Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಎಡಮುರಿ ಹಾಗೂ ಬಲಮುರಿ ಗಣಪನ ಬಗ್ಗೆ ಗೊತ್ತಾ? ಗಣಪನ ಸೊಂಡಿಲು ಯಾವ ಕಡೆ ಇರಬೇಕು?
ನಾಳೆಯಿಂದ ಇಡೀ ದೇಶದಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ನೋಡಬಹುದು. ದೇಶದ ಮೂಲೆ ಮೂಲೆಯಲ್ಲೂ ಗಣೇಶನ ಪ್ರತಿಷ್ಠಾಪನೆ ಮಾಡುವುದು ನೋಡಬಹುದು. ಹಾಗೆ ಇಡೀ ಊರಿಗೆ ಊರೆ ಈ ಹಬ್ಬವನ್ನು ಒಟ್ಟಿಗೆ ಆಚರಿಸಿ, ವಾರಕ್ಕೂ ಹೆಚ್ಚು ದಿನಗಳ ಕಾಲ ಪೂಜೆಗೈದು ನಿಮಜ್ಜನ ಮಾಡುವುದು ನೋಡಬಹುದು.
ಭಾರತದಲ್ಲಿ ಪ್ರಮುಖ ಸಾರ್ವಜನಿಕ ಹಬ್ಬವಾಗಿರುವ ಇದು ತಿಂಗಳ ಕಾಲ ನಡೆಯುವುದು ಕೂಡ ಇದೆ. ಹಾಗೆ ಗಣೇಶ ಹಬ್ಬವನ್ನು ಮನೆಯಲ್ಲೂ ಆಚರಿಸುತ್ತಾರೆ. ಮನೆಯಲ್ಲಿ ಚಿಕ್ಕ ಚಿಕ್ಕ ಗಣಪನ ಮೂರ್ತಿಗಳ ಇಟ್ಟು ಪೂಜಿಸಿದರೆ ಸಾರ್ವಜನಿಕವಾಗಿ ದೊಡ್ಡ ದೊಡ್ಡ ಮೂರ್ತಿಗಳ ಪ್ರತಿಷ್ಠಾಪನೆ ಮಾಡುತ್ತಾರೆ. ಇನ್ನು ವರ್ಷದಿಂದ ವರ್ಷಕ್ಕೆ ಹಬ್ಬದ ಸಂಭ್ರಮ ಹೆಚ್ಚಾಗುತ್ತಲೇ ಇದೆ.

ಹಾಗೆ ಕೆಲವು ಕಡೆ ವಿಶೇಷ ರೀತಿಯ ಆಚರಣೆ ಸಹ ನೋಡಬಹುದು. ಕೆಲವೊಂದು ಭಾಗದಲ್ಲಿ ವಿಭಿನ್ನ ರೀತಿಯ ಗಣೇಶನ ಮೂರ್ತಿಗಳ ನೋಡಬಹುದು. ಹಾಗೆ ಗಣಪನ ಮೂರ್ತಿಯಲ್ಲು ಬಗೆಗಳಿವೆ, ಬಲಮುರಿ ಗಣಪ ಹಾಗೆ ಎಡಮುರಿ ಗಣಪ ಎಂಬುದಾಗಿ ಕರೆಯಲಾಗುತ್ತದೆ. ಆದ್ರೆ ಇದರ ಹಿಂದಿರುವ ಸರಿಯಾದ ಕಾರಣವೇನು? ಯಾವ ಗಣಪನ ಮೂರ್ತಿಯನ್ನು ಪೂಜಿಸಬೇಕು? ಯಾವ ಮೂರ್ತಿ ಶ್ರೇಷ್ಠ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮನೆಯಲ್ಲಿ ಯಾವ ಗಣಪನ ಪೂಜಿಸಬೇಕು?
ಗಣೇಶನನ್ನು ಮನೆಯಲ್ಲಿ ಪೂಜಿಸುವಾಗ ಸಾಮಾನ್ಯವಾಗಿ ಎಡಮುರಿ ಗಣಪನ ಪೂಜಿಸಲಾಗುತ್ತದೆ. ಎಡಮುರಿ ಗಣೇಶ ವಾಮಮುಖಿ. ವಾಮಮುಖಿ ಎಂದರೆ ಉತ್ತರ ದಿಕ್ಕು. ಇಂದು ಬಹುತೇಕ ದೇವಾಲಯ, ಸಾರ್ವಜನಿಕ ಗಣೇಶೋತ್ಸವ ಸೇರಿ ಹಲವು ಕಡೆಗಳಲ್ಲಿ ನೋಡುವುದು ಈ ಎಡಮುರಿ ಗಣಪನನ್ನು. ಎಡಮುರಿ ಗಣಪನನ್ನು ವಾಮಮುಖಿ ಎಂದು ಕರೆಯಲಾಗುತ್ತದೆ. ವಾಮ ಎಂದರೆ ಉತ್ತರ ದಿಕ್ಕು, ಬಲಬದಿಗೆ ಸೂರ್ಯನಾಡಿ ಇದ್ದರೆ ಈ ಎಡಬದಿಗೆ ಚಂದ್ರನಾಡಿ ಇರುತ್ತದೆ.
ಈ ಉತ್ತರ ದಿಕ್ಕು ಶಾಂತವಾದ ದಿಕ್ಕು . ಹಾಗಾಗಿ ಎಡಮುರಿ ಗಣೇಶನ ಪೂಜೆ ಮಾಡುವುದು ಕಷ್ಟವಲ್ಲ. ಅಲ್ಲದೇ, ಈ ಗಣಪನ ಸಮಾಧಾನ ಮಾಡುವುದು ಸಹ ಬಹಳ ಸುಲಭ ಎಂಬ ನಂಬಿಕೆ ಇದೆ. ಹಾಗೆ ಉತ್ತರ ದಿಕ್ಕು ಆಧ್ಯಾತ್ಮಿಕವಾಗಿ ಶಾಂತಿ, ನೆಮ್ಮದಿ ತರುವಂತಹ ದಿಕ್ಕು ಎಂದು ಹೇಳಲಾಗುತ್ತದೆ. ಹಾಗೆ ಈ ಎಡಮುರಿ ಗಣಪನನ್ನು ಯಾರು ಬೇಕಾದರು ಪೂಜೆ ಮಾಡಬಹುದು. ಯಾವುದೇ ನಿಯಮಗಳ ಪಾಲಿಸದೆಯೂ ಪೂಜೆ ಮಾಡಬಹುದು. ಹಾಗೆ ಈ ಮೂರ್ತಿಯನ್ನು ಶಾಶ್ವಾತವಾಗಿ ಇಡಬಹುದು ಇಲ್ಲವೆ ಅದನ್ನು ನಿಮಜ್ಜನ ಮಾಡಬಹುದು.
ಹೀಗಾಗಿ ಮನೆಯಲ್ಲಿ, ಸಾರ್ವಜನಿಕ ಗಣೇಶೋತ್ಸವದ ಸಮಯದಲ್ಲಿ ಎಡಮುರಿ ಗಣಪನ ಹೆಚ್ಚಾಗಿ ಪೂಜಿಸಲಾಗುತ್ತದೆ.
ಬಲಮುರಿ ಗಣಪನ ಪೂಜೆ ಏಕಿಲ್ಲ?
ಮನೆಯಲ್ಲಿ ಬಲಮುರಿ ಗಣಪನನ್ನು ಸಾಮಾನ್ಯವಾಗಿ ಪೂಜಿಸುವುದಿಲ್ಲ. ಇದು ದಕ್ಷಿಣಾಭಿಮುಖವಾಗಿರುವ ಮೂರ್ತಿಯಾಗಿರುವ ಕಾರಣ ಅದು ಪೂಜೆ ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಬಲಬದಿಗೆ ಸೂರ್ಯನಾಡಿ ಹಾಗೂ ಯಮಲೋಕದ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಬಲಗಡೆಗೆ ಸೊಂಡಿಲಿರುವ ಗಣಪತಿಯನ್ನು 'ಜಾಗೃತ' ಗಣಪತಿ ಎಂದು ಹೇಳುತ್ತಾರೆ. ಹೀಗಾಗಿಯೇ ದಕ್ಷಿಣಾಭಿಮುಖಿ ಗಣಪನ ಪೂಜೆ ಮಾಡುವುದಿಲ್ಲ. ಈ ಗಣಪನ ಪೂಜೆಯಲ್ಲಿ ಅತ್ಯಂತ ಶ್ರದ್ಧಾ ಭಕ್ತಿ ಜೊತೆಗೆ ಕಠಿಣ ನಿಯಮಗಳ ಪಾಲಿಸಬೇಕಿದೆ. ಇಲ್ಲದಿದ್ದರೆ ಗಣಪನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ಇಂತಹ ಮೂರ್ತಿಯ ಪೂಜೆಯನ್ನು, ಕರ್ಮಕಾಂಡದಲ್ಲಿನ ಎಲ್ಲ ಪೂಜಾವಿಧಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಾಡಬೇಕಾಗುತ್ತದೆ. ಹೀಗಾಗಿ ಕೆಲವೇ ಕೆಲವೂ ಮೂರ್ತಿಗಳು ಬಲಮುರಿ ಗಣಪ ಆಗಿರುತ್ತವೆ. ಮಿಕ್ಕಿದ್ದೆಲ್ಲವು ಎಡಮುರಿ ಗಣಪನಾಗಿರುತ್ತೆ. ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಬಲಮುರಿ ಗಣಪತಿಯು ಉಷ್ಣಕಾರಕನಾಗಿದ್ದು, ಪೂಜೆ ಅಥವಾ ಇನ್ನಿತರ ವಿಷಯಗಳಲ್ಲಿ ಹೆಚ್ಚಿನ ಲೋಪವಾದಲ್ಲಿ ಇದು ಅನಾಹುತಕ್ಕೆ ದಾರಿಯಾಗಬಹುದು ಎಂದು ಹೇಳಲಾಗಿದೆ.



Click it and Unblock the Notifications