Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ಅಜ್ಜಿಯಷ್ಟು ಸ್ವಾಭಿಮಾನಿ ಬೇರೆ ಯಾರಾದ್ರು ಇದ್ದಾರಾ.? ಹಣ ಬೇಡವೆಂದ ವೃದ್ಧೆ ವಿಡಿಯೋ ವೈರಲ್
ಈಗಿನ ಕಾಲ ಹೇಗಿದೆ ಅಂದ್ರೆ ಒಂದು ರೂಪಾಯಿ ಸಿಕ್ಕರೂ ಸಾಕು ಎಂದು ಸಿಕ್ಕ ಸಿಕ್ಕಲೆಲ್ಲ ಹಣ ಮಾಡೋ ದಾರಿ ಹುಡುತ್ತಿರುತ್ತಾರೆ. ಮತ್ತೆ ಕೆಲವರು ಕೈ ಕಾಲು ಗಿಟ್ಟಿಯಾಗಿದ್ದರು ದುಡಿದು ತಿನ್ನುವ ಬದಲು ಲೂಟಿ, ಕಳ್ಳತನ, ಮೋಸ ಹೀಗೆ ಅನ್ಯ ಮಾರ್ಗ ಅನುಸರಿಸುತ್ತಾತೆ. ಇನ್ನೂ ಕೆಲವರು ಕೈ ಕಾಲು ಇದ್ದರೂ ಭಿಕ್ಷೆ ಬೇಡಿಯೇ ಆ ದಿನ ಹಣ ಮಾಡಿ ಊಟ ತಿಂಡಿ ಮಾಡುವವರನ್ನು ನಾವು ನೋಡಿರುತ್ತೇವೆ.
ಇತ್ತ ಹಣಕ್ಕಾಗಿ ಜನ ಈಗ ಎಂತಹ ಕೆಟ್ಟ ಕಲಸಕ್ಕೂ ಕೈ ಹಾಕುತ್ತಾರೆ. ದಿನದ ಅಂತ್ಯದಲ್ಲಿ ಹಣ ಸಿಕ್ಕರೆ ಸಾಕು ಎಂದು ಬದುಕುವವರು ಸಹ ಇದ್ದಾರೆ. ಆದರೆ ಯಾವ ಮಾರ್ಗದಲ್ಲಿ ನಾವು ಹಣ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತೆ. ನಾವು ಮೋಸದಿಂದಲೋ, ಯಾರ ಹೊಟ್ಟೆ ಪಾಡಿನ ಮೇಲೋ ಹೊಡೆದು ಹಣ ಮಾಡಿದರೆ ಅದರ ಫಲ ಸಿಗೋದು ಕಷ್ಟ.

ಇನ್ನು ಅದೆಷ್ಟೋ ಜನ ಬೀದಿ ಬದಿಯಲ್ಲಿ ಹಣಕ್ಕಾಗಿ ಏನೆಲ್ಲಾ ಕಸರತ್ತು ಮಾಡುತ್ತಾರೆ ಅನ್ನೋದು ಸಹ ನೋಡಿದ್ದೇವೆ. ಒಂದೊಂದು ರೂಪಾಯಿಗೂ ಒದ್ದಾಡುತ್ತಾರೆ. ಟೀ ಮಾರುತ್ತಾರೆ, ಹೂವು ಮಾರುತ್ತಾರೆ, ಹತ್ತಾರು ಕಸುಬು ಮಾಡಿ ಹಣ ಗಳಿಸುತ್ತಾರೆ. ಇನ್ನು ವಯಸ್ಸಾದವರು ದೇವಾಲಯ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುವುದನ್ನು ನಾವು ನೋಡಿದ್ದೇವೆ.
ಅವರಿಗೆ ಇದನ್ನು ಬಿಟ್ಟು ಬೇರೆ ಏನು ಮಾಡಲಾಗುವುದಿಲ್ಲ. ಮನೆ ಸಮಸ್ಯೆಯಿಂದಲೋ ಮಕ್ಕಳ ಕಾಟದಿಂದಲೋ ಅವರು ಬೀದಿ ಪಾಲಾಗಿರುತ್ತಾರೆ. ಇಂತಹ ನೂರಾರು ಘಟನೆಗಳ ನಡುವೆ ಕೆಲವೊಂದು ನಮ್ಮ ಗಮನ ಸೆಳೆಯುತ್ತವೆ. ಇದೇ ರೀತಿ ಇಲ್ಲೊಂದು ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಜ್ಜಿಯೊಬ್ಬರ ಸ್ವಾಭಿಮಾನ ಕಂಡು ಜನರು ದಂಗಾಗಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಹಣ್ಣಣ್ಣು ಮದುಕಿಯೊಬ್ಬರು ಯುವಕನಿಂದ ಹಣ ಪಡೆಯದೇ ಸ್ವಾಭಿಮಾನ ಮೆರೆದಿರುವುದು ನೋಡಿ ಜನರ ಕಣ್ಣಂಚಲಿ ನೀರು ತುಂಬಿಕೊಂಡಿದೆ. ನಡೆಯಲಾಗದ ಅಜ್ಜಿಯೊಬ್ಬರು ಯುವಕನಿಂದ ನನಗೆ ಹಣ ಬೇಡಪ್ಪ ಎಂದು ಆತನಿಗೆ ಆರ್ಶೀವಾದ ಮಾಡಿ ಹರಸಿ ಅಲ್ಲಿಂದ ತೆರಳಿದ್ದು, ನೋಡುಗರ ಕಣ್ಣಾಲಿ ತುಂಬಿ ಬಂದಿದೆ.
ವಿಡಿಯೋದಲ್ಲಿ ಏನಿದೆ?
ಅರುಣ್ 12 (arunnn_12) ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ವೃದ್ಧೆಯೊಬ್ಬಳನ್ನು ಕಂಡ ಯುವಕ ಆಕೆಯನ್ನು ತಡೆದು ನಿಲ್ಲಿಸಿ ಮಾತನಾಡಿಸಲು ಮುಂದಾಗಿರುವುದು ನೋಡಬಹುದು. ಆಕೆಯ ಕುಶಲೋಪರಿ ವಿಚಾರಿಸಿದ ಯುವಕನ ಕಡೆಗೆ ವೃದ್ಧೆ ವಿಶೇಷ ಗೌರವ ಇರುವಂತೆ ಪ್ರತಿಕ್ರಿಯಿಸಿದ್ದಾಳೆ.
ಆಕೆಯ ಜೊತೆ ಮಾತನಾಡುತ್ತಾ ಯುವಕ ಹಣ ಬೇಕಾ ಎಂದು ಪ್ರಶ್ನಿಸಿದ್ದಾನೆ, ಆದರೆ ಆಕೆ ಖಡಾ ಖಂಡಿತವಾಗಿ ಬೇಡವೆಂದು ನಿರಾಕರಿಸಿದ್ದಾಳೆ. ಯುವಕ ಎಷ್ಟು ಒತ್ತಾಯ ಮಾಡಿದರೂ ಸಹ ಆಕೆ ಹಣ ತೆಗೆದುಕೊಳ್ಳಲು ನಿರಾಕರಿಸಿದ್ದಾಳೆ. ಹಣ ಎಂದರೆ ಬಾಯಿ ಬಿಡುವ ಈ ಯುಗದಲ್ಲೂ ಈ ರೀತಿ ಹಣ ನಿರಾಕರಿಸಿ ಯುವಕನಿಗೆ ಆಶೀರ್ವಾದ ಮಾಡಿ ತೆರಳಿದ ವೃದ್ಧೆ ಕಂಡು ಜನರಿಗೆ ಅಚ್ಚರಿಯಾಗಿದೆ.
ಈ ವಿಡಿಯೋ ಪೋಸ್ಟ್ ಮಾಡಿದ್ದ ಬಳಿಕ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ವಿಡಿಯೋ ನೋಡಿ ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಕೆಲವರು ಈ ಅಜ್ಜಿಯ ಸ್ವಾಭಿಮಾನಕ್ಕೆ ಸಲಾಮ್ ಎಂದಿದ್ದಾರೆ. ಮತ್ತೆ ಕೆಲವರು ಈ ಅಜ್ಜಿ ನಿಜವಾಗಿಯೂ ಅಚ್ಚರಿ... ಈ ಕಾಲದಲ್ಲಿ ಹಣ ಬೇಡವೆಂದು ನಿರಾಕರಿಸುತ್ತಾರಾ? ಆಕೆಯ ಆರ್ಥಿಕ ಸ್ಥಿತಿ ಚೆನ್ನಾಗಿರದ ನಡುವೆಯೂ ಹಣಕ್ಕೆ ಆಸೆ ಪಡುತ್ತಿಲ್ಲವೆಂದರೆ ಆಕೆ ಜೀವನದ ಎಂತಹ ಘಟ್ಟ, ಕಷ್ಟಗಳ ಪಾರು ಮಾಡಿರಬಹುದು ಎಂದು ಪ್ರಶ್ನೆ ಮಾಡಿದ್ದಾರೆ.



Click it and Unblock the Notifications
