Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮೊಮ್ಮಗಳು ಸೇರಿ ಮೂವರಿಗೆ ಕ್ಯಾನ್ಸರ್, ಚಿಕಿತ್ಸೆಗೆ ಮಾಡಿದ ಸಾಲದಿಂದ ಮನೆಯೂ ಜಪ್ತಿ: ಸ್ವಂತ ಹಣದಿಂದ ಆ ಕುಟುಂಬದ ಸಾಲ ತೀರಿಸಿದ ಕೇಂ
ಮನೆಯಲ್ಲಿ ಅಜ್ಜಿ, ಮಗಳು, ಮೊಮ್ಮಗಳಿಗೆ ಕ್ಯಾನ್ಸರ್, ಬ್ಯಾಂಕ್‌ನಿಂದ ಮನೆ ಜಪ್ತಿ: ನೆರವಿಗೆ ಬಂದ ಕೇಂದ್ರ ಸಚಿವನ ನೋಡಿ ಇದೇ ಮನುಷ್ಯತ್ವ ಎಂದರೆ ಎನ್ನುತ್ತಿದ್ದಾರೆ ಜನ.
ಕೇಂದ್ರ ಸಚಿವರಾದ ಸುರೇಶ್ ಗೋಪಿ ಕೇರಳದಲ್ಲಿ ಕ್ಯಾನ್ಸರ್‌ನಿಂದ ಇರಲು ಒಂದು ಸೂರು ಇಲ್ಲದಿದ್ದ ಕುಟುಂಬಕ್ಕೆ ನೆರವಾಗುವ ಮೂಲಕ ಒಬ್ಬ ಸಚಿವನಾಗಿ ಮಾತ್ರವಲ್ಲ ಮನುಷ್ಯನಾಗಿ ಗ್ರೇಟ್ ಅನಿಸಿಕೊಂಡಿದ್ದಾರೆ, ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ಸ್ವಂತ ಹಣದಿಂದ ಆ ಕುಟುಂಬದ ಸಾಲ ತೀರಿಸಿದ್ದಾರೆ.

ಬ್ಯಾಂಕ್ ಸಾಲದಿಂದಾಗಿ ಮನೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ, ಜೊತೆಗೆ ಅದೇ ಮನೆಯ ಮೂವರನ್ನು ಕಾಡಿದ ಕ್ಯಾನ್ಸರ್ ರೋಗ ಇದರಿಂದ ಹೈರಾಣಾಗಿದ್ದ ಕುಟುಂಬ ಸುರೇಶ್ ಗೋಪ ನೆರವಿನಿಂದಾಗಿ ನೆಮ್ಮದಿಯಿಂದ ಉಸಿರಾಡುವಂತಾಗಿದೆ.
ಸಚಿವನ ನಡೆಗೆ ಭಾರೀ ಮೆಚ್ಚುಗೆ
ಸುರೇಶ್ ಅ ಕುಟುಂಬಕ್ಕೆ ನೆರವಾಗಿರುವ ಸುದ್ದಿ ಹೊರ ಬೀಳುತ್ತಿದ್ದಂತೆ ಅದು ಬರೀ ಕೇರಳದ ಗಮನವನ್ನಲ್ಲ ದೇಶದ ಗಮನವನ್ನು ಸೆಳೆದಿದೆ. ಮನುಷ್ಯತ್ವ ಎಂಬುವುದು ಇದು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮನೆಯಲ್ಲಿ ಮೂವರಿಗೆ ಕ್ಯಾನ್ಸರ್
ಕುಟುಂಬದಲ್ಲಿ ಒಬ್ಬರಿಗೆ ಕ್ಯಾನ್ಸರ್ ಬಂದರೆ ಆ ಕುಟುಂಬ ಆರ್ಥಿಕವಾಗಿ, ಮಾನಸಿಕವಾಗಿ ತುಂಬಾನೇ ಕುಗ್ಗಿ ಹೋಗುತ್ತದೆ, ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣದ ಅವಶ್ಯಕತೆ ಬರುತ್ತದೆ. ಈ ಕುಟುಂಬದ ಅಜ್ಜಿ, ಮಗಳು, ಮೊಮ್ಮಗಳಿಗೆ ಕ್ಯಾನ್ಸರ್ ಇದೆ. ಮಗಳು ಕ್ಯಾನ್ಸರ್‌ನಿಂದ ತೀರಿಕೊಂಡಿದ್ದಾರೆ, ಅಜ್ಜಿ ಮತ್ತು ಮೊಮ್ಮಗಳು ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ
ಮನೆ, ಆಸ್ತಿ ಎಲ್ಲಾ ಅಟವಿಟ್ಟು ಚಿಕಿತ್ಸೆ ನೀಡಿದ ಕುಟುಂಬ
ಅದೊಂದು ಸಾಧಾರಣ ಕುಟುಂಬವಾಗಿತ್ತು, ಮನೆಯಲ್ಲಿದ್ದ ಮೂವರ ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣದ ಅವಶ್ಯಕತೆ ಇತ್ತು. ಹೀಗಾಗಿ ಆಸ್ತಿ, ಮನೆಯನ್ನು ಅಡವಿಟ್ಟು ಹಣ ಪಡೆದು ಚಿಕಿತ್ಸೆ ಕೊಡಿಸುತ್ತಾರೆ. ಅಜ್ಜಿಯ ಮಗಳು ತೀರಿ ಹೋಗಿದ್ದಾಳೆ, ನನಗೇನಾದರೂ ಪರ್ವಾಗಿಲ್ಲ, ಆದರೆ ಮೊಮ್ಮಗಳು ಬದುಕಬೇಕು ಎಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಸಾಲ ಮರುಪಾವತಿ ಮಾಡದೆ ಮನೆಯ ಜಪ್ತಿ
ಇವರಿಗೆ ಸಾಲ ಪಡೆದ ಹಣಕ್ಕೆ ಅಸಲು ಬಡ್ಡಿ ನೀಡುವುದು ಸಾದ್ಯವಾಗದ ಮಾತಾಗಿತ್ತು. ಇವರ ಕಷ್ಟಗಳನ್ನು ಹೇಳಿಕೊಂಡರೆ ಬ್ಯಾಂಕ್‌ನವರು ಕೇಳುತ್ತಾರೆಯೇ, ಖಂಡಿತ ಇಲ್ಲ, ಜಪ್ತಿ ನೋಟೀಸ್ ನೀಡಿ ಜಪ್ತಿ ಮಾಡಿದರು. ಭಯಾನಕ ಖಾಯಿಲೆ ಇರಲು ಮನೆಯು ಕಳೆದುಕೊಮಡ ಕುಟುಂಬದ ನೆರವಿಗೆ ನಿಂತಿದ್ದಾರೆ ಸುರೇಶ್ ಗೋಪಿ, ಬ್ಯಾಂಕ್‌ಗೆ ಹೋಗಿ ಸಾಲ ತೀರಿಸಿ ಅವರ ಚಿಕಿತ್ಸೆಗೂ ನೆರವಿನ ಹಸ್ತ ಚಾಚಿದ್ದಾರೆ.
ಕೇರಳದ ಆಲಪುಝಾದೆ ಪೆರುಂಬಾಲಂ ಗ್ರಾಮದ ನಿವಾಸಿ ರಾಜಪ್ಪನ್ ಕುಟುಂಬ ಇದೀಗ ಸ್ವಲ್ಪ ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಪುಟ್ಟ ಮಗುವಿಗೆ ಬೋನ್ ಮ್ಯಾರೋ ಕ್ಯಾನ್ಸರ್
ಅಜ್ಜಿಯ ಮೊಮ್ಮಗಳಿಗೆ ಬೋನೋ ಮ್ಯಾರೋ ಕ್ಯಾನ್ಸರ್. ಅವಳ ಚಿಕಿತ್ಸೆಗೆ ವೈದ್ಯರ ಜೊತೆ ಮಾತನಾಡಿ ಡೋನರ್ ಸಿಕ್ಕ ತಕ್ಷಣ ಆ ಮಗುವಿಗೆ ಸರ್ಜರಿ ನಡೆಯಲಿದೆ. ಇದೀಗ ಇವರು ಮಾಡಿದ ಕಾರ್ಯ ಎಲ್ಲರ ಗಮನ ಸೆಳೆದಿದೆ.



Click it and Unblock the Notifications
