Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಕರ್ಮ ನಿಜವಾಗಿದ್ದರೆ ಒಳ್ಳೆಯವರು ಕಷ್ಟ ಅನುಭವಿಸುವುದೇಕೆ? ಗೀತೆಯಲ್ಲಿದೆ ಇದಕ್ಕೆಲ್ಲಾ ಉತ್ತರ..!
ಒಬ್ಬ ವ್ಯಕ್ತಿಯ ಫಲಾನುಫಲಗಳು ಆತನ ಕರ್ಮದ ಮೇಲೆ ನಿರ್ಧರಿತವಾಗುತ್ತದೆ ಎಂದು ನಂಬಲಾಗಿದೆ. ಕರ್ಮ ಸಿದ್ಧಾಂತವು ಪ್ರತಿಯೊಬ್ಬರ ಜೀವನದ ಆಗು ಹೋಗಗಳ ಮೇಲೆ ನಿರ್ಧರಿತವಾಗುತ್ತದೆ. ಕರ್ಮವನ್ನು ಸಾಮಾನ್ಯವಾಗಿ ವಿಧಿ ಅಥವಾ ಪೂರ್ವನಿರ್ಧಾರ ಎಂದು ಅರ್ಥೈಸಲಾಗಿದೆ. ಪೂರ್ವ ಜನ್ಮದಿಂದ ಹಿಡಿದು ಪ್ರಸ್ತುತ ಆತನ ಧರ್ಮಗಳನುಸಾರವಾಗಿ ನಡೆಯದ ಕೆಲಸವು ಆತನ ಕರ್ಮವನ್ನು ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ.
ಯಾರೆ ಆಗಿರಲಿ ಆತನನ್ನು ಕರ್ಮವು ಶಿಕ್ಷಿಸಿಯೇ ಶಿಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಮಹಾಭಾರತದಲ್ಲಿ ಶ್ರೀಕೃಷ್ಣ ಈ ಕರ್ಮ ಸಿದ್ದಾಂತ ಕುರಿತು ತಿಳಿಯಪಡಿಸುತ್ತಾನೆ. ಹಾಗೆ ಒಳ್ಳೆಯ ಜನರಿಗೆ ಕೆಟ್ಟದಾಗುವ ಬಗೆ ಹಾಗೆ ಕೆಟ್ಟ ಕೆಲಸ ಮಾಡುವವರು ಜೀವನದಲ್ಲಿ ಯಶಸ್ಸು ಪಡೆಯುವುದು ಏಕೆ ಎಂಬ ದೊಡ್ಡ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು.

ಹೀಗಾಗಿ ಕರ್ಮ ನಿಜವೇ ಆಗಿದ್ದರೆ ಕೆಟ್ಟ ಕೆಲಸ ಮಾಡುವವರು ಮುಂದೆ ಬರುವುದೇಕೆ? ಭಗವದ್ಗೀತೆಯಲ್ಲಿ ನ್ಯಾಯ ಕರ್ಮದ ಕುರಿತಾಗಿ ಹೇಳಿರುವುದೇನು? ಎಂಬುದನ್ನು ನಾವಿಲ್ಲಿ ತಿಳಿಯೋಣ. ಅದರಲ್ಲು ದುಖಃ ಹಾಗೂ ಕಷ್ಟ ಎನ್ನುವುದು ಶಿಕ್ಷೆಯಲ್ಲ ಬದಲಿಗೆ ಅದು ಆಧ್ಯಾತ್ಮಿಕ ವಿಕಾಸದ ಕಡೆಗಿರುವ ಮಾರ್ಗ ಎಂದು ಹೇಳಲಾಗಿದೆ.
ಅವಶ್ಯಯನ್ ಭವಿತಂ ದ್ವಿಜೇನಿ ಯಾತ್ಯಾ ದುರ್ಗತಿವಾಪ್ನಿಭಾವಸ್ಥಿತಾಃ.
ಅವಶ್ಯಯನ್ ಭವಿತಂ ದ್ವಿಜನಿಃ ಯಥಾ ದುಸ್ತರಮಾವಾಪ್ ನಿಭಾವಸ್ಥಿತಾಂ
ಭಗವದ್ಗೀತೆಯಲ್ಲಿ ಈ ರೀತಿಯ ಶ್ಲೋಕವು ನಿಮ್ಮ ಜೀವನದಲ್ಲಿ ಏನಾಗಬೇಕೋ ಅದು ಖಂಡಿತವಾಗಿಯೂ ನಡೆಯುತ್ತದೆ. ಯಾರು ಕೂಡ ಅದನ್ನು ತಡೆಯಲು ಸಾಧ್ಯವಿಲ್ಲ ಎಂಬುದಾಗಿ ವಿವರಣೆ ನೀಡುತ್ತದೆ. ಭಗವದ್ಗೀತೆಯು ನ್ಯಾಯದ ಸರಳ ವಿಚಾರಗಳನ್ನು ಮೀರಿದ ಉತ್ತರವನ್ನು ನೀಡುತ್ತದೆ. ಕರ್ಮವು ಕೇವಲ ಕಾರಣ ಮತ್ತು ಪರಿಣಾಮಕ್ಕಿಂತ ಹೆಚ್ಚು ಜಟಿಲವಾಗಿದೆ.
ಕರ್ಮ ಬಹು-ಜೀವನದ ಕೊಡುಗೆ
ನೀವು ಇಂದು ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯಗಳಿಗೆ ಹಲವು ಜನ್ಮದ ಕರ್ಮದ ಫಲ ಎಂದು ಭಗವದ್ಗೀತೆಯು ವಿವರಿಸುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದನ್ನು ಪಡೆಯುತ್ತಾರೆ ಎಂಬ ಮಾತಿದೆ ಆದ್ರೆ ಕೃಷ್ಣನು ಕರ್ಮವು ಬಹು ಜೀವಿತಾವಧಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವಿವರಿಸುತ್ತಾನೆ. ಇಂದು ಅನುಭವಿಸುವ ಕಷ್ಟವು ಹಿಂದಿನ ಜನ್ಮದ ಪಾಪ ಕ್ರಿಯೆಗಳ ಪರಿಣಾಮವಾಗಿರಲಿದೆ. ಇಂದು ನೀವು ಒಳ್ಳೆಯ ಕೆಲಸ ಮಾಡಿದರೆ ಮುಂದಿನ ಜನ್ಮವು ನಿಮಗೆ ಸುಖ ತರಲಿದೆ ಎಂಬುದು ಕೃಷ್ಣನ ಮಾತಿನ ಸಾರಾಂಶವಾಗಿದೆ.
ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ಕ್ರಮಮತೀಶ್ವರಃ |
ಗೃಹೀತ್ವೈತಾನಿ ಸಂಯಾತಿ ವಾಯುರ್ಗಂಧಾನಿವಾಸಯಾತ್ ||
ಗಾಳಿಯಲ್ಲಿ ಹೂವಿನ ಸುಗಂಧವು ಚಲಿಸುವಂತೆ, ಆತ್ಮವು ನಿಮ್ಮ ಕರ್ಮಗಳನ್ನು ಒಂದು ದೇಹದಿಂದ ಮತ್ತೊಂದಕ್ಕೆ ಕೊಂಡೊಯ್ಯುತ್ತದೆ ಎಂದು ಭಗವದ್ಗೀತೆಯ ಸಾರ ಹೇಳುತ್ತದೆ. ಅಂದರೆ ಈ ಜನ್ಮದಲ್ಲಿ ವ್ಯಕ್ತಿಯೊಬ್ಬ ತಪ್ಪುಗಳನ್ನು ಮಾಡುತ್ತಿದ್ದರೂ ಅಥವಾ ಕೆಟ್ಟ ಕೆಲಸದಲ್ಲಿ ಭಾಗಿಯಾಗಿಯೂ ಆತ ಉತ್ತಮ ಜೀವನ ಕಟ್ಟಿಕೊಂಡಿದ್ದರೆ ಅದು ಆತ ಹಿಂದಿನ ಜನ್ಮದಲ್ಲಿ ಮಾಡಿರುವ ಪುಣ್ಯದ ಫಲ ಎಂದು ಗೀತೆ ಹೇಳಲಿದೆ.
ಮಾತ್ರಾಸ್ಪರ್ಶಾಸ್ತು ಕೌನ್ತೆಯ ಶೀತೋಷ್ಣಸುಖದುಃಖದಾಃ |
ಆಗಮಪಾಯಿನನೋ ⁇ ನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ ||
ಓ ಅರ್ಜುನ ಸುಖದುಃಖಗಳು ಋತುಗಳಂತೆ ಬಂದು ಹೋಗುತ್ತವೆ; ತಾಳ್ಮೆಯಿಂದ ಸಹಿಸಿಕೊಳ್ಳಿ, ಏಕೆಂದರೆ ಅವು ತಾತ್ಕಾಲಿಕ ಎಂದು ಕೃಷ್ಣನು ಅರ್ಜುನನಿಗೆ ಹೇಳಿದ್ದಾನೆ. ಆತ್ಮ ಶುದ್ಧವಾಗಬೇಕಾದರೆ ಚಿನ್ನದಂತೆ ಬಿಸಿಯಾಗಬೇಕು. ಹಾಗೆ ಆತ್ಮಕ್ಕೆ ಶಿಕ್ಷೆಯಾಗಿಸುವುದಲ್ಲ ಒಳ್ಳೆಯ ಕಾರ್ಯಗಳು ಆತ್ಮಶುದ್ಧಿಯ ದಾರಿ ಎಂದು ಕೃಷ್ಣ ಹೇಳಿದ್ದಾನೆ.
ಕರ್ಮವು ಮಾರಕವಲ್ಲ. ಹಿಂದಿನ ಕ್ರಿಯೆಗಳು ವರ್ತಮಾನವನ್ನು ರೂಪಿಸುತ್ತಿದ್ದರೂ, ಭವಿಷ್ಯವು ಇನ್ನೂ ನಮ್ಮ ಕೈಯಲ್ಲಿದೆ ಎಂದು ಕೃಷ್ಣನು ಭರವಸೆ ನೀಡುತ್ತಾನೆ. ನಾವು ಮಾಡುವ ಪ್ರತಿಯೊಂದು ಪ್ರಜ್ಞಾಪೂರ್ವಕ ಆಯ್ ಇದನ್ನು ನಿರ್ಧರಿಸುತ್ತದೆ. ಸುಳ್ಳಿನ ವಿರುದ್ಧ ಸತ್ಯದ ಆಯ್ಕೆ, ಅಧರ್ಮದ ವಿರುದ್ಧ ಧರ್ಮದ ಆಯ್ಕೆ, ದ್ವೇಷದ ವಿರುದ್ಧ ಪ್ರೀತಿಯ ಆಯ್ಕೆಯು ನಿಮ್ಮ ಕರ್ಮ ಮಾರ್ಗ ಬದಲಾಯಿಸಲು ಇರುವ ದಾರಿಯಾಗಿದೆ ಎಂದು ಗೀತೆ ಹೇಳುತ್ತದೆ.



Click it and Unblock the Notifications