Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮೋದಿಯ ಗಡ್ಡ ಎಳೆದು ಮುದ್ದು ಮಾಡುತ್ತಿರುವ ಆ ಪುಟ್ಟ ಬಾಲೆ: ಆ ಮಗುವಿನ ಕತೆ ಕೇಳಿದರೆ ಕರುಳು ಹಿಂಡುತ್ತೆ
ಮೋದಿಯ ಗಡ್ಡ ಹಿಡಿದು ಎಳೆದು, ಮೋದಿಯ ಕನ್ನಡಕ ಮುಟ್ಟುತ್ತಾ, ಮುದ್ದಾಡುತ್ತಿರುವ ಮೂರು ವರ್ಷದ ಆ ಮಗಳ ವೀಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋ ನೋಡುತ್ತಿದ್ದರೆ ಎಂಥವರ ಮುಖದಲ್ಲಿಯೂ ನಗು ಮೂಡುವುದು.
ಅದಕ್ಕೆ ಅಲ್ಲವೇ ಹೇಳುವುದು ಮಕ್ಕಳು ದೇವರ ಸಮಾನವೆಂದು, ಆ ಮಗುವಿಗೆ ತನ್ನ ಎದುರಿಗಿರುವುದು ಪ್ರಧಾನಿಯೆಂದು ಗೊತ್ತಿಲ್ಲ, ಆದರೆ ಆ ವ್ಯಕ್ತಿಯನ್ನು ನೋಡಿದಾಗ ಮಗುವಿಗೆ ರಕ್ಷಕಂತೆ ಅಥವಾ ತುಂಬಾ ಆಪ್ತನಂತೆ ಅನಿಸಿರಬಹುದು, ಇಲ್ಲದಿದ್ದರೆ ಹತ್ರಕ್ಕೂ ಬರಲ್ಲ, ಆದರೆ ಈ ಮಗು ಮೋದಿಯನ್ನು ತುಂಬಾ ಚೆನ್ನಾಗಿ ಗೊತ್ತಿರುವಂತೆ ಮೋದಿಯನ್ನು ಅಪ್ಪಿಕೊಂಡು ಬಿಳಿಗಡ್ಡ ಎಳೆದು ಮೋದಿಯನ್ನು ಮುದ್ದು ಮಾಡುತ್ತಿರುವ ಕ್ಯೂಟ್ ವೀಡಿಯೋ ವೈರಲ್ ಆಗುತ್ತಿದೆ.

ಮೋದಿ ವಯನಾಡ್ ದುರಂತ ನಡೆದ ಸ್ಥಳ ವೀಕ್ಷಣೆಗೆ ಬಂದಾಗ ಅಲ್ಲಿಯ ಸಂತ್ರಸ್ಥರನ್ನು ಭೇಟಿಯಾಗಿದ್ದರು, ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದ ಜನರನ್ನು ಭೇಟಿಯಾದರು, ಆವಾಗ ತನ್ನ ತಾಯಿ ಇದ್ದ ಮೂರು ವರ್ಷದ ಈ ಹೆಣ್ಮಗುವನ್ನು ಮೋದಿ ಮಾತನಾಡಿಸಿದಾಗ ಆ ಮಗು ಖುಷಿಯಿಂದ ಮೋದಿಯನ್ನು ಮುದ್ದು ಮಾಡುತ್ತಿರುವ ವೀಡಿಯೋ ಇದಾಗಿದೆ. ಆ ಮಗುವಿನ ನಗು, ತುಂಟಾಟ ನೋಡಿ ಮೋದಿಯವರು ಮಾತ್ರವಲ್ಲ ಇಡೀ ರಾಷ್ಟ್ರದ ಜನತೆ ಮನಸೋತಿದೆ, ಅಯ್ಯೋ ಮುದ್ದು ನೀನು ಹೀಗೆ ನಗು ನಗುತ್ತಾ ಇರು ಎಂದು ಹಾರೈಸುತ್ತಿದ್ದಾರೆ.
ಆ ಮಗುವಿನ ಬದುಕಿನಲ್ಲಿ ನಡೆದಿರುವ ದುರಂತ ಕೇಳಿದರೆ ಕರುಳು ಹಿಂಡುತ್ತೆ
ವಯನಾಡ್ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡು ಒಂಟಿಯಾಗಿರುವ ನೂರಾರು ಕಣ್ನೀರಿನ ಕತೆಗಳಿವೆ, ಅದರಲ್ಲೊಂದು ಈ ಮಗುವಿನ ಕತೆ. ಈ ವಯನಾಡ್ ದುರಂತದ ಬಗ್ಗೆ ಮಾತನಾಡುತ್ತಾ ಆ ಮಗುವಿನ ತಾಯಿ ಹೇಳುತ್ತಾರೆ, ಈ ದುರಂತದಲ್ಲಿ ನಾನು ನನ್ನ ಇಬ್ಬರು ಗಂಡು ಮಕ್ಕಳನ್ನು, ಗಂಡನನ್ನು ಕಳೆದುಕೊಂಡೆ, ನಮ್ಮ ಕುಟುಂಬದ ಎಲ್ಲರೂ ಹೋದರು, ಈಗ ಉಳಿದಿರುವುದು ನಾನು, ನನ್ನ ಈ ಮೂರು ವರ್ಷದ ಮಗಳು ಮಾತ್ರ... ಆ ಪುಟ್ಟ ಕಂದಮ್ಮ ತನ್ನ ಅಣ್ಣಂದಿರು, ಅಪ್ಪ-ಅಜ್ಜ ಎಲ್ಲರನ್ನೂ ಒಂದೇ ದಿನದಲ್ಲಿ ಕಳೆದುಕೊಂಡಿದೆ.
ಕೇರಳದಲ್ಲಿ ಬದಲಾದ ಮೋದಿ ಚಿತ್ರಣ
ವಯನಾಡ್ ದುರಂತದ ಬಳಿಕ ಪ್ರಧಾನಿ ಮೋದಿಯವರನ್ನು ಕೇರಳದ ಜನತೆ ಪ್ರೀತಿಸಲಾರಂಭಿಸಿದ್ದಾರೆ, ತಮಗೊಂದು ಆಪತ್ತು ಬಂದಾಗ ತಕ್ಷಣವೇ ಸೇನೆ ಕಳುಹಿಸಿ ನಮ್ಮ ಕಷ್ಟಕ್ಕೆ ನೆರವಾದ ಕೇಂದ್ರ ಸರ್ಕಾರದ ಸ್ಪಂದನೆ ಜನರ ಮನ ಮುಟ್ಟಿದೆ, ದುರಂತ ನಡೆದ ಸ್ಥಳವನ್ನು ಪ್ರಧಾನಿಯವರು ಬಂದು ನೋಡಬೇಕು ಆವಾಗ ಇಲ್ಲಿಯ ಭೀಕರತೆ ಸ್ಪಷ್ಟ ಚಿತ್ರಣ ಅವರಿಗೆ ಸಿಗುತ್ತದೆ ಎಂದು ಜನ ಅಂದುಕೊಂಡಿದ್ದರು.
ಅದರಂತೆ ವಯನಾಡ್‌ಗೆ ಮೋದಿ ಭೇಟಿ ನೀಡಿ ದುರಂತ ನಡೆದ ಸ್ಥಳದಲ್ಲಿ ಓಡಾಡಿದರು, ಅಲ್ಲಿಯ ಸಂತ್ರಸ್ಥರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ ನಿಮಗೆ ಏನು ಅವಶ್ಯಕತೆ ಇದೆ ನನಗೆ ತಿಳಿಸಿ, ನಾವು ನಿಮ್ಮ ಸಹಾಯಕ್ಕೆ ಸದಾ ಸಿದ್ಧ ಎಂದು ಹೇಳುವ ಮೂಲಕ ಅಲ್ಲಿದದ್ದವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು.
ಕೇರಳದಲ್ಲಿ ಬಿಜೆಪಿ ಬೆಂಬಲಿಗರು ತುಂಬಾನೇ ಕಡಿಮೆ, ಕಾಂಗ್ರೆಸ್‌ನ ಬೆಂಬಲಿಗರು ಹೆಚ್ಚಿದ್ದಾರೆ, ಹೀಗಾಗಿ ಮೋದಿಯನ್ನು ಸದಾ ಟೀಕಿಸುತ್ತಿದ್ದರು, ಅದರೆ ಈ ಘಟನೆಯ ಬಳಿಕ ಅಲ್ಲಿಯ ಜನತೆ ಕೇಂದ್ರ ಸರ್ಕಾರ ಹಾಗೂ ಸೇನೆಯ ಕಾರ್ಯವನ್ನು ಕೃತಜ್ಞತೆಯಿಂದ ನೆನೆಯುತ್ತಿದ್ದಾರೆ.
ಮೋದಿ ಭೇಟಿ ಬಳಿಕ ಅಲ್ಲಿಯ ಮಾಧ್ಯಮದವರು ವಯನಾಡ್‌ನ ಜನತೆ ಬಳಿ ನಿಮಗೆ ಮೋದಿಯವರ ಮೇಲೆ ನಂಬಿಕೆ ಇದೆಯೇ ಎಂದು ಕೇಳಿದಾಗ ಅವರು ಹೆಳುತ್ತಾರೆ, ಹೌದು ಸೇ. 100ರಷ್ಟು ನಂಬುತ್ತೇವೆ. ಕೇಂದ್ರದಿಂದ ಅನುದಾನ ಬಂದರೆ ಅದು ಯಾರ ಪಾಲಾಗದೆ ಸೀದಾ ನಮಗೆ ತಲುಪುತ್ತದೆ, ಅದೇ ಕಳೆದ ಬಾರಿ ಸುನಮಿ ದುರಂತದಲ್ಲಿ ಸಂತ್ರಸ್ಥರಿಗೆ ಬಂದ ಹಣವನ್ನು ಹೇಗೆ ಸ್ವಂತ ಲಾಭಕ್ಕೆ ಬಳಸಿಕೊಂಡರು ಎಂಬುವುದನ್ನು ನೋಡಿದ್ದೇವೆ, ಅದೇ ಪ್ರಧಾನಿ ಮೋದಿಯವರ ಸಹಾಯ ಸೀದಾ ಫಲಾನುಭವಿಗಳಿಗೇ ತಲುಪಲಿದೆ ಎಂದು ಹೇಳಿರುವ ವೀಡಿಯೋ ವೈರಲ್ ಆಗಿದೆ.



Click it and Unblock the Notifications