Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಾಕುಂಭಮೇಳ ಮುಕ್ತಾಯದ ದಿನ ಆಕಾಶದಲ್ಲಿ ನೋಡಬಹುದು ಈ ವಿಸ್ಮಯ ಘಟನೆ! ಒಂದಲ್ಲ, ಎರಡಲ್ಲ ಏಳು ಗ್ರಹಗಳು ಗೋಚರಿಸಲಿದೆ
144 ವರ್ಷಕ್ಕೊಮ್ಮೆ ಬರುವ ಮಹಾಕುಂಭಮೇಳ ಫೆಬ್ರವರಿ 26 ಮಹಾಶಿವರಾತ್ರಿಯಂದು ಮುಕ್ತವಾಗಲಿದೆ. ಇನ್ನು ಈ ಕುಂಭಮೇಳ ಕಣ್ತುಂಬಿಕೊಳ್ಳಬೇಕೆಂದರೆ ನಮ್ಮ ಮರಿ ಮೊಮ್ಮಕ್ಕಳಿಗಷ್ಟೇ ಆಗುವುದು, ಹಾಗಾಗಿ ಈ ಕುಂಭಮೇಳ ಆಚರಿಸಲು, ನೋಡಲು ಸಿಕ್ಕಿದ್ದ ನಾವೇ ಪುಣ್ಯವಂತರು. ಮಹಾಕುಂಭಮೇಳದ ಹಿಂದೆ ಹಲವಾರು ಧಾರ್ಮಿಕ ನಂಬಿಕೆಗಳಿದೆ, ಆ ನಂಬಿಕೆಗಳನ್ನು ಸತ್ಯವಾಗಿಸುವ ಅನೇಕ ವಿಸ್ಮಯಗಳನ್ನೂ ನಾವು ನೋಡಬಹುದು. ಅದರಂತೆ ಫೆಬ್ರವರಿ 26ರಂದು ಮಹಾಕುಂಭಮೇಳ ಮುಕ್ತಾಯವಾಗುವಾಗ ಆಕಾಶದಲ್ಲಿ ಬಲು ಅಪರೂಪದ ಘಟನೆ ನಡೆಯಲಿದೆ.

ಫೆಬ್ರವರಿ 27ರಂದು ಗೋಚರಿಸಲಿದೆ 7 ಗ್ರಹಗಳು, ಇದನ್ನು ವೀಕ್ಷಿಸಲೂಬಹುದು
ಮಹಾಕುಂಭಮೇಳ ಮುಗಿಯುವ ದಿನ ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಆಕಾಶದಲ್ಲಿ ಗೋಚರಿಸಲಿದೆ, ಇದನ್ನು ವೈಜ್ಞಾನಿಕವಾಗಿ ನೋಡುವುದು ಬೇರೆ, ಆದರೆ ಕುಂಭಮೇಳದ ಲೆಕ್ಕಚಾರಕ್ಕೂ ಈ ಗ್ರಹಗಳು ಗೋಚರಿಸುವುದಕ್ಕೂ ಸಂಬಂಧವಿದೆ ಎಂದಾಯ್ತು.
ಈ ಗ್ರಹಗಳ ಪರೇಡ್ ಫೆಬ್ರವರಿ 28ಕ್ಕೆ ಅತ್ಯಾಕರ್ಷಕವಾಗಿ ಕಾಣಲಿದೆ
ಈ ಏಳೂಗ್ರಹಗಳು ಒಂದೇ ಸಾಲಿನಲ್ಲಿ ಗೋಚರಿಸಲಿದೆ, ಈ ದೃಶ್ಯ ಭಾರತದಲ್ಲಿ ನಿಂತು ನೋಡಿದರೆ ಗೋಚರಿಸಲಿದೆ.
ಕುಂಭಮೇಳ ಶುರುವಾದಾಗ ಈ ಗ್ರಹಗಳು ಒಂದೇ ಸಾಲಿನಲ್ಲಿಗೋಚರಿಸಿತ್ತು
ಭೂಮಿಯಿಂದ ನೋಡಿದಾಗ ಬರಿಗಣ್ಣಿಗೆ ಈ ಗ್ರಹಗಳು ಗೋಚರಿಸುತ್ತಿತ್ತು , ನಂತರ ಇದನ್ನು ದೂರದರ್ಶಕದ ಮೂಲಕ ವೀಕ್ಷಿಸಿದಾಗ ಗ್ರಹಗಳ ಸಾಲು ಕಂಡು ಬಂತು, ಇದಕ್ಕೆ ವೈಜ್ಞಾನಿಕವಾಗಿ ಪ್ಲಾನೆಟ್ ಪರೇಡ್ ಎಂದು ಹೆಸರು ನೀಡಲಾಗಿದೆ.
ದೂರದಲ್ಲಿ ಗೋಚರಿಸಿದ್ದ ಗ್ರಹಗಳು ಭೂಮಿಗೆ ಸಮೀಪವಾದಂತೆ ಕಾಣುತ್ತಿದೆ
ಕುಂಭಮೇಳ ಪ್ರಾರಂಭವಾದಾಗ ದೂರದಲ್ಲಿ ಗೋಚರಿಸಿದ್ದ ಗ್ರಹಗಳು ಈಗ ಪ್ರಕಾಶಮಾನವಾಗಿ ಗೋಚರಿಸಲಿದೆ, ಫೆಬ್ರವರಿ 28ಕ್ಕೆ ಮತ್ತಷ್ಟು ದೊಡ್ಡದಾಗಿ ಗೋಚರಿಸಲಿದೆ.
ಹಾಗಾಗಿ ಶಿವರಾತ್ರಿಗೆ ನೀವು ಈ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ಮರೆಯದಿರಿ
ಶಿವರಾತ್ರಿಗೆ ಜಾಗರಣೆ ಕೂರುವಾಗ ಶಿವ ಪೂಜೆ ಮಾಡಿದ ಬಳಿಕ ಆಕಾಶದಲ್ಲಿರುವ ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಿ. ಇನ್ನು ನೀವು ಇಂಥದ್ದೊಂದು ದೃಶ್ಯ ಕಣ್ತುಂಬಿಕೊಳ್ಳಬೇಕೆಂದರೆ 2040ರವರೆಗೆ ಕಾಯಬೇಕು, ಹಾಗಾಗಿ ಈ ಸುಂದರ ದೃಶ್ಯ ಕಣ್ತುಂಬಿಕೊಳ್ಳಿ.
ನಮ್ಮ ಆಚರಣೆಗೂ ವಿಜ್ಞಾನಕ್ಕೂ ಸಂಬಂಧವಿದೆ ಎಂದು ಸಾಕಷ್ಟು ಬಾರಿ ಸಾಬೀತಾಗಿದೆ
ವಿಜ್ಞಾನದಲ್ಲಿ ಯಾವಾಗ ಗ್ರಹಣ ಅಂತ ಹೇಳಲಾಗುವುದು, ಆದರೆ ಈ ವಿಜ್ಞಾನ ಬೆಳೆಯುವ ಮೊದಲೇ ಯಾವಾಗ ಗ್ರಹಣ, ಯಾವಾಗ ಮಳೆ ಬರುತ್ತೆ ಎಂಬೆಲ್ಲಾ ವಿಷಯಗಳನ್ನು ನಿಖರವಾಗಿ ಹೇಳುತ್ತಿದ್ದರು. ಹಿಂದೂ ಧಾರ್ಮಿಕದ ನಂಬಿಕೆಗಳನ್ನು ಕೂಲಂಕಷವಾಗಿ ಅವಲೋಕಿಸಿದರೆ ಪ್ರತಿಯೊಂದು ಆಚರಣೆ ಹಿಂದೆಯೂ ವಿಜ್ಞಾನವಿದೆ, ಹಾಗಾಗಿ ನಂಬಿಕೆ ಬೇರೆ ಮೂಢನಂಬಿಕೆ ಬೇರೆ, ಆದರೆ ದಾರ್ಮಿಕ ನಂಬಿಕೆ ಹಾಗೂ ವಿಜ್ಞಾನ ಬಹುತೇಕ ಒಂದೇ ಆಗಿದೆ.
ಗಂಗೆ ನೀರು ತುಂಬಾನೇ ಪವಿತ್ರ
ಎಷ್ಟೊಂದು ಕೋಟಿ ಜನರು ಗಂಗೆಯಲ್ಲಿ ಬಂದು ಪುಣ್ಯ ಸ್ನಾನ ಮಾಡುತ್ತಿದ್ದರೂ, ಆದರೆ ಗಂಗೆ ನೀರು ಪವಿತ್ರವಾಗಿದೆ ಎಂದು ಗಂಗೆ ನೀರನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಬಹಳಷ್ಟು ಜನ ಮಾಹಿತಿ ನೀಡಿದ್ದಾರೆ.
ಧಾರ್ಮಿಕ ನಂಬಿಕೆ ಹೆಚ್ಚಿಸಿದ ಮಹಾಕುಂಭಮೇಳ
ಈಗೀನ ಪೀಳಿಗೆಗೆ ಹಿಂದೂ ಧರ್ಮದ ಬಹಳಷ್ಟು ಆಚರಣೆಗಳ ಬಗ್ಗೆ ಗೊತ್ತೇ ಇಲ್ಲ, ಆದರೆ ಈ ಮಹಾಕುಂಭಮೇಳ ಭಾರತೀಯರನ್ನು ಮಾತ್ರ ಆಕರ್ಷಿಸಿಲ್ಲ, ವಿದೇಶಿಗರನ್ನು ಆಕರ್ಷಿಸಿದೆ. ಹಿಂದೂ ಧರ್ಮದ ಮಹತ್ವ ವಿಶ್ವಕ್ಕೆ ಸಾರಿದೆ.



Click it and Unblock the Notifications