Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬಿಗ್‌ಬಾಸ್‌ಗೆ ವಡಾ ಪಾವ್ ಹುಡುಗಿ..! ಆಕೆ ಒಂದು ದಿನದ ಆದಾಯ ಕೇಳಿದ್ರೆ ತಲೆ ತಿರುಗುತ್ತೆ..!
ಹಿಂದಿ ರಿಯಾಲಿಟಿ ಶೋಗಳಲ್ಲಿ ಹೆಚ್ಚು ಫೇಮಸ್ ಆಗಿರುವ ಬಿಗ್‌ಬಾಸ್ ಒಟಿಟಿ ಸೀಸನ್- 3 ಮತ್ತೆ ಆರಂಭವಾಗಿದೆ. ಈ ಬಾರಿ ಹಲವು ಬದಲಾವಣೆಗಳೊಂದಿಗೆ ಆರಂಭವಾಗುತ್ತಿದೆ. ಬಾಲಿವುಡ್ ನಟ ಅನಿಲ್ ಕಪೂರ್ ಇದೇ ಮೊದಲ ಬಾರಿಗೆ ಈ ಶೋ ನಡೆಸಿಕೊಡಲಿದ್ದಾರೆ. ಇನ್ನೊಂದೆಡೆ ಈ ಬಾರಿ ಭಾರೀ ಸದ್ದು ಮಾಡಿದ್ದು ಸ್ಪರ್ಧಿಗಳು.
ಬಿಲ್‌ಗೇಸ್ಟ್‌ಗೆ ಚಾಯ್ ಮಾಡಿಕೊಟ್ಟು ಸುದ್ದಿಯಾಗಿದ್ದ ಡಾಲಿ ಚಾಯ್ ವಾಲಾ ಈ ಬಾರಿಯ ಒಟಿಟಿ ಸೀಸನ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿತ್ತು, ಆದರೆ ಆಫರ್ ಬಂದಿದ್ದರೂ ನಾನು ಹೋಗುವುದಿಲ್ಲ ಎಂದು ಹೇಳಿ ಆತ ಅಚ್ಚರಿ ಮೂಡಿಸಿದ್ದ. ನಾನು ತಾಯಿ ಹಾಗೂ ನನ್ನ ಟೀ ಅಂಗಡಿ ಬಿಟ್ಟು ಬಿಗ್‌ಬಾಸ್‌ಗೆ ತೆರಳಿ 45 ದಿನ ಇರಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿದ್ದ ಎಂದು ವರದಿಯಾಗಿದೆ.

ಆದರೆ ಈಗ ಸುದ್ದಿಯಾಗುತ್ತಿರುವ ಮತ್ತೊಬ್ಬ ಸ್ಪರ್ಧಿ ಎಂದರೆ ಅದು ವಡಾ ಪಾವ್ ಗರ್ಲ್, ಈ ಬಾರಿ ಸದ್ದು ಮಾಡಿದ್ದ ವಡಾ ಪಾವ್ ಗರ್ಲ್ ಚಂದ್ರಿಕಾ ದೀಕ್ಷಿತ್ ಈಗ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾಳೆ. ಆಕೆಯ ಅಂಗಡಿ ಇಂದ ಇಡೀ ಸರ್ಕಾರ ಹಾಗೂ ಪಾಲಿಕೆ ಅಧಿಕಾರಿಗಳು ಸೇರಿ ಹಲವರ ನಡುವಿನ ಆಕೆಯ ಕಾದಾಟ ಭಾರೀ ಸದ್ದು ಮಾಡಿತ್ತು.
ಜೊತೆಗೆ ಆಕೆಯ ಅಂಗಡಿಯಲ್ಲಿ ಜನರು ಸಾಲಿನಲ್ಲಿ ನಿಂತು ವಡಾ ಪಾವ್ ಸವಿಯುವ ಸುದ್ದಿ ಹಾಗೂ ವಿಡಿಯೋಗಳು ಸಹ ಹರಿದಾಡುತ್ತಿದ್ದವು. ಆದ್ರೆ ಆಕೆಯ ಒಂದು ದಿನದ ಆದಾಯ ಕೇಳಿ ಜನರು ಮಾತ್ರವಲ್ಲ ಒಳಗಿರುವ ಬಿಗ್‌ಬಾಸ್ ಸ್ಪರ್ಧಿಗಳೇ ಶಾಕ್ ಆಗಿದ್ದಾರೆ. ಹೌದು ಆಕೆಯ ಬಳಿ ಐಷಾರಾಮಿ ವಸ್ತುಗಳಿವೆ. ಅಲ್ಲದೆ ಯಾವಾಗಲು ಆಕೆಯ ಅಂಗಡಿ ಗ್ರಾಹಕರಿಂದ ತುಂಬಿರುತ್ತದೆ.
ಆದ್ರೆ ಆಕೆ ದಿನವೊಂದಕ್ಕೆ ಬರೋಬ್ಬರಿ 40 ಸಾವಿರ ರೂಪಾಯಿ ದುಡಿಯುತ್ತಾಳಂತೆ. ರಸ್ತೆ ಬದಿಯ ವಡಾ ಪಾವ್ ಅಂಗಡಿಯಲ್ಲೇ ಆಕೆಗೆ ನಿತ್ಯ 40 ಸಾವಿರ ಆದಾಯವಿದೆ ಎಂದು ಹೇಳಿಕೊಂಡಿದ್ದಾಳೆ. ಬಿಗ್‌ಬಾಸ್ ಮನೆಯಲ್ಲಿ ಮಾತನಾಡಿರುವ ಚಂದ್ರಿಕಾ ದೀಕ್ಷಿತ್ ಅವರು, ವಡಾ ಪಾವ್ ಮಾರಾಟ ಮಾಡಿ ಒಂದು ದಿನಕ್ಕೆ ಬರೋಬ್ಬರಿ 40 ಸಾವಿರ ರೂಪಾಯಿಗಳನ್ನು ಗಳಿಸುತ್ತೇನೆ. ಇದಕ್ಕಾಗಿ ನಾನು ತುಂಬಾ ಕಷ್ಟ ಪಡುತ್ತೇನೆ. ನೀವು ಕಷ್ಟಪಟ್ಟರೇ ಒಳ್ಳೆಯ ಫಲ ಸಿಗುತ್ತದೆ. ಯಾವುದೇ ಕಾರಣಕ್ಕೂ ನೀವು ಸ್ಮಾರ್ಟ್fಫೋನ್ ಅಂತವುಗಳನ್ನ ಬಳಸಬೇಡಿ. ಬೆಳಗ್ಗೆ ಎದ್ದ ತಕ್ಷಣ ಹೊರಗಡೆ ಹೋಗಿ ನಿಮಗಾಗಿ ಕೆಲಸ ಮಾಡಿ ಎಂದು ಆಕೆ ಹೇಳಿದ್ದಾಳೆ.
ದೆಹಲಿಯ ವೈರಲ್ ವಡಾ ಪಾವ್ ಹುಡುಗಿ ಚಂದ್ರಿಕಾ ದೀಕ್ಷಿತ್, ಮಹಾರಾಷ್ಟ್ರದ ತಿಂಡಿಗಳನ್ನು ಮಾರಾಟ ಮಾಡುವ ಮೂಲಕ ಖ್ಯಾತಿ ಪಡೆದಿದ್ದಾರೆ, ಈಗ ಬಿಗ್ ಬಾಸ್ OTT 3 ನಲ್ಲಿ ಸ್ಪರ್ಧಿಯಾಗಿದ್ದಾರೆ. ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ, ಅವರು ತಮ್ಮ ಆದಾಯವನ್ನು ಬಹಿರಂಗಪಡಿಸಿ ಸುದ್ದಿಯಾಗಿದ್ದಾರೆ.
ಆಕೆಯ ಮಾತು ಕೇಳಿ ಉಳಿದ ಸ್ಪರ್ಧಿಗಳು ಶಾಕ್ ಆದರೆ ಇತ್ತ ಜನರು ಸಹ ಇಷ್ಟೊಂದು ಆದಾಯ ತರುವ ಮಾಹಿತಿ ತಿಳಿದು ಅಚ್ಚರಿಗೆ ಒಳಗಾಗಿದ್ದಾರೆ. ಜನರಿಗೆ ಇಷ್ಟವಿಲ್ಲದಿದ್ದರೆ ನಾನು ದಿನಕ್ಕೆ 40,000 ರೂ ಗಳಿಸುತ್ತೇನೆ, ಅವರು ಕಠಿಣ ಪರಿಶ್ರಮವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅವರು ನೆಟ್‌ಫ್ಲಿಕ್ಸ್‌ನಿಂದ ಹೊರಬಂದು, ತಮ್ಮ ಫೋನ್‌ಗಳನ್ನು ಇಟ್ಟು, ಹೊರಗೆ ಹೆಜ್ಜೆ ಹಾಕಬೇಕು ಮತ್ತು ಗಳಿಸಬೇಕು. ಅವರ ತಂದೆ-ತಾಯಿಯ ಸಂಪತ್ತನ್ನು ಅವಲಂಬಿಸುವ ಬದಲು ಅವರ ಸ್ವಂತ ಹಣ ಮಾಡುವ ದಾರಿ ಹುಡುಕಬೇಕು ಎಂದಿದ್ದಾಳೆ.



Click it and Unblock the Notifications
