Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೋಡಕ್ಕೆ ಮುತ್ತಿಕ್ಕುವ ಆಸೆ ನಿಮಗಿದ್ದರೆ ಕುಂದಾದ್ರಿಗೆ ಬರಲೇಬೇಕು..!!
ಮಲೆನಾಡಲ್ಲಿ ಪ್ರತಿ 10 ಕಿ ಮೀಟರ್‌ಗೆ ಒಂದರಂತೆ ಪ್ರವಾಸಿ ತಾಣಗಳಿವೆ, ಅದ್ರಲ್ಲೂ ಪ್ರಕೃತಿಯಲ್ಲಿ ಹಸಿರನ್ನೇ ಹೊದ್ದು ಮಲಗಿದಂತಹ ಹತ್ತಾರು ಪ್ರಾಕೃತಿಕ ಶ್ರೀಮಂತ ಸ್ಥಳಗಳಿವೆ. ಅದ್ರಲ್ಲೂ ಈ ಮೋಡಗಳ ಮರೆಯಲ್ಲಿ ಆಕಾಶಕ್ಕೆ ಮುತ್ತಿಡುವಷ್ಟು ಎತ್ತರದಲ್ಲಿರುವ ಕುಂದಾದ್ರಿ ಸೌಂದರ್ಯ ರಾಶಿಯನ್ನೇ ತನ್ನಲ್ಲಿಟ್ಟುಕೊಂಡಿದೆ. ಸಮುದ್ರ ಮಟ್ಟದಿಂದ 1343 ಅಡಿ ಎತ್ತರದಲ್ಲಿರುವ ಕುಂದಾದ್ರಿ ಮಳೆಗಾಲದಲ್ಲಿ ಭೂಮಿ ಮೇಲಿನ ಸ್ವರ್ಗವೇ.
ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳೆಯಬೇಕು. ಪ್ರವಾಸ ಕೈಗೊಳ್ಳಬೇಕು ಎಂಬ ಆಸೆ ಎಲ್ಲರಿಗೂ ಇರುತ್ತೆ. ಆದ್ರೆ ಯಾವ ಪ್ರದೇಶಕ್ಕೆ ಹೋಗಬೇಕು? ಎಲ್ಲಿ ನೆಮ್ಮದಿ ನೀಡುತ್ತೆ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಆದ್ರೆ ಈ ಶಿವಮೊಗ್ಗದ ತೀರ್ಥಹಳ್ಳಿಯಿಂದ 20 ಕಿ,ಮೀ ದೂರದಲ್ಲಿರುವ ಒಂದು ಸುಂದರ ಪ್ರಕೃತಿಯ ಮಡಿಲು. ಮೋಡಗಳು ಕಾಲಿನ ಅಡಿಯಲ್ಲೇ ಹೋಗುತ್ತೆ ಅನ್ನೋ ಭಾವನೆ ಬರುತ್ತೆ, ಯಾಕಂದ್ರೆ ಅಷ್ಟೊಂದು ಎತ್ತರದಲ್ಲಿದೆ ಈ ಬೆಟ್ಟ.

ನೀವು ಈ ಬೆಟ್ಟದ ಬಗ್ಗೆ ಹೆಚ್ಚು ತಿಳಿದಿಲ್ಲದೇ ಇರಬಹುದು. ಯಾಕಂದ್ರೆ ಇದು ಮಾನವರ ಹಸ್ತಕ್ಷೇಪದಿಂದ ದೂರವೇ ಉಳಿದಿರುವ ಒಂದೇ ಒಂದು ಪ್ರವಾಸಿ ಸ್ಥಳವಾಗಿದೆ ಅಂದರೂ ತಪ್ಪಾಗಲಾರದು. ಏಕೆಂದರೆ ಈ ಬೆಟ್ಟ ಸಣ್ಣ ಹಳ್ಳಿಯಿಂದ ಹಾದು ಕಾಡು ದಾರಿಯಲ್ಲಿ ಸಾಗಬೇಕಿದೆ. ಹೀಗಾಗಿ ಮಾನವರಿಂದ ದೂರ ಉಳಿದುಬಿಟ್ಟಿದೆ.
ಕುಂದಾದ್ರಿ ಎಂಬ ಹೆಸರು ಬಂದಿದ್ದು ಹೇಗೆ?
ಈ ಬೆಟ್ಟವು ಪ್ರಾಚೀನ ಜೈನ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಕುಂದಾದ್ರಿ ಬೆಟ್ಟವು ಹಚ್ಚ ಹಸಿರಿನಿಂದ ಆವ್ರತವಾಗಿದೆ. ಈ ಬೆಟ್ಟ ಸೂರ್ಯಾಸ್ತ ಹಾಗೂ ಸೂರ್ಯೋದಯ ವೀಕ್ಷಿಸಲು ಹೇಳಿ ಮಾಡಿಸಿದ ಜಾಗ. ಬೆಟ್ಟಿದ ಮೇಲಿರುವ ದೇವಾಲಯಕ್ಕೂ ಬರುವುದು ಬೆರಳೆಣಿಕೆಯ ಜನರಷ್ಟೇ. ಹೀಗಾಗಿ ಈ ತಾಣ ಉಳಿದ ಪ್ರವಾಸಿ ತಾಣಗಳಂತೆ ಜನರಿಂದ ಕಿಕ್ಕಿರಿದು ನಿಮ್ಮ ಶಾಂತಿ ಹಾಳು ಮಾಡುವುದಿಲ್ಲ. ಅಚ್ಚರಿ ಎಂದರೆ ಒಮ್ಮೊಮ್ಮೆ ನೀವು ಒಬ್ಬರೇ ಈ ಪ್ರವಾಸಿ ತಾಣದ ಪ್ರವಾಸಿಗರಾಗಿ ಉಳಿಯಬಹುದು.
ಪಾರ್ಶ್ವನಾಥ ಸ್ವಾಮಿಯ ಬಸದಿ ಇದು. ಈ ಜೈನ ಮಂದಿರಕ್ಕೆ ಸುಮಾರು ಮೂರು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಈ ಬೆಟ್ಟದಲ್ಲಿ ಎರಡು ಪವಿತ್ರ ಕೊಳಗಳು ಕೂಡಾ ಇವೆ. ಬೇಸಿಗೆಯಲ್ಲೂ ಇದರಲ್ಲಿ ನೀರು ಇರಲಿದೆ. ಹೀಗಾಗಿ, ಪ್ರವಾಸಿತಾಣವಾಗಿಯೂ, ಯಾತ್ರಾ ಕೇತ್ರವಾಗಿಯೂ ಈ ಬೆಟ್ಟ ಮಹತ್ವವನ್ನು ಪಡೆದಿದೆ.
ಕುಂದಾದ್ರಿಯ ದಂತಕಥೆ
ಪುರಾಣದ ಪ್ರಕಾರ, ಕುಂದಕುಂದಾಚಾರ್ಯ ಎಂಬ ಜೈನ ಮುನಿಯಿಂದಾಗಿ ಕುಂದಾದ್ರಿ ಎಂಬ ಹೆಸರು ಬಂದಿದೆ. ಈ ಬೆಟ್ಟದಲ್ಲಿ ಅವರು ಮಹಾ ತಪಸ್ಸು ಮಾಡಿದರು ಎಂದು ಹೇಳಲಾಗುತ್ತದೆ. ಹಾಗಾಗಿ, ಗಿರಿಧಾಮವನ್ನು ಜೈನರ ಪವಿತ್ರ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಜೈನ ದೇವಾಲಯವನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಪಾರ್ಶ್ವನಾಥನನ್ನು ದೇವಾಲಯದ ಮುಖ್ಯ ದೇವತೆಯಾಗಿ ಪೂಜಿಸಲಾಗುತ್ತದೆ. ಈ ದೇವಾಲಯವು ಜೈನ ಪುರಾಣಕ್ಕೆ ಸಂಬಂಧಿಸಿದ ಹಲವಾರು ಪ್ರತಿಮೆಗಳನ್ನು ಸಹ ಒಳಗೊಂಡಿದೆ.
ಒಂದು ದಿನದ ಚಾರಣ ಮಾಡುವ ಹವ್ಯಾಸ ಇಟ್ಟುಕೊಂಡಿರುವವರು ಈ ಪ್ರವಾಸಿ ತಾಣಕ್ಕೆ ಒಮ್ಮೆಯಾದರೂ ಭೇಟಿ ನೀಡಲೇಬೇಕಿದೆ. ಈ ಬೆಟ್ಟಕ್ಕೆ ನೀವು ಸ್ವಂತ ವಾಹನ ತೆಗೆದುಕೊಂಡು ಹೋಗಬಹುದು. ಆದರೆ ಬೆಟ್ಟದ ರಸ್ತೆಯಲ್ಲಿ ವಾಹನ ಚಾಲನೆ ಕಷ್ಟಕರವೂ ಹೌದು. ಇನ್ನು ಬೆಟ್ಟದ ಮೇಲೆ ಯಾವುದೇ ಊಟ, ತಿಂಡಿ ಯಾವುದೇ ವಸ್ತು ಸಿಗುವುದಿಲ್ಲ. ಜೊತೆಗೆ ಪ್ರವಾಸಿ ಸ್ಥಳ ಎಂದ ಮಾತ್ರಕ್ಕೆ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ, ಹೋಟೆಲ್ ಇದೇ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪಾಗಲಿದೆ. ಇಲ್ಲಿ ಆ ರೀತಿಯ ವ್ಯವಸ್ಥೆಗಳಿಲ್ಲ. ಈ ಸ್ಥಳಕ್ಕೆ ವರ್ಷದ ಯಾವುದೇ ಕಾಲದಲ್ಲೂ ತೆರಳಬಹುದು. ಆದ್ರೆ ಮಳೆಗಾಲದ ಹಾಗೂ ಚಳಿಗಾಲದ ದಿನದಲ್ಲಿ ಈ ಬೆಟ್ಟ ಹಚ್ಚ ಹಸಿರಾಗಿ ಕಾಣಿಸುತ್ತೆ, ಮನಸ್ಸಿಗೂ ಮುದ ನೀಡುತ್ತೆ.



Click it and Unblock the Notifications



