Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಕ್ರ ಗೋಚಾರ : ಈ 4 ರಾಶಿಯವರಿಗೆ ಎಲ್ಲಾ ಕೆಲಸದಲ್ಲೂ ಹಿನ್ನಡೆ!
ಜ್ಯೋತಿಷ್ಯದ ಶ್ರಾಸ್ತ್ರದ ಪ್ರಕಾರ ಶುಕ್ರ ಗ್ರಹವು ಕಲೆ, ಸೌಂದರ್ಯ, ಮದುವೆ, ಪ್ರೀತಿ ಮತ್ತು ಭೌತಿಕ ಸಂತೋಷಗಳೊಂದಿಗೆ ಸಂಬಂಧವನ್ನು ಹೊಂದಿದೆ. ಇದು ಸಂಪತ್ತು, ಐಷಾರಾಮಿ, ದೈಹಿಕ ಸೌಕರ್ಯ ಮತ್ತು ಶ್ರೀಮಂತಿಕೆಯ ಸಂಕೇತವೆಂದು ಪರಿಗಣಿಸಲಾಗಿದೆ.
ಹೀಗಾಗಿ ಶುಕ್ರನು ವಿವಿಧ ರಾಶಿಯ ಮೂಲಕ ಸಾಗಿದಾಗ ಅದು ಪ್ರತಿ ರಾಶಿಗೆ ಸೇರಿದ ವ್ಯಕ್ತಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪ್ರಭಾವಗಳನ್ನು ಬೀರುತ್ತದೆ. ಆಗಸ್ಟ್ 7 ರಂದು ಶುಕ್ರನು ಕರ್ಕಾಟಕ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಇದರ ನೇರ ಪರಿಣಾಮ ನಾಲ್ಕು ರಾಶಿಯವರ ಮೇಲೆ ಬೀಳಲಿದೆ. ಅಷ್ಟಕ್ಕು ಆ ನಾಲ್ಕು ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಕನ್ಯಾ ರಾಶಿ
ಕರ್ಕಾಟಕ ರಾಶಿಯಲ್ಲಿ ಶುಕ್ರನು ಸಂಚಾರ ಮಾಡುತ್ತಿರುವ ಸಮಯದಲ್ಲಿ ಕನ್ಯಾರಾಶಿಯವರು ಕೆಲವು ಸವಾಲುಗಳನ್ನು ಎದುರಿಸಬೇಕಾಗಿರುವುದರಿಂದ ಎಚ್ಚರಿಕೆಯಿಂದ ಇರಬೇಕು. ಹಾಗೂ ಯಾವುದೇ ಕೆಲಸ ಮಾಡುವಾಗ ಯೋಚಿಸಿ ಮುನ್ನಡೆಯೋದು ತುಂಬಾನೇ ಮುಖ್ಯ. ವಿದ್ಯಾರ್ಥಿಗಳು ಶೈಕ್ಷಣಿಕ ಅಡೆತಡೆಗಳನ್ನು ಎದುರಿಸಬಹುದು. ಈ ರಾಶಿಯವರಿಗೆ ಗಂಟಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ತೊಂದರೆ ನೀಡಬಹುದು. ನಿಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿದರೆ ಉತ್ತಮ.
ಈ ಸಮಯದಲ್ಲಿ ಆರ್ಥಿಕವಾಗಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತದೆ. ಮತ್ತು ನಿಮ್ಮ ಉಳಿತಾಯವು ಕಡಿಮೆಯಾಗಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡೋದಕ್ಕೆ ಹೋಗಬೇಡಿ. ನಿಮ್ಮ ಆಪ್ತರ ಜೊತೆಗೆ ಘರ್ಷಣೆಗಳು ಉಂಟಾಗುವ ಸಾಧ್ಯತೆಯಿದೆ. ಮತ್ತು ನಿಮ್ಮ ಕುಟುಂಬದಲ್ಲಿ ವಿವಾದಗಳು ಉಂಟಾಗಬಹುದು. ಉದ್ಯೋಗಾಕಾಂಕ್ಷಿಗಳು ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ಶುಕ್ರನೊಂದಿಗೆ ಕೇತುವಿನ ಸಂಯೋಗದಿಂದ ಋಣಾತ್ಮಕ ಪರಿಣಾಮಗಳು ಬೀರುತ್ತದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ ಕರ್ಕಾಟಕದಲ್ಲಿ ಶುಕ್ರನ ಸಂಚಾರವು ಅಶುಭಕರವಾಗಿರುತ್ತದೆ. ಈ ಅವಧಿಯಲ್ಲಿ ಅವರು ಆರ್ಥಿಕ ತೊಂದರೆಗಳನ್ನು ಮತ್ತು ಕೌಟುಂಬಿಕ ಕಲಹಗಳನ್ನು ಎದುರಿಸಬಹುದು. ಯಾವುದೇ ಹೂಡಿಕೆಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರುವುದು ತುಂಬಾನೇ ಮುಖ್ಯ. ಹೂಡಿಕೆಗಳಿಂದ ನೀವು ನಷ್ಟ ಅನುಭವಿಸಬಹುದು.
ವೈವಾಹಿಕ ಸಂಬಂಧಗಳಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ. ಮತ್ತು ತಪ್ಪು ತಿಳುವಳಿಕೆಗಳು ಹೆಚ್ಚಾಗಬಹುದು. ಅಶುಭ ಯೋಗದ ಋಣಾತ್ಮಕ ಪ್ರಭಾವವು ಕರ್ಕಾಟಕ ರಾಶಿಯವರ ವೃತ್ತಿ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಬಹುದು.
ಸಿಂಹ ರಾಶಿ
ಸಿಂಹ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಕಾಣುವ ಸಾಧ್ಯತೆಯಿದೆ. ಹಣಕಾಸಿನ ನಷ್ಟದ ಜೊತೆಗೆ ಕೌಟುಂಬಿಕ ವಿವಾದಗಳು ಉಂಟಾಗುತ್ತದೆ. ಈ ಸಮಯದಲ್ಲಿ ಯಾರಿಗೂ ಸಾಲ ನೀಡೋದಕ್ಕೆ ಹೋಗಬೇಡಿ. ವಿದೇಶಿ ಪ್ರಯಾಣ ಮಾಡೋದಕ್ಕೆ ಹೋಗಬೇಡಿ.
ಈ ಸಮಯದಲ್ಲಿ ನಿಮಗೆ ಹೊಟ್ಟೆ, ಹಾರ್ಮೋನುಗಳು ಅಥವಾ ಎದೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ಗಾಯನ, ನೃತ್ಯ ಅಥವಾ ನಟನೆಯಂತಹ ಕಲಾತ್ಮಕ ಅನ್ವೇಷಣೆಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ನಿಮ್ಮ ಹೆಸರಿಗೆ ಕಳಂಕ ತರುವಂತಹ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಜನಿಸಿದವರು ಈ ಸಂಚಾರದ ಸಮಯದಲ್ಲಿ ಜಾಗರೂಕರಾಗಿರಬೇಕು. ಪಾಲುದಾರಿಕೆ ವ್ಯಾಪಾರದಲ್ಲಿ ಘರ್ಷಣೆಗಳು ಉಂಟಾಗಬಹುದು. ವ್ಯವಹಾರದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ಈ ಸಮಯದಲ್ಲಿ ನಿಮಗೆ ಹೊಟ್ಟೆಗೆ ಸಂಬಂಧಿಸಿದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಯಾರ ಜೊತೆಗಾದರೂ ಮಾತನಾಡುವಾಗ ಜಾಗರೂಕರಾಗಿ ಇರಬೇಕು. ಯಾಕಂದ್ರೆ ಸಂವಹನದಿಂದ ತಪ್ಪುಗ್ರಹಿಕೆ ಉಂಟಾಗುವ ಸಾಧ್ಯತೆಯಿದೆ. ಇದು ಇತರರ ಜೊತೆಗಿನ ಸಂಬಂಧವನ್ನು ಹದಗೆಡಿಸುತ್ತದೆ. ಈ ಸಂಚಾರದಿಂದ ಆರೋಗ್ಯ ಸಂಬಂಧಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಜಾಗರೂಕರಾಗಿರಿ.



Click it and Unblock the Notifications