Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬರೆ ಕುಸಿತ: ಅರ್ಜುನ್ ಲಾರಿಯೊಳಗಡೆ ಇದ್ದರೆ 10 ದಿನಗಳವರೆಗೆ ಬದುಕಿಳಿಯುವ ಸಾಧ್ಯತೆ ಇದೆ!
ಪ್ರಕೃತಿ ಮುಂದೆ ಮಾನವ ಏನು ಅಲ್ಲ ಎಂಬುವುದು ಅವಳು ಪ್ರತಿಬಾರಿ ಮುನಿದು ಕೊಂಡಾಗ ನಮಗೆ ತಿಳಿಸುತ್ತಲೇ ಇರುತ್ತದೆ.
ಆದರೆ ಸ್ವಲ್ಪ ಸಮಯದಲ್ಲಿ ನಾವು ಅವೆಲ್ಲಾ ಮರೆತು ಮತ್ತೆ ಅವಳ ಮೇಲೆ ದಾಳಿ ಮಾಡುತ್ತೇವೆ, ಇದರ ಪರಿಣಾಮ ಬರೆ ಕುಸಿತ, ಪ್ರವಾಹ, ಭೂಕಂಪನ, ಇದೀಗ ಉತ್ತರ ಕನ್ನಡದಲ್ಲಿ ಉಮಟಾಗಿರುವ ಬರೆಕುಸಿತಕ್ಕೆ ಅವೈಜ್ಞಾನಿಕವಾಗಿ ಮಣ್ಣು ತೆಗೆದಿರುವುದು ಎಂದು ಹೇಳಲಾಗುತ್ತಿದೆ, ಈಗ ಕಾರಣಗಳನ್ನು ಹುಡುಕಿಕೊಂಡು ಕೂರುವ ಸಮಯವಲ್ಲ, ಏಕೆಂದರೆ ಆ ಬರೆ ಕುಸಿತದಲ್ಲಿ ಎಷ್ಟು ಜನ ಸಿಲುಕಿಕೊಂಡಿದ್ದಾರೆ ಎಂಬ ನಿಖರ ಮಾಹಿತಿ ಇದುವರೆಗೆ ಸಿಕ್ಕಿಲ್ಲ.

ಬರೆ ಕುಸಿತದಲ್ಲಿ ಮಣ್ಣಿನೊಳಗಡೆ ಸಿಲುಕಿಕೊಂಡ ಕೆಲ ಶವಗಳನ್ನಷ್ಟೆ ಹೊರ ತೆಗೆಯಲಾಗಿದೆ, ಇನ್ನಷ್ಟು ಜನ ಉಸಿರು ಕಟ್ಟಿ ಸತ್ತು ಹೋಗಿದ್ದಾರೆ ಎಂದು ಗೊತ್ತಿಲ್ಲ, ಆದರೆ ಇಲ್ಲಿ ಸಿಲುಕಿಕೊಂಡ ವ್ಯಕ್ತಿಗಳಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಿರುವ ವ್ಯಕ್ತಿಯೆಂದರೆ ಕೇರಳದ ಅರ್ಜುನ್. ಅರ್ಜುನ್ ಬದುಕಿರುವ ಸಾಧ್ಯತೆ ಇದೆ ಎಂಬ ಊಹೆಯಿದೆ, ನೆನ್ನೆಯವರೆಗೆ ಆ ಊಹೆ ಬಲವಾಗಿತ್ತು, ಅದರೆ ಈಗ ಆ ನಂಬಿಕೆ ಕಡಿಮೆಯಾಗುತ್ತಿದೆ. ರಕ್ಷಣಾ ಕಾರ್ಯಚರಣೆ ಪ್ರಾರಂಭಿಸಿ 75 ಗಂಟೆಗಳಾಗಿದೆ, ಹಾಗಾಗಿ ನಂಬಿಕೆ ನಿಧಾನಕ್ಕೆ ಕ್ಷೀಣಿಸುತ್ತಿದೆ.
ಅರ್ಜುನ್ ಬದುಕಿರಬಹುದು ಎಂಬ ನಿರೀಕ್ಷೆ ಮೂಡಿದ್ದು ಹೇಗೆ?
ಶಿರೂರಿನಲ್ಲಿ ನೆರೆ ಕುಸಿತ ಸಂಭವಿಸಿದ್ದು ಜುಲೈ 17ಕ್ಕೆ, ಆವಾಗ ಕೇರಳ ಡ್ರೈವರ್ ಅರ್ಜುನ್ ಡ್ರೈವ್ ಮಾಡುತ್ತಿದ್ದ ಬೆಂಝ್ ಲಾರಿ ಕೂಡ ಕಣ್ಮೆರೆಯಾಗಿದೆ. ಆದರೆ ಲಾರಿಯಲ್ಲಿ ಜಿಪಿಎಸ್ ಈ ಪ್ರದೇಶದಲ್ಲಿಯೇ ಎಂಡ್ ಆಗುತ್ತಿರುವುದರಿಂದ ಲಾರಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರಬಹುದು ಎಂದು ಊಹಿಸಲಾಗಿತ್ತು, ಆದರೆ ಈ ಘಟನೆ ನಡೆದ 2 ದಿನಗಳ ಬಳಿಕ ಲಾರಿ ಡ್ರೈವರ್ ಅರ್ಜುನ್ ಮೊಬೈಲ್ ಸದ್ದು ಮಾಡಿದೆ, ಹೀಗಾಗಿ ಈತ ಬದುಕುಳಿದಿರುವ ಸಾಧ್ಯತೆ ಎಂಬ ಭರವಸೆ ಮೂಡಿತ್ತು.
ರಾಡಾರ್, ಮೆಟಲ್ ಡಿಟೆಕ್ಟರ್ ಬಳಸಿ ಎನ್ ಡಿ ಆರ್ ಎಫ್ ಕಾರ್ಯಾಚರಣೆ ಮಾಡಿದರೂ ಅರ್ಜುನ್ ಚಲಾಯಿಸುತ್ತಿದ್ದ ಬೆಂಝ್ ಲಾರಿಯ ಸುಳಿವು ಸಿಕ್ಕಿಲ್ಲ, ಈಗ ಈ ಲಾರಿಯ ಪತ್ತೆಗೆ ನೌಕಾ ಪಡೆ ಕೂಡ ಕಾರ್ಯ ಮಾಡುತ್ತಿದೆ.
ಭಾರತ್ ಬೆಂಝ್‌ನ ಸುರಕ್ಷಿತಾ ವಿಧಾನಗಳು ಕೂಡ ಈ ನಿರೀಕ್ಷೆ ಮೂಡಿಸಿದೆ
ಅರ್ಜುನ್ ಚಲಾಯಿಸುತ್ತಿದ್ದ ಭಾರತ್ ಬೆಂಝ್ ಸ್ಟಾರ್ಟ್ ಆಗಿದ್ದರೆ ಅದರೊಳಗಡೆ ಅರ್ಜುನ್ ಇದ್ದರೆ ಅರ್ಜುನ್ 10 ದಿನಗಳವರೆಗೆ ಬದುಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುವುದು.
ಚೀನಾದಲ್ಲಿ 67 ಗಂಟೆ ಮಣ್ಣಿನೊಳಗಡೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದರು
ಅರ್ಜುನ್ ಲಾರಿಯೊಳಗಡೆ ಇದ್ದರೆ ಆತ 10 ದಿನಗಳವರೆಗೆ ಸುರಕ್ಷಿತ ಎಂದು ಆ ಲಾರಿಯ ಕಂಪನಿ ಹೇಳುತ್ತಿದೆ. ಚಿನಾದಲ್ಲಿ ಭಾರೀ ಮಳೆಗೆ ಮಣ್ಣು ಕಸಿಇದಾಗ 19 ವರ್ಷದ ಯುವಕನೊಬ್ಬ ಮಣ್ಣಿನೊಳಗಡೆ ಸಿಲುಕಿಕೊಂಡಿದ್ದ, ಎಲ್ಲರೂ ಆತ ಬದುಕಿಳಿದಿರಲ್ಲ ಎಂದೇ ಭಾವಿಸಿದ್ದರು, ಆದರೆ ಅತ ಬದುಕಿ ಬಂದಿದ್ದ.
ಶಿರುರು ಘಟನೆಯಲ್ಲಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದವರು ಬದುಕಿಳಿದಿರುವ ಸಾಧ್ಯತೆ ತುಂಬಾ ಕಡಿಮೆ ಇದೆ, ಆದರೆ ಅರ್ಜುನ್ ಮೊಬೈಲ್ ರಿಂಗ್ ಆಗಿರುವುದು, ಆ ಮೊಬೈಲ್‌ನಿಂದ ರಿಂಗ್ ಬಂದು ಕಟ್ ಅಗಿರುವುದು ಆತ ಬದುಕಿರುವ ಚಿಕ್ಕ ಭರವಸೆ ಉಂಟು ಮಾಡಿದೆ. ಇನ್ನು ಯಾರಾರು ಸಿಕ್ಕಾಕಿಕೊಂಡಿದ್ದಾರೆ ಗೊತ್ತಿಲ್ಲ, ಕೆಲವರು ನಮ್ಮ ಕುಟುಂಬಸ್ಥರು, ಮಕ್ಕಳು ಈ ಬರೆ ಕುಸಿತದಲ್ಲಿ ಸಿಕ್ಕಾಕಿಕೊಂಡಿದ್ದಾರೆ ಎಂದು ಗೋಳಾಡುತ್ತಿದ್ದಾರೆ. ವಿಧಿಯ ಆಟದ ಮುಂದೆ ಮನುಷ್ಯ ತಾನೆ ಏನು ಮಾಡಲು ಸಾಧ್ಯ?



Click it and Unblock the Notifications
