Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ಕೇರಳ: ವಯನಾಡ್ ಪ್ರಕೃತಿಯ ರುದ್ರ ನರ್ತನದ ವೀಡಿಯೋಗಳು
ಪ್ರಕೃತಿ ಈ ಬಾರಿ ಮನುಷ್ಯನ ಮೇಲೆ ತುಂಬಾನೇ ಮುನಿಸಿಕೊಂಡಿದ್ದಾಳೆ, ಎತ್ತ ನೋಡಿದರೂ ಅನಾಹುತ, ಪ್ರವಾಹ, ಬರೆಕುಸಿತ, ತಿನ್ನುವ ಬೆಳೆಗಳ ನಾಶ ಹೀಗೆ ಮನುಷ್ಯನಿಗೆ ಏನು ಮಾಡಬೇಕೆಂದೇ ತಿಳಿಯಂಥ ಪರಿಸ್ಥತಿ ಎದುರಾಗಿದೆ.
ನಮ್ಮ ಉತ್ತರ ಕನ್ನಡದ ದುರಂತವನ್ನು ನೋಡಿ ಬೆಚ್ಚಿಬಿದ್ದ ಮನುಷ್ಯ ಕೇರಳದ ವಯನಾಡಿನ ಘಟನೆ ನೋಡಿ ಅಕ್ಷರಶಃ ಭಯತದಿಂದ ನಡುಗುತ್ತಿದ್ದಾನೆ. ಮಳೆ ಬೀಳುವಾಗ, ಸ್ವಲ್ಪ ಜೋರು ಗಾಖಳಿ ಬೀಸುವಾಗ ಭಯ ಉಂಟಾಗುತ್ತಿದೆ. ಎಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ.

ಈ ಗುಡ್ಡಗಾಡಿನ ಪ್ರದೇಶದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರು ದೇವರ ನಾಡು ಕೇರಳದ ಪರಿಸ್ಥಿತಿ ನೋಡಿದ ಪ್ರಾಣಭಯದಿಂದ ದಿನ ಕಳೆಯುತ್ತಿದ್ದಾರೆ. ರಾತ್ರಿ ಮಲಗಿದರೆ ಬೆಳಗ್ಗೆ ಈ ಜಗತ್ತನ್ನು ನೋಡುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ನಿದ್ದೆ ಜಾರಬೇಕಾದ ಪರಿಸ್ಥಿತಿ. ಗಾಢ ನಿದ್ದೆ ಎಂಬುವುದು ಎಲ್ಲಿ ಓಡಿ ಹೋಗಿದೆ ಎಂದು ಗೊತ್ತಾಗುತ್ತಿಲ್ಲ, ಒಂದು ಚಿಕ್ಕ ಶಬ್ದವಾದರೂ ಎನಾಯ್ತು ಎಂಬ ಆತಂಕದಲ್ಲಿ ಬೆಚ್ಚಿ ಬಿದ್ದು ಕೂರುತ್ತಿದ್ದೇವೆ, ಎಂಥ ಪರಿಸ್ಥಿತಿ ಅಲ್ಲಾ.. .
ಜನರ ರಕ್ಷಣೆಗೆ ಬರುತ್ತಿರುವ ರಕ್ಷಣಾ ತಂಡವೂ ಪ್ರಕೃತಿಯ ರುದ್ರನರ್ತನ ನೋಡಿ ದಿಕ್ಕು ತೋಚದೆ ನಿಲ್ಲುವಂಥ ಪರಿಸ್ಥಿತಿ. ಹೇ... ಮಾನವ ನಾನು ಮುನಿದರೆ ನಿನಗೆ ಉಳಿಗಾಲವಿಲ್ಲ ಎಂಬುವುದನ್ನು ಪ್ರಕೃತಿ ಸ್ವಲ್ಪ ಕಟುವಾಗಿಯೇ ಎಚ್ಚರಿಸುತ್ತಿದ್ದಾಳೆ ಎಂದನಿಸುತ್ತಿದೆ, ಅಭಿವೃದ್ಧಿಯ ಹೆಸರಿನಲ್ಲಿ ನಾವು ಈ ಭೂಮಿಯನ್ನು ನಿರಂತ ಘಾಸಿಗೊಳಿಸುತ್ತಿದ್ದೇವೆ, ಆದರೆ ಅವಳ 5 ನಿಮಿಷದ ರೌದ್ರಾವತಾರ ತಡೆಯುವ ಶಕ್ತಿ ನಮ್ಮಲ್ಲಿ ಇಲ್ಲ ಎಂದ ಮೇಲೆ ನಾವು ಅಭಿವೃದ್ಧಿಯ ಹೆಸರಿನಲ್ಲಿ ಏನೇ ಕೆಲಸ ಮಾಡಲಿ ಪ್ರಕೃತಿಗೆ ಹೆಚ್ಚು ತೊಂದರೆ ಮಾಡದಂತೆ ಮಾಡಿದರೆ ಮಾತ್ರ ನಮಗೆ ಉಳಿಗಾಲ.
ವಯನಾಡಿನ ಒಂದೊಂದು ದೃಶ್ಯ ನೋಡುವಾಗ ನಾವು ನಡುಗಿ ಹೋಗುತ್ತೇವೆ, ಅಬ್ಬಾ ಇಂಥ ದೃಶ್ಯ ಇನ್ನೆಂದೂ ಕಾಣದಿರಲಿ ಎಂದು ಕೇರಳದವರು ಮಾತ್ರವಲ್ಲ ಇಡೀ ದೇಶದ ಜನತೆ ಪ್ರಾರ್ಥಿಸುತ್ತಿದ್ದಾರೆ. ನೀರಿನಲ್ಲಿ ತೇಲಿ ಬಂದ ನೂರಾರು ಶವಗಳನ್ನು ನೋಡಿ ರಕ್ಷಣೆಗೆ ಹೋದವರ ಮನ ನೋವಿನಿಂದ ಮಿಡಿಯುತ್ತಿದೆ, ಇನ್ನೂ ಅದರ ವೀಡಿಯೋಗಳು ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುತ್ತಿದೆ.
ಇಲ್ಲಿ ಕೆಲ ವೈರಲ್ ವೀಡಿಯೋ ಇಲ್ಲಿ ನೀಡಲಾಗಿದೆ:
#WayanadLandslide
— Southern Command INDIAN ARMY (@IaSouthern) July 30, 2024
One column of Territorial Army has reached the mishap site at 12:30 PM#IndianArmy’s two relief columns with a strength of approx 200 individuals are underway to #Waynad.
Additional efforts based on the request of State government also being mobilised.… pic.twitter.com/P6QY5INHUh



Click it and Unblock the Notifications











