Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಕೊಡಗಿನಲ್ಲಿ ಪತ್ತೆಯಾಯ್ತು ಅಪರೂಪದ ಶಿವಲಿಂಗ, ಇದರ ವಿಶೇಷತೆಯೇನು?
ರಾಮಾಯಣ -ಮಹಾಭಾರತದ ಎಂಬುವುದು ಬರೀ ಕಾಲ್ಪನಿಕ ಕತೆಗಳು ಅಲ್ಲ, ನಿಜವಾಗಿ ನಡೆದಿದ್ದು ಎಂಬುವುದಕ್ಕೆ ಹಲವು ಸಾಕ್ಷ್ಯಗಳು ಆಗಾಗ ದೊರೆಯುತ್ತಿರುತ್ತದೆ. ಇದೀಗ ಕೊಡಗಿನಲ್ಲಿ ಅಪರೂಪದ ಕಲ್ಲು ಪತ್ತೆಯಾಗಿದ್ದು ಅದನ್ನು ಪಾಂಡವರ ಕಾಲದ ಶಿವಲಿಂಗ ಎಂದು ಹೇಳಲಾಗುತ್ತಿದೆ.
ಕೊಡಗಿನಲ್ಲಿ ಪತ್ತೆಯಾದ ಅಪರೂಪದ ಶಿವಲಿಂಗ
ಕೊಡಗಿನಲ್ಲಿ ಪತ್ತೆಯಾದ ಅಪರೂಪದ ಕಲ್ಲನ್ನು ಪಾಂಡವರ ಕಾಲದಲ್ಲಿದ್ದ ಬೃಹತ್ ಗಾತ್ರದ ಶಿವಲಿಂಗ ಎಂದು ಗುರುತಿಸಲಾಗಿದೆ 4 ಅಡಿ ಎತ್ತರದ ಬೃಹತ್ ಗಾತ್ರದ ಶಿವಲಿಂಗವೊಂದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಕುಂದ ಗ್ರಾಮದಲ್ಲಿ ದೊರೆತಿದೆ, ಈ ಶಿವಲಿಂಗ ಪತ್ತೆಯಾದ ಸುದ್ದಿ ಕೇಳುತ್ತಿದ್ದಂತೆ ಜನರು ಕುತೂಹಲದಿಂದ ಈ ಕಲ್ಲನ್ನು ನೋಡಲು ಬರುತ್ತಿದ್ದಾರೆ.

ಭೂಮಿಯೊಳಗೆ ಶಿವಲಿಂಗವಿದೆ ಎಂದು ಭೂಮಿ ಅಗೆಯಲಾಗಿತ್ತು
ಕಿಲನ್ ಗಣಪತಿ ಎಂಬುವರ ತೋಟದಲ್ಲಿ ಪುರಾತನ ಲಿಂಗ ಮತ್ತು ಇತರೆ ವಸ್ತುಗಳು ದೊರೆತಿವೆ. ಕೆಲವು ದಿನಗಳ ಹಿಂದೆ ಕಲ್ಯಾಟಂಡ ಅಜ್ಜಪ್ಪನವರು, ದರ್ಶನ್ ನಂಜಪ್ಪ ಅವರ ತೋಟದಲ್ಲಿ ಭೂಮಿಯೊಳಗೆ ಶಿವಲಿಂಗವಿದೆ ಎಂದು ಹೇಳಿದ್ದರು. ಅವರ ಮಾತಿನಂತೆ ತೋಟದೊಳಗೆ ಮರವೊಂದರ ಸುತ್ತ ಕಟ್ಟೆಯಂತಿರುವ ಜಾಗವನ್ನು ಅಗೆಸಿದ್ದಾರೆ.ಆದರೆ ಅವರಿಗೂ ಏನು ಸಿಕ್ಕಿರಲಿಲ್ಲ, ಕೊನೆಗೆ ಬೃಹತ್ ಮರವನ್ನು ಜೆಸಿಬಿ ಬಳಸಿ ಬುಡ ಸಮೇತ ಕಿತ್ತಾಗ ಮರದ ಬುಡದ ಆಳದಲ್ಲಿ ಬೃಹತ್ ಶಿವಲಿಂಗ ಪತ್ತೆಯಾಗಿದೆ. ಇದು ಅಲ್ಲಿನ ಗ್ರಾಮಸ್ಥರನ್ನೇ ಬೆರಗುಗೊಳಿಸಿದೆ.
ಸುಮಾರು 800 ವರ್ಷಗಳ ಇತಿಹಾಸವುಳ್ಳ ಗುಮ್ಮಟ್ಟಿರ ಕುಟುಂಬದ ಜಾಗದಲ್ಲಿ ಈ ಶಿವಲಿಂಗ ಪತ್ತೆಯಾಗಿದ್ದು,ಶಿವಲಿಂಗ ಅಪಾರ ಶಕ್ತಿಯನ್ನು ಹೊಂದಿದೆ ಹಿರಿಯರು ಅಭಿಪ್ರಾಯಪಡುತ್ತಿದ್ದಾರೆ. ಶಿವಲಿಂಗದ ಜೊತೆಗೆ ತೀರ್ಥನಳ, ಆನೆಸ್ತಂಭ, ಕಲ್ಲಿನ ಇಟ್ಟಿಗೆಗಳು, ಸೋಮಸೂತ್ರ ಹಾಗೂ ಪಾಣಿಪೀಠ ಸೇರಿದಂತೆ ಲಿಂಗದ ಕೆಳಗೆ ಹಾಸಿದ್ದ ಚಪ್ಪಡಿ ಕಲ್ಲುಗಳು ದೊರೆತಿವೆ.
ಪಾಂಡವರು ಇಲ್ಲಿ ಸಂಚರಿಸಿರಬಹುದೇ?
ಇತಿಹಾಸ ಪ್ರಸಿದ್ಧ ಕುಂದ ಬೆಟ್ಟದ ಈಶ್ವರ ದೇವಾಲಯದಿಂದ ಅಣತಿ ದೂರದಲ್ಲಿಯೇ ಈ ಶಿವಲಿಂಗ ಪತ್ತೆಯಾಗಿದೆ.ಪಾಂಡವರು ಈ ಭಾಗದಲ್ಲಿ ಸಂಚರಿಸುತ್ತಿದ್ದ ವೇಳೆ ಶಿವನ ಪೂಜೆಗಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಿರಬಹುದು ಎಂದು ಶಿಲ್ಪಿ ಶಿವಕುಮಾರ್ ಹೇಳಿದ್ದಾರೆ.ಈ ಕುರಿತು ಮಾತನಾಡಿರುವ ದರ್ಶನ ನಂಜಪ್ಪ ಮರದ ಬುಡದ ಆಳದಲ್ಲಿ ದೊರೆತಿರುವ ಶಿವಲಿಂಗ, ಪಾಣಿಪೀಠ ಸೇರಿದಂತೆ ಇತರೆ ವಸ್ತುಗಳನ್ನು ಸದ್ಯ ಒಂದೆಡೆ ರಕ್ಷಿಸಿ ಇಟ್ಟಿದ್ದೇವೆ. ಶಿವಲಿಂಗದ ಒಂದು ಭಾಗಕ್ಕೆ ಹಾನಿಯಾಗಿದೆ.
ಪಾಂಡವರ ಕಾಲದ ಕಲ್ಲು ಎಂಬ ಸಂಶಯಕ್ಕೆ ಕಾರಣವೇನು?
ಹಿಂದಿನ ಕಾಲದಲ್ಲಿ ಬಿಳಿ ಕಲ್ಲಿನಿಂದ ಹಾಗೂ ಕಾಡುಕಲ್ಲುಗಳಿಂದ ಶಿವಲಿಂಗ ಮಾಡುತ್ತಿದ್ದರು. ಅದೇ ಕಲ್ಲುಗಳನ್ನು ಬಳಸಿ ಶಿವಲಿಂಗ ಮಾಡಿರುವುದು ಗೊತ್ತಾಗಿದೆ. ಕೊಡಗು ಹಿಂದೆ ಪ್ರತ್ಯೇಕ ರಾಜ್ಯವಾಗಿದ್ದ ಸಂದರ್ಭದಲ್ಲಿ ಅದನ್ನು ಲಿಂಗಾಯಿತ ರಾಜರು ಆಳ್ವಿಕೆ ಮಾಡುತ್ತಿದ್ದರು. ಹೀಗಾಗಿ ಆ ಸಂದರ್ಭದ ಇದ್ದಂಥ ಶಿವಲಿಂಗ ಇದಾಗಿರಬಹುದೇ ಎನ್ನುವ ಅನುಮಾನಗಳಿವೆ. ಇದನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿ ಮಾಹಿತಿ ನೀಡಬೇಕಾಗಿದೆ.



Click it and Unblock the Notifications