Latest Updates
-
ದೆಹಲಿಯ ಮಳೆಗಾಲದ ಸೆಖೆ: ಮನೆಯಲ್ಲೇ 10 ನಿಮಿಷದ ಈ ವ್ಯಾಯಾಮ ಮಾಡಿದರೆ ಕಾಲು ನೋವು ಮಾಯ! -
ವಾಟ್ಸಾಪ್ ಹೊಸ ಫೀಚರ್ಗೆ ಬ್ರೇಕ್: ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಫ್ಲಿಪ್ಕಾರ್ಟ್ GOAT ಸೇಲ್: ಮಳೆಗಾಲಕ್ಕೆ ಬೇಕಾದ ಹೋಮ್ ಸ್ಟೋರೇಜ್ ಐಟಂಗಳು ಈಗ ₹1,499 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! ನಿಮ್ಮ ಆರೋಗ್ಯಕ್ಕೆ ಕಂಟಕವಾಗುತ್ತಿದೆಯೇ ಈ ಪಾನೀಯಗಳು? -
'ಆಲ್ಫಾ' ಸಿನಿಮಾದ ಸ್ಪೈ-ಕೋರ್ ಫ್ಯಾಷನ್ ಟ್ರೆಂಡ್: 1,499 ರೂ. ಒಳಗೇ ನೀವು ಹೀಗೆ ಸ್ಟೈಲಿಶ್ ಆಗಿ ಕಾಣಬಹುದು! -
ಅಮರನಾಥ ಯಾತ್ರೆ: ಸುರಕ್ಷಿತ ಪ್ರಯಾಣಕ್ಕಾಗಿ 12 ನಿಮಿಷದ ಈ ವ್ಯಾಯಾಮ ಮರೆಯದಿರಿ! -
ಅಸ್ಸಾಂ ಪ್ರವಾಹದ ಆತಂಕ: ನಿಮ್ಮ ಕುಟುಂಬದ ಸುರಕ್ಷತೆಗಾಗಿ ಇಂದೇ ಸಿದ್ಧಪಡಿಸಿಕೊಳ್ಳಿ ಈ ತುರ್ತು 'ಗೋ-ಬ್ಯಾಗ್' -
ಕರಾವಳಿ ಕರ್ನಾಟಕದಲ್ಲಿ ರೆಡ್ ಅಲರ್ಟ್: ಮಳೆಯಿಂದ ಮನೆ ಮತ್ತು ಬಾಲ್ಕನಿ ರಕ್ಷಿಸಲು ತಕ್ಷಣವೇ ಈ ಕೆಲಸ ಮಾಡಿ! -
ಮುಂಬೈ ರೆಡ್ ಅಲರ್ಟ್: ಪವರ್ ಕಟ್ ಆದಾಗ ನಿಮ್ಮ ಆಹಾರ ಸುರಕ್ಷಿತವಾಗಿಡಲು ಈ ಟಿಪ್ಸ್ ಪಾಲಿಸಿ -
ಅಮೆಜಾನ್ ಪ್ರೈಮ್ ಡೇ 2026: ಈ ಟಿಪ್ಸ್ ಫಾಲೋ ಮಾಡಿದ್ರೆ ಮಾತ್ರ ಸಿಗುತ್ತೆ ಭಾರಿ ಡಿಸ್ಕೌಂಟ್!
ವರಮಹಾಲಕ್ಷ್ಮಿ ಹಬ್ಬದ ಪೂಜೆಗೆ ಏನೆಲ್ಲಾ ವಸ್ತುಗಳು ಬೇಕು.? ಇಲ್ಲಿದೆ ಮಾಹಿತಿ
ವಿಷ್ಣು ಸ್ವರೂಪಿಣಿಯಾದ ವರಮಹಾಲಕ್ಷ್ಮಿಯನ್ನು ಪೂಜಿಸುವ ದಿನವಾಗಿರುವ ವರಮಹಾಲಕ್ಷ್ಮಿ ದಿನವನ್ನ ಇದೇ ಆಗಸ್ಟ್ 16ರಂದು ಆಚರಿಸುತ್ತೇವೆ. ಸಂಪತ್ತು ವೃದ್ಧಿಗೆ, ಸರ್ವ ಆರೋಗ್ಯ ವೃದ್ಧಿಗಾಗಿ ವರಮಹಾಲಕ್ಷ್ಮಿಯನ್ನು ಆ ದಿನ ಪೂಜಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಕೂಡ ಒಂದಾಗಿದೆ.
ವರಮಹಾಲಕ್ಷ್ಮಿ ವ್ರತ ಮಾಡುವುದರಿಂದ ಅಷ್ಟಲಕ್ಷ್ಮಿಯರನ್ನು ಪೂಜಿಸಿದ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಈ ವ್ರತವನ್ನು ಮಾಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುವುದು. ಮನೆಯ ಸದಸ್ಯರ ಆರೋಗ್ಯ ಉತ್ತಮವಾಗುವುದು, ಈ ವ್ರತವನ್ನು ಅವಾಹಿತ ಹೆಣ್ಮಕ್ಕಳು ಕೂಡ ಮಾಡುತ್ತಾರೆ. ಈ ವ್ರತವನ್ನು ಮಾಡುವುದರಿಂದ ಕಂಕಣ ಭಾಗ್ಯ ಕೂಡಿ ಬರುತ್ತದೆ ಎನ್ನಲಾಗಿದೆ.

ಆದ್ರೆ ನಮಗೆ ವರಮಹಾಲಕ್ಷ್ಮಿ ಹಬ್ಬವನ್ನ ಆಚರಿಸಲು ಯಾವೆಲ್ಲಾ ವಸ್ತುಗಳು ಬೇಕಾಗುತ್ತದೆ ಎಂಬುದೇ ಗೊತ್ತಿರುವುದಿಲ್ಲ. ಅಷ್ಟೇ ಅಲ್ಲ ಕೆಲವೊಮ್ಮೆ ಪೂಜೆಗೆ ಮುಂದಾದಾಗ ನಮಗೆ ಕೆಲವೊಂದು ವಸ್ತುಗಳ ನೆನಪಾಗುತ್ತದೆ. ಹಾಗಾದ್ರೆ ಪೂಜೆಗೆ ಯಾವೆಲ್ಲಾ ವಸ್ತುಗಳು ಬೇಕು ಎಂಬುದನ್ನ ನಾವಿಂದು ತಿಳಿದುಕೊಳ್ಳೋಣ.
ವರಮಹಾಲಕ್ಷ್ಮಿ ಪೂಜೆಗೆ ಬೇಕಾಗುವ ವಸ್ತುಗಳು
ಮೊದಲು ಪೂಜೆಗೂ ಮುನ್ನ ಎಲ್ಲಾ ಪೂಜಾ ಸಾಮಾಗ್ರಿಗಳನ್ನು ಪೀತಾಂಬರ ಬಳಸಿ ಸ್ವಚ್ಛ ಮಾಡಬೇಕು. ಮೂರ್ತಿ, ಕಳಶ, ದೀಪದ ಕಂಬ, ಪಂಚಪಾತ್ರೆ ಹೀಗೆ ಎಲ್ಲಾ ವಸ್ತಗಳ ಸ್ವಚ್ಛ ಮಾಡಿ. ಬಳಿಕ ಎರಡು ತೆಂಗಿನಕಾಯಿ ಬೇಕಾಗುತ್ತದೆ. ಒಂದು ಪೂಜೆಯಲ್ಲಿ ದೇವರಿಗೆ ಒಡೆದು ಅರ್ಪಿಸಲು ಹಾಗೂ ಇನ್ನೊಂದು ಕಲಶದ ಮೇಲೆ ಇಡಲು ಬೇಕಾಗುತ್ತದೆ.
ಇದರ ಜೊತೆಗೆ ಪರಿಶುದ್ಧ ಅರಶಿಣ ಹಾಗೂ ಕುಂಕುಮ ಬೇಕಾಗುತ್ತದೆ. ಪೂಜೆಗಳ ಸಾಮಗ್ರಿ ಸಿಗುವಂತಹ ಅಂಗಡಿಯಲ್ಲಿಯೇ ಅರಶಿಣ-ಕುಂಕುಮ ತರುವುದು ಉತ್ತಮ. ಗಂಗಾಜಲವನ್ನು ತಂದು ಅಂದು ಪೂಜೆ ಶುದ್ಧ ಮಾಡುವುದು ಹಾಗೂ ಕಲಶದ ನೀರಿಗೆ ಮಿಕ್ಸ್ ಮಾಡಲು ತರಬಹುದು.
ತುಪ್ಪದ ಹತ್ತಿಯನ್ನು ಪೂಜೆಯ ಸಮಯದಲ್ಲಿ ದೀಪ ಹಚ್ಚಲು ಬಳಸಬೇಕಾಗುತ್ತದೆ. ಹಾಗೆ ಗೆಜ್ಜೆ ವಸ್ತ್ರ ತೆಗೆದುಕೊಂಡು ಎಲ್ಲಾ ದೇವರಿಗೆ ಅರ್ಪಿಸಲಾಗುತ್ತದೆ. ಹಾಗೂ ಪೂಜೆಯಲ್ಲಿ ಇಡಲು ಬಿಚ್ಚೋಲೆ ಪ್ಯಾಕೆಟ್ ಇರಬೇಕಾಗುತ್ತದೆ. ಜೊತೆಗೆ ಒಂದಿಷ್ಟು ಹಣ್ಣು, ಡ್ರೈ ಫ್ರೂಟ್ಸ್ ಇಡಬೇಕಾಗುತ್ತದೆ.
ಇದರ ಜೊತೆಗೆ ಅರಶಿಣ ಕೊಂಬಿನಿಂದ ಮಾಂಗಲ್ಯ ಮಾಡಿ ದೇವರ ಮೂರ್ತಿಗೆ ಅರ್ಪಿಸಲಾಗುತ್ತದೆ. ಹಾಗೂ 16 ಎಳೆ ದಾರವನ್ನು ಮಾಡಿಕೊಳ್ಳಬೇಕು. ಕಳಶಕ್ಕೆ ಲಾವಂಚದ ಬೇರು ಅರ್ಪಿಸಲಾಗುತ್ತದೆ. ಇದು ಅಂಗಡಿಗಳಲ್ಲಿ ಸಿಗುತ್ತದೆ. ಲಾವಂಚದ ಬೇರು ಅರ್ಪಿಸುವುದರಿಂದ ಹಣಕಾಸು ಸಮಸ್ಯೆ ನಿವಾರಣೆಯಾಗಲಿದೆ.
ಕಲಶಕ್ಕೆ ಹಾಕಲು ಹಾಗೂ ಪಂಚ ಕರ್ಪೂರ ದ್ರವ್ಯ ಮತ್ತು ಜಾವೆದ್ ಪೌಡರ್ ಅನ್ನು ಸಹ ಬಳಸುತ್ತಾರೆ. ಹೀಗಾಗಿ ಅಂಗಡಿಯಿಂದ ಈ ಎಲ್ಲಾ ವಸ್ತುಗಳನ್ನು ಸಹ ಖರೀದಿಸಲು ಮರೆಯಬೇಡಿ. ಇನ್ನು ಪೂಜೆ ಸಮಯದಲ್ಲಿ ಬಳಸಲು ಶ್ರೀಗಂಧ ಇದ್ದರೆ ಉತ್ತಮ. ಜೇನ ತುಪ್ಪವನ್ನು ದೇವರ ಪ್ರಸಾದ ಅಥವಾ ತೀರ್ಥದಲ್ಲಿ ಬಳಸುವುದು ಉತ್ತಮ. ಕಲಶಕ್ಕೆ ಹಾಕಲು ಕೊರಂಜನಾ ಎಂಬ ವಸ್ತು ಸಿಗಲಿದೆ ಇದನ್ನು ಒಂದು ಚಿಟಿಕೆಯನ್ನು ಹಾಕಬೇಕು.
ಇನ್ನು ಮಡಿಲಕ್ಕಿ ತುಂಬಲು ಬೇಕಾಗುವ ಎಲ್ಲಾ ವಸ್ತು ಖರೀದಿಸಿ, ಮುಖ್ಯವಾಗಿ ಬಿಚ್ಚೋಲೆ ಪ್ಯಾಕೆಟ್, ಕಾಯಿ, ಹಣ್ಣು, ಎರಡು ಅಚ್ಚು ಬೆಲ್ಲ, ಅಕ್ಕಿ, ಒಣ ಕೊಬ್ಬರಿ ಬೇಕಾಗುತ್ತದೆ.
ಎರಡು ಶುದ್ಧ ವಸ್ತ್ರಗಳನ್ನು ಸಹ ಪೂಜೆಯ ಸಮಯದಲ್ಲಿ ಬೇಕಾಗುತ್ತದೆ. ಈ ಪೂಜೆಯ ವೇಳೆ ಹೊಸ ಬಟ್ಟೆಗಳನ್ನೇ ಬಳಸಿ ಒರೆಸುವುದು, ಮೂರ್ತಿ ಒರೆಸುವ ಕಾರ್ಯ ಮಾಡಿ. 6 ಗೋಮತಿ ಚಕ್ರ ಹಾಗೂ 6 ಕಮಲದ ಬೀಜಗಳು, 6 ಕವಡೆ, 6 ಗುಲಗಂಜಿ, ಸಣ್ಣ ಲಕ್ಷ್ಮಿ ಮೂರ್ತಿಯನ್ನು ಪೂಜೆಯ ಸಮಯದಲ್ಲಿ ಬಳಸಬೇಕಾಗುತ್ತದೆ. ಪೂಜೆಯ ಸಮಯದಲ್ಲಿ ಇದೆಲ್ಲವನ್ನೂ ಹಾಕಿ ದೇವರ ಮೂರ್ತಿ ಮುಂದೆ ಇರಿಸಬೇಕು. ಇದರ ಜೊತೆಗೆ ಸೀರೆ, ಹಸಿರು ಬಳೆ, ಆಭರಣ ಬಳಸುತ್ತಾರೆ.



Click it and Unblock the Notifications