ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ..! ಮುಂದಿನ ಉಪಾಷ್ಟ್ರಪತಿ ಯಾರು?

ಉಪರಾಷ್ಟ್ರಪತಿ ಜಗದೀಪ್ ಧನಕರ್ ತಮ್ಮ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಭಾರತದ ಅತ್ಯುನ್ನತ ಹುದ್ದೆಯಾಗಿರುವ ರಾಷ್ಟ್ರಪತಿಯ ಬಳಿಕ ನೀಡಲಾಗಿರುವ ಹುದ್ದೆಗೆ ಅವರು ರಾಜೀನಾಮೆ ನೀಡಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅವರು ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವ ಸಲುವಾಗಿ ವೈದ್ಯಕೀಯ ಸಲಹೆಯ ಮೇರೆಗೆ ಹುದ್ದಗೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ರಾಷ್ಟ್ರಪತಿಗಳಿಗೆ ಅವರು ಪತ್ರದ ಮೂಲಕ ತಿಳಿಸಿದ್ದಾರೆ.

ಜಗದೀಪ್ ಧನಕರ್ ಅವರು 2022ರ ಆಗಸ್ಟ್‌ನಿಂದ ಉಪ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ್ದರು. ಅವರು ರಾಜ್ಯಸಭೆಯ ಸ್ಪೀಕರ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಬಿಜೆಪಿ ನೇತೃತ್ವದ ಸುಮಾರು ಮಂಡಳಿ ಸದಸ್ಯರಿಗೆ ಸಹಯೋಗಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

Vice President Jagdeep Dhankar Resigns Who Will Be The Next VP

ಧನಕರ್ ಅವರು ಬರೆದ ಸುದೀರ್ಘ ಪತ್ರದಲ್ಲಿ ಏನಿದೆ?

'ಮಾನ್ಯ ರಾಷ್ಟ್ರಪತಿಗಳೇ, ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಯ ಪ್ರಕಾರ ತಕ್ಷಣವೇ ಜಾರಿಗೆ ಬರುವಂತೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ನಾವು ನಿರ್ವಹಿಸಿದ ಅಚಲ ಬೆಂಬಲ ಮತ್ತು ಶಾಂತಗೊಳಿಸುವ ಅದ್ಭುತ ಕಾರ್ಯ ಸಂಬಂಧಕ್ಕಾಗಿ ಭಾರತದ ಗೌರವಾನ್ವಿತ ರಾಷ್ಟ್ರಪತಿಯವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ' ಎಂದು ತಿಳಿಸಿದ್ದಾರೆ.

'ನಮ್ಮ ಮಹಾನ್ ಪ್ರಜಾಪ್ರಭುತ್ವದಲ್ಲಿ ಉಪಾಧ್ಯಕ್ಷನಾಗಿ ನಾನು ಪಡೆದ ಅಮೂಲ್ಯ ಅನುಭವಗಳು ಮತ್ತು ಒಳನೋಟಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಮಹತ್ವದ ಅವಧಿಯಲ್ಲಿ ಭಾರತದ ಗಮನಾರ್ಹ ಆರ್ಥಿಕ ಪ್ರಗತಿ ಮತ್ತು ಅಭೂತಪೂರ್ವ ಅಭಿವೃದ್ಧಿಯನ್ನು ವೀಕ್ಷಿಸುವುದು ಮತ್ತು ಅದರಲ್ಲಿ ಭಾಗವಹಿಸುವುದು ಒಂದು ಸವಲತ್ತು ಮತ್ತು ತೃಪ್ತಿಯಾಗಿದೆ. ನಮ್ಮ ರಾಷ್ಟ್ರದ ಇತಿಹಾಸದ ಈ ಪರಿವರ್ತನಾತ್ಮಕ ಯುಗದಲ್ಲಿ ಸೇವೆ ಸಲ್ಲಿಸುವುದು ನಿಜವಾದ ಗೌರವವಾಗಿದೆ' ಎಂದಿದ್ದಾರೆ.


ಈ ಅಧಿಕಾರ ಅವಧಿ ಕೊನೆಯಾಗುವ ಮೊದಲೇ ರಾಜೀನಾಮೆ ನೀಡಿದ ಉಪ ರಾಷ್ಟ್ರಪತಿಗಳು ಯಾರು?

ಅಧಿಕಾರಾವಧಿ ಅಂತ್ಯವಾಗುವ ಮೊದಲು ತಮ್ಮ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದರಲ್ಲಿ ಜಗದೀಪ್ ಧನಕರ್ ಮೊದಲಿಗರಲ್ಲ. ಇದಕ್ಕೂ ಮೊದಲು ಹಲವರು ಈ ರೀತಿ ಅವಧಿ ಮುನ್ನವೇ ರಾಜೀನಾಮೆ ನೀಡಿದವರಿದ್ದಾರೆ. ಈ ಮೊದಲು ವಿ.ವಿ ಗಿರಿ 1967ರಿಂದ 1969ರ ವರೆಗೆ ಈ ಹುದ್ದೆ ಅಲಂಕರಿಸಿದರು.

ರಾಷ್ಟ್ರಪತಿ ಜಾಕಿರ್ ಹುಸೇನ್ ಅವರ ಹಠಾತ್ ಮರಣದ ನಂತರ ವಿ.ವಿ ಗಿರಿ ತಮ್ಮ ಅವಧಿಯನ್ನು ಪೂರ್ಣಗೊಳಿಸುವ ಮೊದಲು ಹಂಗಾಮಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದರು.

ಇದಾದ ಬಳಿಕ ಕ್ರಿಶನ್ ಕಾಂತ್ ಕೂಡ ಅವಧಿಗೂ ಮುನ್ನವೇ ಅಧಿಕಾರ ಅಂತ್ಯಗೊಳಿಸಿದರು. 2002ರಲ್ಲಿ ಉಪ ರಾಷ್ಟ್ರಪತಿಯಾಗಿದ್ದ ಕ್ರಿಶನ್ ಕಾಂತ್ ಅಧಿಕಾರದಲ್ಲಿದ್ದಾಗಲೇ ಮೃತಪಟ್ಟರು. ಹೀಗಾಗಿ ಆ ಹುದ್ದೆ ಮಧ್ಯದಲ್ಲೇ ತೆರನಾಗಿತ್ತು. ಉಪರಾಷ್ಟ್ರಪತಿಗಳು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ ಮತ್ತು ಅಗತ್ಯವಿದ್ದಲ್ಲಿ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬಹುದು.


ಮುಂದಿನ ಉಪ ರಾಷ್ಟ್ರಪತಿ ಯಾರು?

ಚುನಾವಣಾ ಆಯೋಗವು ಹುದ್ದೆಗೆ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ರಾಷ್ಟ್ರಪತಿ, ಪ್ರಧಾನ ಮಂತ್ರಿ, ಉಪ ರಾಷ್ಟ್ರಪತಿ ಹುದ್ದೆಗಳು ಬಹಳ ದಿನ ಖಾಲಿ ಇರಬಾರದು ಎಂದು ಸಂವಿಧಾನ ಹೇಳಿದೆ. ಹಾಗೆ 66ನೇ ವಿಧಿಯ ಪ್ರಕಾರವಾಗಿ ರಹಸ್ಯ ಮತದಾನದ ಮೂಲಕ ಒಂದೇ ವರ್ಗಾವಣೆ ಮಾಡಬಹುದಾದ ಮತವನ್ನು ಬಳಸಿಕೊಂಡು ಅನುಪಾತದ ಪ್ರಾತಿನಿಧ್ಯ ವ್ಯವಸ್ಥೆಯ ಮೂಲಕ ಸಂಸತ್ತಿನ ಎರಡೂ ಸದನಗಳ ಸದಸ್ಯರನ್ನು ಮಾತ್ರ ಒಳಗೊಂಡಿರುವ ಚುನಾವಣಾ ಕಾಲೇಜು ಉಪ ರಾಷ್ಟ್ರಪತಿಗಳ ಆಯ್ಕೆ ಮಾಡುತ್ತದೆ.

English summary

Vice President Jagdeep Dhankar Resigns..! Who Will Be The Next VP?

Vice President Jagdeep Dhankar has surprised everyone by abruptly resigning from his post. He said he was resigning on medical advice to prioritize his health.
Story first published: Tuesday, July 22, 2025, 10:59 [IST]
X
Desktop Bottom Promotion