Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಬ್ಯಾಂಕ್ ರಜಾ ದಿನವೇ ಮತ್ತೆ ಪೋಸ್ಟ್ ಹಂಚಿಕೊಂಡ ವಿಜಯ್ ಮಲ್ಯ..! ತಮಾಷಯೆ ಕಮೆಂಟ್‌ಗಳು ಇಲ್ಲಿವೆ..!
ಉದ್ಯಮಿ ಹಾಗೂ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಬಗ್ಗೆ ನಿಮಗೆಲ್ಲಾ ತಿಳಿದಿರಬಹುದು. ಮದ್ಯದ ದೊರೆ ಎಂಬ ಬಿರುದು ಪಡೆದಿದ್ದ ಅವರು ದಿವಾಳಿಯಾಗಿ ಬ್ಯಾಂಕ್ ಸಾಲ ಕಟ್ಟಲಾಗದೆ ವಿದೇಶದಲ್ಲಿ ನೆಲೆಸಿದ್ದಾರೆ. ಸದ್ಯ ಅವರೀಗ ಭಾರತದ ಬ್ಯಾಂಕ್‌ಗಳಿಗೆ ಬೇಕಾಗಿರುವ ವ್ಯಕ್ತಿ. ತಮ್ಮ ಮದ್ಯದ ವಿಚಾರವಾಗಿ ಹಾಗೂ ಕಿಂಗ್ ಫಿಷರ್ ವಿಮಾನಯಾನ ಸೇವೆಯ ನಷ್ಟದಿಂದಾಗಿ ಸುದ್ದಿಯಾಗಿದ್ದರು.
ಹಾಗೆ ಇತ್ತೀಚಿಗೆ ಪುತ್ರನ ವಿವಾಹ ಸಮಾರಂಭದಿಂದಲೂ ಅವರು ಸುದ್ದಿಯಲ್ಲಿದ್ದರು. ಅದರ ಜೊತೆಗೆ ಕೆಲವು ಬಾರಿ ಯಾವುದಾದರು ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಎಲ್ಲರ ಅಚ್ಚರಿಗೆ ಕಾರಣರಾಗುತ್ತಾರೆ. ಆದ್ರೆ ಅವರು ಆನ್‌ಲೈನ್‌ನಲ್ಲಿ ಹಾಕುವ ಪೋಸ್ಟ್‌ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಅದ್ರಲ್ಲೂ ಹಬ್ಬದ ಶುಭಾಶಯ ಕೋರುವ ಅವರ ಪೋಸ್ಟ್‌ಗಳಂತು ಜನರಲ್ಲಿ ಇನ್ನಿಲ್ಲದ ತಮಾಷೆಯ ವಿಷಯವಾಗಿ ಬದಲಾಗುತ್ತದೆ.

ವಿಜಯ್ ಮಲ್ಯ ಸದ್ಯ ಭಾರತೀಯ ಯಾವುದೇ ಹಬ್ಬವಿರಲಿ ಅದಕ್ಕೊಂದು ಶುಭ ಕೋರುವ ಪೋಸ್ಟ್ ಅನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡುತ್ತಾರೆ. ಆದ್ರೆ ಅವರ ಈ ಪೋಸ್ಟ್ ವೈರಲ್ ಆಗುವ ಜೊತೆಗೆ ತಮಾಷೆಯ ಕಮೆಂಟ್‌ಗಳು ಹರಿದಾಡಲು ಕಾರಣವಾಗುತ್ತದೆ. ಏಕೆಂದರೆ ಹಬ್ಬದಂದು ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಟ್ಟ ದಿನ ಮಾತ್ರ ಅವರು ಪೋಸ್ಟ್ ಹಂಚಿಕೊಳ್ಳುತ್ತಾರೆ ಎಂಬುದು ಎಲ್ಲರ ಗಮನ ಸೆಳೆದಿರುವ ಜೊತೆಗೆ ಒಂದಿಷ್ಟು ತಮಾಷೆಗೂ ಕಾರಣವಾಗುತ್ತಿದೆ.
ಈಗ ಗೌರಿ ಗಣೇಶ ಹಬ್ಬದ ಪ್ರಯುಕ್ತ ಅವರು ಪೋಸ್ಟ್ ಒಂದನ್ನು ಹಂಚಿಕೊಡಿದ್ದಾರೆ, ಮಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ. ಆದ್ರೆ ಇಂದು ಬ್ಯಾಂಕ್ ರಜೆ ಇರುವ ಕಾರಣ ಅವರು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಈ ಪೋಸ್ಟ್‌ನ ಕೆಳಗೆ ಸಾವಿರಾರು ಮಂದಿ ಕಮೆಂಟ್‌ಗಳ ಹಾಕಿದ್ದಾರೆ.
ಕೆಲವೇ ಗಂಟೆಗಳ ಹಿಂದೆ ಅವರು ಹಂಚಿಕೊಂಡ ಪೋಸ್ಟ್, ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಸುಮಾರು 4 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡದಿದೆ. ಮಲ್ಯ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದರೆ ಭಾರತದಲ್ಲಿ ಸಾರ್ವತ್ರಿಕ ರಜಾ ದಿನ ಘೋಷಣೆಯಾಗಿದೆ ಎಂದರ್ಥ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ನೀವು ಭಾರತದ ರಜಾ ದಿನಗಳ ಪರಿಶೀಲಿಸಬೇಕು ಎಂದಾದರೆ ಮಲ್ಯ ಅವರ ಪೋಸ್ಟ್ ನೋಡಿದರೆ ಸಾಕು. ಅವರು ಪೋಸ್ಟ್ ಮಾಡಿದ್ದರೆ ಅಂದು ಖಂಡಿತ ರಜಾ ದಿನ ಪೋಸ್ಟ್ ಮಾಡಿಲ್ಲ ಎಂದರೆ ಬ್ಯಾಂಕ್ ತೆರೆದಿದೆ ಎಂದರ್ಥ ಎಂದು ಮತ್ತೊಬ್ಬರು ತಮಾಷೆಯಾಗಿ ಬರೆದಿದ್ದಾರೆ. ಹಾಗೆ ಅವರು ಸಹ ಇಂದು ಬ್ಯಾಂಕ್ ಹಾಲಿಡೆ ಎಂಬುದನ್ನು ಖಚಿತ ಪಡಿಸಿಕೊಂಡ ಬಳಿಕವೇ ಪೋಸ್ಟ್ ಮಾಡುತ್ತಾರೆ, ಏಕೆಂದತೆ ಇಷ್ಟು ವರ್ಷವಾದರು ಒಮ್ಮೆಯೂ ಅವರು ಬ್ಯಾಂಕ್‌ಗಳ ಕಣ್ಣಿಗೆ ಬಿದ್ದಿಲ್ಲ ಎಂದು ಮತ್ತೊಬ್ಬರು ಇದಕ್ಕೆ ಸೇರಿಸಿದ್ದಾರೆ.
ಇನ್ನು ವಿಜಯ್ ಇದೊಂದೆ ಸಲ ಅಲ್ಲ. ಬದಲಿಗೆ ದೀಪಾವಳಿ, ಕ್ರಿಸ್‌ಮಸ್, ರಂಜಾನ್, ಬಕ್ರೀದ್, ದಸರಾ ಹಬ್ಬದ ದಿನದಂದು ಸಹ ಪೋಸ್ಟ್ ಹಂಚಿಕೊಳ್ಳುತ್ತಾರೆ. ಈ ಎಲ್ಲಾ ದಿನದಲ್ಲಿಯೂ ಬ್ಯಾಂಕ್ ಮುಚ್ಚಿರುತ್ತದೆ. ಹೀಗಾಗಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದರೆ ಅಂದು ಬ್ಯಾಂಕ್ ಹಾಲಿಡೆ ಇದೆ ಎಂದರ್ಥ ಎಂಬುದು ನೆಟ್ಟಿಗರ ವಾದವಾಗಿದೆ.
ಇದು ಇಂದು ನಿನ್ನೆಯ ವಿಷಯವಲ್ಲ ಬದಲಿಗೆ ಹಲವು ವರ್ಷದಿಂದ ಇದೇ ರೀತಿ ನಡೆದುಕೊಂಡು ಬರುತ್ತಿದೆ. ಬ್ಯಾಂಕ್ ತೆರೆದಿಲ್ಲ ಎಂಬ ಕಾರಣಕ್ಕೆ ಅವರು ಪೋಸ್ಟ್ ಹಂಚಿಕೊಳ್ಳುವುದಿಲ್ಲ. ಬದಲಿಗೆ ಎಲ್ಲಾ ಹಬ್ಬದ ದಿನ ಅವರು ಶುಭ ಕೋರುತ್ತಾರೆ, ಆದ್ರೆ ಅಂದು ಬ್ಯಾಂಕ್ ರಜೆ ಇರುವ ಕಾರಣ ಅವರ ಪೋಸ್ಟ್‌ಗೂ ಬ್ಯಾಂಕ್ ರಜಾ ದಿನಕ್ಕೂ ಹೋಲಿಕೆ ಮಾಡಲಾಗುತ್ತಿದೆ.
ವಿಜಯ್ ಮಲ್ಯ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ದೇಶ ಬಿಟ್ಟಿದ್ದಾರೆ. ಮೂಲಗಳ ಪ್ರಕಾರ ಅವರು ಲಂಡನ್‌ನಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ. ಅವರನ್ನು ಭಾರತಕ್ಕೆ ಕರೆತರುವ ನಿರಂತರ ಪ್ರಯತ್ನವೂ ಸಹ ನಡೆಯುತ್ತಲೇ ಇದೆ.



Click it and Unblock the Notifications
