Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ವಿಜಿ-ಸ್ಪಂದನಾ ಲವ್ ಲೈಫ್ ಹೇಗಿತ್ತು ಗೊತ್ತಾ? ಮನೆಯವರನ್ನು ವಿಜಿ ಒಪ್ಪಿಸಿದ್ಹೇಗೆ?
ನಟ ವಿಜಯ ರಾಘವೇಂದ್ರ ಪಕ್ಕಾ ಫ್ಯಾಮಿಲಿ ಮ್ಯಾನ್. ಕುಟುಂಬದ ಜೊತೆಗೆ ಇವರ ಒಡನಾಟ ತುಂಬಾನೇ ಉತ್ತಮವಾಗಿತ್ತು. ಹೆಂಡತಿ ಹಾಗೂ ಮಗ ಶೌರ್ಯನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಬಿಗ್ ಬಾಸ್ ಮೊದಲ ಸೀಸನ್ ನ ವಿನ್ನರ್ ಆಗಿದ್ದ ವಿಜಿ ಬಿಗ್ ಬಾಸ್ ಮನೆಯಲ್ಲಿದ್ದಾಗ ಹೆಂಡತಿ ಹಾಗೂ ಮಗುವನ್ನು ನೆನೆದು ಅತ್ತು ಬಿಟ್ಟಿದ್ರು. ಕುಟುಂಬದ ಜೊತೆಗೆ ಅಷ್ಟೊಂದು ಅಟ್ಯಾಚ್ ಮೆಂಟ್ ಇತ್ತು.

ವಿಜಯ್ ರಾಘವೇಂದ್ರ ಅವರ ಪ್ರೀತಿಯ ಬಗ್ಗೆ ಹೆಚ್ಚಿನವರಿಗೆ ಗೊತ್ತಿರ್ಲಿಕ್ಕಿಲ್ಲ. ಮೂರು ವರ್ಷದ ಹಿಂದೆ ನೋಡಿದ ಹುಡುಗಿಯನ್ನು ಇಷ್ಟ ಪಟ್ಟು ಮದುವೆಯಾಗಿದ್ರು ವಿಜಿ. ಅಷ್ಟಕ್ಕೂ ವಿಜಿ-ಸ್ಪಂದನಾ ಪ್ರೀತಿ ಶುರುವಾಗಿದ್ಹೇಗೆ? ಮಂಗಳೂರು ಹುಡುಗಿಯನ್ನೇ ಮದುವೆಯಾಗ್ಬೇಕು ಅಂತ ವಿಜಿ ಅಂದುಕೊಂಡಿದ್ಯಾಕೆ? ಇವರ ಮದುವೆಗೆ ಮನೆಯವರ ಒಪ್ಪಿಗೆ ಇತ್ತಾ? ಎಲ್ಲವನ್ನೂ ತಿಳಿದುಕೊಳ್ಳೋಣ.
ಕಾಫಿ ಡೇನಲ್ಲಿ ಕಂಡ ಹುಡುಗಿಯನ್ನು ಇಷ್ಟ ಪಟ್ಟಿದ್ದ ವಿಜಿ!
2004 ರಲ್ಲಿ ಮಲ್ಲೇಶ್ವರಂ ಕಾಫಿ ಡೇ ನಲ್ಲಿ ವಿಜಿ ಒಂದು ಹುಡುಗಿಯನ್ನು ನೋಡ್ತಾರೆ. ಆ ಹುಡುಗಿ ವಿಜಯ್ ಗೆ ತುಂಬಾನೇ ಇಷ್ಟವಾಗಿದ್ರಂತೆ. ಅವರೇ ಸ್ಪಂದನಾ. ಆದ್ರೆ ಹುಡುಗಿ ಹತ್ತಿರ ಹೋಗಿ ಆ ವಿಚಾರವನ್ನು ಹೇಳುವಷ್ಟು ದೈರ್ಯ ಅವರಿಗೆ ಇರಲಿಲ್ವಂತೆ. ಆದ್ರೆ ಆ ಹುಡುಗಿ ಬಗ್ಗೆನೇ ಯೋಚಿಸ್ತಿದ್ರಂತೆ. ಆ ನಂತರ ಮತ್ತೆ 2006 ರಲ್ಲಿ ಅದೇ ಹುಡುಗಿಯನ್ನು ಶೇಷಾದ್ರಿಪುರಂ ಕಾಫಿ ಡೇ ನಲ್ಲಿ ನೋಡ್ತಾರೆ. ಈ ಸಾರಿ ಏನಾದ್ರು ಆಗ್ಲಿ ಅವರ ಬಳಿ ಮಾತಾಡ್ಲೇ ಬೇಕು ಅಂತ ನಿರ್ಧರಿಸಿದ್ರಂತೆ ವಿಜಿ.
ಸ್ಪಂದನಾ ಹಾಗೂ ಅವರ ಸ್ನೇಹಿತೆ ಜೊತೆಗೆ ಕುಳಿತಿದ್ರಂತೆ. ಅಲ್ಲಿಗೆ ಹೋಗಿ ಮಾತು ಶುರು ಮಾಡಿದ ಅವರು ನಾನು ವಿಜಯ್. ನಾನು ನಿಮ್ಮನ್ನು ಮಲ್ಲೇಶ್ವರಂ ಕಾಫಿ ಡೇ ನಲ್ಲಿ ನೋಡಿದ್ದೆ ಅಂತ ಹೇಳ್ತಾರೆ. ಆದ್ರೆ ಹೆಚ್ಚು ಮಾತನಾಡದ ಸ್ಪಂದನಾ ಹಾ ಅಂತ ಹೇಳಿ ಸುಮ್ಮನಾಗಿ ಬಿಡ್ತಾರೆ. ಇನ್ನೂ ಇದಾದ ಬಳಿಕ ಸ್ಪಂದನಾ ಬಗ್ಗೆ ವಿಜಯ್ ಮಾಹಿತಿ ಕಲೆ ಹಾಕೋದಕ್ಕೆ ಶುರು ಮಾಡ್ತಾರೆ. ಸ್ಪಂದನಾ ಅಪ್ಪ ಶಿವರಾಂ ಪೊಲೀಸ್ ಆಫಿಸರ್ ಅನ್ನೋ ಸುದ್ದಿ ಕೇಳಿ ಒಂದ್ಸಾರಿ ಶಾಕ್ ಆಗಿದ್ರಂತೆ ವಿಜಯ್.
ಮನೆಯವರನ್ನೆಲ್ಲರನ್ನೂ ಒಪ್ಪಿಸಿ ಮದುವೆಯಾಗ್ತಾರೆ!
ವಿಜಯ್ ತಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿರೋದಾಗಿ ಮನೆಯವರ ಬಳಿ ಹೇಳ್ತಾರೆ. ಆ ನಂತರ ವಿಜಯ್ ಅಪ್ಪ ಹಾಗೂ ಸ್ಪಂದನಾ ಅಪ್ಪ ಇಬ್ಬರೂ ಮದುವೆ ಮಾತುಕತೆ ನಡೆಸುತ್ತಾರೆ. ಇಬ್ಬರಿಗೂ ಒಪ್ಪಿಗೆ ಆದ ಮೇಲೆ ಸ್ಪಂದನಾ ಅಪ್ಪ ಅವರು ಮಗಳ ಅಭಿಪ್ರಾಯ ಕೇಳಿದ್ದರಂತೆ. ಸ್ಪಂದನಾ ಒಪ್ಪಿದ ಮೇಲಷ್ಟೇ ಮದುವೆಗೆ ಒಪ್ಪಿಗೆ ಸೂಚಿಸಿದ್ರಂತೆ. ಹೀಗೆ ಒಂದು ತಿಂಗಳ ಒಳಗೆ ಮದುವೆ ಸಿದ್ಧತೆ ನಡೆದಿತ್ತಂತೆ.
ಮಂಗಳೂರು ಹುಡುಗಿಯನ್ನೇ ಮದುವೆಯಾಗಬೇಕೆಂದಿದ್ದ ವಿಜಯ್!
ವಿಜಯ್ ಸಿನಿಮಾವೊಂದು ಮಂಗಳೂರಿನಲ್ಲಿ ಶೂಟ್ ಮಾಡಲಾಗಿತ್ತಂತೆ. ಹೀಗಾಗಿ ಅವರು ಮಂಗಳೂರು ಹುಡುಗಿಯನ್ನು ಮದುವೆಯಾಗಬೇಕು ಅಂತ ಅಂದುಕೊಂಡಿದ್ರಂತೆ. ಅದೇ ರೀತಿ ಸ್ಪಂದನಾ ಕೂಡ ಮಂಗಳೂರು ಮೂಲದವರೇ ಆಗಿದ್ದಾರೆ. ಸ್ಪಂದನಾ ಅವರು ಮಂಗಳೂರಿನ ಬೆಳ್ತಂಗಡಿಯವರಾಗಿದ್ದಾರೆ. ಹೀಗೆ ಕೊನೆಗೂ ವಿಜಯ್ ಇಷ್ಟ ಪಟ್ಟ ಹುಡುಗಿಯನ್ನೇ ಕೈ ಹಿಡಿಯುತ್ತಾರೆ.
ವಿಜಯ್ ಗೆ ಸಪ್ರೈಸ್ ಕೊಡ್ತಿದ್ದ ಪತ್ನಿ!
ವಿಜಿ ಪತ್ನಿ ಸ್ಪಂದನಾ ಸಪ್ರೈಸೆಸ್ ಕೊಡೋದ್ರಲ್ಲಿ ಮಾಸ್ಟರ್ ಅಂತ ಖುದ್ದು ವಿಜಯ್ ಅವರೇ ಹೇಳಿಕೊಂಡಿದ್ದಾರೆ. ವ್ಯಾಲಂಟೈನ್ಸ್ ಡೇ ಅಥವಾ ವಿವಾಹ ವಾರ್ಷಿಕೋತ್ಸವವೇ ಇರಲಿ ಸ್ಪಂದನಾ ತಮ್ಮ ಪತಿಗಾಗಿ ಸ್ಪೆಷಲ್ ಸಪ್ರೈಸ್ ಅನ್ನು ನೀಡ್ತಿದ್ರಂತೆ. ಅವರಿಗೆ ಇಷ್ಟ ಆಗೋ ಗಿಫ್ಟ್ ತಂದು ಕೊಡ್ತಿದ್ರಂತೆ. ಇನ್ನೂ ಸ್ಪಂದನಾ ಪತಿ, ಮಗ ಹಾಗೂ ತಮ್ಮ ಅಪ್ಪನ ಹೆಸರನ್ನು ಕೈಯಲ್ಲಿ ಅಚ್ಚೇ ಕೂಡ ಹಾಕಿಸಿಕೊಂಡಿದ್ದಾರೆ.
ಸ್ಪಂದನಾಳಿಂದಾಗಿ ಬಿಗ್ ಬಾಸ್ ಗೆ ಬಂದಿದ್ದ ವಿಜಯ್!
ನಮಗೆಲ್ಲಾ ಗೊತ್ತಿರುವ ಹಾಗೇ ವಿಜಯ್ ರಾಘವೇಂದ್ರ ಬಿಗ್ ಬಾಸ್ ಮೊದಲ ಸೀಸನ್ ನ ವಿನ್ನರ್ ಆಗಿದ್ರು. ಇದರ ಕ್ರೆಡಿಟ್ ಅನ್ನು ವಿಜಯ್ ತಮ್ಮ ಪತ್ನಿ ಸ್ಪಂದನಾ ಗೆ ನೀಡ್ತಾರೆ. ಬಿಗ್ ಬಾಸ್ ಆಫರ್ ಬಂದ ಟೈಂ ನಲ್ಲಿ ಅಲ್ಲಿಗೆ ಹೋಗ್ಲಾ? ಬೇಡ್ವಾ ಅಂತ ಪತ್ನಿ ಬಳಿ ಕೇಳಿದ್ರಂತೆ. ಪತ್ನಿ ಈ ಸಮಯದಲ್ಲಿ ವಿಜಿಗೆ ತುಂಬಾನೇ ಹುರಿದುಂಬಿಸಿದ್ರಂತೆ. ಸ್ಪಂದನಾ ಸಪೋರ್ಟ್ ನಿಂದಾಗಿ ನಾನು ಬಿಗ್ ಬಾಸ್ ಗೆ ಬಂದು ಗೆಲ್ಲೋದಕ್ಕೆ ಸಾಧ್ಯವಾಯ್ತು ಅಂತ ವಿಜಿ ಹೇಳಿಕೊಂಡಿದ್ದಾರೆ.
ಗಂಡನಿಗೆ ದೈರ್ಯ ಹಾಗೂ ಶಕ್ತಿಯಾಗಿದ್ದ ಸ್ಪಂದನಾ!
ಸ್ಪಂದನಾ ಅವರು ವಿಜಯ್ ರಾಘವೇಂದ್ರ ಅವರಿಗೆ ಶಕ್ತಿಯಾಗಿದ್ರಂತೆ. ಇದನ್ನು ಖುದ್ದು ವಿಜಿ ಹೇಳಿಕೊಂಡಿದ್ದಾರೆ. ಆಕೆ ನನ್ನ ಶಕ್ತಿ ಹಾಗೂ ಅವಳು ತುಂಬಾನೇ ಸ್ಟ್ರಾಂಗ್ ನನಗೆ ಯಾವಾಗಲೂ ದೈರ್ಯ ತುಂಬುತ್ತಿದ್ದಳು ಅಂತ ಹೇಳಿಕೊಂಡಿದ್ದಾರೆ. ಇನ್ನೂ ಪತ್ನಿಯನ್ನು ಪ್ರೀತಿಯಿಂದ ಚಿನ್ನಾ ಅಂತಲೇ ಕರೆಯುತ್ತಿದ್ದ ವಿಜಿ ಪತ್ನಿಯ ಮೇಲೆ ಪ್ರಾಣನೇ ಇಟ್ಟುಕೊಂಡಿದ್ರು.
ಈ ರೀತಿ ಅನ್ಯೋನ್ಯವಾಗಿದ್ದ ಈ ಜೋಡಿ ಬಾಳಿನಲ್ಲಿ ಬರಸಿಡಿಲೇ ಬಡದಂತಾಗಿದೆ. ಆ ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿ ಸ್ಪಂದನಾ ಅವರು ವಿಜಯ್ ರಾಘವೇಂದ್ರ, ಮಗ ಶೌರ್ಯ ಹಾಗೂ ಆಪ್ತ ಬಳಗವನ್ನು ಅಗಲಿದ್ದಾರೆ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸೋ ಶಕ್ತಿ ಕೊಡಲಿ ಅಂತ ಹಾರೈಸೋಣ.



Click it and Unblock the Notifications