Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ವಯನಾಡ್ ದುರಂತದ 6 ದಿನಗಳ ಬಳಿಕ ಯಜಮಾನಿ ಸಿಕ್ಕಾಗ ನಾಯಿಗಾದ ಖುಷಿಯ ವೀಡಿಯೋ ವೈರಲ್
ವಯನಾಡಿನ ದುರಂತದಲ್ಲಿ ಕಣ್ಣೀರ ಕತೆಗಳು ಮಾತ್ರವಲ್ಲ ಕೆಲ ಹೃದಯಸ್ಪರ್ಶಿ ಕತೆಗಳೂ ಗಮನ ಸೆಳೆಯುತ್ತಿದೆ, ಮಾನವೀಯತೆ, ಪ್ರೀತಿ, ಮೌಲ್ಯಗಳು ಕೂಡ ಎದ್ದು ಕಾಣುತ್ತಿದೆ. ಪ್ರಕೃತಿಯ ರೌದ್ರಾವಾತಾರಕ್ಕೆ ನೂರಾರು ಜನ ಬದುಕು ಕಳೆದುಕೊಂಡರೆ ಸಾವಿರಾರು ಜನ ಬದುಕಿನಲ್ಲಿ ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ.

ಬದುಕುಳಿದವರಲ್ಲಿ ನಮ್ಮವರು ಯಾರಾದರು ಇದ್ದಾರೆಯೇ ಎಂದು ಎಲ್ಲಾ ಕಡೆ ಹುಡುಕಾಡುತ್ತಿದ್ದಾರೆ. ನಮ್ಮವರು ಯಾರಾದರು ಕಂಡರೆ ಅವರಿಗೆ ಅದುವೇ ಕೋಟಿ ಸಂತೋಷ. ಮನುಷ್ಯದ ಸಂಕಟ ಒಂದು ರೀತಿಯಾದರೆ ಮೂಕ ಪ್ರಾಣಿಗಳ ವೇದನೆ ಮತ್ತೊಂದು ರೀತಿ, ತಮ್ಮವರನ್ನು ಕಾಣದೆ, ಊಟವೂ ಮಾಡದೆ ಅವು ಆ ಪ್ರದೇಶದಲ್ಲಿ ಯಾರಿಗೋ ಹುಡುಕಾಡುತ್ತಿರುವುದನ್ನು ನೋಡುವಾಗ ಅಯ್ಯೋ ಅನಿಸುತ್ತಿದೆ. ಅದರಲ್ಲೊಂದು ವೀಡಿಯೋ ತುಂಬಾನೆ ವೈರಲ್ ಆಗುತ್ತಿದೆ, 6 ದಿನಗಳ ಬಳಿಕ ತನ್ನ ಯಜಮಾನಿ ಸಿಕ್ಕಾಗ ಆ ನಾಯಿ ಸಂತೋಷ ಪಟ್ಟ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
ತನ್ನ ಯಜಮಾನರನ್ನು ಕಾಣದೆ ಆಹಾರವು ಸೇವಿಸದೆ ದುಃಖಿಸುತ್ತಿತ್ತು ಈ ನಾಯಿ
ಘಟನೆ ನಡೆದು 6 ದಿನಗಳಲ್ಲಿ ಆ ನಾಯಿ ಅ ಜಾಗ ಬಿಟ್ಟು ಕದಲಿರಲಿಲ್ಲ. ಅತ್ತಿತ್ತ ಓಡಾಡುತ್ತಾ ಯಾರನ್ನೋ ಹುಡುಕುತ್ತಿತ್ತು. ಅಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವವರು ಆಹಾರ ನೀಡಿದರು ದುಃಖದಿಂದ ಆಹಾರದತ್ತ ಕೂಡ ಗಮನ ಹರಿಸುತ್ತಿರಲಿಲ್ಲ.
ಮನೆ ಕುಸಿದು ಬಿದ್ದಲ್ಲಿ ಬಂದು ತಮ್ಮ ವಸ್ತುಗಳಿಗಾಗಿ ಹುಡುಕುತ್ತಿರುವ ಜನ
ತಮ್ಮ ಹಣ, ಒಡವೆ ಎಲ್ಲವೂ ಮಣ್ಣು ಪಾಲಾಗಿದೆ, ನಾಳೆಯ ಬದುಕಿನ ಬಗ್ಗೆ ಒಂದೂ ತೋಚುತ್ತಿಲ್ಲ, ಹೀಗಿರುವಾಗ ತಮ್ಮ ಮನೆಯಲ್ಲಿದ್ದ ಚಿನ್ನ, ಹಣವಾದರೂ ಸಿಕ್ಕರೆ ಒಳ್ಳೆಯದಿತ್ತು ಎಂದು ಜನ ಯೋಚಿಸುತ್ತಿದ್ದಾಗ ತಮ್ಮ-ತಮ್ಮ ಮನೆಗಳ ಬಳಿ ಹಫಗಿ ಶೋಧನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ಮನೆ ಬಳಿಗೆ ಬಂದ ಯಜಮಾನಿಯನ್ನು ಕಂಡು ಓಡಿ ಬಂದ ನಾಯಿ ಖುಷಿಯನ್ನು ವ್ಯಕ್ತಪಡಿಸುತ್ತಿರುವ ರೀತಿ ನೆಟ್ಟಿಗರ ಗಮನ ಸೆಳೆದಿದೆ.
ನಾಯಿ ವರ್ಷಗಳು ಕಳೆದರೂ ತನ್ನ ಯಜಮಾನರನ್ನು ಮರೆಯಲ್ಲ
ಒಂದು ನಾಯಿಯನ್ನು ಸಾಕಿ ನಾವು ಎಲ್ಲಿಗಾದರು ಹೋಗಿ ವರ್ಷಗಳ ಬಳಿಕ ಬಂದರು ನಮ್ಮನ್ನು ಗುರುತು ಹಿಡಿಯುತ್ತದೆ, ಹೀಗಾಗಿ ನಾಯಿ ಮನುಷ್ಯನ ಸಂಬಂಧ ವಿಶೇಷವಾದದ್ದು. ತನ್ನ ಯಜಮಾನನ ರಕ್ಷಣೆ ಮಾಡುವುದರ ಜೊತೆಗೆ ಅವರನ್ನು ಮುದ್ದು ಮಾಡಿ ಅವರ ಒಂಟಿತನ ಹೋಗಲಾಡಿಸುವ ಗುಣ ನಾಯಿಯಲ್ಲಿದೆ.
ಹಾಗಾಗಿಯೇ ಹೇಳುವುದು ನಾಯಿ ನಿಯತ್ತಿನ ಪ್ರಾಣಿಯೆಂದು....



Click it and Unblock the Notifications
