Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವೃಂದಾವನ್ ಧಾಮದ ಪ್ರೇಮಾನಂದ ಬಾಬಾರ ಭೇಟಿಯಾದ ವಿರಾಟ್..! ಈ ಬಾಬಾ ಯಾರು ಗೊತ್ತಾ?
ಕ್ರೀಡಾ ಲೋಕದಲ್ಲಿ ಹೆಸರು ಮಾಡಿದವರ ಪೈಕಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಗ್ರಗಣ್ಯ ವ್ಯಕ್ತಿ. ಇಡೀ ವಿಶ್ವದಲ್ಲೇ ಅಭಿಮಾನಿಗಳ ಪಡೆದಿರುವ ಕ್ರೀಡಾಪಟು ಅವರಾಗಿದ್ದಾರೆ. ಕ್ರಿಕೆಟ್ ಕಂಡ ಕೆಲವೇ ದಿಗ್ಗಜರ ಸಾಲಿನಲ್ಲಿ ಈಗ ವಿರಾಟ್ ಕೊಹ್ಲಿಯ ಹೆಸರು ಕೂಡ ಇದೆ. ಯಾರು ಮಾಡಲಾಗದ ಕೆಲವು ದಾಖಲೆಗಳು ಅವರ ಹೆಸರಿನಲ್ಲಿವೆ, ಹಾಗೆ ವಿಶ್ವದಲ್ಲೇ ಅತೀ ಹೆಚ್ಚು ಮಂದಿ ಫಾಲೋವರ್ಸ್ ಪಡೆದಿರುವ ಕ್ರೀಡಾಪಟುಗಳ ಸಾಲಿನಲ್ಲೂ ವಿರಾಟ್ ಹೆಸರು ಮೂಡಿದೆ.
ಇತ್ತೀಚಿಗೆ ಆಸ್ಟ್ರೇಲಿಯಾ ತಂಡ ನಡುವಿನ ಟೆಸ್ಟ್ ಸರಣಿ ಮುಗಿಸಿರುವ ಅವರು ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಅವರು ತಮ್ಮ ಕುಟುಂಬದ ಜೊತೆಗಾಗಿ ಬಾಬಾವೊಬ್ಬರ ಆಸ್ಥಾನಕ್ಕೆ ಭೇಟಿ ನೀಡಿರುವುದು ಬಹಳ ಸುದ್ದಿಯಾಗುತ್ತಿದೆ. ಪತ್ನಿ ಅನುಷ್ಕಾ ಶರ್ಮಾ ಹಾಗೂ ಇಬ್ಬರು ಮಕ್ಕಳ ಜೊತೆಗೆ ಅವರು ಬಾಬಾ ಅವರ ಸನ್ನಿಧಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿರುವ ವೃಂದಾವನ್ ಧಾಮ್‌ಗೆ ಅವರು ಕುಟುಂಬಸ್ಥರ ಜೊತೆಗೆ ಪ್ರಯಾಣ ಬೆಳೆಸಿದರು. ಅಲ್ಲಿ ಆಧ್ಯಾತ್ಮ ಗುರು ಪ್ರೇಮಾನಂದ್ ಮಹಾರಾಜ್ ಅವರ ಭೇಟಿಯಾಗಿದ್ದಾರೆ. ವಿರಾಟ್ ಕೊಹ್ಲಿ ಈ ಬಾಬಾ ಅವರನ್ನು ಹಲವು ವರ್ಷದಿಂದಲೂ ಅನುಸರಿಸುತ್ತಿದ್ದಾರೆ. ಆದ್ರೆ 2013ರಲ್ಲಿ ಮೊದಲ ಬಾರಿಗೆ ಅವರನ್ನು ಭೇಟಿಯಾಗಿದ್ದರು.
ಯಾರು ಈ ಪ್ರೇಮಾನಂದ್ ಮಹಾರಾಜ್?
ವೃಂದಾವನದ ಪ್ರೇಮಾನಂದ ಜಿ ಮಹಾರಾಜ್ ತಮ್ಮ ಆಧ್ಯಾತ್ಮಕ ಚಿಂತನೆಗಳು, ಪ್ರವಚನಗಳಿಂದ ಬಹಳ ಪ್ರಸಿದ್ಧಿ ಪಡೆದ ಬಾಬಾ ಆಗಿದ್ದಾರೆ. ಹಣೆಯ ಮೇಲೆ ಅರಶಿಣ ಹಚ್ಚಿಕೊಂಡು ಕಾಣಿಸಿಕೊಳ್ಳುವ ಅವರ ಪ್ರವಚನ ಕೇಳಲು ದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುವುದು ಅಲ್ಲದೆ ವಿದೇಶದಿಂದಲೂ ಜನರು ಬರುತ್ತಾರೆ. ಅವರು ಸತ್ಸಂಗಕ್ಕೆ ಬಹಳ ಹೆಸರುವಾಸಿಯಾಗಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಅವರು ಮನೆ ಬಿಟ್ಟು ವೃಂದಾವನ ಸೇರಿದರು ಎನ್ನಲಾಗಿದೆ. ಶಿವನು ಅವರ ಕನಸಿನಲ್ಲಿ ಬಂದು ಜನರ ಒಳಿತಿಗಾಗಿ, ಮುಕ್ತಿ ದಾರಿ ಪ್ರಾಪ್ತಿಗಾಗಿ ಕೆಲಸ ಮಾಡುವಂತೆ ಹರಸಿದನು ಎಂದು ಒಮ್ಮೆ ಅವರೇ ಹೇಳಿಕೊಂಡಿದ್ದರು.
ಪ್ರೇಮಾನಂದ ಜಿ ಮಹಾರಾಜ್ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಪ್ರೇಮಾನಂದ ಅವರ ಬಾಲ್ಯದ ಹೆಸರು ಅನಿರುದ್ಧ್ ಕುಮಾರ್ ಪಾಂಡೆ ಎಂಬುದಾಗಿತ್ತು. ಅವರ ತಂದೆಯ ಹೆಸರು ಶ್ರೀ ಶಂಭು ಪಾಂಡೆ ಮತ್ತು ತಾಯಿಯ ಹೆಸರು ರಮಾ ದೇವಿ. ಪ್ರೇಮಾನಂದ್ ಮಹಾರಾಜ್ 5 ನೇ ತರಗತಿಯಲ್ಲಿದ್ದಾಗ ಅವರು ಭಗವದ್ಗೀತೆಯನ್ನು ಓದಲು ಆರಂಭಿಸಿದ್ದರಂತೆ.
ಕ್ರಮೇಣ ಗೀತೆ ಅವರ ಮೇಲೆ ಪ್ರಭಾವ ಬೀರಲು ಆರಂಭಿಸಿತ್ತು. ನಿತ್ಯ ಗೀತೆ ಪಠಣದಲ್ಲಿ ಅವರು ತೊಡಗುವುದರಿಂದ ಇಡೀ ಮನೆಯಲ್ಲಿ ಆಧ್ಯಾತ್ಮಿಕ ಭಾವದಿಂದ ಮುಳುಗಿರುತ್ತಿತ್ತು. ತಮ್ಮ 13ನೇ ವಯಸ್ಸಿನಲ್ಲಿ ಅವರು ಸನ್ಯಾಸಿ ಆಗಬೇಕೆಂದು ನಿರ್ಧರಸಿ ಮನೆ ಬಿಟ್ಟರಂತೆ.
ಪ್ರೇಮಾನಂದ ಮಹಾರಾಜ್ ಸನ್ಯಾಸಿಯಾಗಲು ಮನೆ ತೊರೆದು ವಾರಣಾಸಿಗೆ ಬಂದು ತಮ್ಮ ಜೀವನವನ್ನು ನಡೆಸಲು ಮುಂದಾದರು. ದಿನಕ್ಕೆ ಮೂರು ಬಾರಿ ಗಂಗಾ ಸ್ನಾನ ಮಾಡುವುದು ಅವರ ನಿತ್ಯದ ಕಾರ್ಯವಾಗಿತ್ತು. ತುಳಸಿ ಘಾಟ್‌ನಲ್ಲಿ ಶಿವ ಮತ್ತು ಗಂಗಾ ಮಾತೆ ಕುರಿತು ಧ್ಯಾನ ಮತ್ತು ಪೂಜಿಸುತ್ತಿದ್ದರು. ದಿನಕ್ಕೆ ಒಮ್ಮೆ ಮಾತ್ರ ಊಟ ಮಾಡುತ್ತಿದ್ದರು. ಆಹಾರ ಸಿಕ್ಕರೆ ಮಾತ್ರ ಊಟ ಇಲ್ಲದಿದ್ದರೆ ಗಂಗಾ ಜಲವನ್ನೇ ಕುಡಿದು ಇಡೀ ದಿನ ಇರುತ್ತಿದ್ದರಂತೆ. ಇದು ಅವರಿಗೆ ಅಭ್ಯಾಸವಾಗಿತ್ತಂತೆ.



Click it and Unblock the Notifications
