Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಉತ್ಪನ್ನ ಏಕಾದಶಿ: ಡಿಸೆಂಬರ್ 9ಕ್ಕಲ್ಲ 8ಕ್ಕೆ ಏಕಾದಶಿ, ಈ ದಿನ ಉಪವಾಸ ಮಾಡಿದರೆ ಈ ಫಲಗಳು ಸಿಗಲಿವೆ
ಕಾರ್ತಿಕ ಮಾಸ ಶಿವನ ಆರಾಧನೆಗೆ ವಿಶೇಷವಾದ ತಿಂಗಳು. ಈ ತಿಂಗಳಿನಲ್ಲಿ ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು. ಶ್ರೀ ವಿಷ್ಣುವಿನ ಆರಾಧನೆ ಏಕಾದಶಿ ತುಂಬಾನೇ ಶುಭ ದಿನವಾಗಿದೆ. ಈ ದಿನ ಶ್ರೀ ವಿಷ್ಣುವನ್ನು ಪೂಜಿಸಿಸುವುದರಿಂದ ಸಿಗುವ ಫಲ ಅಧಿಕ. ಯಜ್ಜ-ಯಾಗಗಳನ್ನು ಮಾಡಿದರೆ ದೊರೆಯುವ ಪುಣ್ಯಫಲ ಏಕಾದಶಿ ಆಚರಣೆ ಮಾಡುವುದರಿಂದ ದೊರೆಯುತ್ತದೆ.
ಏಕಾದಶಿಯಂದು ಉಪವಾಸವದ್ದು ಶ್ರೀವಿಷ್ಣುವನ್ನು ಆರಾಧಿಸಲಾಗುವುದು. ಪ್ರತಿ ತಿಂಗಳು ಎರಡು ಏಕಾದಶಿ ಬರುತ್ತದೆ, ಪ್ರತಿಯಿಂದು ಏಕಾದಶಿಯನ್ನು ಬೇರೆ-ಬೇರೆ ಹೆಸರುಗಳಿಂದ ದೊರೆಯಲಾಗುವುದು. ಕಾರ್ತಿಕ ಮಾಸದ ಕೊನೆಯಲ್ಲಿ ಉತ್ಪನ್ನ ಏಕಾದಶಿ ಬಂದಿದೆ. ಉತ್ತರ ಭಾರತದ ಇದನ್ನು ಮಾರ್ಗಶಿರ ಮಾಸದ ಮೊದಲ ಏಕಾದಶಿಯಂದು ಆಚರಿಸಿದರೆ ಕರ್ನಾಟಕದಲ್ಲಿ ಕಾರ್ತಿಕ ಮಾಸದಲ್ಲಿ ಬರುವ ಕೊನೆಯ ಏಕಾದಶಿಯಾಗಿದೆ.

ಈ ಏಕಾದಶಿ ಯಾವ ದಿನಾಂಕದಂದು ಆಚರಿಸಲಾಗುವುದು
ಉತ್ಪನ್ನ ಏಕಾದಶಿ ಡಿಸೆಂಬರ್ ಬೆಳಗ್ಗೆ 08 ಬೆಳಗ್ಗೆ 05.06 ಕ್ಕೆ ಪ್ರಾರಂಭವಾಗುತ್ತದೆ. ಏಕಾದಶಿ ತಿಥಿ ಡಿಸೆಂಬರ್ 9, 2023 ರಂದು ಬೆಳಿಗ್ಗೆ 06:31 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದಾಗಿ ಡಿಸೆಂಬರ್ 8 ರಂದು ಉತ್ಪನ್ನ ಏಕಾದಶಿಯ ಉಪವಾಸವನ್ನು ಆಚರಿಸಲಾಗುತ್ತದೆ.
ಪಾರಣ ಸಮಯ: 9 ಡಿಸೆಂಬರ್ 2023 ರಂದು ಮಧ್ಯಾಹ್ನ 01:15 ರಿಂದ 03:20 ರವರೆಗೆ ಪಾರಣ ಸಮಯ.
ಉತ್ಪನಾ ಏಕಾದಶಿಯ ಉಪವಾಸದ ವಿದಾನ ಹಾಗೂ ಮಹತ್ವ
* ಉತ್ಪನ್ನ ಏಕಾದಶಿಯ ದಿನದಂದು, ಬೆಳಿಗ್ಗೆ ಎದ್ದು ಸ್ನಾನ ಮಾಡಿ ಉಪವಾಸ ಮಾಡಲು ಸಂಕಲ್ಪ ತೆಗೆದುಕೊಳ್ಳಿ.
* ವಿಷ್ಣುವಿಗೆ ಧೂಪ, ದೀಪ, ನೈವೇದ್ಯ ಮೊದಲಾದ ಹದಿನಾರು ವಸ್ತುಗಳಿಂದ ಪೂಜೆ ಮಾಡಿ ರಾತ್ರಿ ದೀಪವನ್ನು ದಾನ ಮಾಡಬೇಕು.
* ಈ ಏಕಾದಶಿಯಂದು ರಾತ್ರಿಯಲ್ಲಿ ಭಗವಾನ್ ವಿಷ್ಣುವಿನ ಸ್ತೋತ್ರಗಳು, ಕೀರ್ತನೆಗಳನ್ನು ಹಾಡಿ.
* ಉಪವಾಸದ ಕೊನೆಯಲ್ಲಿ, ಯಾವುದೇ ಉದ್ದೇಶಪೂರ್ವಕ ತಪ್ಪು ಆಗದ್ದರೆ ಶ್ರೀ ಹರಿವಿಷ್ಣುವಿನಲ್ಲಿ ಕ್ಷಮೆ ಕೇಳಬೇಕು.
* ಮರುದಿನ ಅಂದರೆ ದ್ವಾದಶಿ ತಿಥಿಯಂದು ಶ್ರೀಕೃಷ್ಣನನ್ನು ಪೂಜಿಸಬೇಕು, ನಂತರ ಬ್ರಾಹ್ಮಣನಿಗೆ ಆಹಾರ ದಾನ ಮಾಡಿ.
* ಅವರು ಊಟ ಮಾಡಿದ ಮೇಲೆ ಬ್ರಾಹ್ಮಣನಿಗೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನಗಳನ್ನು ಮಾಡಿ ಅವರ ಆಶೀರ್ವಾದ ಪಡೆಯಿರಿ.
ಈ ದಿನ ಉಪವಾಸ ಮಹತ್ವವೇನು?
ಉತ್ಪನ್ನ ಏಕಾದಶಿಯ ವ್ರತವನ್ನು ಯಾರು ಸಂಪೂರ್ಣ ವಿಧಿವಿಧಾನಗಳೊಂದಿಗೆ ಆಚರಿಸುತ್ತಾರೋ ಅವರಿಗೆ ಎಲ್ಲಾ ಪುಣ್ಯ ಫಲ ಸಿಗುವುದು ಎಂದು ಹೇಳಲಾಗುವುದು. ಅಲ್ಲದೆ ಈ ಉಪವಾಸದಂದು ದಾನ ಮಾಡುವುದರಿಂದ ಲಕ್ಷ ಪಟ್ಟು ಶುಭ ಫಲಗಳು ಸಿಗುತ್ತವೆ. ಉತ್ಪನ್ನ ಏಕಾದಶಿಯಂದು ಉಪವಾಸ ಆಚರಿಸುವುದರಿಂದ ವ್ಯಕ್ತಿಯ ಎಲ್ಲಾ ರೀತಿಯ ಪಾಪಗಳು ನಾಶವಾಗುವುದು. ನಿಮ್ಮ ಕೆಲಸದಲ್ಲಿ ಉತ್ತಮ ಫಲ ಪಡೆಯುತ್ತೀರಿ, ಬದುಕಿನಲ್ಲಿರುವ ಎಲ್ಲಾ ಕಷ್ಟಗಳು ದೂರಾಗುವುದು.
* ವಿಧಿವಿಧಾನಗಳೊಂದಿಗೆ ಉತ್ಪನ್ನ ಏಕಾದಶಿ ವ್ರತ ಮಾಡುವುದರಿಂದ ಶ್ರೀವಿಷ್ಣುವಿನ ಅಪಾರವಾದ ಅನುಗ್ರಹಗಳು ದೊರೆಯುತ್ತವೆ. ಈ ದಿನದಂದು ಉಪವಾಸ ಮಾಡುವುದರಿಂದ ಶ್ರೀ ಹರಿವಿಷ್ಣುವಿನ ಜೊತೆಗೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯೂ ಪ್ರಸನ್ನಳಾಗುತ್ತಾಳೆ. ಹೀಗಾಗಿ ಲಕ್ಷ್ಮಿ ಕೃಪೆ ದೊರೆಯಲಿದೆ.
ಈ ದಿನ ಏನು ಮಾಡಿದರೆ ಒಳ್ಳೆಯದು?
1. ಉತ್ಪನ್ನ ಏಕಾದಶಿಯ ದಿನದಂದು ದಾನಕ್ಕೆ ತುಂಬಾನೇ ಮಹತ್ವವುದೆ, ಈ ದಿನ ಉಪವಾಸವಿದ್ದು, ವಿಷ್ಣು ದೇವರನ್ನು ಪೂಜಿಸಿ, ಜೋಳ, ಗೋಧಿ, ರಾಗಿ ಮುಂತಾದ ಧಾನ್ಯಗಳನ್ನು ದಾನ ಮಾಡಿ. ಹೀಗೆ ಮಾಡಿದರೆ ಸಂಪತ್ತು ಹೆಚ್ಚಾಗುವುದು.
2. ಉತ್ಪನ್ನ ಏಕಾದಶಿಯ ದಿನದಂದು ಬಡವರಿಗೆ ಮತ್ತು ಅಸಹಾಯಕರಿಗೆ ವಸ್ತ್ರಗಳನ್ನು ಸಹ ದಾನ ಮಾಡಬೇಕು. ಇದರಿಂದ ಭಗವಾನ್ ವಿಷ್ಣು ಸಂತಸಗೊಂಡು ನಮ್ಮನ್ನು ಅನುಗ್ರಹಿಸುತ್ತಾನೆ ಎಂದು ನಂಬಲಾಗಿದೆ.
3. ನಿಮ್ಮ ವ್ಯವಹಾರವು ನಿಧಾನವಾಗಿ ನಡೆಯುತ್ತಿದ್ದರೆ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಆರಾಧಿಸಿ.
4 . ಉತ್ಪನ್ನ ಏಕಾದಶಿ ಆಚರಣೆ ಮಾಡುವುದರಿಂದ ಗ್ರಹದೋಷಗಳು ದೂರಾಗುತ್ತವೆ.



Click it and Unblock the Notifications
