Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಸಂಕಷ್ಟದಲ್ಲಿ ವೈರಲ್ ಹುಡುಗಿ ಮೊನಾಲಿಸಾ: ಸೆಲ್ಫಿಗಾಗಿ ಎಳೆದಾಡುವ ಜನ.! ಭಯದಲ್ಲೇ ಬದುಕು!
ವಿಶ್ವ ವಿಖ್ಯಾತ ಮಹಾ ಕುಂಭಮೇಳ ನಡೆಯುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ ಸಾಧು ಸಂತರು ಶಿಬಿರದಲ್ಲಿ ಉಳಿದು ಇಡೀ ದಿನ ಪ್ರಯಾಗ್‌ರಾಜ್‌ನಲ್ಲಿ ಹಬ್ಬದ ವಾತಾವರಣವಿದೆ. ಕೋಟಿ ಕೋಟಿ ಭಕ್ತರು ಈಗ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಹಾಗೆ ಒಂದು ತಿಂಗಳ ಕಾಲ ಈ ಹಬ್ಬ ನಡೆಯಲಿದೆ. ವಿಶ್ವದ ಮೂಲೆ ಮೂಲೆಯಿಂದಲೂ ಪ್ರಯಾಗ್‌ರಾಜ್‌ಗೆ ಆಗಮಿಸುತ್ತಿದ್ದಾರೆ.
ಹಾಗೆ ಈ ಪ್ರಯಾಗ್‌ರಾಜ್‌ನಲ್ಲಿ ಅಚ್ಚರಿ ಎನ್ನುವಂತೆ ಮೊನಾಲಿಸಾ ಎಂಬ ಯುವತಿಯೊಬ್ಬಳ ಫೋಟೋ ವಿಡಿಯೋ ಹರಿದಾಡಿತ್ತು ನಿಮಗೆಲ್ಲಾ ಗೊತ್ತೇ ಇದೆ. ರುದ್ರಾಕ್ಷಿ ಮಾರಾಟ ಮಾಡುತ್ತಿದ್ದಾಕೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಳು, ಇದಾಗಿ ಒಂದೇ ದಿನಕ್ಕೆ ಆಕೆ ಇಡೀ ದೇಶದಲ್ಲಿ ದೊಡ್ಡ ಸೆನ್ಷೇಷನ್ ಕ್ರಿಯೆಟ್ ಮಾಡಿದಳು. ಎಲ್ಲರು ಆಕೆಯ ಕುರಿತು ಚರ್ಚ ಮಾಡಿದ್ದೇ ಹೆಚ್ಚು.

ಆಕೆಯ ಹಿಂದೆ ಮತ್ತಷ್ಟು ಮಂದಿ ಕ್ಯಾಮರಾ ಹಿಡಿದು ಈ ಚೆಲುವೆ ಯಾರು ಎಂದು ಹುಡುಕಾಡಿದ್ದಾರೆ. ಆಕೆಯ ಹಿನ್ನಲೆ ಏನು? ಆಕೆ ಕುರಿತು ಇಂಚಿಂಚು ಮಾಹಿತಿ ಕಲೆ ಹಾಕಿದ್ದಾರೆ. ಇದಾದ ಬಳಿಕ ಹಲವು ಯೂಟ್ಯೂಬ್ ಚಾನಲ್‌ನಲ್ಲಿ ಆಕೆಯ ಸಂದರ್ಶನವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಇದಾದ ಬಳಿಕ ಆಕೆಯೇ ಯೂಟ್ಯೂಬ್ ಚಾನಲ್, ಇನ್ಸ್‌ಸ್ಟಾಗ್ರಾಮ್ ಖಾತೆ, ಫೇಸ್‌ಬುಕ್ ಖಾತೆಯನ್ನೂ ತೆರೆದಿದ್ದಾಳೆ.
ಹಾಗೆ ಆಕೆಗೆ ಬಾಲಿವುಡ್‌ನಿಂದ ಸಿನಿಮಾ ಆಫರ್ ಬಂದಿರುವುದು, ಮಾಡೆಲಿಂಗ್, ಮೇಕ್ ಓವರ್ ವಿಡಿಯೋ ಹೀಗೆ ಎರಡು ದಿನದಲ್ಲಿ ಆಕೆಯ ಜೀವನ ಶೈಲಿ ಬದಲಾಗಿದೆ. ಆದ್ರೆ ಈಗ ಆಕೆ ತನ್ನ ವ್ಯಾಪಾರವನ್ನೂ ಮಾಡಲಾಗದ ಪರಿಸ್ಥಿತಿ ಅಲ್ಲಿ ಉಂಟಾಗಿದೆ. ಆಕೆ ರುದ್ರಾಕ್ಷಿ ಮಾರಾಟಕ್ಕೆ ಮುಂದಾದರೆ ಆಕೆಯ ಮುಂದೆ ಜನರು ಸೆಲ್ಪಿಗೆ ಸಾಲು ಗಟ್ಟುತ್ತಾರೆ.
ಆಕೆ ವಿಚಾರವಾಗಿ ಎಲ್ಲರು ಊಹಿಸಿದಂತೆಯೇ ಈಗ ಪರಿಸ್ಥಿತಿ ಹದಗೆಟ್ಟಿದೆ. ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ಆಕೆ ನಿತ್ಯದ ಜೀವನ ನಡೆಸೋದಕ್ಕೂ ಈಗ ಕಂಟಕ ಎದುರಾಗಿದೆ. ಆಕೆ ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ಜನರೇ ತುಂಬಿಕೊಳ್ಳುತ್ತಿದ್ದಾರೆ. ಆಕೆಗೆ ವ್ಯಪಾರಾ ಮಾಡುವುದು ಕಷ್ಟವಾಗುತ್ತಿದೆ. ಹಾಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಆಕೆಯನ್ನು ಹಿಡಿದು ಎಳೆದಾಡುತ್ತಿರುವ ಘಟನೆಗಳು ಸಹ ವರದಿಯಾಗುತ್ತಿದೆ.
ಆಕೆ ತನ್ನ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ರೀತಿಯ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ಅಲ್ಲಿ ಜನರು ಆಕೆಯನ್ನು ಎಳೆದಾಡುತ್ತಿರುವುದು ಹಾಗೆ ಸಹೋದರ ಆಕೆಯ ರಕ್ಷಣೆಗೆ ನಿಂತಿರುವುದು ನೋಡಬಹುದು. ಭಕ್ತಿಗೆ ಸಾಕ್ಷಿಯಾಗಬೇಕಿದ್ದ ಸ್ಥಳವೀಗ ಇಂತಹ ಕೆಲಸಗಳಿಗೆ ಸಾಕ್ಷಿಯಾಗುತ್ತಿರುವುದು ನಿಜಕ್ಕೂ ಅಚ್ಚರಿ ತರಿಸುತ್ತಿದೆ. ಹಾಗೆ ಮಾಧ್ಯಮವೊಂದರ ಮುಂದೆ ಮಾತನಾಡಿರುವ ಆಕೆ ಆಘಾತಕಾರಿ ವಿಚಾರಗಳ ಹೇಳಿದ್ದಾಳೆ.
ಕೆಲವು ಪುರುಷರು ನನ್ನ ಬಳಿಗೆ ಬಂದು ನನ್ನ ತಂದೆ ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಕಳುಹಿಸಿದ್ದಾರೆ ಎಂದು ಹೇಳಿದರು. ನಾನು ನಿರಾಕರಿಸಿದೆ. ಫೋಟೋ ನೀಡುವುದಿಲ್ಲ ಎಂದೆ. ಆದ್ರೆ ಅವರು ಫೋಟೋ ತೆಗೆಯಲು ಮುಂದಾದರು ಈ ವೇಳೆ ನನ್ನ ಸಹೋದರ ಫೋಟೋ ತೆಗೆಯಬೇಡಿ ಎಂದು ಮನವಿ ಮಾಡಿದರೆ ಆತನ ಮೇಲೆ ಹಲ್ಲೆಗೆ ಮುಂದಾದರು. ನನಗೆ ಈಗ ಭಯವಾಗುತ್ತಿದೆ. ಇಲ್ಲಿ ಯಾರು ಇಲ್ಲ. ಯಾರಾದರು ನನಗೆ ಹಲ್ಲೆ ಮಾಡಬಹುದು. ಯಾವಾಗ ಯಾರು ಎಲ್ಲಿಂದ ಬರುತ್ತಾರೆ ಎನ್ನುವುದು ತಿಳಿಯುತ್ತಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.
ಸದ್ಯ ಆಕೆ ಸಾಮಾಜಿಕ ಜಾಲಾತಣದ ಸುಳಿಯೊಳಗೆ ಸಿಲುಕಿ ಪರದಾಡುವಂತಾಗಿದೆ. ಜೀವನೋಪಾಯಕ್ಕೆಂದು ಹೂವು, ರುದ್ರಾಕ್ಷಿ ವ್ಯಪಾರ ಮಾಡಲೆಂದು ದೂರದಿಂದ ಪ್ರಯಾಗ್‌ರಾಜ್‌ಗೆ ಆಕೆ ಆಗಮಿಸಿದ್ದಳು, ಆದ್ರೆ ಆಕೆ ಈಗ ಸಂಕಷ್ಟದೊಳಗೆ ಸಿಲುಕಿದ್ದಾಳೆ. ವ್ಯಾಪಾರವೂ ಹಾಳಾಗಿ ನೆಮ್ಮದಿಯಿಂದ ದೂರಾಗಿದ್ದಾಳೆ.



Click it and Unblock the Notifications
