Latest Updates
-
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ!
ಕನ್ನಡದ ಹಿರಿಯ ಸಾಹಿತಿ ಎಸ್‌ಎಲ್ ಭೈರಪ್ಪ ಇನ್ನಿಲ್ಲ..! ಅವರ ಕೃತಿಗಳ ಪಟ್ಟಿ..ಪ್ರಶಸ್ತಿಗಳ ಸಾಲು ಇಲ್ಲಿವೆ!
ಕನ್ನಡದ ಹಿರಿಯ ಕವಿ ಎಸ್‌ಎಲ್ ಭೈರಪ್ಪ (SL Bhyrappa) ಅವರು ನಿಧನರಾಗಿದ್ದಾರೆ. ಪರ್ವ, ಆವರಣ, ಗೃಹಭಂಗ ಸೇರಿದಂತೆ ಅನೇಕ ಕಾದಂಬರಿಗಳ ರಚನೆಕಾರರಾಗಿದ್ದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. 94 ವರ್ಷದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದರು. ಆದ್ರೆ ಇಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಹಾಸನ ಜಿಲ್ಲೆಯ ಸಂತೇಶಿವಾರ ಗ್ರಾಮದಲ್ಲಿ ಜನಿಸಿದ್ದ ಅವರು, ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದರು. ಬಳಿಕ ಮೈಸೂರು ಹಾಗೂ ಬೆಂಗಳೂರಿನಲ್ಲಿ ಅವರು ನೆಲೆಸಿದ್ದರು. ಬಾಲ್ಯದಲ್ಲಿ ಕಷ್ಟದ ಜೀವನ ನಡೆಸಿದ್ದ ಅವರು ಹಲವು ಕೃತಿಗಳ ಹೊರತಂದರು. ಅದರಲ್ಲಿ ಪರ್ವ, ಗೃಹಭಂಗ, ವಂಶವೃಕ್ಷ, ಯಾನ, ಪರ್ವ, ಅನ್ವೇಷಣೆ ಪ್ರಮುಖವಾದವು.

ಅವರ ಹಲವು ಕಾದಂಬರಿಗಳು ಸಿನಿಮಾ ಆಗಿ ತೆರೆ ಮೇಲೆ ಬಂದಿವೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ, ನಾಯಿ ನೆರಳು ಸಿನಿಮಾ ರೂಪ ಪಡೆದವು. ಗೃಹಭಂಗ ಧಾರಾವಾಹಿ ರೂಪದಲ್ಲಿ ತೆರೆ ಕಂಡಿತ್ತು, ಹಾಗೆ ಅವರ ದಾಟು ಕಾದಂಬರಿಯು ಹಿಂದಿಯಲ್ಲಿ ಧಾರಾವಾಹಿಯಾಗಿ ತೆರೆ ಮೇಲೆ ಬಂದಿತ್ತು.
ಅವರ ಸಾಹಿತ್ಯ ಸೇವೆಗೆ ಹತ್ತಾರು ಪ್ರಶಸ್ತಿಗಳು ದೊರೆತಿವೆ. ಭೈರಪ್ಪ 1931ರ ಆಗಸ್ಟ್ 20ರಂದು ಅವರು ಚನ್ನರಾಯಪಟ್ಟಣದ ಸಂತೇಶಿವರ ಎಂಬಲ್ಲಿ ಜನಿಸಿದರು. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡಿದ್ದರು, ತಾಯಿಗೆ ಪ್ಲೇಗ್ ಕಾಯಿಲೆ ಕಾಡಿತ್ತು. ಶಿಕ್ಷಣ ಪೂರ್ಣಗೊಳಿಸಲು ಅವರು ಹಲವು ರೀತಿಯ ಕೆಲಸಗಳಲ್ಲಿ ತೊಡಗಿದರು. ಬಾಲ್ಯದಲ್ಲೇ ಅವರು ಸಾಹಿತ್ಯದ ಕಡೆ ಒಲವು ಹೊಂದಿದ್ದರು.
ಬಾಲ್ಯದಲ್ಲಿ ಭೈರಪ್ಪ ಅವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬರಹಗಳಿಂದ ಪ್ರಭಾವಿತರಾಗಿದ್ದರು. ಹುಟ್ಟೂರಿನಲ್ಲಿ ಬಾಲ್ಯದ ಶಿಕ್ಷಣ ಮುಗಿಸಿದ್ದ ಅವರು ನಂತರ ಮೈಸೂರಿಗೆ ಆಗಮಿಸಿದ್ದರು. 10ನೇ ತರಗತಿ ಬಳಿಕ ವಿದ್ಯಾಭ್ಯಾಸಕ್ಕೆ ಕೆಲ ಸಮಯ ವಿಶ್ರಾಂತಿ ನೀಡಿ ಆಗಿನ ಬಾಂಬೆಗೆ ತೆರಳಿದರಂತೆ ಅಲ್ಲಿ ರೈಲ್ವೆ ಪೋರ್ಟರ್ ಆಗಿ ಕೆಲಸ ಮಾಡಿದ್ದರು. ಈ ಸಮಯದಲ್ಲಿ ಆಧ್ಯಾತ್ಮಿಕತೆಯ ಕಡೆಗೂ ಅವರ ಒಲವು ಹೆಚ್ಚಾಯಿತು.
ಇದಾದ ಬಳಿಕ ಮೈಸೂರಿಗೆ ಆಗಮಿಸಿ ಮತ್ತೆ ಶಿಕ್ಷಣ ಆರಂಭಿಸಿದ್ದರು. ಶಿಕ್ಷಣ ಪೂರ್ಣಗೊಳಿಸಿದ ಬಳಿಕ, ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವ ವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿ ಆರಂಭಿಸಿದ್ದರು. ಈ ಸಮಯದಲ್ಲಿ ಅವರು 1955ರಲ್ಲಿ ಗಾಥಾ ಜನ್ಮ ಮಾತೆರಡು ಕಥೆಗಳು ಕೃತಿ ಪ್ರಕಟಿಸಿದರು. ಇದಾದ ಬಳಿಕ ಮೊದಲ ಬಾರಿಗೆ 1971ರಲ್ಲಿ ಧರ್ಮಶ್ರೀ ಎಂಬ ಕಾದಂಬರಿ ಕೂಡ ಪ್ರಕಟಿಸಿದರು. ಇದಾದ ಬಳಿಕ ನೂರಾರು ಕೃತಿಗಳು, ಕಾದಂಬರಿಗಳ ರಚಿಸಿದ್ದಾರೆ.
ಭೈರಪ್ಪ ಅವರು ಬರೆದಿರುವ ಕೃತಿಗಳ ಪಟ್ಟಿ ಇಲ್ಲಿವೆ
- ಗಾಥಾ ಜನ್ಮ ಮಾತೆರಡು ಕಥೆಗಳು
- ಭೀಮಕಾಯ
- ಬೆಳಕು ಮೂಡಿತು
- ಧರ್ಮಶ್ರೀ
- ದೂರ ಸರಿದರು
- ಮಾತದಾನ
- ವಂಶವೃಕ್ಷ
- ಜಲಪಾಟ
- ನಾಯಿ ನೆರಳು
- ತಬ್ಬಲಿಯು ನೀನಾದೆ ಮಗನೆ
- ಗೃಹಭಂಗ
- ನಿರಾಕರಣ
- ಗ್ರಹಣ
- ಧಾತು
- ಅನ್ವೇಷಣ
- ಪರ್ವ
- ನೆಲೆ
- ಸಾಕ್ಷಿ
- ಅಂಚು
- ಟಂಟು
- ಸಾರಥಾ
- ಮಂದ್ರ
- ಆವರಣ
- ಕವಲು
- ಯಾನಾ
- ಉತ್ತರಕಾಂಡ
ಹಾಗೆ ಭೈರಪ್ಪ ಅವರು ಆತ್ಮಚರಿತ್ರೆ ಭಿಟ್ಟಿಯನ್ನು 1996ರಲ್ಲಿ ಪ್ರಕಟಿಸಿದರು. ಹಾಗೆ ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹತ್ತಾರು ಪ್ರಶಸ್ತಿ ನೀಡಿ ಗೌರವಿಸಿವೆ. 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಹಾಗೆ ಮೈಸೂರು ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದಲೂ ಕೂಡ ಗೌರವ ಡಾಕ್ಟರೇಟ್ ದೊರೆತಿದೆ. 1966ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿಯೂ ಗೌರವಿಸಲಾಗಿದೆ. ಭಾರತದ ಸರ್ಕಾರ 2023ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. 2016ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ನೀಡಲಾಗಿದೆ. ಇದಿಷ್ಟೇ ಅಲ್ಲದೆ ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ,



Click it and Unblock the Notifications