ಘಟನೆ ನಿಮಗೆ ನೆನಪಿರಬಹುದು. ಚಾಕು ಇರಿತರಿಂದಾಗಿ ಸೈಫ್ ಹಲವು ದಿನ ಆಸ್ಪತ್ರೆಯಲ್ಲಿ ಕಳೆದಿದ್ದರು. ಅವರ ಬೆನ್ನಿನ ಭಾಗ ಸೇರಿ ದೇಹದ ಹಲವು ಕಡೆಗಳಲ್ಲಿ ಚಾಕು ಇರಿದ ಕಾರಣ ಶಸ್ತ್ರ ಚಿಕಿತ್ಸೆಗೂ ಅವರು ಒಳಗಾಗಬೇಕಾಯಿತು. ಜನವರಿಯಲ್ಲಿ ಅವರ ಮನೆಯಲ್ಲೇ ದಾಳಿ ನಡೆದಿತ್ತು. ಈ ಘಟನೆ ಇಡೀ ದೇಶದಲ್ಲಿ ಸುದ್ದಿಯಾಗಿತ್ತಲ್ಲದೆ, ಭದ್ರತೆಯ ನಡುವೆ ಈ ಘಟನೆ ನಡೆದಿರುವುದು ಹೇಗೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.
ಇದಾದ ಬಳಿಕ ಸೈಫ್ ಚೇತರಿಸಿಕೊಂಡಿದ್ದು ಈಗ ಇದೇ ಮೊದಲ ಬಾರಿಗೆ ಒಂದು ಸಂದರ್ಶನದಲ್ಲಿ ಆ ದಿನ ರಾತ್ರಿ ಅಸಲಿಗೆ ನಡೆದಿದ್ದು ಏನು ಎಂಬುದನ್ನು ಹೇಳಿಕೊಂಡಿದ್ದಾರೆ. ಕಳ್ಳ ಮನೆಯೊಳಗೆ ನುಗ್ಗಿದ್ದ ಸಂದರ್ಭದಲ್ಲಿ ನಡೆದಿದ್ದೇನು? ಹೇಗೆ ಕುಟುಂಬವನ್ನು ಹೇಗೆ ರಕ್ಷಿಸಬೇಕಾಯಿತು. ಆ ರಾತ್ರಿ ಏನೆಲ್ಲಾ ನಡೆಯಿತು ಎಂಬುದನ್ನು ಅವರು ವಿವರಿಸಿದ್ದಾರೆ.

ಆ ದಿನ ಬಾಂದ್ರಾ ನಿವಾಸದಲ್ಲಿ ಏನು ನಡೆಯಿತು ಎಂಬುದನ್ನು ಹೇಳಿದ್ದಾರೆ. ಆದ ದಿನ ಕರೀನಾ ತನ್ನ ಸ್ನೇಹಿತರೊಂದಿಗೆ ಊಟಕ್ಕೆಂದು ಹೊರಗೆ ಹೋಗಿದ್ದರಂತೆ. ಬೆಳಗ್ಗೆ ಕೆಲಸವಿದ್ದ ಕಾರಣ ಸೈಫ್ ರಾತ್ರಿ ಎಲ್ಲೂ ಹೋಗದೆ ಮನೆಯಲ್ಲಿಯೇ ಉಳಿದಿದ್ದರಂತೆ. ಆಕೆ ಹಿಂತಿರುಗಿದಳು, ನಾವಿಬ್ಬರು ಕೆಲ ಹೊತ್ತು ಮಾತುಕತೆ ನಡೆಸಿದವು, ಬಳಿಕ ಮಲಗಿದೆವು.
ಸ್ವಲ್ಪ ಸಮಯದ ಬಳಿಕ ಮನೆ ಕೆಲಸದಾಕೆ ಓಡಿ ಬಂದಳು, ಒಬ್ಬ ಕಳ್ಳ ಮನೆಯೊಳಗೆ ಬಂದಿದ್ದಾನೆ. ಆತ ಜೆಹ್ ಕೋಣೆಯ ಕಡೆ ಹೋಗಿದ್ದಾನೆ ಎಂದಳು. ನಾನು ಗಾಬರಿಯಾದ ಅಲ್ಲಿಂದ ಮಗನಿದ್ದ ರೂಮಿನ ಕಡೆಗೆ ಓಡಿದೆ. ಕೋಣೆಯಲ್ಲಿ ಚಾಕು ಹಿಡಿದಿದ್ದ ವ್ಯಕ್ತಿ ನಿಂತಿದ್ದ. ಆತ ಹಣ ಕೊಡಿ ಎಂದು ಕೇಳುತ್ತಿದ್ದ. ಜೇಹ್ ತಲೆಯ ಬಳಿ ಕಪ್ಪ ಬಣ್ಣದ ವಸ್ತು ಹಿಡಿದಿದ್ದ. ಮೊದಲು ಅದು ಚಾಕು ಎಂದು ತಿಳಿಯಲಿಲ್ಲ. ಆತ ಎರಡೂ ಕೈನಲ್ಲಿ ಒಂದೊಂದು ಚಾಕು, ಬ್ಲೇಡ್ ಹಿಡಿದಿದ್ದ ಎಂದು ಸೈಫ್ ಹೇಳಿದ್ದಾರೆ.
ಆಗ ಸುಮಾರು 2 ಗಂಟೆಯಾಗಿತ್ತು. ನನಗೆ ಏನಾಗುತ್ತಿದೆ ಎಂದು ತಿಳಿಯಲು ಕೆಲ ಸಮಯ ಹಿಡಿಯಿತು. ನಾನು ಮಗನ ಉಳಿಸಲು ಆತನ ಕಡೆಗೆ ಓಡಿ ಹಿಡಿದುಕೊಂಡೆ. ಇಬ್ಬರು ಕೆಳಗೆ ಬಿದ್ದೆವು ಈ ಸಮಯದಲ್ಲಿ ಆತ ಚಾಕುವಿನಿಂದ ಚುಚ್ಚುವುದು ನನಗೆ ತಿಳಿಯಿತು. ಆತ ಬಲವಾಗಿ ನನ್ನ ಬೆನ್ನಿಗೆ ಹೊಡೆದಿರುವುದು ನನಗೆ ತಿಳಿಯಿತು ಎಂದಿದ್ದಾರೆ.
ಈ ನಡುವೆ ಜೆಹ್ ಹಾಗೈ ತೈಮುರ್ ಕೂಡ ಅಲ್ಲಿದ್ದರಿಂದ ಎಲ್ಲರು ಆಘಾತದಲ್ಲಿದ್ದರು ತಕ್ದಣ ಆಟೋ ಮೂಲಕ ನಾವು ಆಸ್ಪತ್ರೆಗೆ ಬಂದೆವು. ಮಕ್ಕಳನ್ನು ಸಹೋದರಿ ಕರಿಷ್ಮಾ ಕಪೂರ್ ಮನೆಗೆ ಕಳುಹಿಸಿದರು. ಘಟನೆಯಿಂದ ಮನೆಯ ಎಲ್ಲಾ ಸದಸ್ಯರು ಆಘಾತವಾಗಿದ್ದರು. ಇದರಿಂದ ನಾನು ಕೂಡ ಆಘಾತಕ್ಕೊಳಗಾದೆ ಎಂದು ಸೈಫ್ ಹೇಳಿಕೊಂಡಿದ್ದಾರೆ.
ಹಾಗೆ ನನ್ನ ಮೇಲೆ ದಾಳಿ ಮಾಡಲು ಬಂದಿದ್ದ ಕಳ್ಳ ಮೊದಲೇ ಪ್ಲಾನ್ ಮಾಡಿರಲಿಲ್ಲ. ನನಗಿಂತ ಹೆಚ್ಚಿನ ಸಮಸ್ಯೆ ಈಗ ಆತನಿಗೆ ಆಗಿದೆ. ಆತನ ಜೀವನ ಹಾಳಾಗಿದೆ. ಹಾಗೆ ನನಗೆ ಯಾವ ಭಯವೂ ಇಲ್ಲ. ಈಗಲೂ ಏನು ಬದಲಾಗಿಲ್ಲ. ನನಗೆ ಗನ್ ಮ್ಯಾನ್ ಅವಶ್ಯಕತೆಯೂ ಇಲ್ಲ. ಮನೆಯಲ್ಲಿ ಮಕ್ಕಳಿರುತ್ತಾರೆ ಗನ್‌ನಿಂದ ಏನಾದರು ಅಪಾಯ ಆಗಬಹುದು ಎಂದು ಕೂಡ ಅವರು ಹೇಳಿಕೊಂಡಿದ್ದಾರೆ.



Click it and Unblock the Notifications
