Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನ.27ಕ್ಕೆ ಉತ್ಪನ್ನ ಏಕಾದಶಿ:ಕಾರ್ತಿಕ ಮಾಸದ ಏಕಾದಶಿಯ ಮಹತ್ವವೇನು? ಈ ದಿನ ಪಠಿಸಲು ಪವರ್‌ಫುಲ್ ಮಂತ್ರಗಳು
ಇದೀಗ ಕಾರ್ತಿಕ ಮಾಸ ನಡೆಯುತ್ತಿದೆ, ಕಾರ್ತಿಕ ಮಾಸದ ಕೊನೆಯ ಏಕಾದಶಿ ಉತ್ಪನ್ನ ಏಕಾದಶಿ. ವರ್ಷದಲ್ಲಿ ಒಟ್ಟು 24 ಏಕಾದಶಿ ಬರುತ್ತದೆ, ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ವಿಶೇಷವಾಗಿದೆ, ಅದರಲ್ಲಿ ಕಾರ್ತಿಕ ಮಾಸದಲ್ಲಿ ಬರುವ ಉತ್ಪನ್ನ ಏಕಾದಶಿ ಆಚರಣೆ ಮಾಡುವುದರಿಂದ ಯಜ್ಞ ಯಾಗವನ್ನು ಮಾಡಿದ ಫಲ ಸಿಗುವುದು.
ಈ ವರ್ಷ ಉತ್ಪನ್ನ ಏಕಾದಶಿಯನ್ನು ನವೆಂಬರ್ 27ರಂದು ಆಚರಿಸಲಾಗುವುದು. ಈ ದಿನ ಪೂಜೆಗೆ ಶುಭ ಸಮಯ ಯಾವಾಗ? ಪಾರಣ ಸಮಯ ಯಾವಾಗ? ಈ ಏಕಾದಶಿಯ ವಿಶೇಷತೆಯೇನು, ಆಚರಣೆಯಿಂದ ದೊರೆಯುವ ಪ್ರಯೋಜವೇನು ಎಲ್ಲಾ ಮಾಹಿತಿ ನೋಡೋಣ:

ಏಕಾದಶಿ ತಿಥಿ
ಏಕಾದಶಿ ತಿಥಿ ನವೆಂಬರ್ 26 ಮಧ್ಯರಾತ್ರಿ 1:04ರಿಂದ ಶುರು
ಏಕಾದಶಿ ತಿಥಿ ಮುಕ್ತಾಯ ನವೆಂಬರ್ 27 ಮಧ್ಯಾಹ್ನ 03:49ಕ್ಕೆ ಮುಕ್ತಾಯ
ಉದಯ ತಿಥಿ ಪ್ರಕಾರ ನವೆಂಬರ್ 27ರಂದು ಆಚರಿಸಲಾಗುವುದು.
ಏಕಾದಶಿ ತಿಥಿ ಪಾರಣ ಸಮಯ
ನವೆಂಬರ್ 27 ರಾತ್ರಿ 01:11ರಿಂದ ನವೆಂಬರ್ 28 ಮುಂಜಾನೆ 03:17ರವರೆಗೆ ಸಮಯವಿದೆ, ಈ ಸಮಯದಲ್ಲಿ ಉಪವಾಸವನ್ನು ಮುರಿಯಬಹುದು.
ಉತ್ಪನ್ನ ಏಕಾದಶಿ ಆಚರಣೆಯ ವಿಧಾನ
- ಬೆಳಗ್ಗೆ ಬೇಗನೆ ಎದ್ದೇಳಬೇಕು, ನಂತರ ಸ್ನಾನ ಮಾಡಿ ಸಂಕಲ್ಪ ತೆಗೆದುಕೊಳ್ಳಬೇಕು
- ಶ್ರೀ ವಿಷ್ಣುವಿನ ಮೂರ್ತಿಯನ್ನು ಸ್ವಚ್ಛಗೊಳಿಸಿ ಅಲಂಕರಿಸಬೇಕು
- ಈ ದಿನ ತುಪ್ಪದ ದೀಪ ಹಚ್ಚಿ, ಧೂಪ ನೈವೇದ್ಯ ಅರ್ಪಿಸಬೇಕು.
- ಶ್ರೀ ವಿಷ್ಣುವಿಗೆ ಅರ್ಪಿಸುವ ನೈವೇದ್ಯದಲ್ಲಿ ತುಳಸಿ ಕಡ್ಡಾಯವಾಗಿ ಬಳಸಲೇಬೇಕು.
- ಈ ದಿನ ಬಡವರಿಗೆ ದಾನ ಮಾಡಿ
- ಬ್ರಾಹ್ಮಣರಿಗೆ ದಾನ ಮಾಡಿ
ಏಕಾದಶಿ ದಿನದಂದು ಏನು ಮಾಡಬೇಕು?
- ಈ ದಿನ ದಾನ ಮಾಡಿದರೆ ಒಳ್ಳೆಯದು. ಈ ದಿನ ಆಹಾರ ವಸ್ತುಗಳನ್ನು ದಾನ ಮಾಡಿ
- ಈ ದಿನ ವಸ್ತ್ರಗಳನ್ನು ದಾನ ಮಾಡಿ
- ಈ ಏಕಾದಶಿ ಆಚರಣೆ ಮಾಡುವುದರಿಂದ ಗ್ರಹದೋಷಗಳಿದ್ದರೆ ಅದು ನಿವಾರಣೆಯಾಗಲಿದೆ.
- ಉತ್ಪನ್ನ ಏಕಾದಶಿ ಆಚರಣೆ ಮಾಡುವುದರಿಂದ ಸಂಪತ್ತು ಹೆಚ್ಚಾಗಲಿದೆ.
- ವೃತ್ತಿ ಬದುಕಿನಲ್ಲಿ ಸವಾಲುಗಳಿದ್ದರೆ ಅದು ದೂರಾಗಲಿದೆ
- ಈ ದಿನ ಏನು ಮಾಡಬಾರದು?
- ಈ ದಿನ ಮಾಂಸಾಹಾರ ಸೇವನೆ ಮಾಡಬಾರದು
- ಈರುಳ್ಳಿ, ಬೆಳ್ಳುಳ್ಳಿ ಬಳಸಬಾರದು
- ಅನ್ನ ಅಥವಾ ಅಕ್ಕಿಯ ಆಹಾರ ಸೇವಿಸಬಾರದು
- ವ್ರತ ನಿಯಮ ಪಾಲಿಸುವವರು ಸೊಪ್ಪು, ತರಕಾರಿ ಸೇವಿಸಬಾರದು
- ಈ ದಿನ ಜೇನು ತುಪ್ಪ ಬಳಸಬಾರದು.
- ಶ್ರೀ ವಿಷ್ಣುವನ್ನು ಪೂಜಿಸುವಾಗ ಈ ಮಂತ್ರ ಪಠಣೆ ಮಾಡಿ
1. ವಿಷ್ಣು ಮೂಲ ಮಂತ್ರ:
ಓಂ ನಮೋ ನಾರಾಯಣಾಯ
2. ಓಂ ನಮೋ ಭಗವತೇ ವಾಸುದೇವಾಯ
ಅರ್ಥ: ಓ ವಾಸುದೇವನೇ ನಿನಗೆ ನನ್ನ ಪ್ರಣಾಮಗಳು
3. ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ವಿಷ್ಣು ಪ್ರಚೋದಯಾತ್
ಅರ್ಥ: ಹೇ ನಾರಾಯಣ, ಓ ವಾಸುದೇವ, ನಿನ್ನ ಧ್ಯಾನಿ ಮಾಡುವುದರಿಂದ ನನಗೆ ಉನ್ನತ ಬುದ್ಧಿಯನ್ನು ಅನುಗ್ರಹಿಸು, ಹೇ ವಿಷ್ಣುವೇ, ಅಜ್ಞಾನವನ್ನು ತೊಡೆದುಹಾಕುವ ಮೂಲಕ ನನ್ನ ಮನಸ್ಸನ್ನು ಉಜ್ವಲಗೊಳಿಸು.
4. ಮುಕ್ತಿ ಮಂತ್ರ:
ಓಂ ಭಗವತೇ ವಾಸುದೇವಾಯ ನಮಃ
ಈ ಮಂತ್ರ ಪಠಣೆ ಮಾಡುವುದರಿಂದ ಒಬ್ಬರ ಜೀವನದ ಅಡೆತಡೆಗಳು ದೂರಾಗುತ್ತದೆ.
5. ವಿಷ್ಣು ಶಾಂತಾಕಾರಂ ಮಂತ್ರ:
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಧಾರಂ ಗಗನಸದ್ರಿಶಂ, ಮೇಘವರ್ಣಂ ಶುಭಾಂಗಂ
ಲಕ್ಷ್ಮಿಂಕಾತಂ ಕಮಲಾನಯನಂ, ಯೋಗಿಭಿರ್ಧ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ
6. ಶ್ರೀ ವಿಷ್ಣು ಮಂತ್ರ:
ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವದೇವ
7. ವಿಷ್ಣು ಶ್ಲೋಕ:
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್
ಕರೋಮಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ
8. ವಿಷ್ಣು ಮಂಗಳಂ ಮಂತ್ರ:
ಮಂಗಳಂ ಭಗವಾನ್ ವಿಷ್ಣು, ಮಂಗಳಂ ಗರುಡಾಧ್ವಜಾ |
ಮಂಗಳಂ ಪುಂಡರೀಕಾಕ್ಷಾ, ಮಂಗಳಂ ತನ್ನೋಂ ಹರಿಹೀ ||



Click it and Unblock the Notifications