Latest Updates
-
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ?
78 ವರ್ಷವಾಯ್ತು ಸ್ವಾತಂತ್ರ್ಯ ಸಿಕ್ಕಿ, ಆದರೂ ಬದಲಾಗಿಲ್ಲ ಈ ಕಟು ವಾಸ್ತವ
ನಾವು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಿದ್ದೇವೆ, ಆಗಸ್ಟ್ 16ಕ್ಕೆ ನಮ್ಮ ಹೆಮ್ಮೆಯ ಇಸ್ರೋ ಇಒಎಸ್-08 ಉಪಗ್ರಹ ಉಡಾವಣೆ ಮಾಡಿದೆ, ಚಂದ್ರನತ್ತ ಉಪಗ್ರಹ ಕಳಿಸಿದ್ದೇವೆ, ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರ ಹೆಸರುಗಳೇ ಹೆಚ್ಚು ಕೇಳಿ ಬರುತ್ತದೆ, ಭಾರತ ವಿಶ್ವದ ಮುಂದೆ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಇದೆಲ್ಲಾ ಸಂತೋಷದ ವಿಷಯವಾದರೂ ನಮ್ಮ ಭಾರತದಲ್ಲಿ ಇನ್ನೂ ಹಲವು ವಿಷಯಗಳು ಬದಲಾಗಬೇಕಾಗಿದೆ, ಅದಕ್ಕೆ ಸರ್ಕಾರ ಮಾತ್ರ ಪ್ರಯತ್ನ ಪಟ್ಟರೆ ಸಾಲದು ಪ್ರತಿಯೊಬ್ಬ ನಾಗರಿಕನೂ ಶ್ರಮಿಸಬೇಕು, ಆವಾಗ ನಮ್ಮ ಈ ಭಾರತ ಮತ್ತಷ್ಟು ಸುಂದರವಾಗುವುದು.

ಸ್ವಾತಂತ್ರ್ಯ ದಿನಾಚರಣೆಯ ಕುರಿತ ಹಲವು ವೀಡಿಯೋಗಳಿವೆ ಆದರೆ ಒಂದು ಜಾಹೀರಾತು ತುಂಬಾನೇ ಗಮನ ಸೆಳೆದಿದೆ, ಈ ಜಾಹೀರಾತಿನಲ್ಲಿ ಸ್ವತಂತ್ರದಲ್ಲಿ ಏನೆಲ್ಲಾ ಬದಲಾಗಬೇಕು, ನಾವು ನಾಗರಿಕರು ನಮ್ಮಲ್ಲಿ ಯಾವ ಬದಲಾವಣೆ ಮಾಡಿದರೆ ಈ ಸ್ವಾತಂತ್ರ್ಯ ಭಾರತದಲ್ಲಿ ಪ್ರತಿಯೊಬ್ಬರ ಬದುಕು ಇನ್ನಷ್ಟು ಸುಂದರವಾಗುವುದು, ಆ ವೀಡಿಯೋ ನೋಡಿ ಎಷ್ಟೊಂದು ಅರ್ಥಪೂರ್ಣವಾಗಿದೆ ನೋಡಿ:
ರಸ್ತೆ ಬದಿಯಲ್ಲಿ ಮೂತ್ರ ಮಾಡುತ್ತಿರುವ ವ್ಯಕ್ತಿ
ಇದನ್ನು ಜನರೇ ಬದಲಾಯಿಸಬೇಕಾಗಿದೆ, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ, ಸ್ವಚ್ಚಭಾರತದ ಅಭಿಯಾನದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳಿವೆ, ಆದರೂ ಜನರು ರಸ್ತೆ ಬದಿಯಲ್ಲಿ , ಗೋಡೆಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ.
ಹೆಣ್ಮಕ್ಕಳ ಮೇಲೆ ನಿಲ್ಲುತ್ತಿಲ್ಲ ಅತ್ಯಾಚಾರ
ಹೌದು ಗಾಂಧೀಜಿಯವರು ಹೇಳಿದ್ದರು ಯಾವಾಗ ಹೆಣ್ಮಕ್ಕಳು ನಡುರಾತ್ರಿಯಲ್ಲಿ ಭಯವಿಲ್ಲದೆ ಒಡಾಡುತ್ತಾಳೋ ಆವಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಿರುವುದು, ಆದರೆ ಇಂದಿಗೂ ಹೆಣ್ಮಕ್ಕಳು ಒಂಟಿಯಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಕೋಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯನ್ನು ರೇಪ್ ಮಾಡಿ ಕೊಲೆ ಮಾಡಿರುವ ಘಟನೆ ದೇಶದ ಗಮನ ಸೆಳೆದಿದೆ.
2022ರ ಪೊಲೀಸ್ ದಾಖಲೆ ಪ್ರಕಾರ ಪ್ರತಿವರ್ಷ 31,000 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ, ಇನ್ನು ದಾಖಲಾಗದಿರುವ ಕೇಸ್‌ಗಳೆಷ್ಟೋ.
ಬಾಲ ಕಾರ್ಮಿಕರು
14 ವರ್ಷದ ಕೆಳಗಡೆ ಮಕ್ಕಳನ್ನು ದುಡಿಸಬಾರದು ಎಂದು ಹೇಳುತ್ತಾರೆ, ಆದರೆ ಎಷ್ಟೋ ಮಕ್ಕಳಿಗೆ ದುಡಿಯಲೇಬೇಕಾದ ಅನಿವಾರ್ಯತೆ, ದುಡಿಯದಿದ್ದರೆ ಹೊಟ್ಟೆ ತುಂಬಲ್ಲ, ಮನೆಯ ಪರಿಸ್ಥಿತಿ ಹಾಗಿರುತ್ತದೆ. ಕೆಲಸ ಮಾಡಲೇಬೇಡಿ ಎಂದು ಹೇಳುವ ಬದಲಿಗೆ ಅವರು ಕೆಲಸ ಮಾಡದೆ ಓದಿನತ್ತ ಗಮನಹರಿಸೇಕು, ಆದರೆ ಅವರ ಮನೆಯಲ್ಲಿ ಪೋಷಕರ ಆರೋಗ್ಯ ಸರಿಯಿಲ್ಲದಿದ್ದರೆ ಅವರ ಕುಟುಂಬ ನಡೆಸಿಕೊಂಡು ಹೋಗಲು ನೆರವು ಸಿಕ್ಕರೆ ಆ ಮಕ್ಕಳ ಭವಿಷ್ಯ ಉತ್ತಮವಾಗುವುದು, ಆದರೆ ಆ ಮಕ್ಕಳಿಗೆ ಆ ನೆರವು ಸಿಗುವಂತಾಗಬೇಕು.
ನಿರುದ್ಯೋಗದ ಸಮಸ್ಯೆ
ಕಂಪನಿಗಳಲ್ಲಿ ಕೆಲಸ ಸಿಕ್ಕರೆ ಅಥವಾ ಸರ್ಕಾರಿ ಕೆಲಸ ಸಿಕ್ಕರೆ ಮಾತ್ರ ಕೆಲಸವಲ್ಲ, ಯಾವುದಾದರೂ ಚಿಕ್ಕ ಕೆಲಸವಾದರೂ ಸರಿ ಅದನ್ನು ಮಾಡಬೇಕು, ಆವಾಗ ಈ ನಿರುದ್ಯೋಗ ಸಮಸ್ಯೆ ಇರಲ್ಲ, ಆದರೆ ಈ ನಿಟ್ಟಿನಲ್ಲಿ ಯೋಚನೆ ಮಾಡುವವರು ಕಡಿಮೆ.
ಹೀಗೆ ಅನೇಕ-ಅನೇಕ ಸಮಸ್ಯೆಗಳಿವೆ, ಇದರ ಬದಲಾವಣೆಗೆ ಜನರು ಮನಸ್ಸು ಮಾಡಿದರಷ್ಟೇ ಬದಲಾಗುವುದು.



Click it and Unblock the Notifications