Latest Updates
-
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ
ಜನವರಿ 10ಕ್ಕೆ ವೈಕುಂಠ ಏಕಾದಶಿ: ಈ ದಿನ ಈಕಾರ್ಯ ಮಾಡಿದರೆ ಆರ್ಥಿಕ ಸಮಸ್ಯೆ ದೂರಾಗುವುದು
ವರ್ಷದ ಮೊದಲ ವೈಕುಂಠ ಏಕಾದಶಿ. ವೈಕುಂಠ ಏಕಾದಶಿ ತಿಥಿ ಜನವರಿ 9 ಮಧ್ಯಾಹ್ನ 12:22ಕ್ಕೆ ಪ್ರಾರಂಭವಾಗಲಿದೆ, ವೈಕುಂಠ ಏಕಾದಶಿ ತಿಥಿ ಜನವರಿ 10 ಬೆಳಗ್ಗೆ 10:19ಕ್ಕೆ ಮುಕ್ತಾಯವಾಗಲಿದೆ. ಉದಯ ತಿಥಿ ಜನವರಿ 10ಕ್ಕೆ ಬಂದಿರುವುದರಿಂದ ಜನವರಿ 10ಕ್ಕೆ ಆಚರಿಸಲಾಗುವುದು. ಈ ದಿನ ಉಪವಾಸವಿದ್ದು ವೈಕುಂಠ ಏಕಾದಶಿಯನ್ನು ಆಚರಿಸಲಾಗುವುದು.
ವೈಕುಂಠ ಏಕಾದಶಿಯಂದು ಮಾಡುವ ಉಪವಾಸಕ್ಕೆ ತುಂಬಾನೇ ಮಹತ್ವವಿದೆ ವೈಕುಂಠ ಏಕಾದಶಿಯಂದು ಯಾರು ಉಪವಾಸ ಮಾಡುತ್ತೀರೋ ಅವರು ತುಂಬಾನೇ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಲಾಗುವುದು. ಈ ದಿನ ಉಪವಾಸವಿದ್ದು ಪೂಜೆ ಮಾಡಿದರೆ ಎಲ್ಲಾ ಪಾಪಗಳು ಕಳೆದು ಹೋಗುವುದು ಎಂದು ಹೇಳಲಾಗುವುದು. ವೈಕುಂಠ ಏಕಾದಶಿಯನ್ನು ಮಾಡಿದರೆ ಅವರಿಗೆ ಮರಣ ವೈಕುಂಠಕ್ಕೆ ಹೋಗಲು ಸಾಧ್ಯವಾಗುವುದು ಎಂಬುವುದು ನಂಬಿಕೆ.

ವೈಕುಂಠ ಏಕಾದಶಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಬೇಕು. ನಂತರ ಪೂಜಾ ಕೋಣೆಯನ್ನು ಸ್ವಚ್ಚಗೊಳಿಸಬೇಕು, ಶ್ರೀ ವಿಷ್ಣುವಿನ ಫೋಟೋವನ್ನು ಒರೆಸಿ ಅದಕ್ಕೆ ಅಲಂಕಾರ ಮಾಡಬೇಕು.
ಶ್ರೀ ವಿಷ್ಣುವಿಗೆ ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಿ, ಹಳದಿ ಬಣ್ಣದ ಹಣ್ಣುಗಳನ್ನು ಅರ್ಪಿಸಿ
ಶ್ರೀವಿಷ್ಣುವಿನ ಮಂತ್ರಗಳನ್ನು ಹೇಳುತ್ತಾ ಮಂತ್ರಗಳನ್ನು ಪಠಿಸಿ
ಶ್ರೀವಿಷ್ಣುವಿನ ಜೊತೆ ಲಕ್ಷ್ಮಿಯನ್ನು ಪೂಜಿಸಿ.
ವೈಕುಂಠ ಏಕಾದಶಿ ತಿಥಿ
ಜನವರಿ 10
ದ್ವಾದಶ ತಿಥಿ ಪ್ರಾರಂಭ ಜನವರಿ 9 ಮಧ್ಯಾಹ್ನ 12:22ಕ್ಕೆ ಪ್ರಾರಂಭ
ಏಕಾದಶಿ ತಿಥಿ ಮುಕ್ತಾಯ ಜನವರಿ 10 ಬೆಳಗ್ಗೆ 10:19ಕ್ಕೆ ಮುಕ್ತಾಯ
ಪಾರಣ ಸಮಯ: ಬೆಳಗ್ಗೆ 06:45ರಿಂದ 08:21ರವರೆಗೆ ಇರಲಿದೆ.
ವೈಕುಂಠ ಏಕಾದಶಿಯಂದು ಈ ವಸ್ತುಗಳನ್ನು ಮನೆಗೆ ತಂದರೆ ಒಳ್ಳೆಯದು
ವೈಕುಂಠ ಏಕಾದಶಿಯಂದು ಮನೆಗೆ 5 ಹಳದಿ ಬಣ್ಣದ ಕವಡೆಗಳನ್ನು ತಂದರೆ ಶುಭ ಎಂದು ಪರಿಗಣಿಸಲಾಗಿದೆ. ಕವಡೆಗಳನ್ನು ತಂದು ಅದನ್ನು ಹಾಲಿನಲ್ಲಿ ತೊಳೆದು ದೇವರ ಕೋಣೆಯಲ್ಲಿಟ್ಟು ಪೂಜಿಸಬೇಕು. ನಂತರ ಆ ಕವಡೆಯನ್ನು ಹಳದಿ ಬಟ್ಟೆಯಲ್ಲಿ ಟ್ಟಿ ಬೀರುವಿನಲ್ಲಿಟ್ಟರೆ ಲಕ್ಷ್ಮಿ ಕೃಪೆ ಸದಾ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ.
ವೈಕುಂಠ ಏಕಾದಶಿಯಂದು ಕಪ್ಪು ವಸ್ತ್ರ ಧರಿಸಬೇಡಿ
ನೀವು ವೈಕುಂಠ ಏಕಾದಶಿಗೆ ಕಪ್ಪು ವಸ್ತ್ರ ಧರಿಸಬೇಡಿ, ಅದರ ಬದಲಿಗೆ ಹಳದಿ ಬಣ್ಣದ ವಸ್ತ್ರ ಧರಿಸಿ ಪೂಜೆಯನ್ನು ಮಾಡಿದರೆ ಒಳ್ಳೆಯದು.
ಈ ದಿನ ದೇವಾಲಯಕ್ಕೆ ಹೋದಾಗ ಹುಂಡಿಗೆ ಹಣದ ಜೊತೆ ಸ್ವಲ್ಪ ಏಲಕ್ಕಿ ಕೂಡ ಹಾಕಿ ಬನ್ನಿ: ಆರ್ಥಿಕ ಸಮಸ್ಯೆ ಇರುವವರು ದೇವಾಲಯದ ಹುಂಡಿಗೆ ಎರಡು ಏಲಕ್ಕಿ ಹಾಕಿ ಬಂದರೆ ಇದರಿಂದ ಸಂಕಷ್ಟಗಳು ದೂರಾಗುವುದು ಎಂಬ ನಂಬಿಕೆ ಇದೆ.
ಏಕಾಶಿಯಂದು ಭಗವದ್ಗೀತೆ ಓದಿದರೆ ಒಳ್ಳೆಯದು
ಏಕಾದಶಿಯಂದು ಪವಿತ್ರ ಗ್ರಂಥವಾದ ಭಗವದ್ಗೀತೆ ಓದಬೇಕು. ಇದನ್ನು ಓದುವುದರಿಂದ ಮನಸ್ಸಿನ ಗೊಂದಲಗಳು ದೂರಾಗುವುದು, ಜ್ಞಾನ ಹೆಚ್ಚಾಗಲಿದೆ.
ಪಚ್ಚೆ ಕರ್ಪೂರ ತನ್ನಿ
ವೈಕುಂಠ ಏಕಾದಶಿಯಂದು ಪಚ್ಚೆ ಕರ್ಪೂರದಿಂದ ದೇವರಿಗೆ ಆರತಿ ಎತ್ತಿ, ಸ್ವಲ್ಪ ಪಚ್ಚೆ ಕರ್ಪೂರವನ್ನು ನೀರಿನಲ್ಲಿ ಕಲೆಸಿ ಅದನ್ನು ಮನೆಯ ಮೂಲೆ-ಮೂಲೆಯಲ್ಲಿ ಚಿಮುಕಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.
ಹೆಣ್ಣಕ್ಕಳಿಗೆ ಕೆಂಪು ಹಾಗೂ ಹಸಿರು ಬಣ್ಣದ ಬಳೆಗಳನ್ನು ನೀಡಿ
ಈ ದಿನ ಶ್ರೀ ವಿಷ್ಣುವಿಗೆ ಪೂಜೆ ಮಾಡಿ ನಂತರ ಹೆಣ್ಮಕ್ಕಳಿಗೆ ಕೆಂಪು ಮತ್ತು ಹಸಿರು ಬಣ್ಣದ ಬಳೆಗಳನ್ನು ನೀಡಿ.
ದಾನ ಮಾಡಿ
ವೈಕುಂಠ ಏಕಾದಶಿಯಂದು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡಿ ಇದರಿಂದ ನಿಮ್ಮ ಕಷ್ಟಗಳು ದೂರಾಗುವುದು,



Click it and Unblock the Notifications











