Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಕುಂಭಮೇಳ ನಡೆಯುವ ಪ್ರಯಾಗ್‌ರಾಜ್ ನಗರದ ಕಥೆ ನಿಮಗೆ ಗೊತ್ತಾ? ಈ ಹೆಸರು ಬಂದಿದ್ಯಾಕೆ?
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಿಶ್ವ ವಿಖ್ಯಾತ ಮಹಾ ಕುಂಭಮೇಳ ನಡೆಯುತ್ತಿದೆ. 144 ವರ್ಷಕ್ಕೊಮ್ಮೆ ನಡೆಯುವ ಈ ಮಹಾ ಕುಂಭಮೇಳವು ವಿಶ್ವದ ಮೂಲೆ ಮೂಲೆಯಿಂದ ಭಕ್ತರನ್ನು ಆಕರ್ಷಿಸುತ್ತದೆ. ಕೋಟಿ ಕೋಟಿ ಮಂದಿ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಹೀಗಾಗಿ ಒಂದು ತಿಂಗಳ ಕಾಲ ತ್ರಿವೇಣಿ ಸಂಗಮ ಕೇಸರಿಯಿಂದ ಮುಚ್ಚಿರುತ್ತದೆ.
ಈ ಮಹಾ ಕುಂಭಮೇಳವು ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಸಮ್ಮೇಳನ ಎಂಬ ಖ್ಯಾತಿ ಪಡೆದುಕೊಂಡಿದೆ. ವಿದೇಶದಿಂದಲೂ ಈ ಕುಂಭಮೇಳದಲ್ಲಿ ಭಾಗಿಯಾಗಲು ಆಗಮಿಸುತ್ತಾರೆ. ಇನ್ನು ಸಾಧು, ಸಂತರು ಪ್ರಯಾಗ್‌ರಾಜ್‌ನಲ್ಲಿನ ಶಿಬಿರದಲ್ಲಿ ನೆಲೆಸುತ್ತಾರೆ. ಹಾಗೆ ಈ ಸಮಯದಲ್ಲಿ ಕೋಟ್ಯಂತರ ಮಂದಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಮುಂದಾಗುತ್ತಾರೆ.

ಆದ್ರೆ ಈ ಕುಂಭಮೇಳದ ಹಿಂದಿರುವ ಪ್ರಯಾಗ್‌ರಾಜ್ ಎಂಬ ನಗರದ ಹಿಂದಿರುವ ಅದ್ಭುತ ಕತೆಯ ಬಗ್ಗೆ ನಿಮಗೆ ಗೊತ್ತಾ? ಪ್ರಯಾಗ್ ರಾಜ್ ಎಂಬ ಹೆಸರಿನ ಅರ್ಥವೇನು? ಅಲಹಾಬಾದ್ ಎಂಬ ಹೆಸರಿನ ಬದಲಾಗಿ ಪ್ರಯಾಗ್‌ರಾಜ್ ಎಂದು ನಾಮಕರಣ ಮಾಡಲಾಗಿದೆ ಎಂಬ ವಿಚಾರ ನಿಮಗೆ ಗೊತ್ತಾ? ನಾವಿಂದು ಅಲಹಾಬಾದ್ ಬದಲಿಗೆ ಪ್ರಯಾಗ್‌ರಾಜ್ ಹೆಸರು ಇಟ್ಟಿದ್ದು ಏಕೆ? ಇದರ ಅರ್ಥವೇನು ಎಂಬುದನ್ನು ತಿಳಿಯೋಣ.
ವೇದಗಳ ಅಸ್ತಿತ್ವಕ್ಕೂ ಮುಂಚೆಯೇ ಮಹಾ ಕುಂಭಮೇಳವನ್ನು ಪ್ರಯಾಗ್‌ರಾಜ್‌ನಲ್ಲಿ ಆಚರಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಹಾಗೆ 'ಪ್ರ' ಎಂದರೆ ಮೊದಲು ಅಥವಾ ಪ್ರಥಮ, ಯಾಗ್ ಎಂದರೆ ಯಾಗ ಎಂಬ ಅರ್ಥ ಬರುತ್ತದೆ. ಹೀಗಾಗಿ ಮೊದಲ ಯಾಗ ಎಂಬ ಅರ್ಥವನ್ನು ಈ ನಗರ್ ಹೊಂದಲಿದೆ. ಬ್ರಹ್ಮ ಅಕ್ಷಯ್ ವಾಡ್ ಬಳಿಕ ಮೊದಲ ಯಾಗ ಮಾಡಿದ್ದರು, ಆ ಸ್ಥಳವೇ ಪ್ರಯಾಗ್ ಎಂದು ಕರೆಯಲಾಯಿತು. ಕಾಲಾನಂತರ ಪ್ರಯಾಗ್‌ರಾಜ್ ಆಗಿ ಬದಲಾಯಿತು. 2018 ಅಕ್ಟೋಬರ್ 16ರಂದು ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್ ಎಂದು ಅಧಿಕೃತವಾಗಿ ಬದಲಾಯಿಸಲಾಗಿತ್ತು.
ಅಕ್ಷಯ್ ವಾಟ್ ಎಂಬುದು ಪ್ರಯಾಗ್‌ರಾಜ್‌ನಲ್ಲಿರುವ ಒಂದು ಪವಿತ್ರ ಮರ ಎಂದು ನಂಬಲಾಗಿದೆ. ಹಾಗೆ ಭಾರತದ ಪ್ರಮುಖ ಯಾತ್ರಾ ಸ್ಥಳದಲ್ಲಿ ಪ್ರಯಾಗ್‌ರಾಜ್ ಕೂಡ ಒಂದಾಗಿದೆ. ಅಲ್ಲದೆ ಸರಸ್ವತಿ ನದಿ ಹರಿಯುವಿಕೆ ಇದ್ದ ಕೆಲವೆ ಸ್ಥಳದಲ್ಲಿ ಇದು ಕೂಡ ಒಂದು ಎಂದು ನಂಬಲಾಗಿದೆ. ಹಾಗೆ ಗಂಗಾ, ಯಮುನ, ಸರಸ್ವತಿ ನದಿಗಳು ಸಂಧಿಸುವ ಪವಿತ್ರ ಸ್ಥಳ ಎಂಬ ಹೆಸರು ಕೂಡ ಇದೆ. ಇದನ್ನೆ ತ್ರಿವೇಣಿ ಸಂಗಮ ಎಂಬ ಹೆಸೆರಿನಿಂದ ಕರೆಯಲಾಗಿದೆ.
ಮೋಕ್ಷ ಹಾಗೂ ಸ್ವರ್ಗದ ಪ್ರಾಪ್ತಿಗಾಗಿ ಪ್ರಯಾಗ್‌ರಾಜ್‌ನ ಈ ಸ್ಥಳದಲ್ಲಿ ಸ್ನಾನ ಮಾಡಬೇಕು ಎಂಬ ನಂಬಿಕೆ ಇದೆ. ವಾರಣಾಸಿ, ಕಾಶಿಯಂತೆ ಈ ಸ್ಥಳ ಕೂಡ ಪಾವಿತ್ರತೆಯನ್ನು ಕಾಯ್ದುಕೊಂಡಿದೆ. ಜನವರಿ 13ರ ಪೌಷ ಪೂರ್ಣಿಮೆಯ ಶಾಹಿ ಸ್ನಾನದೊಂದಿಗೆ ಪ್ರಾರಂಭವಾದ ಮಹಾ ಕುಂಭವು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವನ್ನು ನಂಬಿಕೆ, ಸಂಸ್ಕೃತಿ ಮತ್ತು ಮಾನವೀಯತೆಯ ರೋಮಾಂಚಕ ಕೇಂದ್ರವಾಗಿ ಪರಿವರ್ತಿಸಿದೆ.
ಫೆಬ್ರವರಿ 26ರ ವರೆಗೆ ನಡೆಯುವ ಮಹಾಕುಂಭ ಮೇಳದಲ್ಲಿ 40-45 ಕೋಟಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶ ಸರ್ಕಾರ ನಿರೀಕ್ಷಿಸಿದೆ. ಹಾಗೆ ಈ ಸಮಯದಲ್ಲಿ ಪ್ರಯಾಗ್‌ರಾಜ್‌ನಲ್ಲಿ ಕೋಟಿಗೂ ಅಧಿಕ ಮೌಲ್ಯದ ವ್ಯವಹಾರಗಳು ನಡೆಯಲಿವೆ. ಇದು ಆರ್ಥಿಕತೆಗೆ ಬೂಸ್ಟ್ ನೀಡಲಿದೆ ಎಂದು ಅಂದಾಜಿಸಲಾಗಿದೆ.



Click it and Unblock the Notifications
