Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಉತ್ತರ ಪ್ರದೇಶದಲ್ಲಿ ನಾಡಿಗೆ ಬಂದ ಈ ದೈತ್ಯ ಮೊಸಳೆಯ ವೀಡಿಯೋ ವೈರಲ್
ಉತ್ತರ ಪ್ರದೇಶದಲ್ಲಿ ದೊಡ್ಡದೊಂದು ಮೊಸಳೆ ಬೇಲಿ ಹಾರಲು ಪ್ರಯತ್ನಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಅಷ್ಟೊಂದು ದೊಡ್ಡ ಮೊಸಳೆ ಅದೂ ರಸ್ತೆಯಲ್ಲಿ ನೋಡಿದ ಜನರು ಭಯಭೀತರಾಗಿದ್ದಾರೆ, ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋ ಶೇರ್ ಮಾಡಿ ಉತ್ತರ ಪ್ರದೇಶದ ಬುಲೇಂದರ್‌ಶರ್ ಜಿಲ್ಲೆಗೆ ಈ ಮೊಸಳೆ ಗಂಗಾ ಕಾಲುವೆಯಿಂದ ಬಂದಿದೆ. ಅಲ್ಲಿಗೆ ಬಂದ ಅರಣ್ಯಾಧಿಕಾರಿಗಳು ಆ ಮೊಸಳೆ ರಕ್ಷಣೆ ಮಾಡಿ ನದಿಗೆ ಬಿಟ್ಟಿದ್ದಾರೆ.

ತುಂಬಾ ಜನರು ಈ ಮೊಸಳ ಬಂದಿರುವ ವೀಡಿಯೋ ಮಾಡಿದ್ದು ಇದೀಗ ಈ ವೀಡಿಯೋಗಳು ವೈರಲ್ ಆಗಿವೆ, ಈ ಮೊಸಳೆ ಸುಮಾರು 10 ಅಡಿ ಉದ್ದವಿದೆ.
ಇದನ್ನು ಹೇಗೆ ರಕ್ಷಣೆ ಮಾಡಲಾಯ್ತು?
ಮೊಸಳೆಯ ಬಾಯಿ ಭಾಗವನ್ನು ಬಟ್ಟೆಯಿಂದ ಮುಚ್ಚಿ, ಅದನ್ನು ಅಲುಗಾಡದಂತೆ ಹಗ್ಗದಿಂದ ಕಟ್ಟಿ ಹಿಡಿದು ಅದನ್ನು ಕೊಂಡೊಯ್ಯಲಾಯ್ತು. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅನಾಹುತ ಉಂಟಾಗಬಹುದು, ಅದ್ದರಿಂದ ಅತಿ ಜಾಗ್ರತೆಯಿಂದ ಮೊಸಳೆಯನ್ನು ಕಟ್ಟಿ ಕೊಂಡೊಯ್ಯೊದ್ದು ನಂತರ ಹಗ್ಗ ಬಿಚ್ಚಿ ನೀರಿಗೆ ಬಿಡಲಾಯ್ತು.
ಮೊಸಳೆ ಈ ರೀತಿ ಆಗಾಗ ನೀರಿನಿಂದ ನಾಡಿಗೆ ಬಂದಿರುವ ಅನೇಕ ಘಟನೆಗಳಿವೆ. ನದಿಯಲ್ಲಿ ನೀರಿನಂಶ ಹೆಚ್ಚಾದಾಗ ನೀರು ಉಕ್ಕಿ ಹರಿಯಲಾರಂಭಿಸಿದಾಗ ಕೂಡ ಮೊಸಳೆ ನೀರಿನಿಂದ ಹೊರ ಬರುತ್ತದೆ. ಈ ಮೊಸಳೆ ನೀರಿನಲ್ಲಿ ಉಷ್ಣಾಂಶ ಹೆಚ್ಚಾಗಿರುವುದರಿಂದ ಹೊರ ಬಂದಿದೆ ಎಂದು ಹೇಳಲಾಗುವುದು.
ಅಷ್ಟು ದೊಡ್ಡ ಮೊಸಳೆಯು ನದಿಯಿಂದ ಹೊರಬಂದು ಅಲ್ಲಿರುವ ಕಬ್ಬಿಣದ ಬೇಲಿ ಹತ್ತಲು ಹೊರಟಂತೆ ಕಾಣುತ್ತದೆ. ಈ ಮೊಸಳೆಗೆ ನೀರಿನಿಂದ ಹೊರ ಬಂದ ಮೇಲೆ ಗಲಿಬಿಲಿಯಾಗಿರಬಹುದು, ಇದನ್ನು ಸೇರಿ ನೆರೆದಿರುವ ಜನ, ಎತ್ತ ಹೋಗಬೇಕು ಅಂತ ಗೊತ್ತಾಗುವುದಿಲ್ಲ, ಹಾಗಾಗಿ ರೇಲಿಂಗ್ ಹತ್ತಲು ನೋಡಿದೆ.
ಬುಲಂದ್‌ಶಹರ್‌ನ ನರೋರಾ ಗಂಗಾ ಕಾಲುವೆ ಬಳಿ ಹಾದುಹೋಗುವ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಾಕಷ್ಟು ಪ್ರಯತ್ನದ ನಂತರ ಮೊಸಳೆಯನ್ನು ರಕ್ಷಿಣೆ ಮಾಡಲಾಗಿದೆ, ಈ ರಕ್ಷಣೆ ಕಾರ್ಯಾಚರಣೆಯಲ್ಲಿ ಯಾವುದೇ ಜನರಿಗೆ ತೊಂದರೆಯಾಗಿಲ್ಲ, ಆಸ್ತಿಪಾಸ್ತಿ ನಷ್ಟ ಉಂಟಾಗಿಲ್ಲ.



Click it and Unblock the Notifications

