Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಒಂದು ದಿನದ ದಾಂಪತ್ಯ! 35 ವರ್ಷದ ಯುವತಿ ಮದುವೆಯಾದ 75ರ ವೃದ್ಧ; ಮೊದಲ ರಾತ್ರಿ ಬಳಿಕ ಸಾವು
ಬಹುಕಾಲದ ಏಕಾಂಗಿ ಬದುಕಿನ ನಂತರ, ಸಹವಾಸದ ಆಶಯದೊಂದಿಗೆ 75 ವರ್ಷದ ಸಂಗ್ರಾಮ್ ಎಂಬ ವೃದ್ಧ ತಮ್ಮ ಅರ್ಧಕ್ಕಿಂತಲೂ ಕಡಿಮೆ ವಯಸ್ಸಿನ ಮಹಿಳೆಯನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ (wedding) ಮರುದಿನ ಬೆಳಗ್ಗೆಯೇ ಅವರು ಸಾವನ್ನಪ್ಪಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಜಾನ್‌ಪುರ (Jaunpur) ಜಿಲ್ಲೆಯ ಕುಚ್‌ಮುಚ್ ಗ್ರಾಮದಲ್ಲಿ ನಡೆದಿದೆ. ಆ ಮಹಿಳೆಗೆ ಮದುವೆಯಾದ (marriage) ಕೂಡಲೇ ವಿಧವೆ ಪಟ್ಟ ಬಂದಿರುವುದು ದುರದೃಷ್ಟಕರ. ಈ ಹಠಾತ್ ಸಾವು ಗ್ರಾಮಸ್ಥರು ಹಾಗೂ ಸಂಬಂಧಿಕರಲ್ಲಿ ಅನೇಕ ಅನುಮಾನಗಳಿಗೆ ಎಡೆಮಾಡಿದೆ.
ಸಂಗ್ರಾಮ್ ಒಂದು ವರ್ಷದ ಹಿಂದೆ ತಮ್ಮ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದರು ಮತ್ತು ಅಂದಿನಿಂದಲೂ ಒಂಟಿಯಾಗಿ ವಾಸಿಸುತ್ತಿದ್ದರು. ಸಂಗ್‌ರೂರಾಂ ಅವರ ಮೊದಲ ಮದುವೆಯಿಂದ ಮಕ್ಕಳಿರಲಿಲ್ಲ. ಇವರು ಕೃಷಿಯ ಮೂಲಕ ಜೀವನ ನಡೆಸುತ್ತಿದ್ದರು. ಕುಟುಂಬದ ಸದಸ್ಯರ ಪ್ರಕಾರ, ಅವರ ಮರುಮದುವೆಯ ನಿರ್ಧಾರಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಆದರೂ, ಅವರು ಮುಂದುವರೆಯಲು ನಿರ್ಧರಿಸಿದರು. ಸೆಪ್ಟೆಂಬರ್ 29, ಸೋಮವಾರದಂದು, ಅವರು ಜಲಾಲ್‌ಪುರ ಪ್ರದೇಶದ 35 ವರ್ಷದ ಮನ್‌ಭಾವತಿ ಅವರನ್ನು ವಿವಾಹವಾದರು.

ಮಕ್ಕಳ ಜವಾಬ್ದಾರಿ ನನ್ನದೇ ಎಂದು ಭರವಸೆ
ಈ ಜೋಡಿ ನ್ಯಾಯಾಲಯದಲ್ಲಿ ಮದುವೆಯನ್ನು ನೋಂದಾಯಿಸಿ, ನಂತರ ಸ್ಥಳೀಯ ದೇವಸ್ಥಾನದಲ್ಲಿ ಸಾಂಪ್ರದಾಯಿಕ ವಿಧಿಗಳನ್ನು ನೆರವೇರಿಸಿತು. ಮದುವೆಯ ನಂತರ ಮಾತನಾಡಿದ ಮನ್‌ಭಾವತಿ, 'ಗಂಡನು ಮನೆ ಜವಾಬ್ದಾರಿಯನ್ನು ನಾನು ನೋಡಿಕೊಳ್ಳಬೇಕು ಎಂದು ಮತ್ತು ಮಕ್ಕಳು ಜನಿಸಿದರೆ ಅವರ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರು' ಎಂದು ಹೇಳಿದ್ದಾರೆ.
ವಿವಾಹದ ರಾತ್ರಿ ಹೆಚ್ಚು ಸಮಯ ಮಾತು
ವಿವಾಹದ ರಾತ್ರಿ ಹೆಚ್ಚಿನ ಸಮಯ ಇಬ್ಬರೂ ಮಾತನಾಡುತ್ತಾ ಕಳೆದರು ಎಂದು ಅವರು ತಿಳಿಸಿದ್ದಾರೆ. ಆದರೆ, ಬೆಳಗ್ಗೆ ಸಂಗ್ರಾಮ್ ಅವರ ಆರೋಗ್ಯ ಹಠಾತ್ತನೆ ಹದಗೆಟ್ಟಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಈ ಅನಿರೀಕ್ಷಿತ ಸಾವು ಗ್ರಾಮದಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ಕೆಲವರು ಇದನ್ನು ಸಹಜ ಘಟನೆ ಎಂದು ಬಣ್ಣಿಸಿದರೆ, ಇತರರು ಈ ಪರಿಸ್ಥಿತಿಗಳು ಸಂಶಯಾಸ್ಪದವಾಗಿವೆ ಎಂದು ಹೇಳಿದ್ದಾರೆ.
ಅಂತ್ಯಕ್ರಿಯೆ ನಿಲ್ಲಿಸಿದ್ದ ಸಂಬಂಧಿಕರು
ಮೃತರ ಸಂಬಂಧಿಕರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಅವರ ಸೋದರಳಿಯ ಮತ್ತು ಸಂಬಂಧಿಕರು ಸೇರಿದಂತೆ, ಅಂತ್ಯಕ್ರಿಯೆಯ ವಿಧಿಗಳನ್ನು ನಿಲ್ಲಿಸಿದ್ದಾರೆ. ಶವಸಂಸ್ಕಾರ ನಡೆಯುವ ಮೊದಲು ತಮ್ಮ ಉಪಸ್ಥಿತಿಯ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ. ಅವರು ಗ್ರಾಮಕ್ಕೆ ತಲುಪಿದ ನಂತರವೇ ವಿಧಿವಿಧಾನಗಳನ್ನು ನಡೆಸಬೇಕೆಂದು ಸಂಬಂಧಿಕರು ವಿನಂತಿಸಿದ್ದಾರೆ. ಈ ಸಂಬಂಧ ಪೊಲೀಸ್ ತನಿಖೆ ಅಥವಾ ಮರಣೋತ್ತರ ಪರೀಕ್ಷೆ ನಡೆಯಬೇಕೇ ಎಂಬ ಪ್ರಶ್ನೆಗಳು ಸ್ಥಳೀಯವಾಗಿ ಎದ್ದಿವೆ.
ಮದುವೆಯಾದ ಕೂಡಲೇ ವಿಧವೆ ಪಟ್ಟ
75 ವರ್ಷದ ಸಂಗ್ರರಾಮ್ ಅವರು ಒಂದು ವರ್ಷದ ಹಿಂದಷ್ಟೇ ಪತ್ನಿಯ ಕಳೆದುಕೊಂಡಿದ್ದರು. ಅವರು ತಮ್ಮ ಪತ್ನಿಯ ಸಾವಿನ ನಂತರ ಏಕಾಂಗಿಯಾಗಿದ್ದರು. ಬಳಿಕ ತನ್ನ ವಯಸ್ಸಿನ ಅರ್ಧಕ್ಕಿಂತಲೂ ಕಡಿಮೆ ವಯಸ್ಸಿನ ಯುವತಿಯೊಂದಿಗೆ ಹೊಸ ಜೀವನ ಆರಂಭಿಸಿದ್ದರು. ಆದರೆ, ಮದುವೆಯ ಮರುದಿನವೇ ಈ ಲೋಕ ತ್ಯಜಿಸಿದ್ದಾರೆ. ಇದರಿಂದ 35 ವರ್ಷದ ಆ ಮಹಿಳೆಗೆ ಮದುವೆಯಾದ ಕೂಡಲೇ ವಿಧವೆ ಪಟ್ಟ ಬಂದಿದೆ.
ಮನ್‌ಭಾವತಿ ಹೇಳಿದ್ದೇನು?
ಮನ್‌ಭಾವತಿ ಅವರ ಹೇಳಿಕೆಯ ಪ್ರಕಾರ, ಮದುವೆಯ ರಾತ್ರಿ ಇಬ್ಬರೂ ಹೆಚ್ಚು ಕಾಲ ಮಾತನಾಡಿದ್ದಾರೆ. ಸಂಗ್‌ರೂರಾಂ ಅವರು ಮನೆಯ ಕೆಲಸಗಳನ್ನು ಮಾತ್ರ ನೋಡಿಕೊಳ್ಳಬೇಕು, ಮಕ್ಕಳಿಗೆ ತಾವೇ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಬೆಳಗ್ಗೆ ಸಂಗ್‌ರೂರಾಂ ಅವರ ಆರೋಗ್ಯ ಹಠಾತ್ ಕ್ಷೀಣಿಸಿತು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ವೈದ್ಯರು ಅವರನ್ನು ಪರೀಕ್ಷಿಸಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.



Click it and Unblock the Notifications