Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ವಾಚ್‌ಮೆನ್‌ಗೆ ಒಲಿದ ಅದೃಷ್ಟ ಲಕ್ಷ್ಮಿ: 2 ಕೋಟಿ ಲಾಟರಿ ಗೆದ್ದ 60 ವರ್ಷದ ರಾಚಮಲ್ಲಯ್ಯ
ಅದೃಷ್ಟಲಕ್ಷ್ಮಿ ಒಲಿದಳು ಅಂದ್ರೆ ಒಂದೇ ದಿನದಲ್ಲಿ ಲಕ್ಷಾಧಿಪತಿಗಳು, ಕೋಟ್ಯಾಧಿಪತಿಗಳಾಗಬಹುದು ಎಂಬ ಹಲವು ಉದಾಹರಣೆಗಳನ್ನು ನೋಡಿದ್ದೇವೆ. ಈಗ ಅಂಥದ್ದೇ ಅದೃಷ್ಟ ಹೈದರಾಬಾದ್ ಮೂಲದ ವ್ಯಕ್ತಿಗೆ ಒಲಿದಿದೆ. ಅದರಲ್ಲಿಯೂ ಅವರು ತಮ್ಮ 60ನೇ ವಯಸ್ಸಿನಲ್ಲಿ ಒಂದೇ ದಿನದಲ್ಲಿ ಶ್ರೀಮಂತ ವ್ಯಕ್ತಿಯಾಗಿ ಬಿಟ್ಟಿದ್ದಾರೆ.

ನಿವೃತ್ತಿ ವಯಸ್ಸಿನಲ್ಲಿ ಒಲಿದಳು ಅದೃಷ್ಟ ಲಕ್ಷ್ಮಿ
ಹೈದರಾಬಾದ್‌ನ ಈ ಅದೃಷ್ಟವಂತನ ಹೆಸರು ನಾಂಪಲ್ಲಿ ರಾಚಮಲ್ಲಯ್ಯ. ವಯಸ್ಸು 60 ವರ್ಷ. ಕಳೆದ 3 ದಶಕಗಳಿಂದ ಅಬುದಾಬಿಯಲ್ಲಿ ವಾಚ್‌ಮೆನ್ ಮೆನ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರು ಅಪರೂಪಕ್ಕೆ ಲಾಟರಿ ಖರೀದಿಸುತ್ತಿದ್ದರು. ಆದರೆ ಈ ಬಾರಿಯ ಲಾಟರಿ ಅವರ ಕೈ ಹಿಡಿದಿದೆ. ಅವರೀಗ ಮಿಲಿನಿಯರ್ ಆಗಿದ್ದಾರೆ. ಇವರಿಗೆ ಸುಮಾರು ಎರಡು ಕೋಟಿ ರುಪಾಯಿ ಲಾಟರಿ ಹೊಡೆದಿದೆ. ಪಾಪ ಇದರಿಂದಾಗಿ ಅವರ ಅದೃಷ್ಟವೇ ಬದಲಾಗಿದೆ. ಇಷ್ಟು ವರ್ಷ ಕುಟುಂಬದಿಂದ ದೂರವಿದ್ದು ದುಡಿಯುತ್ತಿದ್ದರು, ಈಗ ಲಾಟರಿ ಹೊಡೆದಿರುವುದರಿಂದ ಅವರ ಆರ್ಥಿಕ ಸ್ಥಿತಿಯೇ ಬದಲಾಗಿದೆ.
ಇತ್ತೀಚೆಗೆ ಮಂಡ್ಯದ ಮೆಕ್ಯಾನಿಕ್‌ಗೆ ಬರೋಬರಿ 25 ಕೋಟಿ ಲಾಟಿ ಹೊಡೆದಿತ್ತು. ಈ ಬಾರಿ ಓಣಂ ಬಂಪರ್ ಅವರ ಪಾಲಿಗೆ ಒಲಿದಿತ್ತು, ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗುವ ಮೂಲಕ ತುಂಬಾನೇ ಸುದ್ದಿ ಮಾಡಿದರು. ಮಂಡ್ಯದ ಅಲ್ತಾಫ್ ಕೇರಳಕ್ಕೆ ಹೋದಾಗ ಲಾಟರಿ ಖರೀದಿ ಮಾಡಿ ಬಂದಿದ್ದರು ಆದರೆ ಅವರ ಅದೃಷ್ಟ ಮಾತ್ರ ತುಂಬಾ ಚೆನ್ನಾಗಿತ್ತು, ಆ 25 ಕೋಟಿ ಲಾಟರಿ ಇವರಿಗೆ ಒಲಿದಿತ್ತು. ಅವರು ಲಾಟರಿ ಹಣದಲ್ಲಿ ಮಕ್ಕಳ ಮದುವೆ ಮಾಡುವುದಾಗಿ , ಮನೆ ಕಟ್ಟುವುದಾಗಿ ಸ್ವಲ್ಪ ಹಣವನ್ನು ಅಗ್ಯತವಿರುವವರೆಗೆ ದಾನ ಮಾಡುವುದಾಗಿ ಹೇಳಿದ್ದರು. ಕೇರಳದ ಒಂದು ಲಾಟರಿ ಅಲ್ತಾಫ್ ಬದುಕನ್ನೇ ಬದಲಾಯಿಸಿತು, ಮೆಕ್ಯಾನಿಕ್ ವೃತ್ತಿಯಿಂದ ಜೀವನ ನಡೆಸುತ್ತಿದ್ದ ಅಲ್ತಾಫ್ ಈಗ ಕೋಟ್ಯಾಧಿಪತಿ.
ಲಾಟರಿ ಕರ್ನಾಟಕದಲ್ಲಿ ಬ್ಯಾನ್ ಮಾಡಲಾಗಿದೆ
ಕರ್ನಾಟಕದಲ್ಲಿ ಲಾಟರಿ ನಿಷೇಧಿಸಲಾಗಿದೆ, ಎಷ್ಟೋ ಕುಟುಂಬಗಳು ಲಾಟರಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ದುಡಿದ ಹಣವನ್ನು ಲಾಟರಿ ಖರೀದಿಗೆ ಖರ್ಚು ಮಾಡಿ ಮನೆಯಲ್ಲಿ ಹೆಂಡತಿ ಮಕ್ಕಳು ಊಟಕ್ಕೂ ಪರಿದಾಡುವಂತೆ ಮಾಡುತ್ತಿದೆ. ಈ ಕಾರಣದಿಂದಲೇ ಲಾಟರಿಯನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ.



Click it and Unblock the Notifications
