Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಡಿಸೆಂಬರ್ 6ಕ್ಕೆ ವಿವಾಹ ಪಂಚಮಿ: ಮದುವೆಯಲ್ಲಿ ಅಡೆತಡೆಯಿದ್ದರೆ, ದಾಂಪತ್ಯದಲ್ಲಿ ಸಮಸ್ಯೆಯಿದ್ದರೆ ಈ ದಿನ ಮಾಡಬೇಕಾದ ಪರಿಹಾರವೇನು?
ಡಿಸೆಂಬರ್ 6ಕ್ಕೆ ವಿವಾಹ ಪಂಚಮಿ, ಮಾರ್ಗಶಿರ ಮಾಸದ ಶುಕ್ಲ ಪಕ್ಷದಲ್ಲಿ ವಿವಾಹ ಪಂಚಮಿ ಆಚರಿಸಲಾಗುವುದು. ವಿವಾಹ ಪಂಚಮಿಯಂದು ಶ್ರೀರಾಮ ಮತ್ತು ಸೀತೆ ಮದುವೆಯಾದರು ಎಂದು ಪೌರಾಣಿಕ ಕತೆಯಲ್ಲಿ ಹೇಳಲಾಗಿದೆ. ವಿವಾಹ ಪಂಚಮಿಯಂದು ಕೆಲವೊಂದು ಪರಿಹಾರ ಮಾಡಿದರೆ ಮದುವೆಯಲ್ಲಿದ್ದ ಅಡೆತಡೆಗಳು ದೂರಾಗಿ ವೈವಾಹಿಕ ಬದುಕಿಗೆ ಕಾಲಿಡುತ್ತಾರೆ ಎಂದು ಹೇಳಲಾಗುವುದು.

ವಿವಾಹ ಪಂಚಮಿ ತಿಥಿ
ಡಿಸೆಂಬರ್ 5 ಮಧ್ಯರಾತ್ರಿ 12:49ಕ್ಕೆ ಪ್ರಾರಂಭವಾಗಿ ಡಿಸೆಂಬರ್ 6 ರಾತ್ರಿ 12:07ಕ್ಕೆ ಮುಕ್ತಾಯವಾಗಲಿದೆ, ವಿವಾಹ ಪಂಚಮಿಯನ್ನು ಉದಯ ತಿಥಿ ಪ್ರಕಾರ ಡಿಸೆಂಬರ್ 6ರಂದು ಆಚರಿಸಲಾಗುವುದು.
ವಿವಾಹ ಪಂಚಮಿಯಂದು ಮದುವೆಯಾಗದವರು ಈ ಪರಿಹಾರ ಮಾಡಿದರೆ ಕಂಕಣ ಭಾಗ್ಯ ಕೂಡಿ ಬರುವುದು
ವಿವಾಹ ಪಂಚಮಿಯಂದು ಅವಾಹಿತರು ಶ್ರೀರಾಮ ಮತ್ತು ಸೀತೆಯನ್ನು ಆರಾಧನೆ ಮಾಡುವುದರಿಂದ ಮದುವೆಗೆ ಇದ್ದ ಅಡೆತಡೆಗಳು ದೂರಾಗುವುದು. ಜಾತಕದಲ್ಲಿ ಏನಾದರು ದೋಷವಿದ್ದರೆ ಅದು ದೂರಾಗಿ ಒಳ್ಳೆಯ ಸಂಗಾತಿ ದೊರೆಯುವುದು ಎಂದು ನಂಬಲಾಗಿದೆ. ಈ ದಿನ ಜಾನಕಿ ಮಂಗಲ ಪಠಣೆ ಮಾಡಿದರೆ ಮದುವೆ ಸಂಬಂಧ ಬೇಗನೆ ಕೂಡಿ ಬರಲಿದೆ.
ವೈವಾಹಿಕ ಜೀವನದಲ್ಲಿ ಸಮಸ್ಯೆಯಿದ್ದರೆ
ವೈವಾಹಿಕ ಜೀವನದಲ್ಲಿ ಏನಾದರು ಭಿನ್ನಾಭಿಪ್ರಾಯವಿದ್ದರೆ, ಸಮಸ್ಯೆಯಿದ್ದರೆ ವಿವಾಹ ಪಂಚಮಿ ಆಚರಣೆ ಮಾಡುವುದರಿಂದ ಈ ಸಮಸ್ಯೆಗಳು ಬಗೆಹರಿಯಲಿದೆ ಎಂದು ಹೇಳಲಾಗುವುದು. ಪಾರ್ವತಿ ದೇವಿಗೆ ಅಲಂಕಾರ ಮಾಡಿ ಆರಾಧನೆ ಮಾಡುವುದರಿಂದ ವೈವಾಹಿಕ ಬದುಕಿನಲ್ಲಿನ ಸಮಸ್ಯೆ ದೂರಾಗುವುದು ಎಂದು ಹೇಳಲಾಗುವುದು.
ಈ ದಿನದಿಂದ 11 ದಿನದವರೆಗೆ ಶ್ರೀ ರಾಮ ಚರಿತ 108 ಪಠಿಸಬೇಕು.
ಓಂ ಜಾನಕಿವಲ್ಲಭಾಯೇ ನಮಃ"
ವಿವಾಹ ಪಂಚಮಿಯನ್ನು ಹೇಗೆ ಆಚರಿಸಲಾಗುವುದು
- ಈ ದಿನ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಬೇಕು
- ನಂತರ ಸೂರ್ಯನಿಗೆ ನಮಸ್ಕಾರ ಮಾಡಬೇಕು
- ಶ್ರೀರಾಮ ಮತ್ತು ಸೀತೆಯ ವಿಗ್ರಹವನ್ನು ಅಲಂಕರಿಸಿ. ಕೆಂಪು ವಸ್ತ್ರ, ಹಣ್ಣು,ಹೂವು, ಧೂಪ ಇವುಗಳನ್ನು ಅರ್ಪಿಸಬೇಕು.
- ಈ ದಿನ ದೀಪವನ್ನು ಹಚ್ಚಿದ ಬಳಿಕ ಶ್ರೀರಾಮಯಣ ಓದಬೇಕು.
- ಈ ದಿನ ಉಪವಾಸವಿದ್ದು ಶ್ರೀರಾಮ ಹಾಗೂ ಸೀತೆಗೆ ಪೂಜೆಯನ್ನು ಮಾಡುವುದು ವಿವಾಹ ಸಂಬಂಧಿತ ಎಲ್ಲಾ ಅಡೆತಡೆ ದೂರಾಗಲಿದೆ.
ಈ ದಿನ ಮದುವೆಯಾಗಬಾರದು?
ವಿವಾಹ ಪಂಚಮಿಯಂದು ಮದುವೆಯಾಗಲು ಪರಿಹಾರ ಮಾಡಬಹುದು, ಆದರೆ ಈ ದಿನ ಮದುವೆಯಾಗಬಾರದು.ಈ ದಿನ ಮದುವೆಯಾದರೆ ವೈವಾಹಿಕ ಬದುಕಿನಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತದೆ ಎಂಬ ನಂಬಿಕೆ, ಹಾಗಾಗಿ ವಿವಾಹ ಪಂಚಮಿಯಂದು ಮದುವೆಯಾಗುವುದಿಲ್ಲ.
ಸೀತೆ ಮಾತೆಗೆ ತಪ್ಪಿರಲಿಲ್ಲ ಕಷ್ಟ
ಸೀತೆಗೆ ಶ್ರೀರಾಮನಂಥ ಪತಿ ಸಿಕ್ಕರೂ ಕಷ್ಟ ತಪ್ಪಲಿಲ್ಲ, ಅರಣ್ಯ ವಾಸ ಮಾಡಬೇಕಾಗಿ ಬಂತು, ನಂತರ ರಾವಣ ಅಪಹರಿಸಿದ, ಅಲ್ಲಿಂದ ಶ್ರೀರಾಮ ಸೀತೆಯನ್ನು ರಕ್ಷಣೆ ಮಾಡಿ ಬಂದ ಮೇಲೂ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗಲಿಲ್ಲ, ಅಪವಾದ ಎದುರಿಸಬೇಕಾಗಿ ಬಂತು, ಅಗ್ನಿ ಪರೀಕ್ಷೆಗೆ ಒಳಗಾದಳು ಹೀಗೆ ಸೀತೆ ವೈವಾಹಿಕ ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಿದಳು, ಹಾಗಾಗಿ ವಿವಾಹ ಪಂಚಮಿಯಂದು ಮದುವೆ ಮಾಡುವುದಿಲ್ಲ.
ಅಯೋಧ್ಯೆ ರಾಮ ಮಂದಿರದಲ್ಲಿ ನಡೆಯಲಿದೆ ವಿಶೇಷ ಪೂಜೆ
ಇದೀಗ ಶ್ರೀರಾಮ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ, ಈ ದಿನದಂದು ಶ್ರೀರಾಮ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ಅಧಿಕವಿರಲಿದೆ.



Click it and Unblock the Notifications
