Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ! ಕೋವಿಡ್ ನಂತರ ಹೆಚ್ಚಾಯ್ತಾ ಹೃದಯಾಘಾತ!
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪುನೀತ್ ರಾಜ್ ಕುಮಾರ್ ಸಾವಿನ ದೊಡ್ಮನೆ ಕುಟುಂಬಕ್ಕೆ ಸ್ಪಂದನಾ ಅವರ ಸಾವು ಬಹು ದೊಡ್ಡ ಆಘಾತ ಅಂತ ಹೇಳಿದ್ರೆ ತಪ್ಪಾಗೋದಿಲ್ಲ. ಥೈಲಾಂಡ್ ನ ಪ್ರವಾಸಕ್ಕೆ ಹೋಗಿದ್ದ ವಿಜಯ ರಾಘವೇಂದ್ರ ಪತ್ನಿ ಅಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗುತ್ತಿದೆ.

ಮಂಗಳೂರು ಮೂಲದವರಾದ ಸ್ಪಂದನಾ ನಿವೃತ್ತ ಪೊಲೀಸ್ ಅಧಿಕಾರಿಯಾದ ಬಿ.ಕೆ ಶಿವರಾಮ್ ಅವರ ಮಗಳು. ಸಿನಿಮಾ ರಂಗದ ಯಾವುದೇ ಹಿನ್ನಲೆ ಇರದ ಸ್ಪಂದನಾ ಹಾಗೂ ವಿಜಯ ರಾಘವೇಂದ್ರ ಪರಸ್ಪರ ಪ್ರೀತಿಸಿ ಮದುವೆಯಾಗಿದ್ರು. ವಿಜಯ ರಾಘವೇಂದ್ರ ತಮ್ಮ ಪತ್ನಿಯ ಮೇಲೆ ಜೀವಾನೆ ಇಟ್ಟುಕೊಂಡಿದ್ರು. ಈ ನೋವನ್ನು ನಿಜಕ್ಕೂ ಅವರಿಂದ ಅರಗಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ ಅಂತಾನೇ ಹೇಳಬಹುದು.
ಅನ್ಯೋನ್ಯವಾಗಿದ್ದ ದಂಪತಿಗಳು!
ವಿಜಯ ರಾಘವೇಂದ್ರ ಅವರು ಚಿತ್ರರಂಗದಲ್ಲಿದ್ರೂ ಕೂಡ ಯಾವುದೇ ವಿಚಾರಕ್ಕೂ ಕಾಂಟ್ರವರ್ಸಿ ಮಾಡಿಕೊಂಡವರಲ್ಲ. ವಿಜಯ ರಾಘವೇಂದ್ರ ಫ್ಯಾಮಿಲಿ ಮ್ಯಾನ್ ಅಂತಾನೇ ಹೇಳಬಹುದು. ಕುಟುಂಬಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡ್ತಿದ್ರು. ವಿಜಯ್ ರಾಘವೇಂದ್ರ ಕೂಡ ಮೃದು ಸ್ವಭಾವದವರು. ಅವರ ರೀತಿಯಲ್ಲಿಯೇ ಪತ್ನಿ ಕೂಡ ಮಾತು ಕಡಿಮೆ. ಟಿವಿ ಶೋ ಗಳಲ್ಲಿ ಕಾಣಿಸಿಕೊಂಡಾಗಲೂ ಕೂಡ ಹೆಚ್ಚು ಮಾತನಾಡುತ್ತಿರಲಿಲ್ಲ. ತುಂಬಾನೇ ಸರಳವಾಗಿ ಇದ್ದವರು.
16 ನೇ ವಾರ್ಷಿಕೋತ್ಸವ ಆಚರಿಸಿಕೊಳ್ಬೇಕಿದ್ದ ದಂಪತಿ!
ಇನ್ನೇನು ಕೇವಲ ಹತ್ತೊಂಬತ್ತು ದಿನದಲ್ಲಿ ತಮ್ಮ 16 ನೇ ವಾರ್ಷಿಕೋತ್ಸವವನ್ನು ಈ ದಂಪತಿ ಆಚರಿಸಿಕೊಳ್ಬೇಕಿತ್ತು. ಆದ್ರೀಗ ವಿಧಿಯ ಆಟವೇ ಬೇರೆಯಾಗಿದೆ. ಕೆಲವು ಮೂಲಗಳ ಪ್ರಕಾರ ಭಾನುವಾರ ರಾತ್ರಿ ಸ್ಪಂದನಾ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗುತ್ತಿದೆ. ಆದ್ರೆ ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಇನ್ನೂ ಸ್ಪಂದನಾ ಅವರು ರವಿಚಂದ್ರನ್ ಅವರ ಅಪೂರ್ವ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ರು.
ಅತೀ ಸಣ್ಣ ವಯಸ್ಸಿಗೆ ಹೃದಯಾಘಾತ ಆಗ್ತಿರೋದ್ಯಾಕೆ?
ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸು ಅಂದ್ರೆ ನಲ್ವತ್ತರಿಂದ ಐವತ್ತರ ಆಸುಪಾಸಿನಲ್ಲಿರುವವರು ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಸ್ಪಂದನಾ ಕೂಡ ಹೃದಯಾಘಾತದಿಂದಲೇ ಕೊನೆಯುಸಿರೆಳೆದಿದ್ದು ಈ ಸುದ್ದಿ ನಿಜವಾಗಿಯೂ ಬರ ಸಿಡಿಲು ಬಡಿದಂತಾಗಿದೆ. ತಜ್ಞರ ಪ್ರಕಾರ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ರು. ಆದ್ರೆ ಕೆಲ ವರ್ಷಗಳ ಹಿಂದೆಗೆ ಹೋಲಿಸಿದ್ರೆ ಮಹಿಳೆಯರ ಸಂಖ್ಯೆ ಕೂಡ ನಿಧಾನವಾಗಿ ಹೆಚ್ಚಾಗ್ತಿದೆ.
ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಕಡಿಮೆ!
ಇತ್ತೀಚಿಗೆ ಹತ್ತು ವರ್ಷಗಳಲ್ಲಿ ಶೇ 30 ರಷ್ಟು ಜನ 45 ವರ್ಷಕ್ಕಿಂತ ಕಡಿಮೆ ಇರುವವರೇ ಹೃದಯಾಘಾತಕ್ಕೆ ತುತ್ತಾಗ್ತಿದ್ದಾರೆ ಅಂತ ತಜ್ಞರು ಸ್ಪಷ್ಟ ಪಡಿಸಿದ್ದಾರೆ. ಇನ್ನೂ ಮಹಿಳೆಯರಲ್ಲಿ ಈ ರೀತಿ ಸಾವನ್ನಪ್ಪುವವರ ಸಂಖ್ಯೆ ಶೇಕಡಾ 50ಕ್ಕಿಂತ ಕಡಿಮೆ ಅಂತಾನೇ ಹೇಳಬಹುದು. ಇನ್ನೂ ಈ ರೀತಿ ಹೃದಯಾಘಾತ ಆಗುವವರಲ್ಲಿ ಶೇಕಡಾ 8ರಷ್ಟು ಮಂದಿ 40 ವರ್ಷಕ್ಕಿಂತ ಕೆಳಗಿನವರೇ ಆಗಿದ್ದಾರೆ.
ಕೋವಿಡ್ ನಂತರ ಹೃದಯಾಘಾತದ ಸಂಖ್ಯೆಗಳು ಹೆಚ್ಚಾಗ್ತಿದ್ಯಾ?
ತಜ್ಞರು ಹೇಳೋ ಪ್ರಕಾರ ಕೋವಿಡ್ ನಂತರ ಹೃದಯಾಘಾತಕ್ಕೆ ಒಳಗಾಗುತ್ತಿರುವವರ ಸಂಖ್ಯೆ 3-5% ನಷ್ಟು ಹೆಚ್ಚಾಗಿದ್ಯಂತೆ. ಇನ್ನೂ ಈ ರೀತಿ ಹೃದಯಾಘಾತದ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗೋದಕ್ಕೆ ಕಾರಣ ಈಗಿನ ಜೀವನ ಶೈಲಿ, ಆಹಾರ ಪದ್ಧತಿ ಇತ್ಯಾದಿ.
ಸಾಲು ಸಾಲು ನಟರು ಹೃದಯಾಘಾತಕ್ಕೆ ಬಲಿ!
ಕಳೆದ ಕೆಲ ವರ್ಷದಿಂದ ಗಮನಿಸುತ್ತಾ ಬಂದ್ರೆ ಸಾಲು ಸಾಲು ನಟರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹಿಂದಿ ಬಿಗ್ ಬಾಸ್ ನ ವಿನ್ನರ್ ಆಗಿದ್ದ ಸಿದ್ಧಾರ್ಥ್ ಶುಕ್ಲ, ನಟ ಚಿರಂಜೀವಿ ಸರ್ಜಾ, ನಟ ಡಾ.ಪುನೀತ್ ರಾಜ್ ಕುಮಾರ್ ಸದ್ಯ ಸ್ಪಂದನಾ ಅವರ ಸಾವು ಅವರ ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟ ಅಂತಾನೇ ಹೇಳಬಹುದು.
ಸ್ಪಂದನಾ ಅವರ ಕುಟುಂಬಸ್ಥರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ. ಹಾಗೂ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹಾರೈಸೋಣ.



Click it and Unblock the Notifications