Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮರದಿಂದ ಚಿಮ್ಮುತ್ತಿದೆ ನೀರು..! ಇದು ಹೇಗೆ ಸಾಧ್ಯ..?
ಅರಣ್ಯ ಸಂಪತ್ತು ಭೂಮಿ ಮೇಲೆ ಎಷ್ಟು ಹಣ ನೀಡಿದರು ಸಿಗದಿರುವ ಸಂಪತ್ತು, ಒಮ್ಮೆ ಇದು ನಾಶವಾದರೆ ಮನುಕುಲಕ್ಕೆ ಸಂಚಕಾರ ತಪ್ಪಿದ್ದಲ್ಲ. ಆದರೆ ಈ ಅರಣ್ಯಗಳು ಎಷ್ಟೊಂದು ವಿಚಿತ್ರ, ಕುತೂಹಲಕಾರಿ ವಿಸ್ಮಯಗಳನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡಿವೆ ಅಂದ್ರೆ ನೀವು ನಂಬಲು ಅಸಾಧ್ಯ.
ಯಾಕೆಂದ್ರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂವು ಚರ್ಚೆಯ ಜೊತೆಗೆ ವಿಸ್ಮಯಕ್ಕೆ ಕಾರಣವಾಗಿದೆ. ಅದೇನೆಂದರೆ ಅರಣ್ಯ ಇಲಾಖೆ ಸಿಬ್ಬಂದಿ ಮರವೊಂದರಿಂದ ನೀರು ಹರಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಚ್ಚರಿಯ ವಿಡಿಯೋದಲ್ಲಿ ಮರದ ಒಳಗಿಂದ ನೀರು ಚಿಮ್ಮುತ್ತಿದೆ.

ಅರಣ್ಯ ಇಲಾಖೆ ಸಿಬ್ಬಂದಿ ದೈತ್ಯ ಮರವೊಂದಕ್ಕೆ ಕತ್ತಿವೊಂದರಿಂದ ಕಡಿದಾಗ ಅದರೊಳಗಿದ್ದ ನೀರು ಹೊರಗೆ ಚಿಮ್ಮುತ್ತಿದೆ. ಆ ನೀರು ಎಷ್ಟು ಬಲವಾಗಿ ಚಿಮ್ಮುತ್ತಿದೆ ಎಂದ್ರೆ ಈ ಮರದೊಳಗೆ ಸಾಕಷ್ಟು ನೀರಿದೆ ಎಂದು ತಿಳಿದುಬರುತ್ತದೆ. ಆಂಧ್ರಪ್ರದೇಶದ ಅರಣ್ಯ ಪ್ರದೇಶದಲ್ಲಿ ನಡೆದ ಘಟನೆ ಪರಿಸರವಾದಿಗಳು ಮತ್ತು ಸ್ಥಳೀಯರಲ್ಲಿ ಕುತೂಹಲ ಮತ್ತು ಆತಂಕವನ್ನು ಹುಟ್ಟುಹಾಕಿದೆ.
ಈ ವಿದ್ಯಮಾನದ ಹಿಂದಿನ ಕಾರಣವು ಸ್ಪಷ್ಟವಾಗಿಲ್ಲ, ಇದು ಪರಿಸರ ಸಮತೋಲನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಮಾನವ ಚಟುವಟಿಕೆಗಳ ಪ್ರಭಾವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪರಿಸರವಾದಿಗಳು ಅಧಿಕಾರಿಗಳು ಘಟನೆಯನ್ನು ಕೂಲಂಕಷವಾಗಿ ತನಿಖೆ ಮಾಡಬೇಕು ಮತ್ತು ಪ್ರದೇಶದ ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಪಾಪಿಕೊಂಡಲು ರಾಷ್ಟ್ರೀಯ ಉದ್ಯಾನವನದಲ್ಲಿ, ವಿಶೇಷವಾಗಿ ಕಿಂಟುಕೂರು ಅರಣ್ಯದಲ್ಲಿ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಇಂಡಿಯನ್ ಲಾರೆನ್ ಅಥವಾ ನಲ್ಲ ಮಡ್ಡಿ ಎಂದೂ ಕರೆಯಲ್ಪಡುವ ಟರ್ಮಿನಾಲಿಯಾ ಎಲಿಪ್ಟಿಕಾ ಎಂಬ ಜಾತಿಯ ಮರದಿಂದ ಈ ನೀರು ಚಿಮ್ಮುತ್ತಿದೆ. ಈ ಮರಗಳು ಹೆಚ್ಚಾಗಿ ದಕ್ಷಿಣ ಏಷ್ಯಾ ಭಾಗದಲ್ಲಿ ಕಂಡುಬರುತ್ತವೆ. ಅಂದರೆ ನೇಪಾಳ, ಬಾಂಗ್ಲಾದೇಶ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳದಲ್ಲೂ ಈ ಜಾತಿ ಮರಗಳನ್ನು ನಾವು ಕಾಣಬಹುದು.
ಈ ಬೃಹತ್ ಮರಗಳು ತಮ್ಮೊಳಗೆ ಸುಮಾರು 20 ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂದು ಪರಿಸರ ತಜ್ಞರು ಅಂದಾಜಿಸಿದ್ದಾರೆ. ಆದರೆ ಈ ಮರಗಳ ಕುರಿತು ಎಲ್ಲಿಯೂ ಅಧ್ಯಯನಗಳು ಹೊರಬಿದ್ದಿಲ್ಲ. ಕಾರಣ ಈ ಮರಗಳ ಉಳಿಸುವುದಾಗಿದೆ. ಏಕೆಂದರೆ ಒಮ್ಮೆ ಈ ಮರಗಳ ಕುರಿತ ನಿಖರ ಅಧ್ಯಯನಗಳು ಹೊರಬಿದ್ದರೆ ಇವುಗಳ ರಕ್ಷಣೆ ಬಹುದೊಡ್ಡ ಸಮಸ್ಯೆಯಾಗಬಹುದು.
ಸಾಮಾನ್ಯವಾಗಿ ಈ ಮರಗಳು ನೀರನ್ನು ಹೆಚ್ಚು ಇಟ್ಟುಕೊಳ್ಳುವುದರಿಂದ ಸುಲಭವಾಗಿ ಇವುಗಳಿಗೆ ಬೆಂಕಿ ತಾಕುವುದಿಲ್ಲ. ಹೀಗಾಗಿ ಈ ಮರದಿಂದ ಪೀಠೋಪಕರಣಗಳು ಹಾಗೂ ಸಂಗೀತ ನುಡಿಸಲು ಬೇಕಾಗುವ ಸಲಕರಣೆಗಳ ಮಾಡಲಾಗುತ್ತದೆ. ಇನ್ನೊಂದು ಅಚ್ಚರಿ ಅಂದರೆ ಈ ಮರದ ಎಲೆಗಳು ರೇಷ್ಮೆ ಹುಳುಗಳ ಪ್ರಮುಖ ಆಹಾರವಾಗಿದೆ. ಈ ಎಲೆಗಳು ಸೇವಿಸುವ ರೇಷ್ಮೆ ಹುಳುಗಳು ದಪ್ಪನೆಯ ರೇಷ್ಮೆ ನೂಲುಗಳ ನೀಡಬಲ್ಲವು ಎನ್ನಲಾಗಿದೆ.
ಇವು ಹೇಗೆ ನೀರು ಸಂಗ್ರಹಿಸುತ್ತವೆ?
ಈ ಮರಗಳು ಇಷ್ಟೊಂದು ಪ್ರಮಾಣದ ನೀರು ಹೇಗೆ ಸಂಗ್ರಹಿಸುತ್ತಿವೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಈ ಜಾತಿಯ ಮರಗಳು ಎತ್ತರಕ್ಕೆ ಬೆಳೆಯುತ್ತವೆ. ಇನ್ನು ಚಿಕ್ಕ ಮರದಲ್ಲಿ ನೀರು ಇರುವುದಿಲ್ಲವಂತೆ. ಮರದ ತುದಿಯಲ್ಲಿ ಟೊಳ್ಳು ಕಾಣಿಸಿಕೊಳ್ಳುತ್ತದೆ. ಈ ಟೊಳ್ಳಿನ ಮೂಲಕ ನೀರು ಮರದೊಳಗೆ ಸೇರಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇಲ್ಲವೆ ಇವುಗಳ ಬೇರುಗಳ ಮೂಲಕ ನೀರು ಮರದೊಳಗೆ ಎಳೆದುಕೊಳ್ಳುವ ಶಕ್ತಿ ಆ ಮರಕ್ಕೆ ಇರಬಹುದು ಎಂಬ ವಾದವೂ ಇದೆ.
ಆದ್ರೆ ಈ ರೀತಿಯ ಮರಗಳನ್ನು ನಾಶ ಮಾಡದೆ ಅರಣ್ಯದ ವೈವಿದ್ಯತೆ ಹಾಗೂ ಜೀವ ಸಂಕುಲಗಳ ರಕ್ಷಣೆಗೆ ಇವುಗಳ ಸಂರಕ್ಷಿಸುವ ಕಾರ್ಯವಂತೂ ಜರೂರಾಗಿ ಮಾಡಬೇಕಿದೆ.



Click it and Unblock the Notifications