Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
Valmiki Jayanti: ರತ್ನಾಕರನಾಗಿದ್ದ ವ್ಯಕ್ತಿ ವಾಲ್ಮೀಕಿ ಆಗಿದ್ದೇಗೆ? ರಾಮಾಯಾಣ ಬರೆದಿದ್ದೇಕೆ?
Valmiki Jayanti: ನಾಳೆ ನಾಡಿನಾದ್ಯಂತ ಮಹರ್ಷಿ ವಾಲ್ಮೀಕಿ ಜನ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 7ರಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ಇದಕ್ಕಾಗಿ ಪ್ರತಿ ಜಿಲ್ಲಾಡಳಿತಗಳು ತಯಾರಿ ನಡೆಸುವುದು ನೋಡಬಹುದು. ಆದ್ರೆ ಬಹುತೇಕರಿಗೆ ಈ ವಾಲ್ಮೀಕಿ ಯಾರು? ಅವರ ಜಯಂತಿ ಏಕೆ ಆಚರಿಸುತ್ತಾರೆ ಎಂಬುದು ತಿಳಿದಿರುವುದಿಲ್ಲ. ಹಾಗಾದ್ರೆ ನಾವಿಂದು ಈ ವಾಲ್ಮೀಕಿ ಯಾರು? ಅವರ ಜಯಂತಿ ಆಚಿಸುವುದೇಕೆ? ಎಂಬ ಕುರಿತಾಗಿ ತಿಳಿದುಕೊಳ್ಳೋಣ.
ರಾಮಾಯಣ ಮಹಾಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿಯವರ ಜನ್ಮ ದಿನಾಚರಣೆಯನ್ನು ಆಚರಿಸುವುದು ನೋಡಬಹುದು. ರಾಮಾಯಣವು ಹಿಂದೂಗಳ ಪ್ರಮುಖ ಧರ್ಮಗ್ರಂಥ. ರಾಮಾಯಣವನ್ನು ಬರೆದವರು ವಾಲ್ಮೀಕಿ ಮಹರ್ಷಿಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ರಾಚೀನ ವೈದಿಕ ಕಾಲದ ಮಹಾನ್ ಋಷಿಗಳಲ್ಲಿ ಮಹರ್ಷಿ ವಾಲ್ಮೀಕಿ ಉನ್ನತ ಸ್ಥಾನವನ್ನು ಹೊಂದಿದ್ದಾರೆ.

ರಾಮಾಯಣ ಗ್ರಂಥವನ್ನು ರಚಿಸಿದ ಬಳಿಕ ಅವರಿಗೆ ಮಹರ್ಷಿ ಎಂಬ ಬಿರುದು ಬಂದಿದೆ ಎಂದು ಹೇಳಲಾಗುತ್ತದೆ. ಇದು ಅವರ ಜನ್ಮ ದಿನದ ಅಂಗವಾಗಿ ಇಡೀ ದೇಶದಾದ್ಯಂತ ಅವರನ್ನು ನೆನೆಯುವ ಸಲುವಾಗಿ ಸಾರ್ವಜನಿಕ ರಜೆ ಘೋಷಣೆಯೊಂದಿಗೆ ಆಚರಿಸಲಾಗುತ್ತದೆ.
ಮಹರ್ಷಿ ವಾಲ್ಮೀಕಿ ಯಾರು?
ಮಹರ್ಷಿ ವಾಲ್ಮೀಕಿಯು ಪ್ರಾಚೇತಸ ಎಂಬ ಋಷಿಯ ಪುತ್ರ ಎಂದು ನಂಬಲಾಗಿದೆ. ಈ ಪ್ರಾಚೇತಸ ಬ್ರಹ್ಮನಿಂದ ಸೃಷ್ಟಿಯಾದ ಋಷಿ ಎಂಬುದಾಗಿಯೂ ಹೇಳಲಾಗಿದೆ. ವಾಲ್ಮೀಕಿಯ ಮೂಲಕ ಹೆಸರು ರತ್ನಾಕರ. ಆತ ತಾನು ಯುವಕನಾಗಿದ್ದಾಗ ಡಕಾಯಿತ, ಕಳ್ಳನಾದನು, ದುರ್ಜನರ ಸಹವಾಸದಿಂದ ಆತ ದುರ್ನಡತೆಯ ಕಲಿತು ಕೆಟ್ಟ ಹಾದಿಯಲ್ಲಿ ನಡೆಯುತ್ತಿದ್ದ. ಆದ್ರೆ ಋಷಿಯೊಬ್ಬರು ಸಿಕ್ಕಿ ರತ್ನಾಕರನನ್ನು ಬದಲಾಯಿಸಿದರು. ಆತನಿಗೆ ಮಂತ್ರೋಪದೇಶ ಮಾಡಿದರು ಎಂದು ಹೇಳಲಾಗಿದೆ.
ಮಂತ್ರೋಪದೇಶದ ಬಳಿಕ ವಾಲ್ಮೀಕಿ ಹಲವು ವರ್ಷಗಳ ಕಾಲ ಧ್ಯಾನದಲ್ಲಿ ಕಳೆದರು ಎನ್ನಲಾಗಿದೆ. ದೀರ್ಘ ತಪಸ್ಸು ಮಾಡುವುದಕ್ಕೆ ಮುಂದಾದಾಗ ಅವರ ಸುತ್ತಲೂ ಹುತ್ತ ಬೆಳೆದಿತ್ತಂತೆ. ನಂತರ ಅದು ದೊಡ್ಡದಾಗಿ ಇಡೀ ದೇಹವನ್ನು ಆವರಿಸಿತ್ತಂತೆ ಮುಂದೆ ಹುತ್ತದಿಂದ ಸಾಧು ಹೊರಬರುವುದನ್ನು ಕಂಡ ಬಳಿಕ ಅವರಿಗೆ ವಾಲ್ಮೀಕಿ ಎಂದು ಕರೆಯಲಾಯಿತು ಎಂದು ಹೇಳಲಾಗಿದೆ.
ಈ ದೀರ್ಘ ತಪಸ್ಸಿನ ಬಳಿಕ ಅವರು ರಾಮಾಯಣ ಕೃತಿ ರಚಿಸಿದ್ದರು. ಹಾಗೆ ಇದಾದ ಬಳಿಕ ಅವರು ಮಹರ್ಷಿಗಳಾದರು ಎಂದು ಹೇಳಲಾಗಿದೆ. ವಾಲ್ಮೀಕಿ ಮುನಿಯು ತಮಸಾ ನದಿಯ ದಡದಲ್ಲಿದ್ದಾಗ ಅಲ್ಲಿಗೆ ನಾರದರು ಬರುತ್ತಾರೆ. ಆಗ ನಾರದರು ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳಿಗೆ ವಿವರಿಸುತ್ತಾರೆ. ಇದು ರಾಮಾಯಣ ರಚಿಸಲು ಅವರಿಗೆ ಸ್ಪೂರ್ತಿಯಾಗಿತ್ತು ಎಂದು ಕೂಡ ಹೇಳಲಾಗಿದೆ.
ಇದಾದ ಬಳಿಕ ಹಲವು ರೀತಿಯ ರಾಮಾಯಣ ರಚಿಸಿರುವುದು ನೋಡಬಹುದು. ಆದ್ರೆ ವಾಲ್ಮೀಕಿ ರಾಮಾಯಣವೇ ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದು ಇಂದಿಗೂ ಪರಿಗಣಿಸಲಾಗಿದೆ. ಪ್ರಗತ್ ದಿವಸ ಎಂದೂ ಕರೆಯಲ್ಪಡುವ ಈ ದಿನದಂದು, ವಾಲ್ಮೀಕಿ ಸಮುದಾಯದ ಮಂದಿ ವಾಲ್ಮೀಕಿ ಋಷಿಯನ್ನು ದೇವರ ರೂಪವೆಂದು ಪೂಜಿಸುತ್ತಾರೆ. ಶೋಭಾ ಯಾತ್ರೆಗಳು ಅಥವಾ ಮೆರವಣಿಗೆಗಳನ್ನು ಮಾಡುತ್ತಾರೆ. ಭಕ್ತಿ ಸ್ತೋತ್ರಗಳು ಮತ್ತು ಭಜನೆಗಳನ್ನು ಹಾಡುತ್ತಾರೆ. ಹಾಗೆ ದಾನ ಧರ್ಮದಲ್ಲಿ ತೊಡಗುವುದು ನೋಡಬಹುದು. ಮಹರ್ಷಿ ವಾಲ್ಮೀಕಿಯ ಪ್ರತಿಮೆ ಅಥವಾ ಚಿತ್ರದ ಮುಂದೆ ದೀಪವನ್ನು ಬೆಳಗಿಸಿ, ಹೂವುಗಳ ಅರ್ಪಿಸಿ ಪೂಜಿಸಲಾಗುತ್ತದೆ. ಈ ದಿನದಂದು ಉಪವಾಸ ಸಹ ಮಾಡುವುದು ನೋಡಬಹುದು.
ಈ ವಾಲ್ಮೀಕಿ ಜನಾಂಗಕ್ಕೆ ಸೇರಿದ ದಲಿತರು, ಉತ್ತರ ಭಾರತದ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ, ಬಿಹಾರದಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಹೀಗಾಗಿ ಉತ್ತರ ಭಾರತದಲ್ಲಿ ವಾಲ್ಮೀಕಿ ಜಯಂತಿ ಸಂಭ್ರಮದಿಂದ ಆಚರಿಸುವುದು ನೋಡಬಹುದು.



Click it and Unblock the Notifications











