Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ವಾಸ್ತು ಶಾಸ್ತ್ರದ ಪ್ರಕಾರ ಗಣೇಶನ ಮೂರ್ತಿ ಮನೆಯ ಯಾವ ದಿಕ್ಕಿನಲ್ಲಿದ್ದರೆ ಶುಭಕರ?
ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಗಣೇಶನನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೆಯೋ ಅವರ ಮನೆಯಲ್ಲಿ ಸಮೃದ್ಧಿ, ಯಶಸ್ಸು ಹಾಗೂ ಅದೃಷ್ಟ ತುಂಬಿರುತ್ತಂತೆ. ಅದೇ ರೀತಿ ಹೆಚ್ಚಿನವರ ಮನೆಯಲ್ಲಿ ಗಣೇಶನ ಮೂರ್ತಿ ಇದ್ದೇ ಇರುತ್ತದೆ. ಆದರೆ ಅವರು ಅದನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟಿರೋದಿಲ್ಲ. ಗಣೇಶನ ಮೂರ್ತಿಯನ್ನು ಇಡುವ ಸಂದರ್ಭದಲ್ಲಿ ಯಾವುದೇ ರೀತಿ ತಪ್ಪಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಆ ಮನೆಗೆ ಶೋಭೇ ತರೋದಿಲ್ವಂತೆ.
ನಿಮ್ಮ ಮನೆಯಲ್ಲಿ ಸಮೃದ್ಧಿ ಹಾಗೂ ಸಂಪತ್ತು ತುಂಬಿರಬೇಕೆಂದರೆ ಗಣೇಶನನ್ನು ಸರಿಯಾದ ದಿಕ್ಕಿನಲ್ಲಿ ಇಡೋದನ್ನು ಮರೀಬೇಡಿ. ಅಷ್ಟಕ್ಕು ಮನೆಯಲ್ಲಿ ಗಣೇಶನ ಮೂರ್ತಿ ಯಾವ ದಿಕ್ಕಿನಲ್ಲಿ ಇರಬೇಕು? ಗಣೇಶನ ಯಾವ ರೀತಿಯ ಮೂರ್ತಿ ಇಟ್ಟರೆ ಮನೆಗೆ ಒಳ್ಳೆಯದಾಗುತ್ತೆ ಅನ್ನೋದ್ರ ಬಗ್ಗೆ ತಿಳಿದುಕೊಳ್ಳೋಣ.

ದೃಷ್ಟಿ ಗಣೇಶನ ಮೂರ್ತಿಯನ್ನು ಇಡುವ ಸರಿಯಾದ ವಿಧಾನ ಯಾವುದು?
ಗಣೇಶನ ಮೂರ್ತಿಯನ್ನು ನಿಮ್ಮ ಮನೆ ಅಥವಾ ಆಫಿಸ್ ನ ಪ್ರವೇಶ ದ್ವಾರದ ವಿರುದ್ಧ ದಿಕ್ಕಿನಲ್ಲಿ ಇಡಬೇಕು. ಇನ್ನೂ ಯಾವುದೇ ಕಾರಣಕ್ಕೂ ಗಣೇಶನ ಮೂರ್ತಿಗಳನ್ನು ಜೋಡಿಯಾಗಿ ಇಡೋದಕ್ಕೆ ಹೋಗಬೇಡಿ. ಅದ್ರಲ್ಲೂ ಬಿಳಿ ಬಣ್ಣದ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ತುಂಬಾನೇ ಒಳ್ಳೆಯದು. ಇನ್ನೂ ಗಣೇಶನ ಮೂರ್ತಿಯನ್ನು ಖರೀದಿ ಮಾಡುವಾಗ ಅದರ ಸೊಂಡಿಲು ಎಡಕ್ಕೆ ಇರುವುದನ್ನು ನೋಡಿ ಖರೀದಿಸಿ.
ಬಿಳಿ ಗಣೇಶನ ಮೂರ್ತಿ
ಬಿಳಿ ಗಣೇಶನನ್ನು ಮನೆ ಅಥವಾ ಆಫೀಸ್ ನಲ್ಲಿ ಇಟ್ಟರೆ ತುಂಬಾನೇ ಒಳ್ಳೆಯದು. ಇದು ಹೆಚ್ಚಿನ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತಂತೆ. ಇನ್ನೂ ಮನೆಯಲ್ಲಿ ಇಡೋದಕ್ಕೆ ಬಿಳಿ ಗಣೇಶನ ಮೂರ್ತಿಯೇ ಆಗಬೇಕೆಂದೇನಿಲ್ಲ. ಅದರ ಬದಲಿಗೆ ಗಣೇಶನ ಫೋಟೋವನ್ನು ಕೂಡ ಇಡಬಹುದು.
ಗಣೇಶನ ಮೂರ್ತಿ ಯಾವ ದಿಕ್ಕಿನಲ್ಲಿ ಇರಬೇಕು?
ಗಣೇಶನ ಮೂರ್ತಿ ಯಾವಾಗಲೂ ಮನೆಯ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಬೇಕು. ಅದ್ರಲ್ಲೂ ಈಶಾನ್ಯ ಮೂಲೆಯೂ ಗಣೇಶನ ಮೂರ್ತಿಯನ್ನು ಇಡೋದಕ್ಕೆ ಅತ್ಯುತ್ತಮ ಸ್ಥಳವಾಗಿದೆ. ಒಂದು ವೇಳೆ ಈಶಾನ್ಯ ಮೂಲೆ ಲಭ್ಯವಿರದೇ ಹೋದರೆ ಪ್ರಾರ್ಥನೆಯನ್ನು ಸಲ್ಲಿಸುವಾಗ ನೀವು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡುವ ರೀತಿಯಲ್ಲಿ ವಿಗ್ರಹವನ್ನು ಇರಿಸಿ.
ದಕ್ಷಿಣ ದಿಕ್ಕಿಗೆ ಗಣೇಶನ ಮೂರ್ತಿಯನ್ನು ಇಡಬಾರದು ಯಾಕೆ ಗೊತ್ತಾ?
ಯಾವುದೇ ಕಾರಣಕ್ಕೂ ಗಣೇಶನ ಮೂರ್ತಿಯನ್ನು ದಕ್ಷಿಣ ದಿಕ್ಕಿಗೆ ಇಡಲೇಬಾರದು. ಅಷ್ಟೇ ಅಲ್ಲದೇ, ವಿಗ್ರಹವನ್ನು ಶೌಚಾಲಯ ಅಥವಾ ಸ್ನಾನ ಗೃಹದ ಗೋಡೆಗೆ ಜೋಡಿಸಲಾದ ಕೋಣೆಯಲ್ಲಿ ಇಡೋದಕ್ಕೆ ಹೋಗಲೇಬೇಡಿ.
ಮಲಗುವ ಕೋಣೆಯಲ್ಲಿ ಇಡಬಾರದು!
ನಿಮ್ಮ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಗಣೇಶನ ಮೂರ್ತಿಯನ್ನು ಇಡಲೇಬೇಡಿ. ಒಂದು ವೇಳೆ ನೀವು ಇಡಲೇಬೇಕೆಂದಿದ್ದರೆ ಅದನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಹುದು. ವಾಸ್ತು ಪ್ರಕಾರ ನಿಮ್ಮ ಪಾದಗಳು ವಿಗ್ರಹಕ್ಕೆ ಮುಖ ಮಾಡುವಂತೆ ಇರಲೇಬಾರದು.
ಯಾವ ವಿಧದ ವಿಗ್ರಹಗಳು ಉತ್ತಮ?
ಮಾವು, ಆಲದ ಮರ, ಬೇವಿನ ಮರಗಳಿಂದ ಮಾಡಿದ ಗಣೇಶನ ವಿಗ್ರಹವು ಅದೃಷ್ಟ ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಇನ್ನೂ ಹಸುವಿನ ಸಗಣಿಯಿಂದ ಮಾಡಿದ ವಿಗ್ರಹವು ನಮ್ಮ ಎಲ್ಲಾ ರೀತಿಯ ದುಃಖವನ್ನು ಹೋಗಲಾಡಿಸುತ್ತೆ ಎಂದು ನಂಬಲಾಗಿದೆ. ಇನ್ನೂ ಸ್ಫಟಿಕದಿಂದ ಮಾಡಿದ ಪ್ರತಿಮೆಗಳು ಎಲ್ಲಾ ವಾಸ್ತು ದೋಷಗಳನ್ನು ತೆಗೆದುಹಾಕುತ್ತೆ. ಅಷ್ಟೇ ಅಲ್ಲದೇ ನಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ನಿರೀಕ್ಷೇ ಮಾಡಬಹುದಂತೆ. ಇನ್ನೂ ಅರಶಿಣದಿಂದ ಮಾಡಿದ ವಿಗ್ರಹಗಳನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಗಣೇಶನ ಮೂರ್ತಿಯ ಬಣ್ಣ ಮುಖ್ಯವಾಗುತ್ತಾ?
ಸಾಮಾನ್ಯವಾಗಿ ಕೆಂಪು, ಗುಲಾಬಿ ಹಾಗೂ ಕಿತ್ತಳೆ ಬಣ್ಣವನ್ನು ನಾವು ಗಣೇಶನ ಮೂರ್ತಿಯಲ್ಲಿ ಗಮನಿಸಿರುತ್ತೇವೆ. ಆದರೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುವುದು ಬಿಳಿ ಬಣ್ಣದ ಗಣೇಶನ ಮೂರ್ತಿ.
ಬಪ್ಪನ ಯಾವ ಭಂಗಿಯನ್ನು ಮನೆಯಲ್ಲಿಟ್ಟರೆ ಉತ್ತಮ?
ಕುಳಿತಿರುವ ಗಣೇಶನ ಮೂರ್ತಿ ಮನೆಯಲ್ಲಿ ಪೂಜಿಸೋದಕ್ಕೆ ಉತ್ತಮ. ಮನೆಯಲ್ಲಿ ಕೂತಿರುವ ಗಣೇಶನ ಮೂರ್ತಿಯನ್ನು ಪೂಜಿಸುವುದರಿಂದ ಪ್ರಶಾಂತತೆ ಹೆಚ್ಚಾಗುತ್ತಂತೆ. ಇನ್ನೂ ಒರಗಿರುವ ಗಣೇಶನು ಐಷಾರಾಮಿ, ಸೌಕರ್ಯ ಮತ್ತು ಸಂಪತ್ತನ್ನು ಪ್ರತಿನಿಧಿಸುತ್ತಾನೆ.
ಗಣೇಶನ ಮೂರ್ತಿಯನ್ನು ಮನೆಗೆ ತರುವಾಗ ಈ ವಿಚಾರಗಳನ್ನು ಮರೀಬೇಡಿ
ಗಣೇಶನ ಮೂರ್ತಿಯ ಜೊತೆಗೆ ನಾಲ್ಕು ಕೈ, ಒಂದು ಕೈಯಲ್ಲಿ ಮೊದಕ ಹಾಗೂ ಕಾಲ ಹತ್ತಿರ ಇಲಿ ಇದೆಯಾ ಎಂದು ಗಮನಿಸಿ. ಇದೆಲ್ಲಾ ಇದ್ದರೆ ಮಾತ್ರ ಗಣೇಶನ ಮೂರ್ತಿಯನ್ನು ಮನೆಗೆ ತನ್ನಿ. ಈ ರೀತಿಯ ಗಣೇಶನ ಮೂರ್ತಿ ಮನೆಯಲ್ಲಿ ಸಮೃದ್ಧಿಯನ್ನು ಹೆಚ್ಚು ಮಾಡುತ್ತಂತೆ.
ವಾಸ್ತು ತಜ್ಞರ ಪ್ರಕಾರ ಗಣೇಶನ ಹತ್ತಿರ ಇರುವ ಇಲಿಯು ಅಹಂಕಾರವನ್ನು ಪ್ರತಿನಿಧಿಸುತ್ತಂತೆ. ಗಣೇಶನು ಆ ಅಹಂಕಾರವನ್ನು ನಿಯಂತ್ರಿಸುತ್ತಾನಂತೆ. ಇನ್ನೂ ಮೋದಕವು ಸಿಹಿಯಾಗಿದ್ದು ಅದು ನಮ್ಮ ಹಸಿವನ್ನು ನೀಗಿಸುತ್ತಂತೆ. ಮೋದಕವು ಗಣೇಶನಿಗೆ ತುಂಬಾನೇ ಇಷ್ಟವಾಗಿದ್ದು, ಪೂಜೆಯ ನಂತರ ಅದನ್ನು ಭಕ್ತರಿಗೆ ಹಂಚಲಾಗುತ್ತದೆ.
ಒಂದು ವೇಳೆ ಮನೆಯಲ್ಲಿ ಗಣೇಶ ಮೂರ್ತಿಯನ್ನು ಇಡೋದಾದರೆ ಈ ಎಲ್ಲಾ ವಿಚಾರಗಳನ್ನು ಯಾವುದೇ ಕಾರಣಕ್ಕೂ ಮರೆಯಲೇಬೇಡಿ.



Click it and Unblock the Notifications


