Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಮೇಷರಾಶಿಯಲ್ಲಿ ಒಂದಾದ ರಾಹು-ಶುಕ್ರ! ಈ ನಾಲ್ಕು ರಾಶಿಯವರು ಜಾಗ್ರತೆ
ರಾಹು ಈಗಾಗಲೇ ಮೇಷ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಮಾರ್ಚ್ 12ಕ್ಕೆ ಶುಕ್ರನು ಮೇಷ ರಾಶಿಗೆ ಸಂಚರಿಸಿದ್ದು, ಹೀಗಾಗಿ ರಾಹು ಹಾಗೂ ಶುಕ್ರನು ಮೇಷ ರಾಶಿಯಲ್ಲಿ ಒಟ್ಟಾಗಿದ್ದಾರೆ. ಹೀಗಾಗಿ ರಾಹುವಿನ ಕೆಟ್ಟ ನೆರಳು ಕೆಲವೊಂದು ರಾಶಿಗಳ ಮೇಲೆ ಋಣಾತ್ಮಕ ಪರಿಣಾಮವನ್ನೇ ಉಂಟುಮಾಡಲಿದೆ.
ಶುಕ್ರನನ್ನು ದೈಹಿಕ ಸಂತೋಷ, ಕಲೆ ಮತ್ತು ಸೌಂದರ್ಯದ ಅಂಶವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಶುಕ್ರ ಗ್ರಹವು ಜೀವನದಲ್ಲಿ ಬಹಳ ಮಂಗಳಕರ ಫಲಿತಾಂಶವನ್ನು ನೀಡುತ್ತದೆ. ಆದರೆ ರಾಹು, ಕೇತು ಅಥವಾ ಮಂಗಳದೊಂದಿಗೆ ಅದರ ಸಂಯೋಗವು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡೋದಂತೂ ಸುಳ್ಳಲ್ಲ.

2023, ಮಾರ್ಚ್ 12 ರಿಂದ ಏಪ್ರಿಲ್ 6 ರ ತನಕ ರಾಹು ಹಾಗೂ ಶುಕ್ರ ಒಟ್ಟಾಗಿ ಮೇಷ ರಾಶಿಯಲ್ಲಿ ನಲೆಸಲಿದ್ದು, ಇದರ ಪರಿಣಾಮವನ್ನು ನಾಲ್ಕು ರಾಶಿಯವರು ಖಂಡಿತ ಎದುರಿಸಬೇಕಾಗುತ್ತದೆ. ಹಾಗಾದ್ರೆ ಆ ನಾಲ್ಕು ರಾಶಿಗಳು ಯಾವುದು? ಅದಕ್ಕೆ ಪರಿಹಾರವೇನು ಅನ್ನೋದನ್ನ ತಿಳಿಯೋಣ.

ಮೇಷ ರಾಶಿ
ಮೇಷರಾಶಿಯಲ್ಲೇ ರಾಹು ಹಾಗೂ ಶುಕ್ರ ಒಂದಾಗುತ್ತಿದ್ದಾರೆ. ಇದು ನೇರವಾಗಿ ನಿಮ್ಮ ಸಂಬಂಧದ ಮೇಲೆ ಪರಿಣಾಮವನ್ನು ಉಂಟು ಮಾಡಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮಗೆ ಅಗತ್ಯವಿರದ ವ್ಯಕ್ತಿಗೆ ನೀವು ಹತ್ತಿರವಾಗುತ್ತೀರಿ. ಹಾಗೂ ನಿಮ್ಮ ಸಂಗಾತಿಯಿಂದ ನಿಮಗೆ ಮೋಸವಾಗುತ್ತದೆ. ಪ್ರೀತಿಯ ವಿಚಾರದಲ್ಲಿ ನಿಮ್ಮ ಗೊಂದಲ ಹಾಗೆಯೇ ಮುಂದುವರಿಯುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಾಪಾಡಿಕೊಳ್ಳಲು ನೀವು ಕಠಿಣ ಪರಿಶ್ರಮ ಪಡಬೇಕಾಗುತ್ತದೆ.

ವೃಷಭ ರಾಶಿ
ರಾಹು-ಶುಕ್ರ ಸಂಯೋಗ ಆಗುತ್ತಿರುವುದರಿಂದ ವೃಷಭ ರಾಶಿಯವರ ಹೊಸ ಸಂಬಂಧಗಳನ್ನು ಮಾಡುವಾಗ ಮುಂಜಾಗೃತೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಇನ್ನೂ ನಿಮ್ಮ ಪ್ರೀತಿ ವಿಚಾರದಲ್ಲೂ ಹಾಗೆಯೇ ಅಳೆದು-ತೂಗಿ ನಿರ್ಧಾರ ತೆಗೆದುಕೊಳ್ಳಿ. ಇನ್ನೂ ಈ ಸಮಯದಲ್ಲಿ ನಿಮ್ಮ ಮಾತು ಹಾಗೂ ನಡವಳಿಕೆಯಲ್ಲಿ ಹಿಡಿತವಿರಲಿ. ನಿಮ್ಮ ಮಾತಿನಿಂದ ಬೇರೆಯವರಿಗೆ ನೋವಾಗದಂತೆ ಎಚ್ಚರಿಕೆ ವಹಿಸಿ.

ಕನ್ಯಾ ರಾಶಿ
ರಾಹು ಹಾಗೂ ಶುಕ್ರ ಮೇಷ ರಾಶಿಯಲ್ಲಿ ಒಟ್ಟಾಗುತ್ತಿರೋದ್ರಿಂದ ನಿಮ್ಮ ಮಾತಿನಲ್ಲಿ ಹಿಡಿತವಿರಲಿ. ಯಾಕಂದ್ರೆ ನಿಮ್ಮ ಮಾತು ಸಂಬಂಧಗಳನ್ನು ಹಾಳು ಮಾಡಬಹುದು. ಇನ್ನೂ ಪ್ರಯಣ ಮಾಡುವಾಗ ಜಾಗರೂಕತೆಯಿಂದ ವಾಹನವನ್ನು ಚಲಾಯಿಸಿ. ಇಲ್ಲದಿದ್ದರೆ ಅಪಾಯ ಖಂಡಿತ. ಇನ್ನೂ ನಿಮ್ಮ ಸಂಗಾತಿಗೆ ಪ್ರಾಶಸ್ತ್ಯ ನೀಡಿ ಅವರೊಂದಿಗೆ ಕಟುವಾಗಿ ನಡೆದುಕೊಳ್ಳಲೇಬೇಡಿ.

ಮೀನರಾಶಿ
ರಾಹು-ಶುಕ್ರನ ಸಂಯೋಗದ ಪರಿಣಾಮ ಮೀನ ರಾಶಿಯವರಲ್ಲಿ ಉದ್ವೇಗ ಹೆಚ್ಚಾಗುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ತುಂಬಾನೇ ಜಾಗರೂಕರಾಗಿರಬೇಕು. ಸಮಸ್ಯೆಗಳನ್ನು ಪರಿಹರಿಸುವಾಗ ತೊಂದರೆ ಎದುರಾಗಬಹುದು. ಈ ಸಮಯದಲ್ಲಿ ನಿಮಗೆ ಕುಟುಂಬದ ಸಹಕಾರ ದೊರೆಯೋದಿಲ್ಲ.

ಪರಿಹಾರ ಕ್ರಮಗಳೇನು?
ರಾಹು ಹಾಗೂ ಶುಕ್ರನ ಸಂಯೋಗ ಮನುಷ್ಯನಿಗೆ ಅನೇಕ ರೀತಿಯ ಸಮಸ್ಯೆಗಳನ್ನು ತಂದೊಡ್ಡೋದಂತೂ ಸುಳ್ಳಲ್ಲ. ಹೀಗಾಗಿ ಪ್ರತಿ ದಿನ ಬೆಳಗ್ಗೆ ಎದ್ದು "ಓಂ ಶನ್ ಶುಕ್ರಯಾ ನಮಃ" ಮಂತ್ರವನ್ನು ಪಠಿಸಿ. ಹಾಗೂ ಪ್ರತಿ ಶುಕ್ರವಾರ ಉಪವಾಸ ವೃತ ಆಚರಣೆ ಮಾಡಿ. ಹಾಗೆಯೇ ಶುಕ್ರವಾರದ ದಿನ ಬಿಳಿ ಬಟ್ಟೆಗಳನ್ನೇ ಧರಿಸಿ. ಜ್ಯೋತಿಷಿಗಳನ್ನು ಸಂಪರ್ಕಿಸಿದ ನಂತರ ಶುಕ್ರನ ರತ್ನವಾದ ವಜ್ರ ಅಥವಾ ಒಪಲ್ ಮಣಿ ಧರಿಸಿ. ಇನ್ನೂ ರಾಹುವಿನ ಪರಿಣಾಮವನ್ನು ಕಡಿಮೆ ಮಾಡಲು ಪಕ್ಷಿಗಳಿಗೆ ಆಹಾರ ನೀಡಿ ಮತ್ತು ನಿರ್ಗತಿಕರಿಗೆ ಅನ್ನ ದಾನ ಮಾಡಿದರೆ ಒಳ್ಳೆಯದು.
ರಾಹು-ಶುಕ್ರನ ವಕ್ರ ದೃಷ್ಟಿ ನಾಲ್ಕು ರಾಶಿಗಳ ಮೇಲೆ ಪ್ರಭಾವ ಬೀರುವುದರಿಂದ ಮುಂಜಾಗೃತೆಯಿಂದ ಇರೋದು ತುಂಬಾನೇ ಒಳ್ಳೆಯದು. ಗಂಡಾಂತರ ಕಳೆಯೋದಕ್ಕೆ ಕೆಲವೊಂದು ಪರಿಹಾರಗಳನ್ನು ಮಾಡಲೇಬೇಕು.



Click it and Unblock the Notifications