Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಭಾರತ ಸ್ವಾತಂತ್ರ್ಯಗೊಂಡು 15 ವರ್ಷದ ಬಳಿಕ ಈ ರಾಜ್ಯ ಸ್ವತಂತ್ರವಾಗಿತ್ತು!! ಯಾವ ರಾಜ್ಯ? ಹೀಗಾಗಿದ್ದೇಕೆ?
200ಕ್ಕೂ ಹೆಚ್ಚು ವರ್ಷಗಳ ಕಾಲ ಬ್ರಿಟಿಷರು ಭಾರತದನ್ನು ಆಳಿದರು ಹಾಗೆ 1947ರಲ್ಲಿ ಭಾರತ ಸ್ವತಂತ್ರಗೊಂಡಿತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗೆ ಬಹಳ ಹೋರಾಟದ ಬಳಿಕ ಬ್ರಿಟೀಷರು ಸ್ವಾತಂತ್ರ್ಯ ನೀಡಿದರು. ಈ ಸ್ವಾತಂತ್ರ್ಯಕ್ಕಾಗಿ ಕೋಟಿ ಕೋಟಿ ಮಂದಿ ಬಲಿದಾನ ನೀಡಿರುವುದು ಈಗ ಇತಿಹಾಸ. ಹಾಗೆ ಇಷ್ಟು ವರ್ಷ ಆಳಿದ ಬ್ರಿಟೀಷರು ಭಾರತದಲ್ಲಿ ಹಲವು ಸುಧಾರಣೆಗಳು, ಅಭಿವೃದ್ಧಿ ಕಾರ್ಯಗಳನ್ನು ಸಹ ಮಾಡಿದ್ದರು ಎಂಬುದನ್ನು ನಾವಿಂದು ನೆನೆಯಬೇಕಿದೆ.
ಆದ್ರೆ ನಿಮಗೆ ಗೊತ್ತಾ ಭಾರತದ ಒಂದು ರಾಜ್ಯ ಭಾರತ ಸ್ವಾತಂತ್ರ್ಯ ಪಡೆದ 15 ವರ್ಷದ ಬಳಿಕ ಸ್ವಾತಂತ್ರ ಪಡೆದುಕೊಂಡಿತು. 1857ರಲ್ಲಿ ಆರಂಭಗೊಂಡ ಸ್ವಾತಂತ್ರ್ಯ ಚಳವಳಿ 1947ರಲ್ಲಿ ಮುಕ್ತಾಯಗೊಂಡಿತ್ತು, ಆದ್ರೆ ಭಾರತದ ಒಂದು ರಾಜ್ಯ ಮಾತ್ರ ಮುಂದಿನ 15 ವರ್ಷಗಳ ನಂತರದಲ್ಲಿ ಸ್ವಾತಂತ್ರ್ಯಗೊಂಡಿತ್ತು. ಭಾರತದ ಸ್ವಾತಂತ್ರ್ಯಗೊಂಡ ನಂತರ ಹರಿದು ಹೋಗಿದ್ದ ದೇಶವನ್ನು ಒಗ್ಗೂಡಿಸಲಾಗಿತ್ತು. ಹಲವು ಒಕ್ಕೂಟಗಳು ಸೇರಿ ಒಂದು ದೇಶವನ್ನಾಗಿ ಮಾಡಲಾಗಿತ್ತು. ಆದ್ರೆ ಒಂದು ರಾಜ್ಯ ಮಾತ್ರ ಇದರಿಂದ ಹೊರಗುಳಿಯಿತು.

ಹೌದು ಈಗ ಪ್ರವಾಸಿಗರ ಸ್ವರ್ಗವಾಗಿರುವ ಗೋವಾ ಭಾರಯತ ಸ್ವಾತಂತ್ರ್ಯ ಪಡೆದ 15 ವರ್ಷದ ಬಳಿಕ ಸ್ವತಂತ್ರವೆಂದು ಘೋಷಿಸಿಕೊಂಡಿತು. ಹಾಗೆ ಒಕ್ಕೂಟ ದೇಶಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿತ್ತು. ಕಡಲ ನಗರಿಯಾಗಿರುವ ಗೋವಾ 1961 ಡಿಸೆಂಬರ್ 19ರಂದು ಪೋರ್ಚುಗೀಸರ ಆಳ್ವಿಕೆಯಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿತ್ತು. ಪೋರ್ಚುಗೀಸರನ್ನು ಗೋವಾದಿಂದ ಹೊರಹಾಕುವುದು ಅಷ್ಟು ಸುಲಭವಾವಿರಲಿಲ್ಲ. ಅವರು ಭಾರತ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ರು. ಇನ್ನೊಂದು ಕಡೆ ಗೋವಾದಲ್ಲಿ ಸ್ವಾತಂತ್ರ್ಯದ ಕೂಗು ಹೆಚ್ಚಾಗುತ್ತಲೇ ಇತ್ತು.
1540 ರಲ್ಲಿ ಗೋವಾದಲ್ಲಿ ಪೋರ್ಚುಗೀಸರು ಆಳ್ವಿಕೆ ಆರಂಭಿಸಿದರು. ಗೋವಾದಲ್ಲಿ ಪೋರ್ಚುಗೀಸರು ಕ್ರಿಶ್ಚಿಯನ್ ಧರ್ಮ ಸುಧಾರಣೆಗಾಗಿ ಪಣ ತೊಟ್ಟರು ಹಾಗೆ ಹಲವು ಹಿಂದೂ ದೇವಾಲಯಗಳ ನಾಶಕ್ಕೂ ಕಾರಣವಾದರು. ಹಾಗೆ ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದರೆ ಭೂ ತೆರಿಗೆಯಿಂದ ವಿನಾಯಿತಿ ನೀಡಲಾಯಿತು. ಇದರಿಂದ ಗೋವಾದಲ್ಲಿ ಹಿಂದೂಗಳು ಸ್ವಯಂ ಪ್ರೇರಣೆಯಿಂದಾಗಿ ಹಾಗೂ ಒತ್ತಾಯ ಪೂರ್ವವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು.
ಹೀಗಾಗಿ ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆಗೆ ಅಂತ್ಯ ಹಾಡುವುದು ಬಹಳ ಕಷ್ಟಕರವಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ 1946ರ ಸಮಯದಲ್ಲಿ ಗೋವಾದಲ್ಲಿಯೂ ಸ್ವಾತಂತ್ರ್ಯದ ಕಹಳೆ ಮೊಳಗಿತ್ತು. ಗೋವಾದಲ್ಲಿ ರಾಮ್ ಮನೋಹರ್ ಲೋಹಿಯಾ ಸ್ವಾತಂತ್ರ್ಯದ ಕಿಡಿ ಹೊತ್ತಿಸಲು ಅಸಹಕಾರ ಚಳವಳಿಗೆ ಕರೆ ನೀಡಿದ್ದರು. ಅಲ್ಲಿಯೂ ಸ್ವಾತಂತ್ರ್ಯ ಬಯಸಿದ್ದ ಒಂದು ತಂಡ ಅವರನ್ನು ಸೇರಿಕೊಂಡಿತ್ತು. ಅಲ್ಲಿ ಸಾರ್ವಜನಿಕ ಸಭೆ, ಚಳವಳಿ, ಹೋರಾಟ ಮಾಡುವುದನ್ನು ಪೋರ್ಚುಗೀಸ್ ಸರ್ಕಾರ ನಿಷೇಧಿಸಿತು. ಇದರ ವಿರುದ್ಧವೇ ಲೋಹಿಯಾ ಹೋರಾಟ ಆರಂಭಿಸಿದರು.
ಈ ಹೋರಾಟದ ನಡುವೆ ರಾಮ್ ಮನೋಹರ್ ಲೋಹಿಯಾ ಅವರನ್ನು ಬಂಧಿಸಲಾಯಿತು. ಅಲ್ಲಿ ಹೋರಾಟ ಮಾಡುವವರ ಮೇಲೆ ಕೇಸ್‌ಗಳು ದಾಖಲಾಗಿ ಜೈಲು ಸೇರಬೇಕಾಯಿತು. ಆದ್ರೆ ಹೋರಾಟಗಾರ ಪ್ರಭಾಕರ್ ವಿಠಲ್ ಸಿನಾರಿಯಂತಹ ಅನೇಕ ಯುವ ಹೋರಾಟಗಾರರು ಗೋವಾ ಸ್ವಾತಂತ್ರ್ಯದಲ್ಲಿ ಧುಮುಕುವಂತೆ ಮಾಡಿತು. ಅಲ್ಲಿ ಯುನೈಟೆಡ್ ಲಿಬರೇಶನ್ ಫ್ರಂಟ್ ಆರಂಭಗೊಂಡಿತ್ತು.
ಅದು ನವೆಂಬರ್ 1961 ರಲ್ಲಿ ಪೋರ್ಚುಗೀಸರು ಭಾರತೀಯ ಸ್ಟೀಮರ್‌ಗಳು ಮತ್ತು ಮೀನುಗಾರಿಕಾ ದೋಣಿಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿಗೆ ಮುಂದಾದರು. ಇದು ಭಾರತ ಸರ್ಕಾರದ ಗಮನಕ್ಕೂ ಬಂದಿತ್ತು. ಈ ಘಟನೆಯಲ್ಲಿ ಓರ್ವ ಮೀನುಗಾರ ಮೃತಪಟ್ಟಿದ್ದ. ಈ ಘಟನೆ ಗೋವಾದ ಸ್ಥಳೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿತ್ತು. ಹಾಗೆ ಸ್ಥಳೀಯರನ್ನು ಅವರು ಒತ್ತೆಯಾಳಾಗಿ ಇಟ್ಟುಕೊಳ್ಳಲು ಮುಂದಾದರು.
ಆದ್ರೆ ಈ ವೇಳೆಗೆ ಭಾರತದ ಸರ್ಕಾರ ಸೇನೆಯಲ್ಲಿ ಬಲ ಸಾಧಿಸಿತ್ತು, ಹೀಗಾಗಿ ಅಂದಿನ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರು ಗೋವಾದ ಮೇಲೆ 30 ಸಾವಿರಕ್ಕೂ ಹೆಚ್ಚು ಸೈನಿಕರು ಇಳಿಯುವಂತೆ ಆದೇಶ ನೀಡಿದರು. ನೌಕಾ ಸೇನೆ ಹಾಗೂ ವಾಯುಸೇನೆ ಗೋವಾವನ್ನು ಸುತ್ತುವರೆದವು. ಭಾರತದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದಾಗ ಪೋರ್ಚುಗೀಸರು ಕೇಂದ್ರದ ಜೊತೆಗೆ ಮಾತುಕತೆಗೆ ಮುಂದಾದರು. ಆದ್ರೆ ಅದಾಗಲೆ ಸಮಯ ಮೀರಿತ್ತು. ಕೇವಲ 48 ಗಂಟೆಯ ಒಳಗಾಗಿ ಪೋರ್ಚುಗೀಸರು ಗೋವಾ ಬಿಟ್ಟು ತೆರಳಬೇಕಾಯಿತು. ಹೀಗಾಗಿ ಡಿಸೆಂಬರ್ 19, 1961 ಗೋವಾ ಸ್ವತಂತ್ರಗೊಂಡಿತ್ತು.



Click it and Unblock the Notifications
