Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಭಾರತ ಇತಿಹಾಸದಲ್ಲಿ 'ಕಪ್ಪು ಬಜೆಟ್' ಯಾವುದು ಗೊತ್ತಾ? ಆ ಬಜೆಟ್‌ನಲ್ಲಿ ಏನಿತ್ತು?
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ 1ರ ಶನಿವಾರ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿಯ ಬಜೆಟ್ ಹಲವು ವಿಚಾರಗಳಿಂದ ಗಮನಸೆಳೆದಿದೆ. ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಯಾವೆಲ್ಲಾ ವಲಯಗಳಿಗೆ ಅನುದಾನ, ಕೊಡುಗೆ ನೀಡಲಿದ್ದಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ.
ಅದರಲ್ಲೂ ಈ ಬಾರಿ ಯಾವೆಲ್ಲಾ ತೆರಿಗೆ ಹೆಚ್ಚಳವಾಗಲಿದೆ? ಯಾವೆಲ್ಲಾ ವಸ್ತು ತೆರಿಗೆ ಮುಕ್ತವಾಗಲಿದೆ? ಯಾರಿಗೆ ಹೊಸ ಟ್ಯಾಕ್ಸ್ ಅನ್ವಯವಾಗುತ್ತಿದೆ ಎಂಬ ಕುರಿತ ಕುತೂಹಲಕ್ಕೆ ಸದ್ಯವೇ ತೆರೆ ಬೀಳಲಿದೆ. ಆದ್ರೆ ನಿಮಗೆ ನಮ್ಮ ಬಜೆಟ್ ಇತಿಹಾಸದಲ್ಲಿ ಹಲವು ಬಜೆಟ್‌ಗಳ ಕುರಿತು ತಿಳಿದಿರುವುದಿಲ್ಲ, ಅದರಲ್ಲೂ ನಿಮಗೆ ಕಪ್ಪು ಬಜೆಟ್ ಬಗ್ಗೆ ಗೊತ್ತಿದ್ಯಾ?

ಬಜೆಟ್‌ನಲ್ಲಿ ಈ ಹಿಂದೆ ರೈಲ್ವೆ ಬಜೆಟ್ ಎಂಬ ವಿಂಗಡಣೆ ಮಾಡಿದ್ದು ನಿಮಗೆಲ್ಲಾ ತಿಳಿದಿರಬಹುದು ಆದ್ರೆ ಕಪ್ಪು ಬಜೆಟ್ ಬಗ್ಗೆ ಎಂದಾದ್ರು ಕೇಳಿದ್ದೀರಾ? ಹೌದು ಭಾರತದ ಇತಿಹಾಸದಲ್ಲಿ ಕಪ್ಪು ಬಜೆಟ್ ಕೂಡ ಒಂದು ಅಚ್ಚರಿಯಾಗಿ ಉಳಿದಿದೆ. ಹಾಗಾದ್ರೆ ಎನಿದು ಕಪ್ಪು ಬಜೆಟ್? ಮಂಡಿಸಿದ್ಯಾರು? ಇದರ ಹಿಂದಿರುವ ಕಾರಣವೇನು ಎಂಬ ಅಚ್ಚರಿಗಳನ್ನು ನಾವಿಂದು ತಿಳಿದುಕೊಳ್ಳೋಣ.
ಅದು 1973-74ರ ಕಾಲದಲ್ಲಿ ಮಂಡಿಸಲಾಗಿದ್ದ ಬಜೆಟ್ ಅನ್ನು ಬ್ಲಾಕ್ ಬಜೆಟ್, ಕಪ್ಪು ಬಜೆಟ್ ಎಂದು ಕರೆಯಲಾಗಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ಮಂಡಿಸಲಾಗಿದ್ದ ಬಜೆಟ್ ಇದಾಗಿತ್ತು. ಈ ಬಜೆಟ್ ಬೃಹತ್ ಹಣಕಾಸಿನ ಕೊರತೆ ಮತ್ತು ಪ್ರಮುಖ ಕೈಗಾರಿಕೆಗಳನ್ನು ರಾಷ್ಟ್ರೀಕರಣಗೊಳಿಸುವಂತಹ ದಿಟ್ಟ ಕ್ರಮಗಳನ್ನು ಪ್ರತಿಬಿಂಬಿಸಿತು. ಹಾಗೆ ಭಾರತ ಆಗಿನ್ನು ಕೈಗಾರಿಕರಣಕ್ಕೆ ತೆರೆದುಕೊಳ್ಳುತ್ತಿದ್ದ ಸಮಯ ಆಗಿದ್ದರಿಂದ ಈ ಬಜೆಟ್ ಮುಖ್ಯ ಎನಿಸಿತ್ತು.
1973 ಫೆಬ್ರವರಿ 28 ರಂದು ಅಂದಿನ ಹಣಕಾಸು ಸಚಿವರಾಗಿದ್ದ ಯಶವಂತರಾವ್ ಬಿ. ಚವಾಣ್ ಅವರು ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದರು. ಅವರು ದೇಶದ ಆರ್ಥಿಕ ದಿಕ್ಕಿನ ಮೇಲೆ ಬಲವಾದ ಹಿಡಿತ ಹೊಂದಿದ್ದ ಪ್ರಧಾನಿ ಇಂದಿರಾ ಗಾಂಧಿಯವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈ ಬಜೆಟ್ ಅನ್ನು ಭಾರತೀಯ ಇತಿಹಾಸವು ಕಪ್ಪು ಬಜೆಟ್ ಎಂದು ಉಲ್ಲೇಖಿಸಿತು.
ಕಪ್ಪು ಬಜೆಟ್ ಎಂದು ಹೆಸರು ಬಂದಿದ್ದೇಕೆ?
ಈ ಬಜೆಟ್ ಆ ಕಾಲ ಘಟ್ಟದಲ್ಲಿ ಹಣಕಾಸಿನ ಕೊರತೆ ಬಜೆಟ್ ಆಗಿತ್ತು. ಅಂದರೆ ಸಾಲದ ಪ್ರಮಾಣ ಅಧಿಕವಾಗಿದ್ದ ಕಾಲವದು. ಬರೋಬ್ಬರಿ 550 ಕೋಟಿ ರೂಪಾಯಿಯ ಹಣಕಾಸಿನ ಕೊರತೆಯ ಬಜೆಟ್ ಅದಾಗಿತ್ತು. ಆದ್ರೆ ಈ ಕಾಲಕ್ಕೆ ಹೋಲಿಸಿದರೆ ಈ ಸಂಖ್ಯೆ ಎಳ್ಳಷ್ಟು ಅಲ್ಲ. ಆದ್ರೆ 1973ರಲ್ಲಿ 550 ಕೋಟಿ ರೂ. ಬಹುದೊಡ್ಡ ಸಂಖ್ಯೆ ಎನಿಸಿತ್ತು. ಇದು ದೇಶವೇ ದಿವಾಳಿ ಆಗುವ ಬಜೆಟ್ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಸರ್ಕಾರದ ವೆಚ್ಚ ಆದಾಯವನ್ನೂ ಮೀರಿ ನೀಡಲಾಗಿದ್ದ ಬಜೆಟ್ ಅದಾಗಿತ್ತು. ಹೀಗಾಗಿ ಇದನ್ನು ಕಪ್ಪು ಬಜೆಟ್ ಎಂದು ಕರೆಯಲಾಯಿತು. ಇದು ಇತಿಹಾಸದಲ್ಲಿ ದೊಡ್ಡ ಕಪ್ಪು ಚುಕ್ಕೆಯಾಗಿತ್ತು.
ಇದಾದ ಬಳಿಕ ಹಲವು ವರ್ಷದಿಂದಲೂ ಕೊರತೆಯ ಬಜೆಟ್ ಅನ್ನೇ ಮಂಡಿಸುತ್ತಾ ಬರಲಾಗುತ್ತಿದೆ. ಆದಾಯಕ್ಕಿಂತಲೂ ವೆಚ್ಚವೇ ಹೆಚ್ಚಾಗಿದೆ. ಹಾಗೆ ಸಾಲದ ಪ್ರಮಾಣ ಕೂಡ ಅಧಿಕವಾಗುತ್ತಿದೆ.



Click it and Unblock the Notifications