Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ದಾಖಲೆ ಸಮೇತ ನಾವು ರಾಮನ ವಂಶಸ್ಥರು ಎಂದ ಕುಟುಂಬ..! ಯಾರಿವರು ಗೊತ್ತಾ.?
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆದಿದೆ, ಇಂದಿನಿಂದ ಧಾರ್ಮಿಕ ಕಾರ್ಯಗಳು ಸಹ ಆರಂಭಗೊಳ್ಳುತ್ತಿದೆ. ಆದರೆ ಅಚ್ಚರಿಯ ಅಂಶವೇನೆಂದರೆ ಇಂದಿಗೂ ಅಯೋಧ್ಯೆಯ ರಾಜ ಶ್ರೀರಾಮನ ವಂಶಸ್ಥರು ಭಾರತದಲ್ಲೇ ಇದ್ದಾರಂತೆ, ಅವರೇ ನಾವು ರಾಮನ ವಂಶಸ್ಥರು ಎಂದು ದಾಖಲೆ ಸಮೇತ ಮುಂದೆ ಬಂದಿದ್ದಾರೆ.
ಅಚ್ಚರಿ ಎನಿಸಿದರು ಇದು ಸತ್ಯ ರಾಜಸ್ಥಾನದ ಜೈಪುರದಲ್ಲಿ ನೆಲೆಸಿರುವ ರಾಜ ಮನತನವೊಂದು ನಾವು ರಾಮನ ವಶಂಸ್ಥರು ಎಂದು ವಾದ ಮಂಡಿಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಮಾಜಿ ರಾಜಕುಮಾರಿ ಮತ್ತು ಸಂಸದೆಯಾಗಿರುವ ದಿಯಾ ಕುಮಾರಿ ಅವರು ಭಗವಾನ್ ರಾಮನ ಮಗ ಕುಶ ಅವರ ವಂಶಸ್ಥರು ಎಂದು ಹೇಳಿದ್ದಾರೆ, ಆದರೆ ಮೇವಾರ್ ರಾಜಮನೆತನವು ಭಗವಾನ್ ರಾಮನ ಇನ್ನೊಬ್ಬ ಪುತ್ರ ಲವ ಅವರ ವಂಶಾವಳಿಯನ್ನು ಪ್ರತಿಪಾದಿಸಿದೆ.
ಅಯೋಧ್ಯೆ ಭೂ ವಿವಾದದಲ್ಲಿ ವಿಚಾರಣೆ ನಡೆಸುತ್ತಿದ್ದಾಗ ಸುಪ್ರೀಂಕೋರ್ಟ್ ಈ ರೀತಿ ಕೇಳಿತ್ತು. ಪ್ರಪಂಚದ ಯಾವುದೇ ಮೂಲೆಯಲ್ಲಿ ರಾಮನ ವಂಶಸ್ಥರು ನೆಲೆಯಾಗಿದ್ದಾರೆಯೇ ಅವರ ಮೂಲ ತಿಳಿದಿದೆಯೇ ಎಂದು ಪ್ರಶ್ನಿಸಿತ್ತು. ಈ ಪ್ರಶ್ನೆಗೆ ಉತ್ತರವಾಗಿ ಜೈಪುರದ ಮಾಜಿ ರಾಜಕುಮಾರಿ ಈ ರೀತಿ ಹೇಳಿದ್ದರು. ನಾವು ರಾಮನ ಮೊದಲ ಮಗ ಕುಶನ ವಂಶಸ್ಥರಾಗಿದ್ದೇವೆ ಎಂದು ಘೋಷಿಸಿಕೊಂಡಿದ್ದರು. ಅಲ್ಲದೆ ಇದಕ್ಕೆ ಪೂರಕವಾಗಿ ಕೆಲ ದಾಖಲೆಗಳ ಮುಂದಿಟ್ಟಿದ್ದರು.
ಹಿಂದಿನ ಮೇವಾರ್ ರಾಜಮನೆತನದ ಲಕ್ಷ್ಯರಾಜ್ ಸಿಂಗ್ ಅವರು ಇಂದು ಅವರು ಪ್ರಾಚೀನ ಕಾಲದಲ್ಲಿ ಲುವ್ಕೋಟೆ (ಲಾಹೋರ್) ಅನ್ನು ಸ್ಥಾಪಿಸಿದ ಭಗವಾನ್ ರಾಮನ ಮಗ ಲವ ಅವರ ವಂಶಸ್ಥರು ಎಂದು ಹೇಳಿದ್ದಾರೆ. ಲವ ಅವರ ಪೂರ್ವಜರು ಅಹದ್ (ಮೇವಾರ್) ಗೆ ಬಂದು ಸಿಸೋಡಿಯಾ ರಾಜವಂಶವನ್ನು ಸ್ಥಾಪಿಸಿದರು ಎಂದು ಅವರು ಹೇಳಿದರು. ಆದರೆ ರಾಜ ಮನೆತನವು ನಾವು ಕುಶ ವಂಶಸ್ಥರು ಎನ್ನುತ್ತಿದೆ.

ಮೇವಾರ್ ರಾಜಮನೆತನದ ಸಂಪ್ರದಾಯಗಳು ಮತ್ತು ಆಚರಣೆಗಳು, ಶಿವಭಕ್ತರು ಮತ್ತು ಸೂರ್ಯವಂಶಿ ಅವರು ಭಗವಾನ್ ರಾಮನಿಂದ ಬಂದವರು ಎಂಬುದಕ್ಕೆ ಪುರಾವೆ ಎಂದುಇತಿಹಾಸಕಾರರು ಬರೆದಿದ್ದಾರೆ.
ಕರ್ನಲ್ ಜೇಮ್ಸ್ ಟಾಡ್ ಅವರ ಪುಸ್ತಕವನ್ನು ಉಲ್ಲೇಖಿಸಿದ ಸಿಂಗ್, ಈ ಪುಸ್ತಕದಲ್ಲಿ 'ಆನಲ್ಸ್ ಮತ್ತು ಆಂಟಿಕ್ವಿಟೀಸ್ ಆಫ್ ರಾಜಸ್ಥಾನ'ದಲ್ಲಿ ಭಗವಾನ್ ರಾಮನ ರಾಜಧಾನಿ ಅಯೋಧ್ಯೆ ಎಂದು ಬರೆಯಲಾಗಿದೆ ಎಂದು ಹೇಳಿದರು. ಅವರ ಮಗ ಲವ ಲುವ್ಕೋಟೆ (ಲಾಹೋರ್) ಅನ್ನು ಸ್ಥಾಪಿಸಿದ್ದರು.
ಲವ ಪೂರ್ವಜರು ಪ್ರಾಚೀನ ಕಾಲದಲ್ಲಿ ಗುಜರಾತ್‌ಗೆ ತೆರಳಿದ್ದರು ಮತ್ತು ಅಲ್ಲಿಂದ ಅಹದ್ (ಮೇವಾರ್) ಗೆ ಬಂದು ಅಲ್ಲಿ ಅವರು ಸಿಸೋಡಿಯಾ ರಾಜವಂಶವನ್ನು ಸ್ಥಾಪಿಸಿದರು. ಆರಂಭದಲ್ಲಿ ಅವರ ರಾಜಧಾನಿ ಚಿತ್ತೋರ್ ಆಗಿತ್ತು ಮತ್ತು ನಂತರ ಅದನ್ನು ಉದಯಪುರಕ್ಕೆ ವರ್ಗಾಯಿಸಲಾಯಿತು. ಮೇವಾರ್ ರಾಜಮನೆತನದ ಲಾಂಛನ ಸೂರ್ಯ ಆಗಿದೆ . ಭಗವಾನ್ ರಾಮನು ಭಗವಾನ್ ಶಿವನ ಆರಾಧಕನಾಗಿದ್ದನು ಮತ್ತು ಮೇವಾರ್ ರಾಜರು ಏಕಲಿಂಗನಾಥನನ್ನು (ಶಿವ) ಪೂಜಿಸುತ್ತಾರೆ ಎಂದು ವಾದಿಸಿದ್ದರು.
ಇವರಲ್ಲದೆ ಕಾಂಗ್ರೆಸ್ ವಕ್ತಾರ ಸತ್ಯೇಂದ್ರ ಸಿಂಗ್ ರಾಘವ್ ಕೂಡ 'ರಾಘವ್ ರಜಪೂತರು' ಭಗವಾನ್ ರಾಮನ ನಿಜವಾದ ವಂಶಸ್ಥರು ಎಂದು ಹೇಳಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ಕುಶನನ್ನು ದಕ್ಷಿಣ ಕೌಶಲದ ರಾಜನಾಗಿ ಅಭಿಷೇಕಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ ಮತ್ತು ಲವ ಉತ್ತರ ಕೌಶಲದ ರಾಜನಾಗಿ ಅಭಿಷೇಕಿಸಲ್ಪಟ್ಟಿದ್ದಾನೆ ಎಂದು ಉಲ್ಲೇಖಿಸಲಾಗಿದೆ ಎಂದು ಅವರು ಫೇಸ್‌ಬುಕ್ ಪೋಸ್ಟ್ ಹಾಕಿದ್ದರು.
ಹಾಗಾದರೆ ಇವರು ರಾಮನ ವಂಶಸ್ಥರೇ?
ಈ ಎರಡು ಮನೆತನಗಳು ನೀಡಿರುವ ದಾಖಲೆಗಳನ್ನು ತಜ್ಜರು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಈ ರಾಜಮನೆತನ ಕುಶ ಅಥವಾ ಲವ ವಂಶಕ್ಕೆ ಸೇರಿದ್ದಾರೆಯೇ ಎಂಬ ಕುರಿತು ಅಧ್ಯಯನಗಳು ನಡೆಯುತ್ತಿವೆ. ಅವರು ನೀಡಿರುವ ಕೆಲವು ದಾಖಲೆಗಳಲ್ಲಿ ಉಲ್ಲೇಖವಿರುವ ಕುರಿತು ಸಹ ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ. ಆದರೆ ಎಲ್ಲಿಯೂ ಈ ಕುರಿತು ದೃಢಪಡಿಸಿಲ್ಲ.



Click it and Unblock the Notifications